ಅಧ್ಯಾಯ 1

1 ಯೆಹೂದ ದೇಶದ ಅರಸರುಗಳಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗ ನಾದ ಯೆಶಾಯನಿಗಾದ ದರ್ಶನವು.
2 ಓ ಆಕಾಶ ಗಳೇ, ಕೇಳಿರಿ; ಓ ಭೂಮಿಯೇ, ಕಿವಿಗೊಡು; ಕರ್ತನು ಮಾತನಾಡುತ್ತಿದ್ದಾನೆ: ನಾನು ಸಾಕಿ ಸಲಹಿದ ಮಕ್ಕಳೇ, ನನಗೆ ವಿರೋಧವಾಗಿ ಎದುರುಬಿದ್ದಿದ್ದಾರೆ.
3 ಎತ್ತು ತನ್ನ ಯಜಮಾನನನ್ನು ಮತ್ತು ಕತ್ತೆಯು ತನ್ನ ಒಡೆ ಯನ ಕೊಟ್ಟಿಗೆಯನ್ನು ತಿಳಿದಿರುವವು; ಆದರೆ ಇಸ್ರಾ ಯೇಲಿಗೆ ತಿಳಿದಿಲ್ಲ; ನನ್ನ ಜನರು ಆಲೋಚಿಸುವ ದಿಲ್ಲ.
4 ಹಾ, ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ, ದುಷ್ಟಸಂತ ತಿಯೇ, ಭ್ರಷ್ಟರಾದ ಮಕ್ಕಳೇ, ಕರ್ತನನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧನಾ ದಾತನಿಗೆ ಕೋಪವನ್ನೆಬ್ಬಿಸುವಂತೆ ಅವರು ಹಿಂದಕ್ಕೆ ಹೋಗಿದ್ದಾರೆ.
5 ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಯಾಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ. ತಲೆ ಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.
6 ಅಂಗಾ ಲಿನಿಂದ ನಡುನೆತ್ತಿಯ ವರೆಗೂ ಬಾಸುಂಡೆ ಪೆಟ್ಟು, ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ; ಅವುಗಳನ್ನು ಮುಚ್ಚಿಲ್ಲ, ಕಟ್ಟಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದುಮಾಡಿಲ್ಲ.
7 ನಿಮ್ಮ ದೇಶವು ಹಾಳಾಗಿದೆ; ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟುಹೋಗಿವೆ; ನಿಮ್ಮ ಭೂಮಿಯನ್ನು ಅನ್ಯರು ನಿಮ್ಮೆದುರಿಗೆ ನುಂಗಿ ಬಿಡು ತ್ತಿದ್ದಾರೆ. ಅದು ಅನ್ಯರಿಂದ ಕೆಡವಲ್ಪಟ್ಟಂತೆ ಹಾಳಾ ಗಿದೆ.
8 ಚೀಯೋನ್‌ ಕುಮಾರಿಯು ದ್ರಾಕ್ಷೇತೋಟ ದಲ್ಲಿರುವ ಗುಡಿಸಲಿನ ಹಾಗೆಯೂ ಸೌತೆಯ ತೋಟ ದಲ್ಲಿರುವ ಮನೆಯ ಹಾಗೆಯೂ ಮುತ್ತಿಗೆ ಹಾಕಲಟ್ಟಿರುವ ಪಟ್ಟಣದ ಹಾಗೆಯೂ ಬಿಡಲ್ಪಟ್ಟಿದ್ದಾಳೆ.
9 ​ಸೈನ್ಯ ಗಳ ಕರ್ತನು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಹಾಗೆಯೂ ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
10 ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.
11 ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು? ಎಂದು ಕರ್ತನು ನುಡಿಯುತ್ತಾನೆ. ಟಗರುಗಳ ದಹನಬಲಿಗಳು, ಪುಷ್ಟಿ ಪ್ರಾಣಿಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿ, ಕುರಿ, ಹೋತಗಳ ರಕ್ತಕ್ಕೆ ನಾನು ಸಂತೋಷಪಡುವ ದಿಲ್ಲ.
12 ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳ ಬೇಕೆಂದು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿ ಯಲು ಯಾರು ನಿಮ್ಮನ್ನು ಕೇಳಿಕೊಂಡರು?
13 ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತಾರದಿರಿ, ಧೂಪವು ನನಗೆ ಅಸಹ್ಯ, ಹುಣ್ಣಿಮೆಗಳೂ ಸಬ್ಬತ್ತುಗಳೂ ಸಭೆಗಳು ಕೂಡುವದೂ ಇವು ಬೇಡ; ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ನಾನು ಸಹಿಸಲಾರೆನು.
14 ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ.
15 ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
16 ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ;
17 ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ; ನ್ಯಾಯ ವನ್ನು ಹುಡುಕಿರಿ, ಹಿಂಸೆಪಡುವವರನ್ನು ಉಪಚರಿಸಿರಿ, ಅನಾಥರಿಗೆ ನ್ಯಾಯತೀರಿಸಿರಿ, ವಿಧವೆಯರ ಪರವಾಗಿವಾದಿಸಿರಿ.
18 ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ ಎಂದು ಕರ್ತನು ಹೇಳುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವವು; ಕಡು ಕೆಂಪಿನಂತೆ ಕೆಂಪಾಗಿದ್ದರೂ ಉಣ್ಣೆಯಂತೆ ಆಗುವವು.
19 ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;
20 ನೀವು ತಿರಸ್ಕರಿಸಿ ತಿರುಗಿಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಕರ್ತನ ಬಾಯಿಯೇ ಇದನ್ನು ನುಡಿದಿದೆ.
21 ನಂಬಿಗಸ್ತಿಕೆಯ ಪಟ್ಟಣವು ಸೂಳೆಯಂತಾದ ಳಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆ ಯಾಗಿತ್ತು; ಆದರೆ ಈಗ ಕೊಲೆಗಾರರಿಂದ ತುಂಬಿದೆ.
22 ನಿನ್ನ ಬೆಳ್ಳಿಯು ಕಂದಾಯಿತು, ನಿನ್ನ ದ್ರಾಕ್ಷಾರಸವು ನೀರಿನೊಂದಿಗೆ ಬೆರಿಕೆಯಾಯಿತು.
23 ನಿನ್ನ ಪ್ರಭುಗಳು ಎದುರು ಬೀಳುವವರೂ ಕಳ್ಳರ ಜೊತೆಗಾರರೂ ಆಗಿ ದ್ದಾರೆ; ಪ್ರತಿಯೊಬ್ಬನು ಲಂಚ ಪ್ರಿಯನೂ ಬಹು ಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ; ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವದಿಲ್ಲ.
24 ಆದದರಿಂದ ಸೈನ್ಯಗಳ ಕರ್ತನೂ ಇಸ್ರಾಯೇಲಿನ ಪರಾಕ್ರಮಿಯೂ ಆದ ಕರ್ತನು ಹೇಳುವದೇನಂದರೆ ಹಾ, ನನ್ನ ವಿರೋಧಿಗಳಿಂದ ನಾನು ಶಾಂತನಾಗಿರು ವೆನು, ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು.
25 ನನ್ನ ಕೈಯನ್ನು ನಿನ್ನ ಕಡೆಗೆ ತಿರುಗಿಸಿ ಮಲಿನವನ್ನು ಸ್ವಚ್ಚವಾಗಿ ಶುದ್ಧಮಾಡಿ ನಿನ್ನ ಎಲ್ಲಾ ಕಲ್ಮಷವನ್ನು ತೆಗೆದು ಬಿಡುವೆನು.
26 ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ ನಿನ್ನ ಆಲೋಚನಾ ಪರರನ್ನು ಪ್ರಾರಂಭ ದಲ್ಲಿದ್ದ ಹಾಗೆಯೂ ತಿರಿಗಿ ಒದಗಿಸಿಕೊಡುವೆನು: ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ ನಂಬಿಗಸ್ತಿಕೆಯ ಪಟ್ಟಣವೆಂದೂ ಕರೆಯಲ್ಪಡುವಿ.
27 ಚೀಯೋನು ನ್ಯಾಯತೀರ್ಪಿನಿಂದಲೂ ಅವಳ ಪರಿವರ್ತನೆಯನ್ನು ಹೊಂದಿದವರು ನೀತಿಯಿಂದಲೂ ಬಿಡುಗಡೆಯಾಗುವರು
28 ಆದರೆ ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ ನಾಶವಾಗುವರು ಮತ್ತು ಕರ್ತ ನನ್ನು ತೊರೆದವರು ದಹಿಸಲ್ಪಡುವರು.
29 ನೀವು ಇಷ್ಟ ಪಟ್ಟ ಏಲಾಮರಗಳ ನಿಮಿತ್ತ ನಾಚಿಕೊಳ್ಳುವರು, ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
30 ನೀವು ಎಲೆ ಬಾಡಿದ ಏಲಾಮರದಂತೆಯೂ ನೀರಿಲ್ಲದ ತೋಟದಂತೆಯೂ ಇರುವಿರಿ.
31 ನಿಮ್ಮಲ್ಲಿನ ಬಲಿಷ್ಠನೇ ಸಣಬಿನ ನಾರು, ಅದನ್ನು ಮಾಡುವವನು ಕಿಡಿ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.
ಅಧ್ಯಾಯ 2

1 ಆಮೋಚನ ಮಗನಾದ ಯೆಶಾಯನಿಗೆ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡು ಬಂದ ದೈವೋಕ್ತಿ:
2 ಆ ಅಂತ್ಯ ದಿನಗಳಲ್ಲಿ ಆಗುವದೇನಂದರೆ--ಕರ್ತನ ಆಲಯದ ಪರ್ವತವು ಗುಡ್ಡಗಳಿಗಿಂತ ಎತ್ತರ ವಾಗಿ ಪರ್ವತಗಳ ತುದಿಯಲ್ಲಿ ನೆಲೆಯಾಗಿರುವದು. ಎಲ್ಲಾ ಜನಾಂಗಗಳು ಅದರ ಕಡೆಗೆ ತಂಡ ತಂಡವಾಗಿ ಬರುವವು.
3 ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು.
4 ಆತನು ಅನೇಕ ಜನಾಂಗ ಗಳ ಮಧ್ಯದಲ್ಲಿ ನ್ಯಾಯ ತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವನು; ಅವರು ತಮ್ಮ ಕತ್ತಿಗಳನ್ನು ನೇಗಿಲಿನ ಗುಳಗಳನ್ನಾಗಿಯೂ ತಮ್ಮ ಈಟಿಗಳನ್ನು ಕುಡುಗೋ ಲುಗಳನ್ನಾಗಿಯೂ ಬಡಿಯುವರು; ಜನಾಂಗಕ್ಕೆ ವಿರೋ ಧವಾಗಿ ಜನಾಂಗವು ಕತ್ತಿಯನ್ನು ಎತ್ತದು; ಇಲ್ಲವೆ ಇನ್ನು ಮೇಲೆ ಯುದ್ಧಾಭ್ಯಾಸವು ಇರುವದೇ ಇಲ್ಲ.
5 ಓ ಯಾಕೋಬಿನ ಮನೆತನದವರೇ, ಬನ್ನಿರಿ, ಕರ್ತನ ಬೆಳಕಿನಲ್ಲಿ ನಡೆಯೋಣ.
6 ಆದದರಿಂದ ಯಾಕೋಬಿನ ಮನೆತನದವರು ಮೂಡಣ ದೇಶ ಗಳಲ್ಲಿ ಮಗ್ನರಾಗಿ ಫಿಲಿಷ್ಟಿಯರಂತೆ ಕಣಿ ಹೇಳುವವ ರಾಗಿಯೂ ಅನ್ಯ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆ ಯುಳ್ಳವರಾಗಿಯೂ ಇರುವದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀ.
7 ಅವರ ದೇಶವು ಬೆಳ್ಳಿ ಬಂಗಾರಗ ಳಿಂದಲೂ ತುಂಬಿದೆ, ಅವರ ಬೊಕ್ಕಸಗಳಿಗೆ ಮಿತಿ ಯಿಲ್ಲ; ಅವರ ದೇಶವು ಕುದುರೆಗಳಿಂದಲೂ ತುಂಬಿದೆ, ಅವರ ರಥಗಳಿಗೆ ಮಿತಿಯೇ ಇಲ್ಲ.
8 ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ; ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನೇ ಆರಾಧಿಸುವರು.
9 ನೀಚನು ಹಿಗ್ಗಿಕೊಳ್ಳುತ್ತಾನೆ, ಉತ್ತಮನು ತಗ್ಗಿಸಿಕೊಳ್ಳು ತ್ತಾನೆ; ಆದಕಾರಣ ಅವರನ್ನು ಮನ್ನಿಸಬೇಡ.
10 ಕರ್ತನ ಭಯಕ್ಕೂ ಆತನ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ, ದೂಳಿನಲ್ಲಿ ನೀನು ಅಡಗಿಕೋ.
11 ಮನು ಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವದು, ಮನು ಷ್ಯರ ಗರ್ವವು ತಗ್ಗುವದು, ಆಗ ಕರ್ತನೊಬ್ಬನೇ ಆ ದಿನದಲ್ಲಿ ಉನ್ನತನಾಗಿರುವನು.
12 ಸೈನ್ಯಗಳ ಕರ್ತನ ದಿನವು ಗರ್ವ ಮತ್ತು ಅಹಂಭಾವದಿಂದ ತುಂಬಿರು ವವರ ಮೇಲೆಯೂ ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವದು; ಆತನು ಅವರನ್ನು ತಗ್ಗಿಸುವನು.
13 ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳ ಮತ್ತು ಬಾಷಾನಿನ ಎಲ್ಲಾ ಏಲಾಮರಗಳ ಮೇಲೆಯೂ
14 ಎಲ್ಲಾ ಎತ್ತರವಾದ ಪರ್ವತಗಳ ಮತ್ತು ಎತ್ತರವಾಗಿ ರುವ ಗುಡ್ಡಗಳ ಮೇಲೆಯೂ
15 ಎಲ್ಲಾ ಎತ್ತರವಾದ ಗೋಪುರಗಳ ಭದ್ರವಾದ ಎಲ್ಲಾ ಗೋಡೆಗಳ ಮೇಲೆ ಯೂ
16 ಎಲ್ಲಾ ತಾರ್ಷೀಷ್‌ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಎಲ್ಲಾ ಚಿತ್ರಗಳ ಮೇಲೆಯೂ ಆ ದಿನವು ಬರುವದು.
17 ಮನುಷ್ಯನ ಅಹಂಭಾವವು ಕುಗ್ಗುವದು, ಮನುಷ್ಯರ ಗರ್ವವು ತಗ್ಗಿಸಲ್ಪಡುವದು; ಆ ದಿನದಲ್ಲಿ ಕರ್ತನೊಬ್ಬನೇ ಉನ್ನತ ನಾಗಿರುವನು.
18 ಆತನು ವಿಗ್ರಹಗಳನ್ನು ಸಂಪೂರ್ಣ ವಾಗಿ ಇಲ್ಲದಂತೆ ಮಾಡಿಬಿಡುವನು.
19 ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿಸಲು ಏಳು ವಾಗ ಕರ್ತನಿಗೂ ಆತನ ಮಹಿಮೆಗೂ ಆತನ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಭೂಮಿಯ ಗವಿಗ ಳಿಗೂ ಅವರು ಸೇರಿಕೊಳ್ಳುವರು.
20 ಆ ದಿನದಲ್ಲಿ ಮನುಷ್ಯನು ಅಡ್ಡಬೀಳುವದಕ್ಕೋಸ್ಕರ ತಾವು ಮಾಡಿ ಕೊಂಡ ಬೆಳ್ಳಿಯ ವಿಗ್ರಹಗಳನ್ನೂ ಚಿನ್ನದ ವಿಗ್ರಹ ಗಳನ್ನೂ ಇಲಿ ಬಾವಲಿಗಳಿಗೆ ಬಿಸಾಡಿಬಿಡುವನು.
21 ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿ ಸಲು ಏಳುವಾಗ ಕರ್ತನ ಭಯಕ್ಕೂ ಆತನ ಮಹಿ ಮೆಯ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಎತ್ತರವಾಗಿರುವ ಬಂಡೆಗಳ ಕಡಿದಾದ ಸ್ಥಳಗಳಿಗೂ ಹೋಗುವರು.
22 ಉಸಿರು ಮೂಗಿನಲ್ಲಿ ಇರುವ ವರೆಗೆ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಎಷ್ಟರವ ನೆಂದು ಎಣಿಸಬಹುದು?
ಅಧ್ಯಾಯ 3

1 ಇಗೋ, ಕರ್ತನು, ಸೈನ್ಯಗಳ ಕರ್ತನೆಂಬ ನಾನು ಜೀವನಕ್ಕೆ ಆಧಾರವಾದ ಅನ್ನಪಾನ ಗಳನ್ನೆಲ್ಲಾ ಯೆರೂಸಲೇಮಿನಿಂದಲೂ ಯೆಹೂದ ದಿಂದಲೂ ತೆಗೆದುಬಿಡುವೆನು.
2 ಇದಲ್ಲದೆ ಶೂರ, ಯುದ್ಧಭಟ, ನ್ಯಾಯಾಧಿಪತಿ, ಪ್ರವಾದಿ, ಪರಿಜ್ಞಾನಿ, ಪ್ರಾಚೀನ ಮನುಷ್ಯನು,
3 ಪಂಚಶತಾಧಿಪತಿ, ಘನ ವುಳ್ಳವನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರನ್ನೆಲ್ಲಾ ತೆಗೆ ದುಬಿಡುವೆನು.
4 ಮಕ್ಕಳನ್ನು ಅವರ ಪ್ರಭುಗಳನ್ನಾ ಗಿಯೂ ಎಳೇ ಕೂಸುಗಳು ಅವರ ಮೇಲೆ ಆಳು ವಂತೆಯೂ ಕೊಡುವೆನು.
5 ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು.
6 ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿ ದು -- ನಿನಗೆ ವಸ್ತ್ರವಿದೆ, ನಮ್ಮನ್ನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ ಎಂದು ಹೇಳಲು
7 ಆ ದಿನದಲ್ಲಿ ಅವನು ಆಣೆಯಿಟ್ಟು --ನಾನು ಉಪಶಮನ ಮಾಡುವವನಾಗುವದಿಲ್ಲ, ನನ್ನ ಮನೆಯಲ್ಲಿ ಅನ್ನವಾಗಲಿ ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ ಅಂದನು.
8 ಯೆರೂಸಲೇಮು ಹಾಳಾಗಿದೆ, ಯೆಹೂ ದವು ಬಿದ್ದುಹೋಗಿದೆ, ಆದದರಿಂದ ಅವರ ನಡೆನುಡಿ ಗಳು ಕರ್ತನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿ ಯನ್ನು ಕೆರಳಿಸುತ್ತವಲ್ಲವೇ.
9 ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪ ಗಳನ್ನು ಸೊದೋಮಿನವರಂತೆ ಮರೆಮಾಜದೆ ಪ್ರಕಟ ಮಾಡುತ್ತಾರೆ. ಅವರ ಆತ್ಮಕ್ಕೆ ಅಯ್ಯೋ! ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
10 ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
11 ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
12 ನನ್ನ ಪ್ರಜೆಗಳನ್ನೋ ಹುಡುಗರು ಅವರನ್ನು ಭಾಧಿಸುವರು, ಅವರನ್ನು ಆಳುವವರು ಹೆಂಗಸರು. ಓ ನನ್ನ ಪ್ರಜೆಗಳೇ, ನಿಮ್ಮನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆ ಯುವ ದಾರಿಯನ್ನು ಹಾಳುಮಾಡಿದ್ದಾರೆ.
13 ಕರ್ತನು ವಾದಿಸುವದಕ್ಕೂ ಜನರಿಗೆ ನ್ಯಾಯ ತೀರಿಸುವದಕ್ಕೂ ಎದ್ದು ನಿಂತಿದ್ದಾನೆ.
14 ಕರ್ತನು ತನ್ನ ಪ್ರಜೆಯಾದ ಪೂರ್ವಿಕರ ಸಂಗಡಲೂ ಅವರ ಅಧಿ ಪತಿಗಳ ಸಂಗಡಲೂ ನ್ಯಾಯತೀರಿಸಲು ಪ್ರವೇಶಿಸು ವನು; ನೀವು ದ್ರಾಕ್ಷೇ ತೋಟವನ್ನು ತಿಂದುಬಿಟ್ಟಿದ್ದೀರಿ; ಬಡವರಿಂದ ಕೊಳ್ಳೆ ಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.
15 ನೀವು ನನ್ನ ಪ್ರಜೆಯನ್ನು ಹೊಡೆದು ಚೂರು ಗಳನ್ನಾಗಿ ಮಾಡಿ ಬಡವರ ಮುಖಗಳನ್ನು ಹಿಂಡು ವದರ ಅರ್ಥವೇನು ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.
16 ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್‌ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ,
17 ಚೀಯೋನ್‌ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು.
18 ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ,
19 ಸರ, ಬಳೆ, ಮುಂಡಾಸ,
20 ಟೊಪ್ಪಿಗೆ, ಕಾಲಸರಪಣಿ, ಶಿರೋ ವೇಷ್ಟನ, ಗಂಧದ ಡಬ್ಬಿ,
21 ಓಲೆ, ಉಂಗುರ, ಮೂಗುತಿ,
22 ಬದಲಾಯಿಸತಕ್ಕ ಬಟ್ಟೆ, ಶಾಲು, ತಲೆಕೌದಿ, ಅಲಂ ಕಾರದ ಪಿನ್ನುಗಳು, ಕೈಗನ್ನಡಿ,
23 ನಾರು ಮಡಿ, ಮೇಲ್ಹೊ ದಿಕೆ ಮುಸುಕು ಈ ಎಲ್ಲಾ ಭೂಷಣಗಳನ್ನು ತೆಗೆದು ಹಾಕುವನು.
24 ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು;
25 ನಿನ್ನ ಗಂಡಸರು ಕತ್ತಿಯಿಂದಲೂ ನಿನ್ನ ಶೂರರು ಯುದ್ಧದಲ್ಲಿಯೂ ಬೀಳುವರು.
26 ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು.
ಅಧ್ಯಾಯ 4

1 ಆ ದಿವಸದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಮನುಷ್ಯನನ್ನು ಹಿಡಿದು--ನಾವು ಸ್ವಂತವಾಗಿ ದುಡಿದು ಉಣ್ಣುವೆವು; ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು; ನಮ್ಮ ನಿಂದೆಯನ್ನು ನೀಗಿಸುವದಕ್ಕೆ ನಿನ್ನ ಹೆಸರು ನಮಗಿದ್ದರೆ ಸಾಕು ಎಂದು ಕೇಳಿಕೊಳ್ಳುವರು ಎಂಬದೇ.
2 ಆ ದಿನದಲ್ಲಿ ಕರ್ತನ ಕೊಂಬೆಯು ಸುಂದರವಾ ಗಿಯೂ ಮಹಿಮೆಯುಳ್ಳದ್ದಾಗಿಯೂ ಇರುವದು. ಭೂಮಿಯ ಫಲವು ಇಸ್ರಾಯೇಲ್ಯರಲ್ಲಿ ಉಳಿದವರಿಗೆ ಉತ್ತಮವಾಗಿಯೂ ರಮ್ಯವಾಗಿಯೂ ಇರುವದು.
3 ಹೀಗಿರುವಲ್ಲಿ ಚೀಯೋನಿನಲ್ಲಿ ಬಿಡಲ್ಪಟ್ಟವರು, ಯೆರೂಸಲೇಮಿನಲ್ಲಿ ಉಳಿದವರು, ಹಾಗೂ ಯೆರೂ ಸಲೇಮಿನಲ್ಲಿ ವಾಸಿಸುವವರೊಳಗೆ ಬರೆದಿರುವ ಪ್ರತಿ ಯೊಬ್ಬ ಮನುಷ್ಯನು ಪರಿಶುದ್ಧನೆಂದು ಕರೆಯಲ್ಪಡು ವನು.
4 ಕರ್ತನು ನ್ಯಾಯತೀರ್ಪಿನ ಆತ್ಮದಿಂದಲೂ ದಹಿಸುವ ಆತ್ಮದಿಂದಲೂ ಚೀಯೋನಿನ ಕುಮಾರ್ತೆ ಯರ ಕಲ್ಮಷವನ್ನು ತೊಳೆದು ಯೆರೂಸಲೇಮಿನ ಮಧ್ಯ ದಲ್ಲಿರುವ ರಕ್ತವನ್ನು ಶುದ್ಧೀಕರಿಸುವನು.
5 ಕರ್ತನು ಚೀಯೋನ್‌ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೂ ಅವಳ ಸಭೆಗಳ ಮೇಲೂ ಹಗಲಿನಲ್ಲಿ ಹೊಗೆಯನ್ನೂ ಮೇಘವನ್ನೂ ಇರುಳಿನಲ್ಲಿ ಪ್ರಜ್ವಲಿ ಸುವ ಅಗ್ನಿಪ್ರಕಾಶವನ್ನೂ ಉಂಟುಮಾಡುವನು; ಎಲ್ಲಾ ಮಹಿಮೆಯ ಮೇಲೆ ಕಾವಲಿರುವದು.
6 ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ ಬಿರುಗಾಳಿಗೂ ಮಳೆಗೂ ಮರೆಯಾಗಲು ಆಶ್ರಯ ಸ್ಥಾನವಾಗಿ ಒಂದು ಗುಡಾರವಿರುವದು.
ಅಧ್ಯಾಯ 5

1 ನನ್ನ ಪ್ರಿಯನ ದ್ರಾಕ್ಷೇ ತೋಟದ ವಿಷಯವಾದ ಹಾಡನ್ನು ನನ್ನ ಅತಿ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದಲ್ಲಿ ನನ್ನ ಅತಿಪ್ರಿಯನಿಗೆ ದ್ರಾಕ್ಷೆಯ ತೋಟವಿದೆ.
2 ಅವನು ಅದಕ್ಕೆ ಬೇಲಿ ಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದು ಹಾಕಿ ಒಳ್ಳೇ ದ್ರಾಕ್ಷೆಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷೇ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆ ದ್ರಾಕ್ಷೇ ಹಣ್ಣನ್ನು ಕೊಡುವದೆಂದು ಎದುರು ನೋಡು ತ್ತಿರಲು, ಅದು ಕಾಡುಹಣ್ಣನ್ನು ಬಿಟ್ಟಿತು.
3 ಓ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.
4 ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ?
5 ನನ್ನ ದ್ರಾಕ್ಷೇ ತೋಟಕ್ಕೆ ನಾನು ಮಾಡುವದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿ ಯನ್ನು ತೆಗೆದುಹಾಕುವೆನು. ಆಗ ಅದು ಮೇಯಲ್ಪಡು ವದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವದು.
6 ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
7 ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.
8 ಸ್ಥಳ ಮಿಗಿಸದೆ ನೀವು ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ ಹೊಲಕ್ಕೆ ಹೊಲ ಸೇರಿಸುವವರಿಗೆ ಅಯ್ಯೋ!
9 ಸೈನ್ಯ ಗಳ ಕರ್ತನು ನನ್ನ ಕಿವಿಗಳಲ್ಲಿ ಹೇಳುವದೇನಂದರೆ --ನಿಜವಾಗಿಯೂ ಅನೇಕ ದೊಡ್ಡದಾದವುಗಳೂ ಸೊಗಸಾದ ಅನೇಕ ಮನೆಗಳೂ ವಾಸಿಸುವವನು ಇಲ್ಲದೆ ಹಾಳುಬೀಳುವವು.
10 ಹೌದು, ಹತ್ತು ಎಕರೆ ದ್ರಾಕ್ಷೇ ತೋಟವು ಒಂದು ಬಾತು ಕೊಡುತ್ತದೆ. ಹೋಮೆರಷ್ಟು ಬೀಜ ಎಫವನ್ನು ಕೊಡುವದು.
11 ಮದ್ಯಪಾನವನ್ನು ಅತಿಯಾಗಿ ಕುಡಿಯಲು ಬೆಳ ಗಿನ ಜಾವದಲ್ಲಿ ಎದ್ದು ರಾತ್ರಿಯ ವರೆಗೂ ದ್ರಾಕ್ಷಾ ರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರಿಗೆ ಅಯ್ಯೋ!
12 ಅವರ ಹಬ್ಬಗಳಲ್ಲಿ ಕಿನ್ನರಿ, ವೀಣೆ, ದಮ್ಮಡಿ, ಕೊಳಲು ದ್ರಾಕ್ಷಾರಸವು ಇರುವವು; ಆದರೆ ಕರ್ತನ ಕೆಲಸವನ್ನು ಅವರು ಲಕ್ಷಿಸರು ಇಲ್ಲವೆ ಆತನ ಕೈಕೆಲಸವನ್ನು ಆಲೋಚಿಸುವದಿಲ್ಲ.
13 ಆದಕಾರಣ ನನ್ನ ಪ್ರಜೆಯು ಜ್ಞಾನಹೀನರಾದದರಿಂದ ಅವರು ಸೆರೆಗೆ ಹೋದರು; ಅವರ ಘನವಂತರು ಹಸಿಯು ವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವದು.
14 ಹೀಗಿರುವದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ಮಹಿಮೆ, ಸಮೂ ಹವು, ಕೋಲಾಹಲ, ಉಲ್ಲಾಸಪಡುವದು ಇವೆಲ್ಲವೂ ಅದರಲ್ಲಿ ಬೀಳುವವು.
15 ಮನುಷ್ಯನು ತಗ್ಗಿಸಲ್ಪಡು ವನು ಬಲಿಷ್ಠ ಮನುಷ್ಯನು ಕುಗ್ಗಿಸಲ್ಪಡುವನು. ಅಹಂಭಾವದ ಕಣ್ಣುಗಳು ಕಂಗೆಡುವವು.
16 ಆದರೆ ಸೈನ್ಯಗಳ ಕರ್ತನು ನ್ಯಾಯತೀರ್ಪಿನಲ್ಲಿ ಉನ್ನತನಾಗಿ ರುವನು ಪರಿಶುದ್ಧನಾದ ದೇವರು ನೀತಿಯಲ್ಲಿ ಪರಿಶುದ್ಧ ನೆನಿಸಿಕೊಳ್ಳುವನು.
17 ಆಗ ಕುರಿಮರಿಗಳು ತಮಗೆ ಮನಸ್ಸು ಬಂದ ಹಾಗೆ ಮೇಯುವವು, ಕೊಬ್ಬಿದವರ ಹಾಳಾದವುಗಳನ್ನು ಅನ್ಯರು ತಿನ್ನುವರು.
18 ವ್ಯರ್ಥವಾದ ಹಗ್ಗಗಳಿಂದ ಅಪರಾಧವನ್ನೂ ಬಂಡಿ ಹಗ್ಗದಿಂದಲೋ ಎಂಬಂತೆ ಪಾಪವನ್ನೂ ಎಳೆದು --
19 ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ಬೇಗನೆ ಮಾಡಲಿ; ನಾವು ಇಸ್ರಾ ಯೇಲಿನ ಪರಿಶುದ್ಧನ ಆಲೋಚನೆಯನ್ನು ತಿಳುಕೊ ಳ್ಳುವ ಹಾಗೆ ಅದು ಸವಿಾಪಿಸಿ ಬರಲಿ ಎಂದು ಹೇಳು ವವರಿಗೆ ಅಯ್ಯೋ!
20 ಕೇಡಿಗೆ ಮೇಲೆಂದೂ ಮೇಲಿಗೆ ಕೇಡೆಂದೂ ಕರೆದು ಕತ್ತಲೆಯನ್ನು ಬೆಳಕೆಂದೂ ಬೆಳಕನ್ನು ಕತ್ತಲೆ ಯೆಂದೂ ಕಹಿಯನ್ನು ಸಿಹಿಯೆಂದೂ ಸಿಹಿಯನ್ನು ಕಹಿ ಯೆಂದೂ ಎಣಿಸುವವರಿಗೆ ಅಯ್ಯೋ!
21 ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳೂ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೂ ಆಗಿರುವವರಿಗೆ ಅಯ್ಯೋ!
22 ದ್ರಾಕ್ಷಾರಸ ಕುಡಿಯುವದರಲ್ಲಿ ಶೂರರೂ ಮದ್ಯ ಮಿಶ್ರಣಗಳಲ್ಲಿ ಸಾಹಸಿಗಳೂ
23 ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ ಮತ್ತು ನೀತಿಯನ್ನು ನೀತಿವಂತನಿಂದ ತೆಗೆದುಹಾಕುವವರಿಗೂ ಅಯ್ಯೋ!
24 ಅವರು ಸೈನ್ಯಗಳ ಕರ್ತನ ನ್ಯಾಯ ಪ್ರಮಾಣವನ್ನು ನಿರಾಕರಿಸಿದ್ದರಿಂದಲೂ ಇಸ್ರಾಯೇ ಲಿನ ಪರಿಶುದ್ಧನ ವಾಕ್ಯವನ್ನು ಅಸಡ್ಡೆಮಾಡಿದ್ದ ರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿಬಿಡುವ ಹಾಗೂ ಜ್ವಾಲೆಯು ಹೊಟ್ಟನ್ನು ಸುಟ್ಟುಬಿಡುವಂತೆಯೂ ಅದರ ಬೇರು ಕೊಳೆಯುವಂತೆಯೂ ಚಿಗುರು ಅವರ ಧೂಳಿನಂತೆಯೂ ತೂರಿಹೋಗುವವು.
25 ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ.
26 ಆತನು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಅಂಚಿನಿಂದ ಅವರಿಗೆ ಸಿಳ್ಳುಹಾಕುವನು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು;
27 ಅವರಲ್ಲಿ ಯಾರೂ ದಣಿದು ಮುಗ್ಗರಿಸರು; ಅಥವಾ ಅವರು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ, ಇಲ್ಲವೆ ಅವರ ನಡುಕಟ್ಟು ಬಿಚ್ಚಿಕೊಳ್ಳುವದಿಲ್ಲ. ಕೆರದ ಬಾರು ಹರಿಯುವದಿಲ್ಲ.
28 ಅವರ ಬಾಣಗಳು ಹದವಾಗಿವೆ, ಅವರ ಬಿಲ್ಲುಗಳು ಬೊಗ್ಗಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ ಅವರ ಚಕ್ರಗಳು ಬಿರು ಗಾಳಿಯಂತೆಯೂ ರಭಸವಾಗಿವೆ.
29 ಅವರ ಘರ್ಜ ನೆಯು ಸಿಂಹದಂತೆ ಅದೆ. ಪ್ರಾಯದ ಸಿಂಹಗಳಂತೆ ಆರ್ಭಟಿಸುತ್ತಾರೆ; ಹೌದು, ಘರ್ಜಿಸುತ್ತಾ ಬೇಟೆ ಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.
30 ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು.
ಅಧ್ಯಾಯ 6

1 ಅರಸನಾದ ಉಜ್ಜೀಯನು ಮರಣ ಹೊಂದಿದ ವರುಷದಲ್ಲಿ ಕರ್ತನು ಉನ್ನ ತೋನ್ನತವಾಗಿ ಸಿಂಹಾಸನಾರೂಢನಾಗಿರುವದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.
2 ಅದರ ಮೇಲೆ ಸೆರಾಫಿಯರು ನಿಂತಿದ್ದರು! ಪ್ರತಿಯೊಬ್ಬನಿಗೂ ಆರು ರೆಕ್ಕೆಗಳಿದ್ದವು, ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು, ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದನು.
3 ಒಬ್ಬನು ಮತ್ತೊಬ್ಬನಿಗೆ--ಸೈನ್ಯಗಳ ಕರ್ತನು ಪರಿ ಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲ ವೆಲ್ಲಾ ಆತನ ಮಹಿಮೆಯಿಂದ ತುಂಬಿಯದೆ ಎಂದು ಕೂಗಿ ಹೇಳಿದನು.
4 ಕೂಗುವವನ ಸ್ವರಕ್ಕೆ ದ್ವಾರದ ನಿಲುವುಗಳು ಕದಲಿದವು, ಆಲಯವು ಧೂಮದಿಂದ ತುಂಬಿತ್ತು.
5 ಆಗ ನಾನು--ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು.
6 ಆಗ ಸೆರಾಫಿಯರಲ್ಲಿ ಒಬ್ಬನು ತಂಡಸದಿಂದ ಯಜ್ಞವೇದಿಯಲ್ಲಿರುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ಹಾರಿಬಂದು
7 ಅದನ್ನು ನನ್ನ ಬಾಯಲ್ಲಿ ಇಟ್ಟು--ಇಗೋ, ಇದು ನಿನ್ನ ತುಟಿಗೆ ತಗಲಿತು; ನಿನ್ನ ದೋಷವು ತೊಲಗಿ ನಿನ್ನ ಪಾಪವು ನೀಗಿ ಶುದ್ಧವಾಯಿತು ಎಂದು ಹೇಳಿದನು.
8 ಆಗ ನಾನು -- ಯಾರನ್ನು ಕಳುಹಿಸಲಿ; ಯಾವನು ನಮ ಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಸಹ ಕೇಳಿ -- ನಾನು ಇದ್ದೇನೆ; ನನ್ನನ್ನು ಕಳುಹಿಸು ಅಂದೆನು.
9 ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು.
10 ತಮ್ಮ ಕಣ್ಣುಗಳಿಂದ ನೋಡದಂತೆಯೂ ತಮ್ಮ ಕಿವಿಗಳಿಂದ ಕೇಳದಂತೆಯೂ ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗ ದಂತೆಯೂ ಈ ಜನರ ಹೃದಯವನ್ನು ಕೊಬ್ಬಿಸಿ ಕಿವಿ ಯನ್ನು ಮಂದಗೊಳಿಸಿ ಅವರ ಕಣ್ಣುಗಳನ್ನು ಮುಚ್ಚು ಎಂದು ನನಗೆ ಹೇಳಿದನು.
11 ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ
12 ಕರ್ತನು ಮನುಷ್ಯರನ್ನು ದೂರಮಾಡುವ ವರೆಗೂ ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವ ವರೆಗೂ ಅದು ಇರುವುದು;
13 ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್‌ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
ಅಧ್ಯಾಯ 7

1 ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರ ಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ.
2 ಸಿರಿಯಾದವರು ಎಫ್ರಾಯಾಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂದು ದಾವೀದನ ಮನೆಗೆ ತಿಳಿದಾಗ ಅವನ ಹೃದಯವು ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು.
3 ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್‌ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು--
4 ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.
5 ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ,
6 ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು
7 ಅದಕ್ಕೆ ಕರ್ತನಾದ ದೇವರು--ಅದು ನಿಲ್ಲುವದಿಲ್ಲ; ಇಲ್ಲವೆ ಅದು ಆಗುವದೇ ಇಲ್ಲ.
8 ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು.
9 ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.
10 ಇದಲ್ಲದೆ ಕರ್ತನು ಆಹಾಜನಿಗೆ --
11 ನಿನ್ನ ದೇವರಾದ ಕರ್ತನಿಂದ ಒಂದು ಗುರುತನ್ನು ಕೇಳು; ಅದು ಕೆಳಗೆ ಆಳದಲ್ಲಾದರೂ ಇಲ್ಲವೆ ಮೇಲೆ ಎತ್ತರದ ಲ್ಲಿದ್ದರೂ ಅದನ್ನು ಕೇಳಿಕೋ ಎಂದು ಹೇಳಿದನು.
12 ಆದರೆ ಆಹಾಜನು -- ನಾನು ಕೇಳಿಕೊಳ್ಳುವದಿಲ್ಲ; ಇಲ್ಲವೆ ಕರ್ತನನ್ನು ಪರೀಕ್ಷಿಸುವದಿಲ್ಲ ಅಂದನು.
13 ಅದಕ್ಕೆ (ಯೆಶಾಯನು) ದಾವೀದನ ಮನೆಯ ವರೇ, ಈಗ ಕೇಳಿರಿ, ಮನುಷ್ಯರನ್ನು ಬೇಸರಗೊಳಿ ಸುವದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವ ರನ್ನೂ ಬೇಸರಗೊಳಿಸುವಿರಾ?
14 ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್‌ ಎಂದು ಕರೆಯುವರು.
15 ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವ ಳಿಕೆಯು ಬರುವ ತನಕ ಬೆಣ್ಣೆ ಮತ್ತು ಜೇನನ್ನು ತಿನ್ನುವನು.
16 ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು.
17 ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು.
18 ಆ ದಿನದಲ್ಲಿ ಐಗುಪ್ತದ ನದಿಗಳ ಕಟ್ಟಕಡೆ ಯಿಂದ ನೊಣಕ್ಕೂ ಅಶ್ಯೂರ ದೇಶದ ಜೇನು ಹುಳಕ್ಕೂ ಕರ್ತನು ಸಿಳ್ಳುಹಾಕುವನು.
19 ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವವು.
20 ಅದೇ ದಿನದಲ್ಲಿ ಕರ್ತನು ನದಿಯ ಆಚೆಗಿರುವ ಅಶ್ಯೂರದ ರಾಜನೆಂಬವನಿಂದ ಬಾಡಿಗೆ ಕ್ಷೌರದ ಕತ್ತಿ ಯಿಂದ (ಯೆಹೂದದ) ತಲೆಯನ್ನು ಕಾಲುಕೂದ ಲನ್ನು ಬೋಳಿಸುವನು ಗಡ್ಡವನ್ನು ತೆಗೆದುಬಿಡುವನು.
21 ಆ ದಿನದಲ್ಲಿ ಮನುಷ್ಯನು ಒಂದು ಕಡಸನ್ನು ಮತ್ತು ಎರಡು ಕುರಿಗಳನ್ನು ಸಾಕುವನು.
22 ಆಗ ಅವು ಸಮೃದ್ಧಿಯಾಗಿ ಹಾಲನ್ನು ಕೊಡುವದರಿಂದ ಅವನು ಬೆಣ್ಣೆಯನ್ನು ತಿನ್ನುವನು; ಆ ದೇಶದಲ್ಲಿ ಉಳಿದಿರುವ ವರೆಲ್ಲರೂ ಬೆಣ್ಣೆಯನ್ನು ಮತ್ತು ಜೇನು ತುಪ್ಪವನ್ನು ತಿನ್ನುವರು.
23 ಆ ದಿನದಲ್ಲಿ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷೆಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿ ಗಳಿಂದ ತುಂಬಿರುವದು.
24 ದೇಶವೆಲ್ಲಾ ಮುಳ್ಳು ದತ್ತೂರಿಗಳಿಂದ ತುಂಬಿರುವದರಿಂದ ಮನುಷ್ಯರು ಬಿಲ್ಲು ಮತ್ತು ಬಾಣಗಳೊಂದಿಗೆ ಅಲ್ಲಿಗೆ ಬರುವರು.
25 ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ; ಆದರೆ ಅದು ಎತ್ತುಗಳನ್ನು ಬಿಡುವದಕ್ಕೂ ಚಿಕ್ಕ ಕರುಗಳು ತುಳಿದಾಡುವದಕ್ಕೂ ಎಡೆಯಾಗುವದು.
ಅಧ್ಯಾಯ 8

1 ಇದಲ್ಲದೆ ಕರ್ತನು ನನಗೆ -- ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಮನುಷ್ಯನ ಲೇಖನಿಯಿಂದಲೇ ಮಹೇರ್‌ ಶಾಲಾಲ್‌ ಹಾಷ್‌ ಬಜ್‌ (ಅಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ) ವಿಷಯವಾಗಿ ಬರೆ ಅಂದನು.
2 ನಾನು ನಂಬಿಗಸ್ತರಾದ ಯಾಜಕನಾದ ಊರೀಯನನ್ನು ಯೆಬೆ ರೆಕ್ಯನ ಮಗನಾದ ಜೆಕರ್ಯನನ್ನು ಸಾಕ್ಷಿಗಳನ್ನಾಗಿ ಇರಿಸಿಕೊಂಡೆನು.
3 ಅನಂತರ ನಾನು ಪ್ರವಾದಿನಿ ಯನ್ನು ಕೂಡಲು ಆಕೆಯು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ಆಗ ಕರ್ತನು ನನಗೆ--ಅವನಿಗೆ ಮಹೇರ್‌ ಶಾಲಾಲ್‌ ಹಾಷ್‌ ಬಜ್‌ ಎಂದು ಹೆಸರಿಡು ಎಂದು ಹೇಳಿದನು.
4 ಆ ಮಗುವು--ಅಪ್ಪಾ, ಅಮ್ಮಾ ಎಂದು ಕೂಗಬಲ್ಲವನಾಗುವದರ ಮುಂಚೆ ಅಶ್ಯೂರದ ಅರಸ ನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆ ಯನ್ನೂ ತೆಗೆದುಕೊಂಡು ಹೋಗುವನು ಅಂದನು.
5 ಕರ್ತನು ಮತ್ತೊಂದಾವರ್ತಿ ನನಗೆ--
6 ಈ ಜನರು ಮೆಲ್ಲಗೆ ಹರಿಯುವ ಸಿಲೋವದ ನೀರನ್ನು ತ್ಯಜಿಸಿ ರೆಚೀನಿನಲ್ಲಿಯೂ ರೆಮಲ್ಯನ ಮಗನಲ್ಲಿಯೂ ಮೆರೆದಿದ್ದರಿಂದ
7 ಇಗೋ, ಕರ್ತನು ಎಲ್ಲಾ ಮಹಿಮೆಯಿಂದ ಕೂಡಿದ ಅಶ್ಯೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು; ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ವಿಾರಿ
8 ಯೆಹೂದ ದಲ್ಲಿಯೂ ನುಗ್ಗಿ ತುಂಬಿ ತುಳುಕಿ ಹಬ್ಬಿಕೊಂಡು ಕತ್ತಿ ನವರೆಗೂ ಏರುವದು; ಓ ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವವು.
9 ಓ ಪ್ರಜೆಗಳೇ, ನೀವು ಕೂಡಿಕೊಳ್ಳಿರಿ; ನೀವು ಒಡೆದು ಚೂರುಚೂರಾಗುವಿರಿ; ಎಲ್ಲಾ ದೂರ ದೇಶದ ವರೇ, ಕಿವಿಗೊಡಿರಿ, ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ; ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ.
10 ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದು ಹೋಗುವದು; ಮಾತು ಹೇಳಿರಿ, ಅದು ನಿಲ್ಲದು; ದೇವರು ನಮ್ಮ ಸಂಗಡ ಇದ್ದಾನೆ.
11 ನಾನು ಈ ಜನರ ಮಾರ್ಗದಲ್ಲಿ ನಡೆಯದ ಹಾಗೆ ಕರ್ತನು ಬಲವಾದ ಕೈಯಿಂದ ನನಗೆ--
12 ಇವರು ಯಾವದನ್ನು ಒಪ್ಪಂದ ಎಂದು ಹೇಳುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
13 ಸೈನ್ಯಗಳ ಕರ್ತನನ್ನೇ ಪ್ರತಿಷ್ಠೆಪಡಿಸಿ ಕೊಳ್ಳಿರಿ; ಆತನೇ ನಿಮ್ಮ ಭಯವೂ ಭಯಂಕರನೂ ಆಗಿರಲಿ.
14 ಆತನೇ ಪರಿಶುದ್ಧ ಸ್ಥಾನವಾಗಿರುವನು; ಆದರೆ ಇಸ್ರಾಯೇಲಿನ ಎರಡು ಮನೆಗಳಿಗೆ ಎಡವುವ ಕಲ್ಲು, ಮುಗ್ಗರಿಸುವ ಬಂಡೆಯು ಮತ್ತು ಯೆರೂ ಸಲೇಮಿನ ನಿವಾಸಿಗಳಿಗೆ ಬಲೆಯೂ ಬೋನೂ ಆಗಿರುವನು.
15 ಅವರಲ್ಲಿ ಅನೇಕರು ಎಡವಿಬಿದ್ದು, ಹೊಡೆಯಲ್ಪಟ್ಟು ಬಲೆಗೆ ಸಿಕ್ಕಿ ಬೀಳುವರು.
16 ಸಾಕ್ಷಿಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ನ್ಯಾಯ ಪ್ರಮಾಣವನ್ನು ಮುದ್ರಿಸು.
17 ಯಾಕೋಬಿನ ಮನೆಯವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಕರ್ತನಿಗಾಗಿ ನಾನು ಕಾದುಕೊಂಡು ಎದುರುನೋಡುತ್ತಿರುವೆನು.
18 ಇಗೋ, ನನಗೆ ಕರ್ತನು ದಯಪಾಲಿಸಿದ ಮಕ್ಕಳೂ ನಾನೂ ಚೀಯೋನ್‌ ಪರ್ವತದಲ್ಲಿ ವಾಸವಾಗಿರುವ ಸೈನ್ಯಗಳ ಕರ್ತನಿಂದುಂಟಾದ ಗುರುತುಗಳಾಗಿಯೂ ಅದ್ಭುತ ಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.
19 ಲೊಚಗುಟ್ಟುವ ಪಿಸುಮಾತಾಡುವ ಮಂತ್ರಗಾರ ರನ್ನೂ ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ ಜನರು ತಮ್ಮ ದೇವರನ್ನೇ ಹುಡುಕುವದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವದುಂಟೋ?
20 ನ್ಯಾಯಪ್ರಮಾಣ ಮತ್ತು ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಹೇಳದಿರು ವದು ಅವರಲ್ಲಿ ಬೆಳಕಿಲ್ಲದ್ದರಿಂದಲೇ.
21 ಅವರು ಘೋರ ಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯು ವರು; ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜ ನನ್ನೂ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
22 ಅವರು ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವದು; ಅವರು ಕಾರ್ಗತ್ತಲೆಗೆ ತಳ್ಳಲ್ಪ ಡುವರು
ಅಧ್ಯಾಯ 9

1 ಆದಾಗ್ಯೂ ಸಂಕಟಪಟ್ಟ ದೇಶಕ್ಕೆ ಅಂಧ ಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬು ಲೋನ್‌ ಮತ್ತು ನಫ್ತಾಲೀ ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿ ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯ ವನ್ನೆಲ್ಲಾ ಘನಪಡಿಸಿದ್ದಾನೆ.
2 ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ.
3 ನೀನು ಜನಾಂಗವನ್ನು ವೃದ್ಧಿಗೊಳಿಸಿದ್ದೀ ಮತ್ತು ಸಂತೋಷವನ್ನು ಹೆಚ್ಚಿಸಿದ್ದೀ ಸುಗ್ಗಿಕಾಲದ ಸಂತೋಷ ದಂತೆಯೂ ಕೊಳ್ಳೆಯನ್ನು ಹಂಚಿಕೊಳ್ಳುವಾಗ ಉಲ್ಲಾ ಸಿಸುವ ಹಾಗೆಯೂ ನಿನ್ನ ಮುಂದೆ ಸಂತೋಷಿಸು ವರು.
4 ಅವನ ನೊಗವನ್ನೂ ಬೆನ್ನನ್ನು ಹೊಡೆದ ಕೋಲನ್ನೂ ಬಿಟ್ಟಿಹಿಡಿದವನ ದೊಣ್ಣೆಯನ್ನೂ ಮಿದ್ಯಾ ನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀ.
5 ಯುದ್ಧವೀರರ ಪ್ರತಿಯುದ್ಧವು ಗಲಿಬಿಲಿಯ ಗದ್ದಲ ದಿಂದ ಕೂಡಿದ್ದಾಗಿಯೂ ವಸ್ತ್ರಗಳು ರಕ್ತದಲ್ಲಿ ಹೊರಳಾ ಡಿದವುಗಳಾಗಿಯೂ ಇರುತ್ತವೆ; ಆದರೆ ಇವು ಬೆಂಕಿಗೆ ಆಹುತಿಯಾಗಿ ಸುಟ್ಟುಹೋಗುವವು.
6 ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
7 ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
8 ಕರ್ತನು ಯಾಕೋಬನಿಗೆ ಒಂದು ಮಾತನ್ನು ಹೇಳಿ ಕಳುಹಿಸಿದನು; ಅದು ಇಸ್ರಾಯೇಲ್ಯರ ಮೇಲೆ ಹೊಳೆಯಿತು.
9 ಇಟ್ಟಿಗೆಗಳು ಬಿದ್ದುಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು;
10 ಅತ್ತಿಮರಗಳು ಕಡಿಯಲ್ಪಟ್ಟರೂ ದೇವದಾರುಗಳನ್ನು ಹಾಕುವೆವು ಎಂದು ಹೃದಯದ ಗರ್ವದಿಂದಲೂ ಕೆಚ್ಚೆದೆಯಿಂದಲೂ ಹೇಳಿಕೊಳ್ಳುವ ಎಲ್ಲಾ ಜನರಿಗೂ ಎಫ್ರಾಯಾಮ್ಯ ರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ ಆ ಮಾತು ಗೊತ್ತಾಗುವದು.
11 ಹೀಗಿರುವದರಿಂದ ಕರ್ತನು ರೆಚೀ ನನ ವೈರಿಗಳನ್ನು ಅವನಿಗೆ ವಿರೋಧವಾಗಿ ಎಬ್ಬಿಸಿ ಅವನ ಶತ್ರುಗಳಾದ ಸಿರಿಯಾದವರನ್ನು ಮುಂದೆಯೂ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವನು.
12 ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
13 ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.
14 ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.
15 ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು; ಸುಳ್ಳುಬೋಧಿಸುವ ಪ್ರವಾ ದಿಯು ಬಾಲವಾಗಿರುವನು.
16 ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ.
17 ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
18 ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ ಮುಳ್ಳುಗಳನ್ನು ನುಂಗಿಬಿಟ್ಟು ಅಡವಿಯ ಪೊದೆಗ ಳನ್ನು ಹತ್ತಿಕೊಳ್ಳಲು ಅದು ಹೊಗೆಹೊಗೆಯಾಗಿ ಸುತ್ತಿ ಕೊಂಡು ಮೇಲಕ್ಕೆ ಏರುತ್ತದೆ.
19 ಸೈನ್ಯಗಳ ಕರ್ತನ ಕೋಪೋದ್ರೇಕದಿಂದ ದೇಶವು ಕತ್ತಲೆಯಾಗಿದೆ; ಜನರು ಉರಿಯುವ ಸೌದೆಯಂತಿದ್ದಾರೆ; ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವದಿಲ್ಲ.
20 ಅವನು ಬಲಗಡೆಯಲ್ಲಿರುವದನ್ನು ಕಿತ್ತುಕೊಂಡು (ತಿಂದರೂ) ಹಸಿದೇ ಇರುವನು; ಅವನು ಎಡಗಡೆ ಯಲ್ಲಿರುವದನ್ನು ತಿಂದರೂ ಅವು ಅವನನ್ನು ತೃಪ್ತಿ ಪಡಿಸಲಾರವು. ಒಬ್ಬೊಬ್ಬನೂ ತನ್ನ ತನ್ನ ತೋಳಿನ ಮಾಂಸವನ್ನು ತಿನ್ನುವನು.
21 ಹೀಗೆ ಮನಸ್ಸೆಯು ಎಫ್ರಾಯಾಮನ್ನು ಮತ್ತು ಎಫ್ರಾಯಾಮು ಮನಸ್ಸೆ ಯನ್ನು ತಿಂದುಬಿಡುವವು; ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
ಅಧ್ಯಾಯ 10

1 ಅನೀತಿಯ ನೇಮಕಗಳನ್ನು ನೇಮಿಸಿ, ಕ್ರೂರವಾದ ಬರಹ ಬರೆಯುವವರಿಗೆ ಅಯ್ಯೋ!
2 ಇವರು ವಿಧವೆಯರನ್ನು ಸೂರೆಮಾಡಿ ದಿಕ್ಕಿಲ್ಲದವರಿಂದ ಸುಲುಕೊಂಡು ದೀನರಿಗೆ ನ್ಯಾಯ ವನ್ನು ತಪ್ಪಿಸಿ ನನ್ನ ಬಡ ಜನರ ನ್ಯಾಯವನ್ನು ತೆಗೆಯ ಬೇಕೆಂದಿದ್ದಾರೆ.
3 ವಿಚಾರಣೆಯ ದಿನದಲ್ಲಿಯೂ ದೂರ ದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡು ವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ವೈಭವವನ್ನು ಎಲ್ಲಿ ಬಿಡುವಿರಿ?
4 ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವದೇ ಇವರ ಗತಿ. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
5 ಓ ನನ್ನ ಕೋಪದ ಕೋಲಾದ ಅಶ್ಶೂರವೇ, ಕೈಯಲ್ಲಿರುವ ಬೆತ್ತವು ನನ್ನ ರೌದ್ರವೇ.
6 ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
7 ಅದರ ಅಭಿಪ್ರಾಯವೋ ಹಾಗಲ್ಲ; ಇಲ್ಲವೇ ಅದರ ಹೃದಯವು ಈ ಪ್ರಕಾರ ಆಲೋಚಿಸುವದಿಲ್ಲ; ಜನಾಂಗಗಳನ್ನು ಕಡಿದು ಬಿಡುವದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವದು ಅವನ ಹೃದಯದಲ್ಲಿ ಇದೆ.
8 ಅವನು ಅಂದು ಕೊಳ್ಳುವದೇನಂದರೆ--ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ?
9 ಕಲ್ನೋ, ಕರ್ಕೆ ವಿಾಷಿನ ಹಾಗಲ್ಲವೋ? ಹಾಮಾತ್‌ ಅರ್ಪದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗ ಲ್ಲವೋ?
10 ಯೆರೂಸಲೇಮಿನಲ್ಲಿಯೂ ಸಮಾರ್ಯ ದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ
11 ನಾನು ಸಮಾರ್ಯಕ್ಕೂ ಅದರ ವಿಗ್ರಹಗಳಿಗೂ ಮಾಡಿದಂತೆ ಯೆರೂಸಲೇಮಿಗೂ ಅದರ ವಿಗ್ರಹ ಗಳಿಗೂ ಮಾಡದೆ ಇರುವೆನೋ?
12 ಆದಕಾರಣ, ಕರ್ತನು ಚೀಯೋನ್‌ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು.
13 ಅವನು ತನ್ನೊಳಗೆ--ನನ್ನ ಕೈಯ ಬಲ ದಿಂದಲೂ ಜ್ಞಾನದಿಂದಲೂ ಅದನ್ನು ಮಾಡಿದೆ; ನಾನು ವಿವೇಕಿ ಮತ್ತು ಜನಾಂಗಗಳ ಮೇರೆಗಳನ್ನು ಕಿತ್ತು ಅವರ ನಿಧಿಗಳನ್ನು ಕೊಳ್ಳೆಹೊಡೆದು ಅದರ ನಿವಾಸಿಗಳನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
14 ಜನಗಳ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ, ಬಿಡಲ್ಪಟ್ಟ ಮೊಟ್ಟೆಗಳನ್ನು ಕೂಡಿಸುವಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾ ಡಿಸಿ ಬಾಯಿತೆರೆದು ಕಿಚುಗುಟ್ಟುವವರು ಯಾರೂ ಇಲ್ಲವೆಂದು ಅಂದುಕೊಂಡನು.
15 ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿ ಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಅಥವಾ ಬೆತ್ತವು ತಾನು ಮರವಲ್ಲ ಎಂಬಂತೆ ತನ್ನನ್ನು ತಾನು ಎತ್ತಿಕೊಂಡ ಹಾಗೆ ಇರುವದು.
16 ಆದಕಾರಣ ಸೈನ್ಯಗಳ ಕರ್ತನಾದ ಕರ್ತನು ಅವನ ಕೊಬ್ಬಿನಲ್ಲಿ ಕ್ಷಯವನ್ನುಂಟುಮಾಡುವನು; ದಹಿ ಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭ ವದ ಕೆಳಗೆ ಹತ್ತಿಕೊಳ್ಳುವದು.
17 ಇಸ್ರಾಯೇಲಿನ ಬೆಳಕು ಬೆಂಕಿಯಾಗುವದು, ಅದರ ಪರಿಶುದ್ಧನು ಜ್ವಾಲೆ ಯಂತಿರುವನು; ಅದು ಒಂದೇ ದಿನದಲ್ಲಿ ಅವನ ಮುಳ್ಳು ದತ್ತೂರಿಗಳನ್ನು ದಹಿಸಿನುಂಗಿಬಿಡುವದು;
18 ಅದು ದೇಹ ಮತ್ತು ಆತ್ಮಗಳನ್ನೂ ಅವನವನ ಹಾಗೂ ಫಲವತ್ತಾದ ಹೊಲವು ಹೊಂದಿರುವ ಘನತೆಯನ್ನೂ ದಹಿಸಿಬಿಡುವದು; ಅದು ಮೂರ್ಛೆ ಹೋಗುವ ರೋಗಿಯಂತಿರುವದು.
19 ಅವನ ಉಳಿ ದವನ ವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆ ಯಾಗಿರುವದು.
20 ಆ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಉಳಿದವರೂ ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಇಸ್ರಾಯೇಲಿನ ಪರಿಶುದ್ಧನಾದ ಕರ್ತನ ಸತ್ಯವನ್ನು ಆಧಾರ ಮಾಡಿಕೊಳ್ಳುವರು.
21 ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾ ಕ್ರಮಿಯಾದ ದೇವರ ಕಡೆಗೆ ಹಿಂತಿರುಗುವರು.
22 ತನ್ನ ಜನರಾದ ಇಸ್ರಾಯೇಲ್ಯರು ಸಮುದ್ರದ ಮರಳಿನಂತೆ ಇದ್ದರೂ ಅವರಲ್ಲಿ ಉಳಿದವರು ಮಾತ್ರ ಹಿಂತಿರು ಗುವರು; ನಾಶವಾಗುವದಕ್ಕೆ ವಿಧಿಸಲ್ಪಟ್ಟದ್ದು ನೀತಿ ಯೊಂದಿಗೆ ತುಂಬಿ ತುಳುಕುವದು.
23 ಸೈನ್ಯಗಳ ದೇವರಾದ ಕರ್ತನು ಎಲ್ಲಾ ದೇಶದ ಮಧ್ಯದಲ್ಲಿ ನಿಶ್ಚ ಯಿಸಲ್ಪಟ್ಟ ಕ್ಷೀಣತೆಯನ್ನು ಉಂಟುಮಾಡುವನು.
24 ಆದದರಿಂದ ಸೈನ್ಯಗಳ ದೇವರಾದ ಕರ್ತನು ಇಂತೆ ನ್ನುತ್ತಾನೆ--ಚೀಯೋನಿನಲ್ಲಿ ವಾಸಿಸುವ ಓ ನನ್ನ ಜನರೇ, ಐಗುಪ್ತ್ಯರಂತೆ ನಿಮ್ಮನ್ನು ಕೋಲಿನಿಂದ ಹೊಡೆದು ನಿಮಗೆ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಶ್ಶೂರರಿಗೆ ಭಯಪಡಬೇಡಿರಿ.
25 ಇನ್ನು ಸ್ವಲ್ಪ ಕಾಲದಲ್ಲಿ, (ನಿಮ್ಮ ಮೇಲಿನ) ಉಗ್ರವು ತೀರಿ ನನ್ನ ಕೋಪವು ಅವರ ನಾಶನಕ್ಕಾ ಗುವದು.
26 ಸೈನ್ಯಗಳ ಕರ್ತನು ಓರೇಬನ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತ್ಯರ ಮೇಲೆ ಎತ್ತಿದಂತೆ ಎತ್ತುವನು.
27 ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಹೂಡಿದ ನೊಗವು ನಿಮ್ಮ ಕುತ್ತಿಗೆಯಿಂದಲೂ ತೊಲಗುವದು; ನೀವು ಅಭಿಷಿಕ್ತರಾದ ಕಾರಣ ನೊಗವು ನಾಶವಾಗಿ ಹೋಗುವದು.
28 ಅವನು ಅಯ್ಯಾಥಿಗೆ ಬಂದನು, ಮಿಗ್ರೋನನ್ನು ಹಾದುಹೋಗಿ ಮಿಕ್ಮಾಷಿನಲ್ಲಿ ತನ್ನ ಸಾಮಗ್ರಿಯನ್ನು ಇಟ್ಟಿದ್ದಾನೆ.
29 ಅವರು ಕಣಿವೆಯನ್ನು ದಾಟಿದ್ದಾರೆ; ಗೆಬಾದಲ್ಲಿ ಇಳುಕೊಂಡಿದ್ದಾರೆ; ರಾಮಾ ಹೆದರುತ್ತದೆ; ಸೌಲನ ಗಿಬ್ಯಾ ಓಡಿಹೋಯಿತು.
30 ಓ ಗಲ್ಲೀಮ್‌ಮಗಳೇ, ನಿನ್ನ ಸ್ವರವೆತ್ತಿ ಕೂಗು; ಓ ಬಡ ಅನತೋ ತಳೇ, ಲಯೆಷಿನ ವರೆಗೂ ಕೇಳಿಸುವಂತೆ ಕೂಗು.
31 ಮದ್ಮೇನ ದಿಕ್ಕಾಪಾಲಾಯಿತು; ಗೇಬೀಮಿನ ನಿವಾಸಿ ಗಳು ಓಡಿಹೋಗಲು ಕೂಡಿಕೊಂಡರು.
32 ಆ ದಿನ ದಲ್ಲಿ ಅವನು ನೋಬಿನಲ್ಲಿ ಇಳುಕೊಂಡವನಂತೆ ಇದ್ದಾಗ್ಯೂ ಚೀಯೋನ್‌ ಕುಮಾರ್ತೆಯ ಪರ್ವತಕ್ಕೂ ಯೆರೂಸಲೇಮಿನ ಗುಡ್ಡಕ್ಕೂ ವಿರೋಧವಾಗಿ ತನ್ನ ಕೈಯನ್ನು ಅಲ್ಲಾಡಿಸುವನು.
33 ಇಗೋ, ಕರ್ತನೂ ಸೈನ್ಯಗಳ ಕರ್ತನು ಭಯಂಕರ ವಾಗಿ ಕೊಂಬೆಯನ್ನು ಕತ್ತರಿಸುವನು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವವು; ಗರ್ವಿಷ್ಠರು ತಗ್ಗಿಸಲ್ಪಡು ವರು.
34 ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು.
ಅಧ್ಯಾಯ 11

1 ಇಷಯನ ಬುಡದಿಂದ ಒಂದು ಕೊಂಬೆ ಒಡೆಯುವದು ಅದರ ಬೇರಿನಿಂದ ಕೊಂಬೆ ಯು ಬೆಳೆಯುವದು.
2 ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು;
3 ಕರ್ತನ ಭಯ ದಲ್ಲಿ ಅವನಿಗೆ ಸೂಕ್ಷ್ಮ ತಿಳುವಳಿಕೆಯು ಉಂಟಾ ಗುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡು ವದಿಲ್ಲ, ಇಲ್ಲವೆ ತನ್ನ ಕಿವಿಗಳ ಕೇಳ್ವಿಕೆಯ ಪ್ರಕಾರ ತೀರ್ಪುಮಾಡನು;
4 ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.
5 ನೀತಿಯೇ ಅವನಿಗೆ ನಡುಕಟ್ಟು, ನಂಬಿಗಸ್ತಿಕೆಯು ಅವನ ಸೊಂಟದ ಪಟ್ಟಿ.
6 ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆ ಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು; ಇವುಗಳನ್ನು ಒಂದು ಚಿಕ್ಕ ಮಗುವು ನಡಿಸುವದು.
7 ಹಸುವು ಕರಡಿಯ ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲನ್ನು ಮೇಯು ವದು.
8 ಮೊಲೆಕೂಸು ನಾಗರ ಹುತ್ತದ ಮೇಲೆ ಆಡುವದು, ಮೊಲೆ ಬಿಟ್ಟ ಮಗುವು ಹಾವಿನ ಬಿಲದ ಮೇಲೆ ಕೈಹಾಕುವದು.
9 ನನ್ನ ಪರಿಶುದ್ಧ ಪರ್ವತದ ಲ್ಲೆಲ್ಲಾ ಕೇಡನ್ನಾಗಲಿ ನಾಶವನ್ನಾಗಲಿ ಯಾರೂ ಮಾಡು ವದಿಲ್ಲ; ಸಮುದ್ರವು ನೀರಿನಿಂದ ಮುಚ್ಚಿಕೊಂಡಿರು ವಂತೆ ಕರ್ತನ ತಿಳುವಳಿಕೆಯು ಭೂಮಿಯಲ್ಲಿ ತುಂಬಿ ಕೊಂಡಿರುವದು.
10 ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು.
11 ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್‌, ಕೂಷ್‌, ಏಲಾಮ್‌, ಶಿನಾರ್‌, ಹಮಾಥ್‌ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.
12 ಜನಾಂಗ ಗಳಿಗೆ ಗುರುತಾಗಿ ಇಟ್ಟ ಇಸ್ರಾಯೇಲಿನಿಂದ ತಳ್ಳಿಬಿಟ್ಟವ ರನ್ನು ಕೂಡಿಸುವನು ಮತ್ತು ಯೆಹೂದದಿಂದ ಚದರಿದ ವರನ್ನು ಭೂಮಿಯ ನಾಲ್ಕು ಮೂಲೆಗಳಿಂದ ಒಟ್ಟುಗೂಡಿಸುವನು.
13 ಎಫ್ರಾಯಾಮಿನ ಹೊಟ್ಟೇಕಿಚ್ಚು ತೊಲಗಿ ಯೆಹೂದದ ವಿರೋಧಿಗಳು ಕಡಿದುಹಾಕಲ್ಪಡುವರು; ಹೀಗೆ ಎಫ್ರಾಯಾಮು ಯೆಹೂದದ ಮೇಲೆ ಹೊಟ್ಟೇ ಕಿಚ್ಚುಪಡದು, ಯೆಹೂದವು ಎಫ್ರಾಯಾಮನ್ನು ಹಿಂಸಿ ಸದು.
14 ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಪಿಯರ ಹೆಗಲಿನ ಮೇಲೆ ಎರಗುವರು; ಅವರು ಜೊತೆಯಾಗಿ ಪೂರ್ವದವರನ್ನು ಹಾಳುಮಾಡುವರು; ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ಹಾಕುವರು; ಅಮ್ಮೋನ್ಯರ ಮಕ್ಕಳು ಅವರಿಗೆ ವಿಧೇಯರಾಗುವರು.
15 ಕರ್ತನು ಐಗುಪ್ತ ಸಮುದ್ರದ ನಾಲಿಗೆಯನ್ನು ಸಂಪೂರ್ಣವಾಗಿ ನಾಶಮಾಡುವನು; ಆತನು ತನ್ನ ಬಲವಾದ ಗಾಳಿಯಿಂದ ನದಿಯ ಮೇಲೆ ಕೈಯನ್ನು ಜಾಡಿಸಿ ಅದನ್ನು ಏಳು ಹೊಳೆಗಳಾಗಿ ಹೊಡೆದು ಮನುಷ್ಯರ ಕೆರಗಳು ನೆನೆಯದಂತೆ ದಾಟಿಸು ವನು.
16 ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು.
ಅಧ್ಯಾಯ 12

1 ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.
2 ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ.
3 ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ.
4 ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ.
5 ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.
6 ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
ಅಧ್ಯಾಯ 13

1 ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ.
2 ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
3 ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
4 ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ.
5 ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.
6 ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು.
7 ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು.
8 ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು.
9 ಇಗೋ, ಕರ್ತನ ದಿನವು ಬರುತ್ತದೆ, ಭೂಮಿಯನ್ನು ಹಾಳುಮಾಡುವದಕ್ಕೂ ಅಲ್ಲಿಂದ ಪಾಪಿಗಳನ್ನು ನಿರ್ಮೂಲಮಾಡುವದಕ್ಕೂ ಅದು ಕೋಪೋದ್ರೇಕ ದಿಂದಲೂ ತೀಕ್ಷ್ಣ ರೋಷದಿಂದಲೂ ಕ್ರೂರವಾಗಿರು ವದು.
10 ಆಕಾಶದ ನಕ್ಷತ್ರಗಳು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ; ಸೂರ್ಯನು ಮೂಡಿ ಹೋಗುತ್ತಿರುವಾಗಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವದಿಲ್ಲ.
11 ಅವರ ಕೆಟ್ಟವುಗಳಿಗೋಸ್ಕರವೂ ದುಷ್ಟರ ಅಪ ರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸು ವೆನು; ಗರ್ವಿಷ್ಟರ ಅಹಂಕಾರವನ್ನು ನಿಲ್ಲಿಸಿಬಿಡುವೆನು, ಭಯಂಕರವಾದ ಹೆಮ್ಮೆಯನ್ನು ತಗ್ಗಿಸುವೆನು.
12 ನಾನು ಮನುಷ್ಯನನ್ನು ಚೊಕ್ಕ ಬಂಗಾರಕ್ಕಿಂತಲೂ ಇಲ್ಲವೆ ಒಫೀರಿನ ಬಂಗಾರಕ್ಕಿಂತಲೂ ಅಮೂಲ್ಯನನ್ನಾಗಿ ಮಾಡುವೆನು.
13 ಆದದರಿಂದ ಸೈನ್ಯಗಳ ಕರ್ತನ ಉಗ್ರದಲ್ಲಿಯೂ ಆತನ ಕೋಪೋದ್ರೇಕದ ದಿನ ದಲ್ಲಿಯೂ ನಾನು ಆಕಾಶಗಳನ್ನು ನಡುಗಿಸುವೆನು, ಭೂಮಿಯನ್ನು ಅದರ ಸ್ಥಳದಿಂದ ತೆಗೆದುಬಿಡುವೆನು.
14 ಅದು ಅಟ್ಟಿದ ಜಿಂಕೆಯಂತೆಯೂ ಯಾರೂ ಕೂಡಿ ಸದ ಕುರಿಗಳಂತೆಯೂ ಇರುವದು. ಅವರಲ್ಲಿ ಪ್ರತಿಯೊ ಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು ಪ್ರತಿಯೊ ಬ್ಬನೂ ತನ್ನ ಸ್ವದೇಶಕ್ಕೆ ಓಡಿಹೋಗುವನು.
15 ಸಿಕ್ಕಿದ ಪ್ರತಿಯೊಬ್ಬನೂ ಇರಿಯಲ್ಪಡುವನು; ಅವರೊಂದಿಗೆ ಸೇರಿಕೊಂಡ ಪ್ರತಿಯೊಬ್ಬನೂ ಕತ್ತಿಯಿಂದ ಬೀಳು ವನು.
16 ಅವರ ಮಕ್ಕಳೂ ಅವರ ಕಣ್ಣೆದುರಿಗೆ ತುಂಡು ತುಂಡಾಗುವಂತೆ ಅಪ್ಪಳಿಸಲ್ಪಡುವರು; ಅವರ ಮನೆ ಗಳು ಸೂರೆಯಾಗುವವು; ಅವರ ಪತ್ನಿಯರು ಕೆಡಿ ಸಲ್ಪಡುವರು.
17 ಇಗೋ, ಬೆಳ್ಳಿಯನ್ನು ಲಕ್ಷಿಸದೆ ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧ ವಾಗಿ ನಾನು ಎಬ್ಬಿಸುವೆನು.
18 ಅವರ ಬಿಲ್ಲುಗಳು ಸಹ ಯುವಕರನ್ನು ಹೊಡೆದು ತುಂಡುತುಂಡು ಮಾಡುವವು; ಇವರು ಗರ್ಭಫಲವನ್ನು ಕರುಣಿಸರು, ಇವರ ಕಣ್ಣುಗಳು ಮಕ್ಕಳನ್ನೂ ಉಳಿಸುವದಿಲ್ಲ.
19 ರಾಜ್ಯಗಳ ಘನತೆಯೂ ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬೆಲಿಗೆ ದೇವರು ಸೊದೋ ಮ್‌ ಗೊಮೋರಗಳನ್ನು ಕೆಡವಿಬಿಟ್ಟಂತೆ ಇದನ್ನು ಸಹ ಕೆಡವಿಬಿಡುವನು.
20 ಅದು ಎಂದಿಗೂ ನಿವಾಸ ಸ್ಥಳ ವಾಗದು, ಇಲ್ಲವೆ ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಇಲ್ಲವೆ ಯಾವ ಅರಬಿಯನೂ ಗುಡಾರ ಹಾಕನು; ಅಥವಾ ಕುರುಬರು ಮಂದೆಯನ್ನು ತಂಗಿಸರು.
21 ಆದರೆ ಮರುಭೂಮಿಯ ಕಾಡುಮೃಗಗಳು ಅಲ್ಲಿ ಮಲಗುವವು; ಅವರ ಮನೆಗಳು ವ್ಯೆಥೆಯಿಂದ ತುಂಬಿರುವವು; ಅಲ್ಲಿ ಗೂಬೆಗಳು ವಾಸಿಸುವವು, ದೆವ್ವಗಳು ಕುಣಿದಾಡುವವು.
22 ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು.
ಅಧ್ಯಾಯ 14

1 ಕರ್ತನು ಯಾಕೋಬ್ಯರನ್ನು ಕರುಣಿಸಿ ಮತ್ತೆ (ಇನ್ನೂ) ಇಸ್ರಾಯೇಲ್ಯರನ್ನು ಆದುಕೊಂಡು ಅವರನ್ನು ತಮ್ಮ ಸ್ವಂತ ದೇಶದಲ್ಲಿ ಸೇರಿಸಬೇಕೆಂದಿದ್ದಾನೆ. ಅನ್ಯರು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
2 ಜನರು ಅವರನ್ನು ತೆಗೆದುಕೊಂಡು ತಮ್ಮ ಸ್ಥಳಕ್ಕೆ ಅವರನ್ನು ಬರಮಾಡುವರು. ಆಗ ಇಸ್ರಾಯೇಲಿನ ಮನೆತನದವರು ಕರ್ತನ ದೇಶದಲ್ಲಿ ಆ ಜನಾಂಗದ ವರನ್ನು ಗಂಡು ಹೆಣ್ಣಾಳುಗಳನ್ನಾಗಿ (ದಾಸದಾಸಿಯ ರನ್ನಾಗಿ) ಇಟ್ಟುಕೊಳ್ಳುವರು. ತಮ್ಮನ್ನು ಸೆರೆಹಿಡಿದ ವರನ್ನು ಸೆರೆಹಿಡಿಯುವರು, ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರನಡಿಸುವರು.
3 ಕರ್ತನು ನಿಮ್ಮ ಸಂಕಟದಿಂದಲೂ ಕಳವಳದಿಂದ ಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಸಾಮತಿಯನ್ನು (ಪದ್ಯವನ್ನು) ನೀವು ಹೀಗೆ ಎತ್ತಿ ಹೇಳಬೇಕು.
4 ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ.
5 ಜನರನ್ನು ಉಗ್ರಕೋಪದಿಂದ ಎಡೆಬಿಡದೆ ಹೊಡೆ ದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ
6 ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು.
7 ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿ ಗೊಂಡಿದೆ. ಅವರು ಉತ್ಸಾಹಧ್ವನಿಯನ್ನು ಎತ್ತುತ್ತಾರೆ.
8 ಹೌದು, ತುರಾಯಿ ಮರಗಳೂ ಲೆಬನೋನಿನ ದೇವದಾರು ಮರಗಳೂ ನೀನು ಬಿದ್ದಂದಿನಿಂದ ಕಡಿಯುವವನು ಯಾವನೂ ತಮ್ಮ ಮೇಲೆ ಬರಲಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
9 ನಿನಗೋ ಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವ ರನ್ನೂ ಅಂದರೆ, ಭೂಲೋಕದ ಮುಖಂಡರಾಗಿದ್ದವರೆ ಲ್ಲರನ್ನೂ ಕಲಕಿ (ಎಚ್ಚರಿಸಿ) ಜನಾಂಗಗಳ ಎಲ್ಲಾ ರಾಜ ರುಗಳನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
10 ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು.
11 ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ;
12 ಓ ಲೂಸಿಫರ್‌ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ?
13 ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು.
14 ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ;
15 ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ.
16 ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ
17 ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು.
18 ಜನಾಂಗಗಳ ಅರಸುಗಳೆಲ್ಲಾ ಅವರೆಲ್ಲರೂ ವೈಭವ ದಿಂದ ತಮ್ಮತಮ್ಮ ಮನೆಗಳಲ್ಲಿ ಮಲಗುತ್ತಾರೆ.
19 ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ.
20 ನೀನು ಅವರೊಂದಿಗೆ ಹೂಣಿಡುವಿಕೆ ಯಲ್ಲಿ ಕೂಡಿಕೊಳ್ಳದೆ ಇರುವಿ. ನಿನ್ನ ದೇಶವನ್ನು ನೀನು ನಾಶಮಾಡಿ ನಿನ್ನ ಜನರನ್ನು ಕೊಂದುಹಾಕಿದಿ. ಕೆಟ್ಟವರ ಸಂತಾನವು ಎಂದೆಂದಿಗೂ ಹೆಸರು ಹೊಂದು ವದಿಲ್ಲ.
21 ಅವರು ಏಳದೆ ಇಲ್ಲವೆ ದೇಶವನ್ನು ವಶ ಪಡಿಸಿಕೊಳ್ಳದೆ ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ ಅವರ ತಂದೆಗಳ ಅಪರಾಧದ ನಿಮಿತ್ತ ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ.
22 ಅವರಿಗೆ ವಿರುದ್ಧವಾಗಿ ಏಳುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬಾಬೆಲಿನಿಂದ ಹೆಸರನ್ನೂ ಉಳಿದ ಜನರನ್ನೂ ಮಗನನ್ನೂ ಸೋದರಳಿಯನನ್ನೂ ನಿರ್ಮೂಲ ಮಾಡುವೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
23 ಅದನ್ನು ಸಹ ಮುಳ್ಳುಹಂದಿಗೆ ಬಾಧ್ಯ ವಾಗಿಯೂ ನೀರಿನ ಕುಣಿಗಳಾಗಿಯೂ ಮಾಡಿ ನಾಶ ವೆಂಬ ಕಸಬರಿಕೆಯಿಂದ ಗುಡಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
24 ಸೈನ್ಯಗಳ ಕರ್ತನು ಆಣೆಯಿಟ್ಟು ಹೇಳುವದೇನ ಂದರೆ--ನಾನು ನೆನಸಿದ ಪ್ರಕಾರವೇ ನೆರವೇರುವದು; ನಾನು ಉದ್ದೇಶಿಸಿದ್ದೇ ನಿಲ್ಲುವದು.
25 ಏನಂದರೆ ಅಶ್ಶೂ ರ್ಯರನ್ನು ನನ್ನ ದೇಶದಲ್ಲಿ ಮುರಿದುಬಿಡುತ್ತೇನೆ. ನನ್ನ ಪರ್ವತಗಳ ಮೇಲೆ ಅವನನ್ನು ತುಳಿದುಬಿಡುತ್ತೇನೆ; ಅವನ ನೊಗವು ಅವರ ಮೇಲಿನಿಂದ ತೊಲಗಿ ಅವ ನ ಭಾರವು ಅವನ ಭುಜದ ಮೇಲಿನಿಂದ ತೊಲಗು ವದು.
26 ಇದೇ ಸಮಸ್ತ ಭೂಮಿಯ ವಿಷಯ ಆಲೋ ಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ.
27 ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.
28 ಅರಸನಾದ ಆಹಾಜನು ಸತ್ತ ವರುಷದಲ್ಲಿ ಈ ದೇವವಾಣಿಯಾಯಿತು.
29 ಸಮಸ್ತ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಆತನ ಕೋಲು ಮುರಿದುಹೋಯಿ ತೆಂದು ನೀವು ಉಲ್ಲಾಸಿಸಬೇಡಿರಿ; ಹಾವಿನ ಸಂತಾನ ದಿಂದ ವಿಷಸರ್ಪವು ಉಂಟಾಗುವದು; ಅದರ ಫಲವು ಹಾರುವ ಅಗ್ನಿಮಯ ಸರ್ಪವೇ.
30 ದೀನರ ಚೊಚ್ಚಲು ಮಕ್ಕಳು ಉಣ್ಣುವರು, ದಿಕ್ಕಿಲ್ಲದವರು ನಿರ್ಭಯವಾಗಿ ಮಲಗಿಕೊಳ್ಳುವರು; ನಿನ್ನ ಸಂತಾನವನ್ನು ಕ್ಷಾಮದಿಂದ ಸಾಯಿಸುವೆನು. ನಿನ್ನಲ್ಲಿ ಉಳಿದವರನ್ನು ಅವನು ಹತ ಮಾಡುವನು.
31 ಓ ದ್ವಾರವೇ, ಗೋಳಾಡು; ಓ ಪಟ್ಟಣವೇ, ಕೂಗು; ನಿನ್ನ ಫಿಲಿಷ್ಟಿ ಯರೆಲ್ಲಾ ಕುಂದಿ ಹೋಗಿದ್ದಾರೆ; ಅವರ ಹೊಗೆಯು ಉತ್ತರದಿಂದ ಬರುತ್ತದೆ. ಆತನ ನೇಮಕವಾದ ಕಾಲ ಗಳಲ್ಲಿ ಯಾವನೂ ಒಂಟಿಯಾಗಿರುವದಿಲ್ಲ.
32 ಆಗ ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡ ಬೇಕೆಂದರೆ? ಕರ್ತನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ಬಡವರು ಅದನ್ನು ಆಶ್ರಯಿಸಿ ಕೊಳ್ಳುವರು ಎಂಬದೇ.
ಅಧ್ಯಾಯ 15

1 ಮೋವಾಬಿನ ವಿಷಯವಾದ ದೈವೋಕ್ತಿ. ಆ ರಾತ್ರಿಯಲ್ಲಿ ಮೋವಾಬಿನ ಆರ್‌ ಹಾಳಾಗಿ ನಿಶ್ಯಬ್ದವಾಯಿತು; ಆ ರಾತ್ರಿಯಲ್ಲಿ ಮೋವಾ ಬಿನ ಕಿರ್‌ ಹಾಳಾಗಿ ನಿಶ್ಯಬ್ಧವಾಯಿತು
2 ಬಯಿತ್‌ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
3 ಅವರು ತಮ್ಮ ಬೀದಿಗಳಲ್ಲಿ ಗೋಣೀತಟ್ಟನ್ನು ತಾವೇ ಸುತ್ತಿ ಕೊಳ್ಳುವರು; ಪ್ರತಿಯೊಬ್ಬನು ತಮ್ಮ ಮನೆಗಳ ಮೇಲೆ ಯೂ ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕ ದಿಂದ ಗೋಳಾಡುವನು.
4 ಹೆಷ್ಬೋನ್‌ ಮತ್ತು ಎಲೆ ಯಾಲೆ ಕೂಗುತ್ತವೆ; ಅವುಗಳ ಸ್ವರವು ಯಹಜಿನ ವರೆಗೂ ಕೇಳಿಸುತ್ತದೆ; ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು; ಅವನ ಪ್ರಾಣವು ತನ್ನೊಳಗೆ ತತ್ತರಿಸುತ್ತದೆ.
5 ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗು ತ್ತದೆ; ಅಲ್ಲಿಂದ ಪಲಾಯನವಾದವರು ಮೂರು ವರುಷದ ಕಡಸಿನಂತೆ ಚೋಯರಿಗೆ ಓಡಿಹೋಗು ವರು; ಲೂಹೀಥ್‌ ದಿಣ್ಣೆಯನ್ನು ಅಳುತ್ತಾ ಹತ್ತುತ್ತಾರೆ; ಯಾಕಂ ದರೆ ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಸ್ವರಗೈಯು ತ್ತಾರೆ.
6 ನಿವ್ರೆಾಮ್‌ ನೀರು ಹಾಳಾಯಿತು; ಹುಲ್ಲು ಬಾಡಿಹೋಗಿದೆ, ಹಸಿಹುಲ್ಲು ಮುಗಿಯಿತು, ಅಲ್ಲಿ ಹಸಿರಾದದ್ದು ಇಲ್ಲವೇ ಇಲ್ಲ.
7 ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.
8 ಕೂಗಾಟವು ಮೋವಾಬಿನ ಎಲ್ಲೆ ಗಳ ತನಕ ಹಬ್ಬಿದೆ, ಅದರ ಕಿರಿಚಾಟ ಎಗ್ಲಯಿಮಿನ ವರೆಗೆ ಬೆಯೇರ್‌ ಏಲೀಮಿನ ವರೆಗೂ ವ್ಯಾಪಿಸಿದೆ.
9 ದೀಮೋನಿನ ನೀರೆಲ್ಲಾ ರಕ್ತವಾಯಿತು; ದೀಮೋ ನಿನ ಮೇಲೆ ಹೆಚ್ಚಾದದ್ದನ್ನು ತರುವೆನು; ಮೋವಾ ಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ ದೇಶ ದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.
ಅಧ್ಯಾಯ 16

1 ದೇಶವನ್ನು ಆಳುವವನಿಗೆ ಕುರಿಮರಿಯನ್ನು ಸೆಲದಿಂದ ಅರಣ್ಯದ ಕಡೆಗೆ ಚೀಯೋನಿನ ಕುಮಾರ್ತೆಯರ ಬೆಟ್ಟಕ್ಕೆ ಕಳುಹಿಸಿರಿ.
2 ಗೂಡಿನಿಂದ ಹೊರಗೆ ಬಂದ ಹಕ್ಕಿಗಳು ಅಲೆದಾಡುವ ಹಾಗೆ ಮೋವಾಬಿನ ಕುಮಾರ್ತೆಯರು ಅರ್ನೋನ್‌ ನದಿಯ ಹಾಯ್ಗಡಗಳಲ್ಲಿ ಇರುವರು.
3 ಆಲೋಚಿಸಿ ತೀರ್ಮಾನಿಸು; ಮಟ್ಟ ಮಧ್ಯಾಹ್ನದಲ್ಲಿ ನಿನ್ನ ನೆರಳನ್ನು ರಾತ್ರಿಯಂತೆ ಮಾಡು; ತಳ್ಳಿಬಿಟ್ಟವ ರನ್ನು ಅಡಗಿಸು; ಅಲೆಯುವವನನ್ನು ಬೈಲಿಗೆ ತರಬೇಡ.
4 ಮೋವಾಬೇ, ನನ್ನಿಂದ ತಳ್ಳಿಬಿಟ್ಟವರು ನಿನ್ನೊಂದಿಗೆ ವಾಸಿಸಲಿ; ಹಾಳುಮಾಡುವವರ ಮುಖಗಳಿಂದ ಅವ ರಿಗೆ ಮರೆಯಾಗಿರು: ಹಿಂಸಿಸುವದು ಮುಗಿಯುತ್ತಾ ಬಂತು, ಸೂರೆಮಾಡುವದು ನಿಲ್ಲುವದು. ಪೀಡಿಸು ವವರು ದೇಶದಿಂದ ದಹಿಸಲ್ಪಡುವರು.
5 ಕರುಣೆಯಲ್ಲಿ ಸಿಂಹಾಸನವು ಸ್ಥಾಪಿಸಲ್ಪಡುವದು; ನ್ಯಾಯತೀರಿಸು ವವನೂ ನ್ಯಾಯವನ್ನು ಹುಡುಕುವವನೂ ನೀತಿಗೋ ಸ್ಕರ ತ್ವರೆಪಡುವವನೂ ದಾವೀದನ ಗುಡಾರದಲ್ಲಿ ಅದರ ಮೇಲೆ ಸತ್ಯದಲ್ಲಿ ಕೂತುಕೊಳ್ಳುವನು.
6 ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ; ಅವನಿಗೆ ಬಹಳ ಗರ್ವವುಂಟು, ಅಹಂಕಾರವು, ಗರ್ವ ವು ಕೋಪವು ಸಹ ಉಂಟು; ಆದರೆ ಅವನು ಕೊಚ್ಚಿ ಕೊಳ್ಳುವದು ವ್ಯರ್ಥ.
7 ಆದದರಿಂದ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವದು, ಪ್ರತಿಯೊ ಬ್ಬನೂ ಗೋಳಾಡುವನು; ಕೀರ್‌ ಹರೆಷೆಥಿನ ಅಸ್ತಿವಾರ ಗಳಿಗೋಸ್ಕರ ನೀವು ದುಃಖಿಸುವಿರಿ; ನಿಜವಾಗಿಯೂ ಅವರು ನೊಂದುಹೋಗಿದ್ದಾರೆ.
8 ಹೆಷ್ಬೋನಿನ ಹೊಲ ಗಳೂ, ಸಿಬ್ಮದ ದ್ರಾಕ್ಷೆಯೂ ನಿಸ್ಸಾರವಾಗಿವೆ; ಅನ್ಯ ಜನಗಳ ಪ್ರಭುಗಳು ಅದರ ಮುಖ್ಯವಾದ ಗಿಡಗಳನ್ನು ಮುರಿದುಹಾಕಿದ್ದಾರೆ; ಅವರು ಯಜ್ಜೇರಿನ ವರೆಗೂ ಬಂದರು; ಅಡವಿಯಲ್ಲಿ ಅವರು ಸಂಚರಿಸಿದರು. ಅವಳ ಕೊಂಬೆಗಳು ಚಾಚಲ್ಪಟ್ಟವು ಅವರು ಸಮುದ್ರದ ಮೇಲೆ ಹೋದರು.
9 ಆದಕಾರಣ ಸಿಬ್ಮದ ದ್ರಾಕ್ಷಾ ಲತೆಯ ನಿಮಿತ್ತ ಯಜ್ಜೇರಿನೊಂದಿಗೆ ಅಳುವೆನು; ಓ ಹೆಷ್ಬೋನೇ, ಎಲೆಯಾಲೇ, ನಿನ್ನನ್ನು ನನ್ನ ಕಣ್ಣೀರಿ ನಿಂದ ತೋಯಿಸುವೆನು; ಬಿದ್ದುಹೋದ ನಿನ್ನ ಬೇಸಿ ಗೆಯ ಫಲಗಳಿಗೂ ಬೆಳೆಗಳಿಗೂ ಆರ್ಭಟಿಸುವರು.
10 ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೆಗೆಯಲ್ಪಡುವವು; ದ್ರಾಕ್ಷೇತೋಟಗ ಳಲ್ಲಿ ಕೀರ್ತನೆಗಳಾಗಲಿ ಆರ್ಭಟವಾಗಲಿ ಇರುವದಿಲ್ಲ; ದ್ರಾಕ್ಷೇತೋಟಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವದಿಲ್ಲ; ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿ ದ್ದೇನೆ.
11 ಆದದರಿಂದ ಮೋವಾಬಿನ ನಿಮಿತ್ತ ನನ್ನ ಕರುಳುಗಳು ಮತ್ತು ಕೀರ್‌ ಹರೇಷೆಥಿನ ನಿಮಿತ್ತ ನನ್ನ ಅಂತರಿಂದ್ರಿಯಗಳು ಕಿನ್ನರಿಯಂತೆ ಸ್ವರಗೈಯುವವು.
12 ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು ಪರಿಶುದ್ಧಸ್ಥಳಕ್ಕೆ ಪ್ರಾರ್ಥನೆಗಾಗಿ ಬಂದರೂ ಅವನಿಗೆ ಸಫಲವಾಗದು.
13 ಕರ್ತನು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತು ಇದೇ.
14 ಆದರೆ ಕರ್ತನು ಮಾತನಾಡಿ--ಮೂರು ವರುಷ ಗಳಲ್ಲಿ ಕೂಲಿಯಾಳಿನ ವರುಷಗಳಂತೆ ಮೋವಾಬಿನ ಮಹಿಮೆಯು ಆ ಎಲ್ಲಾ ದೊಡ್ಡ ಸಮೂಹದೊಂದಿಗೆ ತಿರಸ್ಕರಿಸಲ್ಪಡುವ ಹಾಗೆ ಉಳಿದವರು ಚಿಕ್ಕ ಗುಂಪಾಗಿ ಬಲಹೀನರಾಗುವರು ಎಂದು ಹೇಳಿದ್ದಾನೆ.
ಅಧ್ಯಾಯ 17

1 ದಮಸ್ಕದ ವಿಷಯವಾದ ದೈವೋಕ್ತಿ. ಇಗೋ, ದಮಸ್ಕವು ಇನ್ನು ಪಟ್ಟಣವಾಗಿ ರದೆ ತೆಗೆದುಹಾಕಲ್ಪಟ್ಟಿದೆ ಅದು ಹಾಳು ದಿಬ್ಬವಾಗಿ ರುವದು.
2 ಆರೋಯೇರಿನ ಪಟ್ಟಣಗಳು ತಳ್ಳಿಹಾಕ ಲ್ಪಟ್ಟಿವೆ; ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ಮಲಗುವ ಮಂದೆಗಳಿಗೆ ಸ್ಥಳವಾಗುವದು.
3 ಎಫ್ರಾ ಯಾಮಿನಿಂದ ಕೋಟೆಯೂ ದಮಸ್ಕದ ರಾಜ್ಯವೂ ಸಿರಿಯಾದ ಉಳಿದವುಗಳೂ ನಿಂತು ಹೋಗುವವು; ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರು ವರು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
4 ಆ ದಿವಸದಲ್ಲಿ ಆಗುವದೇನಂದರೆ--ಯಾಕೋ ಬಿನ ವೈಭವ ತಗ್ಗುವದು; ಅದರ ಮಾಂಸದ ಕೊಬ್ಬು ಕರಗಿಸಲ್ಪಡುವದು.
5 ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ ರೆಫಾಯಾಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವದು.
6 ಆದರೂ ಎಣ್ಣೇ ಮರವನ್ನು ಅಲ್ಲಾಡಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿ ಯಲ್ಲಿ ಎರಡು ಮೂರು ಕಾಯಿಗಳು, ಫಲವತ್ತಾದ ಆ ಮರದ ಕೊಂಬೆಗಳಲ್ಲೆಲ್ಲಾ ನಾಲ್ಕೈದು ಕಾಯಿಗಳು ಉಳಿದಿರುವಂತೆ ಹಕ್ಕಲು ಹಣ್ಣುಗಳು ಅದರಲ್ಲಿ ಉಳಿ ಯುವವು ಎಂದು ಇಸ್ರಾಯೇಲಿನ ದೇವರಾದ ಕರ್ತನು ಹೇಳುತ್ತಾನೆ.
7 ಆ ದಿನದಲ್ಲಿ ಮನುಷ್ಯನು ತನ್ನನ್ನು ಉಂಟು ಮಾಡಿದವನ ಮೇಲೆ ದೃಷ್ಟಿಯಿಡು ವನು ಇಸ್ರಾಯೇಲಿನ ಪರಿಶುದ್ಧನ ಕಡೆಗೆ ಅವನ ಕಣ್ಣುಗಳು ಲಕ್ಷಿಸುವವು.
8 ಅವನು ತನ್ನ ಕೈಕೆಲಸ ವಾದ ಬಲಿಪೀಠಗಳನ್ನು ದೃಷ್ಟಿಸನು ತನ್ನ ಬೆರಳುಗಳು ಮಾಡಿದ್ದನೂಅಥವಾ ತೋಪುಗಳನ್ನೂ ವಿಗ್ರಹ ಗಳನ್ನೂ ನೋಡನು.
9 ಆ ದಿವಸದಲ್ಲಿ ಅವನ ಬಲ ವಾದ ಪಟ್ಟಣಗಳು ಬಿಟ್ಟುಬಿಟ್ಟ ಅರಣ್ಯಗಳ ಹಾಗೆಯೂ ಇಸ್ರಾಯೇಲಿನ ಮಕ್ಕಳ ಮುಂದೆ ಬಿಡಲ್ಪಟ್ಟ ಕೊನೆಗಳ ಹಾಗೆಯೂ ಇದ್ದು ಹಾಳಾಗಿರುವದು.
10 ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು ನಿನ್ನ ಬಲದ ಬಂಡೆ ಯನ್ನು ನೆನಸದೆ ಇದ್ದದರಿಂದ ನೀನು ರಮ್ಯವಾದ ಗಿಡಗಳನ್ನು ಸಸಿಯನ್ನು ನೆಡುವಿ, ಅಪರೂಪವಾದ ಸಸಿಗಳನ್ನು ಹಾಕುವಿ.
11 ಸಸಿಯನ್ನು ಬೆಳೆಸಲು ಬೇಲಿ ಹಾಕಿದ ದಿನದಲ್ಲಿ ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆ ಯುವಂತೆ ಮಾಡುವಿ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವೇ.
12 ಸಮುದ್ರವು ಭೋರ್ಗರೆಯುವಂತೆ ಭೋರ್ಗರೆ ಯುವ ಬಹು ಜನಗಳ ಸಮೂಹಕ್ಕೆ ಅಯ್ಯೋ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಾಂಗಗಳಿಗೆ ಅಯ್ಯೋ!
13 ಮಹಾ ಜಲಪ್ರವಾಹ ಗಳು ಘೋಷಿಸುವಂತೆ ಜನಾಂಗಗಳು ಘೋಷಿಸು ತ್ತವೆ. ಆದರೆ ದೇವರು ಅವರನ್ನು ಗದರಿಸುತ್ತಲೇ ಅವರು ದೂರ ಓಡಿಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ ಸುಂಟರಗಾಳಿಯಿಂದ ಸುತ್ತಿ ಯಾಡುವ ದೂಳಿನಂತೆಯೂ ಅಟ್ಟಲ್ಪಡುವರು.
14 ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.
ಅಧ್ಯಾಯ 18

1 ಓ ಐಥಿಯೋಪಿಯ ನದಿಗಳ ಆಚೆಯಲ್ಲಿರುವ ರೆಕ್ಕೆಗಳು ಪಟಪಟನೆ ಆಡುವ ನಾಡೇ, ಅಯ್ಯೋ!
2 ಸಮುದ್ರ ಮಾರ್ಗದಿಂದಲೂ ಹಾ! ಆಪಿನ ದೋಣಿಗಳಲ್ಲಿ ನೀರಿನ ಮೇಲೆಯೂ ರಾಯಭಾರಿ ಗಳನ್ನು ಕಳುಹಿಸುವಂತಾದ್ದೇ! ಆಶ್ಚರ್ಯ ತೀವ್ರವಾದ ದೂತರೇ, ಚದುರಿಸಲ್ಪಟ್ಟಿರುವ ಮತ್ತು ಸೂರೆಯಾಗಿ ರುವ ಜನಾಂಗದವರ ಬಳಿಗೂ ಹುಟ್ಟಿದಂದಿನಿಂದ ಇಲ್ಲಿನ ವರೆಗೂ ಭಯಂಕರವಾದ ಜನರ ಬಳಿಗೂ ಮಹಾಬಲದಿಂದ ತುಳಿಯುವವರೂ ನದಿಗಳಿಂದ ವಿಂಗಡವಾಗಿರುವ ಜನಾಂಗದ ಬಳಿಗೂ ಹೋಗಿರಿ.
3 ಭೂಲೋಕದ ನಿವಾಸಿಗಳೆಲ್ಲರೇ! ಭೂಮಿಯಲ್ಲಿ ವಾಸ ವಾಗಿರುವವರೆಲ್ಲರೇ! ಬೆಟ್ಟಗಳಲ್ಲಿ ಆತನು ಧ್ವಜವನ್ನು ಎತ್ತುವಾಗ ನೋಡಿರಿ; ಅವನು ತುತೂರಿಯನ್ನೂದು ವಾಗ ಕೇಳಿರಿ.
4 ಕರ್ತನು ನನಗೆ--ನಾನು ವಿಶ್ರಾಂತಿ ಯನ್ನು ತೆಗೆದುಕೊಳ್ಳುವೆನು. ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂದು ಹೇಳಿದನು.
5 ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷೇ ಕಾಯಿಯಾಗುವಾಗ ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕು ವನು.
6 ಅವೆಲ್ಲ ಬೆಟ್ಟಗಳ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಬಿಡಲ್ಪಡುವವು; ಪಕ್ಷಿಗಳು ಅವುಗಳ ಮೇಲೆ ಬೇಸಿಗೆಯನ್ನು ಭೂಮಿಯ ಎಲ್ಲಾ ಮೃಗಗಳು ಅವುಗಳ ಮೇಲೆ ಚಳಿಗಾಲವನ್ನು ಕಳೆಯುವವು.
7 ಚದರಿಸಲ್ಪಟ್ಟು ಸೂರೆಯಾಗಿರುವ ಜನರೂ ಅವರು ಹುಟ್ಟಿದಂದಿನಿಂದ ಇಲ್ಲಿಯ ವರೆಗೂ ಭಯಂಕರವಾದ ಜನರೂ ಮಹಾಬಲದಿಂದ ತುಳಿಯಲ್ಪಡುವರು. ನದಿ ಗಳಿಂದ ಹಾಳಾಗಿರುವ ದೇಶದವರು ಸೈನ್ಯಗಳ ಕರ್ತನ ಹೆಸರಿನ ಸ್ಥಳವಾದ ಚೀಯೋನ್‌ ಪರ್ವತಕ್ಕೆ ಆತನಿ ಗೊಸ್ಕರ ಕಾಣಿಕೆಯನ್ನು ತರುವರು.
ಅಧ್ಯಾಯ 19

1 ಐಗುಪ್ತ್ಯರ ವಿಷಯವಾದ ದೈವೋಕ್ತಿ; ಇಗೋ ಕರ್ತನು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಐಗುಪ್ತಕ್ಕೆ ಬರುತ್ತಾನೆ; ಆತನು ಸಮ್ಮುಖ ನಾದಾಗ ಐಗುಪ್ತದ ವಿಗ್ರಹಗಳು ನಡುಗುವವು, ಐಗುಪ್ತ್ಯರ ಹೃದಯವು ಅವರ ಮಧ್ಯೆ ಕರಗುವದು.
2 ಇದಲ್ಲದೆ ನಾನು ಐಗುಪ್ತಕ್ಕೆ ವಿರೋಧವಾಗಿ ಐಗುಪ್ತ ವನ್ನು ಎಬ್ಬಿಸುವೆನು; ಸಹೋದರನಿಗೆ ವಿರೋದವಾಗಿ ಸಹೋದರನೂ ನೆರೆಯವನಿಗೆ ವಿರೋದವಾಗಿ ನೆರೆ ಯವನೂ ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೋರಾಡುವವು.
3 ಐಗುಪ್ತದ ಆತ್ಮವು ಅದರ ಮಧ್ಯದಲ್ಲಿ ಕುಂದುವದು; ಅದರ ಆಲೋಚನೆಯನ್ನು ಕೆಡಿಸಿಬಿಡುವೆನು; ಅಲ್ಲಿಯ ವರು ವಿಗ್ರಹಗಳನ್ನೂ ಮಾಟಗಾರರನ್ನೂ ಯಕ್ಷಣಿಗಾರ ರನ್ನೂ ಮಂತ್ರವಾದಿಗಳನ್ನೂ ಹುಡುಕುವರು.
4 ಇದ ಲ್ಲದೆ ಐಗುಪ್ತವನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು; ಭಯಂಕರನಾದ ರಾಜನು ಅವರ ನ್ನಾಳುವನು ಎಂದು ಸೈನ್ಯಗಳ ಕರ್ತನಾದ ಕರ್ತನು ಹೇಳುತ್ತಾನೆ.
5 ಇದಲ್ಲದೆ ಸಮುದ್ರದ ಕಡೆಯಿಂದ ನೀರು ಬತ್ತಿ ಹೋಗುವದು; ನದಿಗಳು ಇಂಗಿ ಒಣಗುವವು.
6 ನದಿ ಗಳು ನಾರುವವು ಅವರು ನದಿಗಳನ್ನು ದೂರಕ್ಕೆ ತಿರು ಗಿಸುವರು ತೊರೆಗಳು ಇಳಿದು ನೀರಿಲ್ಲದೆ ಹೋಗು ವವು; ಆಪೂ ಜಂಬುಹುಲ್ಲೂ ಬಾಡುವವು.
7 ನದಿಯ ಹತ್ತಿರ, ನದಿತೀರದಲ್ಲಿಯೇ ಇರುವ ಬಯಲುಗಳು, ನದಿಯ ಬಳಿಯಲ್ಲಿ ಬಿತ್ತಿದ ಹೊಲಗಳೆಲ್ಲವೂ ಒಣಗಿ ಬಡಿಯಲ್ಪಟ್ಟು ಇಲ್ಲದೆ ಹೋಗುವವು.
8 ವಿಾನು ಗಾರರು ಕೂಡಾ ದುಃಖಿಸುವರು ಮತ್ತು ನದಿಯಲ್ಲಿ ಗಾಳ ಹಾಕುವವರು ಪ್ರಲಾಪಿಸುವರು, ನೀರಿನ ಮೇಲೆ ಬಲೆ ಬೀಸುವವರು ಕುಗ್ಗಿಹೋಗುವರು.
9 ನಯವಾದ ನಾರಿನ ಕೆಲಸದವರು, ಬಟ್ಟೆ ನೇಯುವವರು ನಾಚಿಕೊ ಳ್ಳುವರು.
10 ಅವರ ಉದ್ದೇಶಗಳು ಮುರಿದು ಹೋಗು ವವು. ತೂಬಿನ ನೀರುಗಳನ್ನು ಕೊಳದ ನೀರುಗಳನ್ನು ವಿಾನಿಗೋಸ್ಕರ ಮಾಡಿದ್ದ ಉದ್ದೇಶಗಳೆಲ್ಲ ಮುರಿದು ಹೋಗುವವು.
11 ಚೋಯನಿನ ಪ್ರಧಾನರು ನಿಜ ವಾಗಿ ಮೂರ್ಖರು, ಫರೋಹನ ಜ್ಞಾನವುಳ್ಳ ಸಲಹೆ ಗಾರರ ಆಲೋಚನೆಯು ಬುದ್ಧಿಹೀನವೇ. ನಾನು ಜ್ಞಾನಿಗಳ ಮಗನೆಂದು ಪುರಾತನ ರಾಜವಂಶಿಯನು ಎಂದು ನೀವು ಫರೋಹನಿಗೆ ಹೇಳುವದು ಹೇಗೆ?
12 ಅವರು ಎಲ್ಲಿದ್ದಾರೆ? ನಿನ್ನ ಜ್ಞಾನಿಗಳು ಎಲ್ಲಿ? ಅವರು ನಿನಗೆ ಹೇಳಲಿ. ಸೈನ್ಯಗಳ ಕರ್ತನು ಐಗುಪ್ತ್ಯರ ವಿಷಯವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದು ಕೊಳ್ಳಲಿ.
13 ಚೋಯನಿನ ಶ್ರೇಷ್ಠರು (ಪ್ರಧಾನರು) ಮೂರ್ಖರಾಗಿದ್ದಾರೆ. ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ. ಐಗುಪ್ತದ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿ ತಪ್ಪುದಾರಿಗೆಳೆದಿದ್ದಾರೆ.
14 ಕರ್ತನು ಅದರ ಮಧ್ಯದಲ್ಲಿ ವಕ್ರವಾದ ಆತ್ಮವನ್ನು ಕಲ್ಪಿಸಿದ್ದಾನೆ (ಬೆರೆಸಿದ್ದಾನೆ). ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾನೆ.
15 ಇಲ್ಲವೆ ಐಗುಪ್ತದಲ್ಲಿ ತಲೆಯಾಗಲಿ ಬಾಲವಾಗಲಿ ಕೊಂಬೆಯಾಗಲಿ ಒಂದು ಕಡ್ಡಿಯಾಗಲಿ ಸಾಧಿಸಲು ಮಾಡತಕ್ಕ ಕೆಲಸವು ಒಂದಾದರೂ ಐಗುಪ್ತದ ಲ್ಲಿರುವದಿಲ್ಲ.
16 ಆ ದಿನದಲ್ಲಿ ಐಗುಪ್ತವು ಹೆಂಗಸರ ಹಾಗೆ ಇರು ವದು. ಸೈನ್ಯಗಳ ಕರ್ತನು ಅದರ ಮೇಲೆ ಆಡಿಸುವ ಕೈಯನ್ನು ಬೀಸುತ್ತಿರುವದರಿಂದ ಹೆದರಿ ಭಯಪಡು ವದು.
17 ಐಗುಪ್ತವು ಬೆಚ್ಚಿ ಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು; ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೈನ್ಯಗಳ ಕರ್ತನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆ ಯನ್ನು ತಿಳಿದು ಬೆರಗಾಗುವನು.
18 ಆ ದಿವಸದಲ್ಲಿ ಕಾನಾನಿನ ಭಾಷೆಯನ್ನಾಡುವ ಐಗುಪ್ತದ ಐದು ಪಟ್ಟಣಗಳು ಸೈನ್ಯಗಳ ಕರ್ತನಿಗೆ ಆಣೆ ಇಟ್ಟುಕೊಳ್ಳುವವು. ಅವುಗಳಲ್ಲಿ ಒಂದರ ಹೆಸರು ನಾಶಪುರ.
19 ಆ ದಿನದಲ್ಲಿ ಐಗುಪ್ತದೇಶದ ಮಧ್ಯೆ ಕರ್ತನಿಗೆ ಬಲಿಪೀಠವೂ ದೇಶದ ಎಲ್ಲೆಯಲ್ಲಿ ಕರ್ತನಿಗೆ ಒಂದು ಸ್ತಂಭವೂ ಇರುವವು.
20 ಅದು ಸೈನ್ಯಗಳ ಕರ್ತನಿಗೆ ಐಗುಪ್ತ ದೇಶದಲ್ಲಿ ಗುರುತಾಗಿಯೂ ಸಾಕ್ಷಿ ಯಾಗಿಯೂ ಇರುವವು. ಹಿಂಸಕರ ದೆಸೆಯಿಂದ ಕರ್ತನನ್ನು ಕೂಗಿ ಕೊಳ್ಳಲು ಆತನು ಅವರಿಗೆ ಒಬ್ಬ ಶೂರನಾದ ರಕ್ಷಕ ನನ್ನು ಕಳುಹಿಸಿ ಅವರನ್ನು ಬಿಡುಗಡೆ ಮಾಡುವನು.
21 ಕರ್ತನು ತನ್ನನ್ನು ಐಗುಪ್ತ್ಯರಿಗೆ ತಿಳಿಯಪಡಿಸಲು ಅವರು ಆ ದಿನದಲ್ಲಿ ಕರ್ತನನ್ನು ತಿಳಿದುಕೊಳ್ಳುವರು, ಬಲಿ ಕಾಣಿಕೆಗಳಿಂದ ಸೇವೆಮಾಡುವರು. ಹೌದು, ಅವರು ಕರ್ತನಿಗೆ ಪ್ರಮಾಣ ಮಾಡಿಕೊಂಡು ನೆರ ವೇರಿಸುವರು.
22 ಇದಲ್ಲದೆ ಕರ್ತನು ಐಗುಪ್ತ್ಯರನ್ನು ಹೊಡೆಯುವನು, ಹೊಡೆದು ಸ್ವಸ್ಥಮಾಡುವನು. ಅವರು ಕರ್ತನ ಕಡೆಗೆ ತಿರುಗಿಕೊಳ್ಳುವರು, ಆತನು ಅವರನ್ನು ಆಲೈಸಿ ಸ್ವಸ್ಥಮಾಡುವನು.
23 ಆ ದಿವಸದಲ್ಲಿ ಐಗುಪ್ತದಿಂದ ಅಶ್ಶೂರಕ್ಕೆ ಹೋಗುವ ಒಂದು ರಾಜಮಾರ್ಗವಿರುವದು. ಅಶ್ಶೂ ರ್ಯರು ಐಗುಪ್ತಕ್ಕೂ ಐಗುಪ್ತ್ಯರು ಅಶ್ಶೂರ್ಯಕ್ಕೂ ಹೋಗಿ ಬರುವರು ಮತ್ತು ಐಗುಪ್ತ್ಯರು ಅಶ್ಶೂರ್ಯರೊಂದಿಗೆ (ಕರ್ತನನ್ನು) ಸೇವಿಸುವರು.
24 ಆ ದಿನದಲ್ಲಿ ಇಸ್ರಾಯೇಲು ಐಗುಪ್ತ್ಯರ ಸಂಗ ಡಲೂ ಅಶ್ಶೂರ್ಯರ ಸಂಗಡಲೂ ಮೂರನೆಯ ದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವದು.
25 ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು.
ಅಧ್ಯಾಯ 20

1 ತರ್ತಾನನು ಅಶ್ಶೂರಿನ ಅರಸನಾದ ಸರ್ಗೋನನು ಅವನನ್ನು ಕಳುಹಿಸಿದ್ದದ ರಿಂದ ಅಷ್ಡೋದಿಗೆ ಬಂದ ವರ್ಷದಲ್ಲಿ ಅವನು ಅಷ್ಡೋದಿಗೆ ವಿರೋಧವಾಗಿ ಯುದ್ಧಮಾಡಿ ಅದನ್ನು ಹಿಡಿದಾಗ,
2 ಅದೇ ಸಮಯದಲ್ಲಿ ಕರ್ತನು ಆಮೋ ಚನ ಮಗನಾದ ಯೆಶಾಯನಿಗೆ ಹೋಗಿ ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು, ನಿನ್ನ ಪಾದಗಳ ಲ್ಲಿರುವ ಕೆರಗಳನ್ನು ತೆಗೆದಿಡು ಎಂದು ಹೇಳಿದನು. ಅವನು ಹಾಗೆ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರು ಗುತ್ತಿದ್ದನು.
3 ಕರ್ತನು ಹೇಳಿದ್ದೇನಂದರೆ, ನನ್ನ ಸೇವಕ ನಾದ ಯೆಶಾಯನು ಐಗುಪ್ತಕ್ಕೂ ಐಥಿಯೋಪಿ ಯಕ್ಕೂ ಗುರುತಾಗಿಯೂ ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು.
4 ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು.
5 ಆಗ (ನನ್ನ ಜನರು) ಅವನು ನಿರೀಕ್ಷಿಸಿಕೊಂಡಿದ್ದ ಐಥಿಯೋ ಪಿಯರ ನಿಮಿತ್ತವಾಗಿಯೂ ತಮ್ಮ ವೈಭವದ ಐಗುಪ್ತದ ವಿಷಯವಾಗಿಯೂ ಬೆಚ್ಚಿ ಬೆರಗಾಗಿ ನಾಚಿಕೆಪಡು ವರು.
6 ಆ ದಿವಸದಲ್ಲಿ ಈ ತೀರದ ನಿವಾಸಿಗಳು ಹೇಳುವದೇನಂದರೆ--ಇಗೋ, ಅಶ್ಶೂರದ ಅರಸ ರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೇವೋ ಅವ ರಿಗೆ ಈ ಗತಿ ಬಂತಲ್ಲಾ ನಾವು ತಪ್ಪಿಸಿಕೊಳ್ಳುವದು ಹೇಗೆ ಅನ್ನುವರು.
ಅಧ್ಯಾಯ 21

1 ಸಮುದ್ರದ ಅಡವಿಯ ವಿಷಯವಾದ ದೈವೋಕ್ತಿ ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿಹೋಗುವಂತೆ ಅದು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತದೆ.
2 ಘೋರದರ್ಶನವು ನನಗೆ ತಿಳಿಯಬಂದಿದೆ. ಬಾಧ ಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡು ತ್ತಿದ್ದಾನೆ. ಏಲಾಮೇ, ಏಳು ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.
3 ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ.
4 ನನ್ನ ಹೃದಯವು (ಎದುರಿಸುತ್ತದೆ) ಗಾಬರಿಗೊಂಡಿದೆ, ನಡು ಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನನ್ನ ಆನಂ ದದ ರಾತ್ರಿಯನ್ನು ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.
5 ಮೇಜನ್ನು ಸಿದ್ಧಮಾಡು ಬುರುಜಿನ ಮೇಲೆ ಕಾವ ಲಿರು, ಉಣ್ಣು, ಕುಡಿ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಬಳಿಯಿರಿ.
6 ಕರ್ತನು ನನಗೆ ಹೇಳಿರುವ ದೇನಂದರೆ--ಹೋಗು, ಕಾವಲುಗಾರನನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ.
7 ಅವನು ಜೋಡಿ ಜೋಡಿಯಾಗಿ ಬರುವ ರಥ ಸವಾರರ ಸಾಲನ್ನು ಕತ್ತೆಗಳ, ಒಂಟೆಗಳ, ರಥಗಳ ಸಾಲುಗಳನ್ನು ನೋಡಿ ದರೆ, ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ ಎಂಬದೇ.
8 ಬಳಿಕ ಅವನು ಸಿಂಹದಂತೆ ಕೂಗಿದ್ದೇ ನಂದರೆ, ನನ್ನ ಒಡೆಯನೇ, ನಾನು ಹಗಲೆಲ್ಲಾ ಕಾವ ಲಿನ ಬುರುಜಿನ ಮೇಲೆ ನಿಂತಿದ್ದೇನೆ. ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ.
9 ಇಗೋ, ಸವಾರರು ಜೋಡಿ ಜೋಡಿಯಾಗಿ ಬರುತ್ತಾರೆ ಮತ್ತು ಪ್ರತ್ಯುತ್ತರ ವಾಗಿ--ಬಾಬೆಲ್‌ ಬಿತ್ತು, ಆದರೆ ಕೆತ್ತಿದ ದೇವತೆಗಳ ವಿಗ್ರಹಗಳನ್ನು ಮುರಿದು ನೆಲಸಮ ಮಾಡಿಬಿಟ್ಟರು ಎಂದು ಹೇಳಿದನು.
10 ನಾನು ತುಳಿಯುವ ತೆನೆಯೇ, ನನ್ನ ಕಣದ ಧಾನ್ಯವೇ, ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನಿಂದ ನಾನು ಕೇಳಿದ್ದನ್ನು ನಿಮಗೆ ತಿಳಿಸಿದ್ದೇನೆ.
11 ದೂಮದ ವಿಷಯವಾದ ದೈವೋಕ್ತಿ, ಆತನು ಸೇಯಾರಿನಿಂದ ನನಗೆ ಕರೆದನು. ಹೇಗಂದರೆ, ಕಾವ ಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲು ಗಾರನೇ ರಾತ್ರಿ ಎಷ್ಟು ಕಳೆಯಿತು?
12 ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ, ವಿಚಾರಿಸಬೇಕಾದರೆ ವಿಚಾರಿಸಿರಿ; ತಿರಿಗಿ ಬನ್ನಿರಿ ಎಂದು ಕಾವಲುಗಾರನು ಹೇಳಿದನು.
13 ಅರಬಿಯದ ವಿಷಯವಾದ ದೈವೋಕ್ತಿ. ಓ ದೇದಾನ್ಯರ ಪ್ರಯಾಣಿಕರೇ, ಅರಬಿಯದ ಕಾಡಿನಲ್ಲಿ ಇಳಿದುಕೊಳ್ಳಿರಿ.
14 ತೇಮಾ ದೇಶದ ನಿವಾಸಿಗಳೇ, ಬಾಯಾರಿದವರಿಗೆ ನೀರನ್ನು ತರುತ್ತಾರೆ. ಓಡಿ ಹೋಗುವವರನ್ನು ತಮ್ಮ ರೊಟ್ಟಿಯಿಂದ ನಿವಾರಿಸು ತ್ತಾರೆ.
15 ಕತ್ತಿ, ಹಿರಿದ ಕತ್ತಿ, ಬಾಗಿದ ಬಿಲ್ಲು, ಕಠಿಣ ಯುದ್ಧ ಇವುಗಳ ಕಡೆಯಿಂದ ಓಡಿಹೋಗುತ್ತಿದ್ದಾರಷ್ಟೆ.
16 ಕರ್ತನು ನನಗೆ ಹೀಗೆ ಹೇಳುತ್ತಾನೆ--ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ವೈಭವವು ತೀರಿಹೋಗುವದು.
17 ಬಿಲ್ಲುಗಾರರಲ್ಲಿ ಉಳಿದವರು ಕೇದಾರಿನ ಮಕ್ಕಳ ಬಲಿಷ್ಠರು ಕುಗ್ಗಿಸಲ್ಪಡು ವರು ಎಂದು ಇಸ್ರಾಯೇಲ್ಯರ ದೇವರಾದ ಕರ್ತನು ಇದನ್ನು ನುಡಿದಿದ್ದಾನೆ.
ಅಧ್ಯಾಯ 22

1 ದಿವ್ಯ ದರ್ಶನದ ತಗ್ಗಿನ ವಿಷಯವಾದ ದೈವೋಕ್ತಿ, ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?
2 ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣ ವೇ ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಕೊಂದುಹಾಕಲ್ಪ ಟ್ಟವರು ಕತ್ತಿಯಿಂದ ಕೊಂದುಹಾಕಲ್ಪಟ್ಟವರಲ್ಲ ಅಥವಾ ಯುದ್ಧದಲ್ಲಿ ಸತ್ತವರಲ್ಲ.
3 ನಿನ್ನ ಅಧಿಕಾರಸ್ಥರೆಲ್ಲರು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದು ನಿನ್ನಲ್ಲಿ ಸಿಕ್ಕಿದವರೆಲ್ಲ ರೊಂದಿಗೆ ಕಟ್ಟುಬಿದ್ದಿದ್ದಾರೆ.
4 ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.
5 ಸೈನ್ಯಗಳ ದೇವರಾದ ಕರ್ತನಿಗೆ ದರ್ಶ ನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಗಲಿಬಿಲಿಯ ದಿನವದೆ, ಗೋಡೆ ಒಡೆಯೋಣವು ಪರ್ವತದ ಕಡೆಗೆ ಹೋಗೋಣವು ಉಂಟಾಗುವದು.
6 ಏಲಾಮಿನ ಮನುಷ್ಯರ ಕುದುರೆ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿ ಯನ್ನು ತೆಗೆದರು.
7 ನಿಮ್ಮ ಪ್ರಿಯವಾದ ತಗ್ಗುಗಳಲ್ಲಿ ರಥಗಳು ತುಂಬಿರುವವು. ರಾಹುತರು ಬಾಗಿಲಿನ ಹತ್ತಿರ ಸಿದ್ಧಮಾಡಿಕೊಳ್ಳುವರು.
8 ಅವನು ಯೆಹೂ ದದ ಮುಸುಕನ್ನು ತೆಗೆದಿದ್ದಾನೆ. ಆ ದಿವಸದಲ್ಲಿ ಅಡವಿ ಮನೆಯ ಯುದ್ಧಸಾಮಗ್ರಿಯ ಕಡೆಗೆ ದೃಷ್ಟಿ ಇಡುತ್ತಿ.
9 ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ; ಕೆಳಗಿನ ಕೊಳಕ್ಕೆ ನೀರನ್ನು ಕೂಡಿಸುತ್ತೀರಿ.
10 ಯೆರೂಸಲೇಮಿನ ಮನೆಗ ಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು ಭದ್ರಪಡಿ ಸುವದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ.
11 ಎರಡು ಗೋಡೆಗಳ ನಡುವೆ ಹಳೇ ಕೆರೆಯ ನೀರಿ ಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ, ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸಲಿಲ್ಲ. ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಲ್ಲ.
12 ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.
13 ಆದರೆ ಇಗೋ, ಉತ್ಸಾ ಹವು ಸಂತೋಷವು, ದನಕೊಯ್ಯುವದು ಕುರಿಕಡಿಯು ವದು ಮಾಂಸವನ್ನು ತಿನ್ನುವದು, ದ್ರಾಕ್ಷಾರಸ ಕುಡಿ ಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯು ವದೇ (ಇವೆ, ನಿಮ್ಮ ಕಾರ್ಯ).
14 ಆದದರಿಂದ ಸೈನ್ಯ ಗಳ ಕರ್ತನು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದೇನಂದರೆ ನಿಶ್ಚಯವಾಗಿ ಈ ದುಷ್ಕೃತ್ಯಗಳು ನೀವು ಸಾಯುವ ತನಕ ಮನ್ನಿಸಲ್ಪಡುವದೇ ಇಲ್ಲ.
15 ಸೈನ್ಯಗಳ ಕರ್ತನಾದ ದೇವರು ಹೀಗೆ ನುಡಿದಿ ದ್ದಾನೆ--ಹೋಗು, ಅರಮನೆಯ ಉಗ್ರಾಣದವನಾದ ಶೆಬ್ನನೆಂಬ ಈ ಖಜಾಂಚಿ ಬಳಿಗೆ ಹೋಗಿ ಹೀಗೆ ಹೇಳು--
16 ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ತನಗೆ ಸಮಾಧಿ ಯನ್ನು ತೋಡಿಸಿ, ಬಂಡೆಯಲ್ಲಿ ತನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದ್ದಿ ಅಲ್ಲವೆ?
17 ಇಗೋ, ಕರ್ತನು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯು ವನು.
18 ನಿನ್ನನ್ನು ಚೆಂಡಿನಂತೆ ಸುತ್ತಿಸುತ್ತಿ ತಿರುಗಿಸಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು. ಅಲ್ಲೆ ನೀನು ಸಾಯುವಿ, ನಿನ್ನ ವೈಭವದ ರಥಗಳು ನಿನ್ನ ಧಣಿಯ ಮನೆಗೆ ಅವಮಾನವನ್ನುಂಟು ಮಾಡುವವು.
19 ನಿನ್ನನ್ನು ನಿನ್ನ ಉದ್ಯೋಗದಿಂದ ತಳ್ಳಿಬಿಡುವೆನು. ನಿನ್ನ ಪದವಿಯಿಂದ ನಿನ್ನನ್ನು ಕೆಳಗೆ ಎಳೆದುಬಿಡುವೆನು.
20 ಆ ದಿನದಲ್ಲಿ ಆಗುವದೇನಂದರೆ--ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು,
21 ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ ನಿನ್ನ ನಡುಕಟ್ಟಿ ನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನ ಕೈಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ ಯೆಹೂದದ ಮನೆತನದವರಿಗೂ ತಂದೆಯಾಗಿರುವನು.
22 ದಾವೀದನ ಮನೆಯ ಬೀಗ ದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು; ಅವನು ತೆರೆದರೆ ಯಾರು ಮುಚ್ಚರು ಮುಚ್ಚಿದರೆ ಯಾರು ತೆರೆಯರು.
23 ಭದ್ರವಾದ ಸ್ಥಳದಲ್ಲಿ ಮೊಳೆ ಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು; ಅವನು ತನ್ನ ತಂದೆಯ ಮನೆಗೆ ವೈಭವವುಳ್ಳ ಸಿಂಹಾ ಸನವಾಗಿರುವನು.
24 ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ಎಲ್ಲಾ ವೈಭವವನ್ನು ಅವರು ಅವನಿಗೆ ವಹಿ ಸುವರು.
25 ಆ ದಿನದಲ್ಲಿ ಸೈನ್ಯಗಳ ಕರ್ತನು ಇಂತೆನ್ನುತ್ತಾನೆ--ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಅದು ಕೀಳಲ್ಪಟ್ಟು, ಬೀಳುವದು. ಅದ ರಲ್ಲಿ ಇದ್ದ ಭಾರವೂ ತೆಗೆದುಹಾಕಲ್ಪಡುವದು; ಕರ್ತನೇ ಇದನ್ನು ನುಡಿದಿದ್ದಾನೆ.
ಅಧ್ಯಾಯ 23

1 ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಗೋಳಾ ಡಿರಿ; ಅದು ಹಾಳಾಗಿರುವದರಿಂದ ನಿಮಗೆ ಮನೆಯಿಲ್ಲ ಮತ್ತು ಒಳಗೆ ಪ್ರವೇಶವೂ ಇಲ್ಲ. ಇದು ಕಿತ್ತೀಮ್‌ ದೇಶದವರಿಂದ ಅವರಿಗೆ ತಿಳಿಯಿತು.
2 ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನ ವಾಗಿರ್ರಿ.
3 ವಿಶಾಲವಾದ ನೀರುಗಳಿಂದ ಸೀಹೋರಿನ ಧಾನ್ಯವೂ ನದಿಯ ಸುಗ್ಗಿಯೂ ನೈಲಿನ ಬೆಳೆಯಿಂ ದಲೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗ ಗಳಿಗೆ ವ್ಯಾಪಾರ ಸ್ಥಳವಾಗಿತ್ತು.
4 ಚೀದೋನೇ, ನಾಚಿಕೆ ಪಡು, ಸಮುದ್ರವು, ಸಮುದ್ರದುರ್ಗವೂ--ನಾವು ಪ್ರಸವವೇದನೆ ಪಡುವದಿಲ್ಲ, ಹೆರುವದಿಲ್ಲ; ಇಲ್ಲವೆ ಮಕ್ಕಳನ್ನು ಬೆಳೆಸುವದಿಲ್ಲ ಕನ್ಯಾಸ್ತ್ರೀಯರನ್ನು ಸಾಕಿ ಸಲ ಹಲಿಲ್ಲ ಎಂದು ಹೇಳಿದೆಯಷ್ಟೆ.
5 ಐಗುಪ್ತದ ಸುದ್ದಿಗೆ ಆದ ಹಾಗೆ ತೂರಿನ ಸುದ್ದಿಗೆ ಬಹಳ ವೇದನೆಪಡು ವರು.
6 ತಾರ್ಷೀಷಿಗೆ ದಾಟಿಹೋಗಿರಿ, ದ್ವೀಪ ನಿವಾ ಸಿಗಳೇ ಗೋಳಾಡಿರಿ.
7 ನಿಮ್ಮ ಉಲ್ಲಾಸದ ಪಟ್ಟಣವೂ ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವದಕ್ಕೆ ತಕ್ಕೊಂಡು ಹೋ ಗುವವು.
8 ಅದು ಕಿರೀಟದಾಯಕವಾದ ಪಟ್ಟಣವು ಅದರ ವರ್ತಕರಾದ ಪ್ರಭುಗಳು, ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ತೂರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು?
9 ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇ ಕೆಂತಲೂ ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವ ಮಾನಪಡಿಸಬೇಕೆಂತಲೂ ಸೈನ್ಯಗಳ ಕರ್ತನೇ, ಹೀಗೆ ಸಂಕಲ್ಪಿಸಿದ್ದಾನೆ.
10 ತಾರ್ಷೀಷಿನ ಮಗಳೇ, ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು, ಅಲ್ಲಿ ಇನ್ನು ಬಲವು ಇರುವುದೇ ಇಲ್ಲ.
11 ಆತನು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕರ್ತನು ವ್ಯಾಪಾರದ ಪಟ್ಟಣವನ್ನು (ಕಾನಾನ್‌) ಅದರ ದುರ್ಗ ಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾನೆ.
12 ಆತನು ಹೇಳಿದ್ದೇನಂದರೆ--ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್‌ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು ಅಲ್ಲಿಯೂ ನಿನಗೆ ವಿಶ್ರಾಂತಿ ಇರದು.
13 ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ.
14 ತಾರ್ಷೀಷಿನ ಹಡಗುಗಳೇ, ಗೋ ಳಾಡಿರಿ! ನಮ್ಮ ಆಶ್ರಯಸ್ಥಾನವು ಹಾಳಾಯಿತು.
15 ಆ ದಿವಸದಲ್ಲಿ ಆಗುವದೇನಂದರೆ, ತೂರ್‌ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ (ಮೂಲ ದಿನಗಳು) ಜ್ಞಾಪಕಕ್ಕೆ ಬಾರದೇ ಇರುವದು; ಎಪ್ಪತ್ತು ವರುಷಗಳ ಕೊನೆಯಲ್ಲಿ ತೂರ್‌ ಪಟ್ಟಣವು ಸೂಳೆಯರ ವಿಷಯವಾದ ಗೀತೆಯ ಹಾಗಾಗುವದು.
16 ಮರೆತುಹೋದ ಸೂಳೆಯೇ, ಕಿನ್ನರಿಯನ್ನು ತಕ್ಕೋ, ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ ಬಹಳ ಗೀತೆಗಳನ್ನು ಹಾಡು (ಎಂಬದೇ).
17 ಎಪ್ಪತ್ತು ವರುಷ ಗಳಾದ ಮೇಲೆ ಆಗುವದೇನಂದರೆ -- ಕರ್ತನು ತೂರನ್ನು ಪರಾಮರಿಸುವನು (ಹಿತ ತರುವನು). ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕ ದಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ಸೂಳೆತನ ಮಾಡುವದು.
18 (ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು.
ಅಧ್ಯಾಯ 24

1 ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ.
2 ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು.
3 ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ.
4 ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವದು. ಲೋಕವು ಸೊರಗಿ ಬಾಡಿಹೋಗುವದು ಭೂಮಿಯ ಗರ್ವಿಷ್ಠರು ಕುಗ್ಗಿಹೋಗುವರು.
5 ಭೂನಿವಾಸಿಗಳು ನ್ಯಾಯಪ್ರಮಾಣಗಳನ್ನು ವಿಾರಿ ನಿಯಮಗಳನ್ನು ಬದ ಲಾಯಿಸಿ ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿ ದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆ ಯಿಂದ ಅಪವಿತ್ರವಾಗುವದು.
6 ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅದರಲ್ಲಿ ವಾಸವಾಗಿರು ವವರು ಧ್ವಂಸವಾಗುವರು; ಆದ್ದರಿಂದ ಭೂನಿವಾಸಿ ಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.
7 ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.
8 ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು.
9 ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು.
10 ಗಲಿಬಿಲಿಗುಂಟಾದ ಪಟ್ಟಣವು ಹಾಳಾಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.
11 ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ.
12 ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.
13 ಎಣ್ಣೇ ಮರವನ್ನು ಬಡಿದ ಮೇಲೆಯೂ ದ್ರಾಕ್ಷೇ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವದು.
14 ಅವರು ತಮ್ಮ ಸ್ವರವನ್ನೆತ್ತಿ ಕರ್ತನ ಮಹತ್ತಿನ ನಿಮಿತ್ತ ಹಾಡು ವರು, ಸಮುದ್ರದ ಕಡೆಯಿಂದ ಆರ್ಭಟಿಸುವರು.
15 ಆದದರಿಂದ ನೀವು ಕರ್ತನಿಗೆ ಬೆಂಕಿಯಲ್ಲಿಯೂ ಸಮುದ್ರದ ದ್ವೀಪಗಳಲ್ಲಿಯೂ ಇಸ್ರಾಯೇಲ್ಯರ ದೇವ ರಾದ ಕರ್ತನ ಹೆಸರನ್ನು ಘನಪಡಿಸಿರಿ.
16 ಭೂಮಂಡಲದ ಕಟ್ಟಕಡೆಯಿಂದ ನೀತಿವಂತರ ಘನತೆಗೆ ಬರುವಂತಹ ಗೀತೆಗಳು ನಮಗೆ ಕೇಳಿ ಬರು ತ್ತಿವೆ. ನಾನಾದರೋ--ಕ್ಷಮಿಸೇ ಕ್ಷಮಿಸುತ್ತೇನೆ. ನನಗೆ ಅಯ್ಯೋ! ಬಾಧಕರು ಬಾಧಿಸುವದರಲ್ಲಿಯೇ ನಿರತ ರಾಗಿದ್ದಾರೆ; ಹೌದು, ಬಾಧಕರು, ಬಹಳವಾಗಿ ಬಾಧಿ ಸುವದರಲ್ಲಿ ನಿರತರಾಗಿದ್ದಾರೆ.
17 ಓ, ಭೂಮಿಯ ನಿವಾಸಿಗಳೇ, ಭಯವೂ ಗುಂಡಿಯೂ ಬಲೆಯೂ ನಿಮಗೆ ಕಾದಿವೆ.
18 ಆಗ ಭಯದ ಶಬ್ದಕ್ಕೆ ಓಡಿ ಹೋಗುವವನು, ಕುಣಿಯೊಳಗೆ ಬೀಳುವನು; ಆ ಕುಣಿಯೊಳಗಿಂದ ಏರಿ ಬರುವವನು ಬಲೆಗೆ ಬೀಳು ವನು; ಮೇಲಿನ ಕಿಟಕಿಗಳು (ಆಕಾಶದ ದ್ವಾರಗಳು) ತೆರೆಯಲ್ಪಟ್ಟಿವೆ. ಭೂಮಿಯ ಅಸ್ತಿವಾರಗಳು ನಡುಗು ತ್ತವೆ. (ಕಂಪಿಸುತ್ತವೆ).
19 ಭೂಮಿಯು ಸಂಪೂರ್ಣ ವಾಗಿ ಮುರಿಯಲ್ಪಟ್ಟಿದೆ. ಪೂರ್ತಿಯಾಗಿ ತುಂಡು ತುಂಡಾಗಿ ಹೋಗಿದೆ. ಭೂಮಿಯು ಮಿತಿವಿಾರಿ ಚಲಿಸ ಲ್ಪಟ್ಟಿದೆ.
20 ಭೂಮಿಯು ಕುಡುಕನ ಹಾಗೆ ಓಲಾಡು ತ್ತದೆ ಮತ್ತು ಗುಡಿಸಲಿನ ಹಾಗೆ ತೆಗೆಯಲ್ಪಡುತ್ತದೆ ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ; ಅದು ಬಿದ್ದುಹೋಗುತ್ತದೆ ತಿರಿಗಿ ಏಳುವದೇ ಇಲ್ಲ.
21 ಆ ದಿವಸದಲ್ಲಿ ಆಗುವದೇನಂದರೆ--ಕರ್ತನು ಉನ್ನತದಲ್ಲಿರುವ ಉನ್ನತವಾದವರ ಸೈನ್ಯವನ್ನೂ ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸು ವನು.
22 ಕುಣಿಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಮುಚ್ಚ ಲ್ಪಟ್ಟು ಬಹಳ ದಿವಸಗಳಾದ ಮೇಲೆ ದಂಡನೆಗೆ ಗುರಿ ಯಾಗುವರು.
23 ಆಮೇಲೆ ಚೀಯೋನ್‌ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು.
ಅಧ್ಯಾಯ 25

1 ಓ ಕರ್ತನೇ, ನೀನೇ ನನ್ನ ದೇವರು ನೀನು ಸತ್ಯ ಪ್ರಾಮಾಣಿಕತೆಗಳನ್ನು (ಆಲೋ ಚಿಸಿ) ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ ಅದ್ಭುತಕಾರ್ಯಗಳನ್ನು ನಡಿಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಪಡಿ ಸುವೆನು.
2 ನೀನು ದುರ್ಗವನ್ನು ನಾಶಪಡಿಸಿ ಪಟ್ಟಣ ವನ್ನು ಹಾಳುದಿಬ್ಬವನ್ನಾಗಿಯೂ ಅನ್ಯರ ಅರಮನೆಯನ್ನು ಯಾರೂ ಎಂದಿಗೂ ಕಟ್ಟಬಾರದಂತೆ ಮಾಡಿದ್ದೀ.
3 ಆದಕಾರಣ ಬಲಿಷ್ಠವಾದ ಜನಾಂಗವು, ನಿನ್ನನ್ನು ಘನಪಡಿಸುವದು ಭಯಂಕರವಾದ ಜನರ ಪಟ್ಟಣವು ನಿನಗೆ ಅಂಜುವದು.
4 ನೀನು ದೀನರಿಗೆ ಕೋಟೆಯೂ ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ ಭೀಕರರ ಶ್ವಾಸವು ಬಿಸಿಲಿಗೋಸ್ಕರ ನೆರಳೂ ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋ ಸ್ಕರ ಆಶ್ರಯವೂ ಆಗಿದ್ದೀ.
5 ಒಣಗಿದ ಸ್ಥಳದಲ್ಲಿನ ಬಿಸಿಲಿನ ಹಾಗೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಅವರ ಭೀಕರತೆಯನ್ನು ಕೀಳು ಸ್ಥಿತಿಗೆ ತರುವಿ.
6 ಸೈನ್ಯಗಳ ಕರ್ತನು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ (ಕೊಬ್ಬಿದ) ಔತಣವನ್ನೂ ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ ಮೂಳೆ ಕೊಬ್ಬನ್ನೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾ ರಸವನ್ನು ಸಿದ್ದಮಾಡುವನು.
7 ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶಿಯರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ (ನಾಶ) ತೆಗೆದುಹಾಕುವನು.
8 ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
9 ಆ ದಿನದಲ್ಲಿ (ಜನರು) ಹೇಳುವದೇನಂದರೆ--ಇಗೋ, ಈತನೇ ನಮ್ಮ ದೇವರು, ನಾವು ಈತನಿ ಗೋಸ್ಕರ ಕಾದಿದ್ದೇವೆ; ಈತನು ನಮ್ಮನ್ನು ರಕ್ಷಿಸುವನು. ಈತನೇ ಕರ್ತನು, ನಾವು ಈತನಿಗೋಸ್ಕರ ಕಾದಿ ದ್ದೇವೆ; ನಾವು ಈತನ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷ ಪಡುವೆವು.
10 ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.
11 ಈಜುವವನು ಈಜುವದಕ್ಕೆ ತನ್ನ ಕೈಗಳನ್ನು ಹರಡಿಕೊಂಡ ಹಾಗೆ, ಆತನು ಅದರ ಮಧ್ಯೆ ತನ್ನ ಕೈಗಳನ್ನು ಚಾಚುವನು. ಅದರ ಗರ್ವವನ್ನು ಅವರ ಕೊಳ್ಳೆಯೊಂದಿಗೆ ತಗ್ಗಿಸಿ ಬಿಡುವನು.
12 ದುರ್ಗಮವಾಗಿಯೂ ಎತ್ತರವಾಗಿ ಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲಸಮಮಾಡಿ ದೂಳಿಗೆ ತರುವನು.
ಅಧ್ಯಾಯ 26

1 ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಹಾಡನ್ನು ಹಾಡುವರು; ನಮಗೆ ಬಲ ವಾದ ಪಟ್ಟಣವಿದೆ. ರಕ್ಷಣೆಯನ್ನು ಕೋಟೆಯನ್ನಾ ಗಿಯೂ ಹೊರಪೌಳಿಯನ್ನಾಗಿಯೂ ದೇವರು ಮಾಡು ವನು.
2 ಬಾಗಿಲುಗಳನ್ನು ತೆರೆಯಿರಿ. ಸತ್ಯವನ್ನು ಕೈಕೊ ಳ್ಳುವ ನೀತಿಯುಳ್ಳ ಜನಾಂಗವು ಒಳಗೆ ಪ್ರವೇಶಿಸಲಿ.
3 ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ.
4 ನೀವು ಕರ್ತನಲ್ಲಿ ಸದಾ ಭರವಸವಿಡಿರಿ; ಕರ್ತನಾದ ಯೆಹೋವನಲ್ಲಿ ನಿತ್ಯವಾದ ಬಲವುಂಟು.
5 ಆತನು ಎತ್ತರದಲ್ಲಿ ವಾಸಿಸುವವರನ್ನು ಇಳಿಸಿದ್ದಾ. ಉನ್ನತ ದಲ್ಲಿರುವ ಪಟ್ಟಣವನ್ನು ತಗ್ಗಿಸಿದ್ದಾನೆ. ಅದನ್ನು ಕೆಡವಿ ನೆಲಸಮಮಾಡಿ ದೂಳಿಗೆ ತಂದಿದ್ದಾನೆ.
6 ಕಾಲು ತುಳಿ ತಕ್ಕೆ ಈಡಾಗಿದೆ, ಬಡವರ ಕಾಲುಗಳೂ ದೀನರ ಪಾದಗಳೂ ಅದನ್ನು ತುಳಿಯುವವು;
7 ನೀತಿವಂತನ ಮಾರ್ಗವು ಯಥಾರ್ಥವಾಗಿದೆ. ನೀನು ಅತ್ಯಧಿಕ ವಾದ ಯಥಾರ್ಥವಂತನು; ನೀತಿವಂತನ ದಾರಿಯನ್ನು ತೂಗಿ ನೋಡುತ್ತೀ;
8 ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.
9 ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಬಯಸಿದ್ದೇನೆ, ಹೌದು, ನನ್ನಲ್ಲಿ ರುವ ನನ್ನ ಆತ್ಮದೊಂದಿಗೆ ನಿನ್ನನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ; ಭೂಮಿಗೆ ನಿನ್ನ ನ್ಯಾಯತೀರ್ವಿಕೆ ಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.
10 ದುಷ್ಟನಿಗೆ ಕನಿಕರ ತೋರಿಸಿದಾಗ್ಯೂ ನೀತಿಯನ್ನು ಅವನು ಕಲಿಯಲಾರನು. ಯಥಾರ್ಥವಂತನ ದೇಶದಲ್ಲಿ ಅವನು ಅನ್ಯಾ ಯವನ್ನಾಚರಿಸುವನು ಮತ್ತು ಕರ್ತನ ಮಹತ್ವವನ್ನು ಲಕ್ಷಿಸುವದಿಲ್ಲ.
11 ಕರ್ತನೇ, ನಿನ್ನ ಕೈ ಎತ್ತಿರಲು ಅವರು ನೋಡುವದಿಲ್ಲ, ಆದರೆ ಅವರು ನೋಡಿ ನಿನ್ನ ಜನರಿಗೋಸ್ಕರ ಹೊಟ್ಟೆಕಿಚ್ಚು ಪಟ್ಟದ್ದಕ್ಕೆ ನಾಚಿಕೆ ಪಡುವರು. ಹೌದು, ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.
12 ಕರ್ತನೇ, ನಮಗೆ ಸಮಾಧಾನ ವನ್ನು ವಿಧಿಸುವಿ. ನೀನೇ ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದೀ.
13 ಓ ಕರ್ತನೇ, ನಮ್ಮ ದೇವರೇ, ನಿನ್ನ ಬದಲು ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು. ಆದರೆ ನಿನ್ನಿಂದ ಮಾತ್ರವೇ ನಿನ್ನ ನಾಮವನ್ನು ನಾವು ಜ್ಞಾಪಿಸಿ ಕೊಳ್ಳುವಂತಾಯಿತು.
14 ಅವರು ಸತ್ತರು ಬದುಕುವ ದಿಲ್ಲ; ಆದ್ದರಿಂದ ನೀನು ಅವರನ್ನು ಸಂದರ್ಶಿಸಿ ನಾಶ ಮಾಡಿ ಅವರ ಎಲ್ಲಾ ಜ್ಞಾಪಕಗಳನ್ನು ಅಳಿಸಿಬಿಟ್ಟಿದ್ದೀ.
15 ಜನಾಂಗವನ್ನು ಹೆಚ್ಚಿಸಿದ್ದೀ, ಓ ಕರ್ತನೇ, ಜನಾಂಗ ವನ್ನು ಹೆಚ್ಚಿಸಿದ್ದೀ, ನೀನು ಮಹಿಮೆ ಹೊಂದಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ಭೂಮಿಯ ಕಟ್ಟಕಡೆ ಯ ವರೆಗೂ ವಿಸ್ತರಿಸಿದ್ದೀ.
16 ಕರ್ತನೇ, ಇಕ್ಕಟ್ಟಿನಲ್ಲಿ ಅವರು ನಿನ್ನನ್ನು ಹುಡುಕಿದರು, ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿ ದರು.
17 ಓ ಕರ್ತನೇ, ಬಸುರಾದ ಸ್ತ್ರೀಯು ಹೆರುವ ದಕ್ಕೆ ಸವಿಾಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆ ಯಲ್ಲಿ ಅರಚುವಂತೆ ಓ ಕರ್ತನೇ, ನಾವು ನಿನ್ನ ಸಮ್ಮುಖದಲ್ಲಿದ್ದೆವು.
18 ನಾವು ಗರ್ಭಧರಿಸಿ ವೇದನೆಪಟ್ಟು ಗಾಳಿಯನ್ನು ಹೆತ್ತಂತಾಯಿತು, ಭೂಮಿಗೆ ನಮ್ಮಿಂದ ಯಾವ ಬಿಡು ಗಡೆಯೂ ಆಗಲಿಲ್ಲ. ಇಲ್ಲವೇ ಭೂಲೋಕದ ನಿವಾಸಿ ಗಳು ಬೀಳಲಿಲ್ಲ.
19 ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಏಳುವವು; ದೂಳಿನ ನಿವಾಸಿಗಳೇ; ಎಚ್ಚತ್ತು ಹರ್ಷ ಸ್ವರಗೈಯಿರಿ! ನೀನು ಸುರಿಯುವ ಇಬ್ಬನಿಯು ಇಬ್ಬನಿಯ ಸಸ್ಯಗಳಂತಿವೆ. ಭೂಮಿಯು ಸತ್ತವರನ್ನು ಹೊರಪಡಿಸುವದು.
20 ನನ್ನ ಜನರೇ, ಬನ್ನಿರಿ, ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಲನ್ನು ಮುಚ್ಚಿಕೊಳ್ಳಿರಿ; ಸ್ವಲ್ಪ ಹೊತ್ತು ಅಡಗಿಕೊಂಡು ರೋಷವು ಹಾದುಹೋಗುವ ತನಕ ಇರ್ರಿ.
21 ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು.
ಅಧ್ಯಾಯ 27

1 ಆ ದಿನದಲ್ಲಿ ಕರ್ತನು, ತನ್ನ ಉಗ್ರದೊಂದಿಗೆ ದೊಡ್ಡ ಬಲವಾದ ಕತ್ತಿಯಿಂ ದ(ಖಡ್ಗದಿಂದ) ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನು ವಕ್ರತೆಯ ಸರ್ಪವಾದ ಲೆವಿಯಾ ತಾನವನ್ನೂ ದಂಡಿಸಿ ಸಮುದ್ರದಲ್ಲಿರುವ ಘಟಸರ್ಪ ವನ್ನೂ ಕೊಂದುಹಾಕುವನು.
2 ಆ ದಿನದಲ್ಲಿ ದ್ರಾಕ್ಷಾ ರಸವುಳ್ಳ ತೋಟದ ವಿಷಯವಾಗಿ ಅವಳಿಗೆ ಹಾಡಿರಿ;
3 ಕರ್ತನಾದ ನಾನೇ ಅದನ್ನು ಕಾಯುತ್ತೇನೆ, ಕ್ಷಣ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.
4 ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.
5 ಇಲ್ಲದಿದ್ದರೆ ಅವನು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನ ಬಲವನ್ನು ಹಿಡುಕೊ ಳ್ಳಲಿ, ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.
6 ಮುಂದಿನ ಕಾಲದಲ್ಲಿ ಯಾಕೋಬು ಬೇರೂರಿ ಇಸ್ರಾ ಯೇಲು ಹೂ ಅರಳಿ ಚಿಗುರುವದು ಮತ್ತು ಭೂಲೋ ಕದ ಮೇಲ್ಭಾಗವನ್ನು ಫಲದಿಂದ ತುಂಬಿಸುವನು.
7 ಆತನನ್ನು ಹೊಡೆದವನನ್ನು ಹೊಡೆದ ಪ್ರಕಾರ ಅವನನ್ನು ಹೊಡೆದನೋ? ಇಲ್ಲವೆ ಆತನಿಂದ ಕೊಲ್ಲಲ್ಪಟ್ಟವರು ಕೊಲ್ಲಲ್ಪಟ್ಟ ಪ್ರಕಾರ ಅವನನ್ನು ಕೊಂದನೋ?
8 ಮಿತಿಯಾಗಿ ಕಳುಹಿಸಿ ಬಿಡುವದರ ಮೂಲಕ ಅದರೊಡನೆ ವಿವಾದ ಮಾಡಿದಿ. ಮೂಡಣ ಗಾಳಿಯು ಬೀಸುವ ದಿನದಲ್ಲಿ ತನ್ನ ಬಲವಾದ ವಾಯು ವಿನಿಂದ ಆತನು ಅದನ್ನು ತೊಲಗಿಸಿದನು.
9 ಹೀಗಿರಲು (ಈ ಕಾರಣದಿಂದ) ಯಾಕೋಬು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಒಡೆದುಹೋದ ಸುಣ್ಣದ ಕಲ್ಲುಗಳಂತೆ ಮಾಡುವಾಗ ವಿಗ್ರಹಸ್ತಂಭಗಳೂ ಸೂರ್ಯಸ್ತಂಭ ಗಳೂ ಏಳುವದಿಲ್ಲ ಮತ್ತು ಅದರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವು ಇದೇ.
10 ಕೋಟೆಯ ಪಟ್ಟಣವಾಗಿದ್ದಾಗ್ಯೂ ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವವು. ಅಲ್ಲಿನ ಚಿಗುರುಗಳನ್ನು ತಿಂದು ಬಿಡು ವವು.
11 ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿ ಯಲ್ಪಡುವವು, ಹೆಂಗಸರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು; ಅದು ವಿವೇಕವುಳ್ಳ ಜನ ವಲ್ಲ. ಆದದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವದಿಲ್ಲ. ಅವರನ್ನು ರೂಪಿಸಿದಾತನು ಅವರನ್ನು ಕರುಣಿಸುವದಿಲ್ಲ.
12 ಓ ಇಸ್ರಾಯೇಲ್ಯರ ಮಕ್ಕಳೇ, ಕರ್ತನು ನದಿಯ ಕಾಲುವೆ ಮೊದಲುಗೊಂಡು ಐಗುಪ್ತದೇಶದ ನದಿಯ ವರೆಗೆ ಹೊಡೆಯುವನು; ಆಗ ನಿಮ್ಮನ್ನು ಒಬ್ಬೊಬ್ಬರ ನ್ನಾಗಿ ಕೂಡಿಸುವನು.
13 ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.
ಅಧ್ಯಾಯ 28

1 ಎಫ್ರಾಯಾಮ್ಯರ ಕುಡುಕರ ಗರ್ವದ ಕಿರೀಟಕ್ಕೆ ಅಯ್ಯೋ! ದ್ರಾಕ್ಷಾರಸದಿಂದ ಅಮಲೇರಿದವರ ಕೊಬ್ಬುಳ್ಳ ತಗ್ಗಿನ ತಲೆಯ ಮೇಲಿ ರುವ ಅವರ ಅಹಂಕಾರದ ಕಿರೀಟವು ಬಾಡಿದ ಹೂವಾಗಿದೆ.
2 ಇಗೋ, ಕರ್ತನಿಗೆ ಒಬ್ಬ ಮಹಾ ಬಲಿಷ್ಠನು ಇದ್ದಾನೆ. ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ ಹೊಡೆದುಬಿಡುವ ಬಿರುಗಾಳಿ ಯಂತೆಯೂ ಪ್ರಳಯಮಾಡುವ ಪ್ರಚಂಡ ಮಳೆ ಯನ್ನು ತರುವ ಬಿರುಗಾಳಿಯಂತೆಯೂ ಅದನ್ನು ಕೈ ಯಿಂದ ನೆಲಕ್ಕೆ ಬೀಳಿಸುವನು.
3 ಕುಡುಕರಾದ ಎಫ್ರಾ ಯೀಮ್ಯರ ಗರ್ವದ ಕಿರೀಟವು ಕಾಲಿನಿಂದ ತುಳಿಯ ಲ್ಪಡುವದು.
4 ಫಲವತ್ತಾದ ತಗ್ಗಿನ ತಲೆಯ ಮೇಲಿರುವ ಬಾಡುವ ಹೂವಾದ ಅವರ ಅಲಂಕಾರದ ಶೃಂಗಾರವುಬೇಸಿಗೆ ಮುಂಚೆ ಹುಟ್ಟಿದ ಹಣ್ಣಿನ ಹಾಗೆ ಇರುವದು. ಅದನ್ನು ಕಂಡು ನೋಡಿದಾಕ್ಷಣವೇ ಕೈಗೆ ಸಿಕ್ಕಿದಾಗಲೇ ತಿಂದು ಬಿಡುವನು.
5 ಆ ದಿನದಲ್ಲಿ ಸೈನ್ಯಗಳ ಕರ್ತನು ತನ್ನ ಜನರಲ್ಲಿ ಉಳಿದವರಿಗೆ ಮಹಿಮೆಯ ಕಿರೀಟವು ಮತ್ತು ಸುಂದರವಾದ ಮುಕಟವೂ ಆಗಿರುವನು.
6 ನ್ಯಾಯಕ್ಕೋಸ್ಕರ ಕೂತುಕೊಂಡವನಿಗೆ ನ್ಯಾಯದ ಆತ್ಮವೂ ಬಾಗಲಿನ ಕಡೆಗೆ ಯುದ್ಧವನ್ನು ತಿರುಗಿಸುವ ವನಿಗೆ ಪರಾಕ್ರಮವೂ ಆಗಿರುವನು.
7 ಆದರೆ ಇವರು ಸಹ ದ್ರಾಕ್ಷಾರಸದಿಂದ ತಪ್ಪಿ ಮಧ್ಯದಿಂದ ಮೋಸಹೋಗಿದ್ದಾರೆ; ಯಾಜಕನೂ ಪ್ರವಾದಿಯೂ ಮದ್ಯದಿಂದ ತಪ್ಪಿ ದ್ರಾಕ್ಷಾರಸದ ವಶ ವಾಗಿದ್ದು ಮದ್ಯದಿಂದ ಮೋಸಹೋಗಿದ್ದಾರೆ; ದರ್ಶನ ದಲ್ಲಿ ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ.
8 ಮೇಜುಗಳೆಲ್ಲಾ ಸ್ಥಳ ಉಳಿಯದ ಹಾಗೆ ಅಸಹ್ಯವಾದ ಕಕ್ಕುವಿಕೆಯಿಂದ ತುಂಬಿವೆ.
9 ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಯಾರಿಗೆ ಬೋಧನೆಯನ್ನು ತಿಳುಕೊಳ್ಳುವ ಹಾಗೆ ಮಾಡುತ್ತಾನೆ? ಮೊಲೆಬಿಟ್ಟ ಕೂಸುಗಳಿಗೋ? ಎದೆ ಬಿಟ್ಟ ಮಕ್ಕಳಿಗೋ?
10 ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ. ಇಲ್ಲಿ ಸ್ವಲ್ಪ.
11 ತೊದಲು ಮಾತಿನವರು ಅನ್ಯಭಾಷಿಗಳು ಇವರ ಮೂಲಕವಾಗಿಯೇ ಆತನು ಈ ಜನರ ಸಂಗಡ ಮಾತನಾಡುತ್ತಾನೆ.
12 ಆತನು ಮೊದಲು--ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ. ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪ ಶಮನ ಇದೇ ಎಂದು ಹೇಳಿದಾಗ್ಯೂ ಅವರು ಕೇಳ ಲಿಲ್ಲ.
13 ಆದರೆ ಅವರು ಹೋಗಿ ಹಿಂದಕ್ಕೆ ಎಡವಿ ಮುರಿದುಕೊಳ್ಳುವ ಹಾಗೆಯೂ ಬೋನಿನಲ್ಲಿ ಹಿಡಿ ಯಲ್ಪಟ್ಟು ಸಿಕ್ಕಿಬೀಳುವ ಹಾಗೆಯೂ ಕರ್ತನ ವಾಕ್ಯವು ಅವರಿಗೆ ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಇರುವದು.
14 ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನ ರನ್ನು ಆಳುವ ಹಾಸ್ಯದ ಜನರಾದ ನೀವು ಕರ್ತನ ಮಾತನ್ನು ಕೇಳಿರಿ,
15 ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ (ನರಕದ)ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತವಾದ ಶಿಕ್ಷೆ ಯು ಹಾದುಹೋಗುವಾಗ ನಮ್ಮ ಮೇಲೆ ಬಾರದು; ಸುಳ್ಳನ್ನು ನಮ್ಮ ಆಶ್ರಯವಾಗಿ ಮಾಡಿಕೊಂಡು ಮೋಸದಲ್ಲಿ ಅಡಗಿಕೊಂಡಿದ್ದೇವೆ ಎಂದು ನೀವು ಅನ್ನುತ್ತೀರಲ್ಲಾ?
16 ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಪರೀಕ್ಷಿತವಾಗಿಯೂ ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಆಸ್ತಿವಾರವನ್ನಾಗಿ ಇಡು ತ್ತೇನೆ; ವಿಶ್ವಾಸವಿಡುವವನು ಆತುರಪಡನು (ಆಶಾ ಭಂಗ ಪಡುವದಿಲ್ಲ).
17 ನಾನು ನ್ಯಾಯವನ್ನು ನೂಲ ನ್ನಾಗಿಯೂ ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಸುಳ್ಳಿನ ಆಶ್ರಯವನ್ನು (ಗುಡಿಸಿ) ಬಡಿದುಕೊಂಡು ಹೋಗುವದು, ಅಡ ಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿಬಿಡು ವದು.
18 ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವದಿಲ್ಲ; ವಿಪರೀತ ಬಾಧೆಯು ಹಾದುಹೋಗುವಾಗ ನೀವು ಅದರಿಂದ ತುಳಿಯಲ್ಪಡುವಿರಿ.
19 ಅದು ಹಾದು ಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವದು. ಅದು ಹೊತ್ತಾರೆಯಿಂದ ಹೊತ್ತಾರೆಗೆ (ಬೆಳಬೆಳಕೂ) ಹಗಲು ರಾತ್ರಿಯೂ ಹಾದು ಹೋಗುವದು; ಅದರ ಸುದ್ದಿ ಯನ್ನು ತಿಳುಕೊಳ್ಳುವದರಿಂದ ಭಯವಾಗುವದು.
20 ಮೈ ಚಾಚುವದಕ್ಕೆ ಅವನ ಹಾಸಿಗೆ ಚಿಕ್ಕದಾಗಿರು ವದು. ಮುದುರಿಕೊಂಡು ಮಲಗೇನಂದರೆ ಹೊದಿ ಕೆಯ ಅಗಲ ಸಾಲದು;
21 ಕರ್ತನು ಪೆರಾಚೀಮ್‌ ಪರ್ವತದಲ್ಲಿ ಅದರ ಹಾಗೆ ಎದ್ದು ಗಿಬ್ಯೋನ್‌ ತಗ್ಗಿನಲ್ಲಿ ಆದ ಹಾಗೆ ಕೋಪಿಸಿ ಅಪರೂಪವಾದ ತನ್ನ ಕೆಲಸ ವನ್ನು ನಡಿಸಿ ಅಪೂರ್ವವಾದ ತನ್ನ ಕಾರ್ಯವನ್ನು ನೇರವೇರಿಸುವನು.
22 ಹೀಗಿರುವದರಿಂದ ನಿಮ್ಮ ಬಂಧನಗಳು ಬಿಗಿಯಾಗದಂತೆ ಹಾಸ್ಯಗಾರರಾಗ ಬೇಡಿರಿ; ಸೈನ್ಯಗಳ ಕರ್ತನಾದ ದೇವರ ಕಡೆಯಿಂದ ಭೂಮಂಡಲದಲ್ಲೆಲ್ಲಾ ಸಂಹಾರವು ನಿರ್ಣಯಿಸಿದೆ ಎಂಬದನ್ನು ನಾನು ಕೇಳಿದ್ದೇನೆ.
23 ನನ್ನ ಧ್ವನಿಗೆ ಕಿವಿಗೊಟ್ಟು ಕೇಳಿರಿ; ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.
24 ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ತನ್ನ ಭೂಮಿಯ ಮಣ್ಣು ಹೆಂಟೆಯನ್ನು ತೆಗೆದು (ದಿನವೆಲ್ಲಾ) ಹೊಡೆ ಯುವನೋ?
25 ಅದರ ಮೇಲ್ಭಾಗವನ್ನು ಹಸನು ಮಾಡಿದ ಮೇಲೆ ಅಗಸೆಯನ್ನು ಚೆಲ್ಲಿ ಜೀರಿಗೆಯನ್ನು ಚದರಿಸಿ ಗೋದಿಯನ್ನು ಸಾಲು ಸಾಲಾಗಿಯೂ ಜವೆ ಗೋಧಿಯನ್ನು ನೇಮಕವಾದ ಸ್ಥಳದಲ್ಲಿಯೂ ಕಡಲೆ ಯನ್ನು ಅಂಚಿನಲ್ಲಿಯೂ ಹಾಕುವನಲ್ಲವೇ.
26 ಅವನ ದೇವರು ಇದನ್ನೆಲ್ಲಾ ಅವನಿಗೆ ಸರಿಯಾಗಿ ಕಲಿಸಿ ತಿದ್ದು ತ್ತಾನೆ.
27 ಅಗಸೆಯನ್ನು ತುಳಿಯುವ ಯಂತ್ರದಿಂದ ತುಳಿಯುವದಿಲ್ಲ. ಇಲ್ಲವೆ ಜೀರಿಗೆಯ ಮೇಲೆ ಗಾಡಿಯ ಚಕ್ರದಿಂದ (ಕಣದ ಗುಂಡಿನಿಂದ) ತಿರುಗಿಸುವದಿಲ್ಲ. ಆದರೆ ಅಗಸೆಯು ಕೋಲಿನಿಂದಲೂ ಜೀರಿಗೆಯು ದೊಣ್ಣೆಯಿಂದಲೂ ಒಡೆಯಲ್ಪಡುವದು.
28 ರೊಟ್ಟಿಯ ಕಾಳನ್ನು ಕುಟ್ಟುವನೋ? ಅವನು ಯಾವಾಗಲೂ ಅದನ್ನು ಒಕ್ಕುವದಿಲ್ಲ; ಇಲ್ಲವೇ ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವದಿಲ್ಲ, ಅಥವಾ ಅವನ ಕುದುರೆ ಸವಾರರಿಂದ ಕುಣಿಸುವದಿಲ್ಲ.
29 ಈ ವಿವೇಕವು ಸಹ ಅತಿಶಯಾಲೋಚನಾಪರನೂ ಕಾರ್ಯಸಾಧಕ ಜ್ಞಾನಶ್ರೇಷ್ಠನೂ ಆಗಿರುವ ಸೈನ್ಯಗಳ ಕರ್ತನಿಂದಲೇ ಹೊರಡುತ್ತದೆ.
ಅಧ್ಯಾಯ 29

1 ಅಯ್ಯೋ, ಅರೀಯೇಲೇ, ಅರೀಯೇಲೇ, (ಅಗ್ನಿವೇದಿ) ದಾವೀದನು ವಾಸಿಸಿದ ಪಟ್ಟ ಣವೇ ವರುಷಕ್ಕೆ ವರುಷವನ್ನು ಕೂಡಿಸಿರಿ, ಬಲಿಗಳನ್ನು ವಧಿಸಿ ಅರ್ಪಿಸಿರಿ.
2 ಆದಾಗ್ಯೂ ನಾನು ಅರೀಯೇಲಿಗೆ ಇಕ್ಕಟ್ಟನ್ನು ಉಂಟುಮಾಡುವೆನು. ಅಲ್ಲಿ ಕಷ್ಟವೂ ದುಃಖವೂ ಇರುವದು.
3 ಅದು ನನಗೆ ಅರೀಯೇಲಾಗಿಯೇ ಪರಿಣಮಿಸುವದು. ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೋಟೆಗಳನ್ನು ಎಬ್ಬಿಸಿ ದಿಬ್ಬಹಾಕಿ ನಿನ್ನ ಮೇಲೆ ಮುತ್ತಿಗೆ ಹಾಕುವೆನು.
4 ಆಗ ನೀನು ತಗ್ಗಿಸಲ್ಪಟ್ಟು ಭೂಮಿಯೊಳಗಿಂದ ಮಾತಾಡುವಿ. ನಿನ್ನ ನುಡಿಯು ದೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವದು, ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರು ವದು; ನಿನ್ನ ನುಡಿಯು ದೂಳಿನೊಳಗಿಂದ ಪಿಸುಗುಟ್ಟು ವದು;
5 ಅದೂ ಅಲ್ಲದೆ ನಿನ್ನ ಅನ್ಯರ ಗುಂಪು ಸೂಕ್ಷ್ಮ ವಾದ ದೂಳಿನಂತಾಗುವದು, ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನ ಹಾಗೆ ಇರು ವದು; ಹೌದು, ಅದು ಕ್ಷಣ ಮಾತ್ರದಲ್ಲಿ ಫಕ್ಕನೆ ಆಗುವದು.
6 ಸೈನ್ಯಗಳ ಕರ್ತನ ಕಡೆಯಿಂದಲೇ ನೀನು ಗುಡುಗಿನಿಂದಲೂ ಮಹಾಶಬ್ದದಿಂದಲೂ ಬಿರುಗಾಳಿ, ಸುಳಿಗಾಳಿಯಿಂದಲೂ ದಹಿಸುವ ಅಗ್ನಿಜ್ವಾಲೆಯಿಂದ ಲೂ ವಿಚಾರಿಸಲ್ಪಡುವಿ.
7 ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧ ವಾಗಿ ಯುದ್ಧ ಮಾಡಿ ಬಾಧಿಸುವ ಸಕಲ ಜನಾಂಗಗಳ ಗುಂಪು ರಾತ್ರಿಯ ದರ್ಶನದ ಕನಸಿನಂತೆ ಮಾಯ ವಾಗುವದು.
8 ಹಸಿದ ಮನುಷ್ಯನು ಕನಸುಕಂಡು ಇಗೋ, ಉಣ್ಣುತ್ತಾನೆ ಆದರೆ ಅವನು ಎಚ್ಚತ್ತಾಗ ಪ್ರಾಣ ತುಂಬದ ಹಾಗೆಯೂ ಇಲ್ಲವೆ ಬಾಯಾರಿದ ವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತಾನೆ ಆದರೆ ಅವನು ಎಚ್ಚರವಾದಾಗ ಇಗೋ, ಬಲಹೀನನಾಗಿದ್ದು ಪ್ರಾಣ ಆಶಿಸುವ ಹಾಗೆಯೂ ಚೀಯೋನ್‌ ಪರ್ವ ತಕ್ಕೆ ವಿರೋಧವಾಗಿ ಯುದ್ಧಮಾಡುವ ಹಾಗೆಯೇ ಎಲ್ಲಾ ಜನಾಂಗಗಳ ಸಮೂಹವಿರುವದು.
9 ತಾಮಸಮಾಡಿ ಆಶ್ಚರ್ಯಪಡಿರಿ, ನೀವು ಕೂಗಿರಿ, ಕೂಗಾಡಿರಿ ಇವರು ಅಮಲೇರಿದ್ದಾರೆ; ಆದರೆ ದ್ರಾಕ್ಷಾ ರಸದಿಂದಲ್ಲ; ಅವರು ಕೂಗಾಡುತ್ತಾರೆ, ಆದರೆ ಮದ್ಯ ದಿಂದಲ್ಲ.
10 ಕರ್ತನು ನಿಮ್ಮ ಮೇಲೆ ಗಾಢ ನಿದ್ರೆಯ ಆತ್ಮವನ್ನು ಹೊಯಿದು ನಿಮ್ಮ ಕಣ್ಣುಗಳನ್ನು ಮುಚ್ಚಿದ್ದಾನೆ; ಪ್ರವಾದಿಗಳನ್ನೂ ನಿಮ್ಮ ಮುಖ್ಯಸ್ಥರಾದ ದರ್ಶಿಗಳನ್ನೂ ಮುಚ್ಚಿದ್ದಾನೆ.
11 ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿ ದ ವಾಕ್ಯಗಳ ಪುಸ್ತಕದ ಹಾಗಾಯಿತು; ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು ಇದನ್ನು ಓದು ಎಂದು ಬೇಡಿದರೆ ಅವನು--ಮುದ್ರೆ ಹಾಕಿದೆಯಲ್ಲಾ, ಆಗುವದಿಲ್ಲ ಅನ್ನು ವನು;
12 ಅಕ್ಷರವಿಲ್ಲದವನಿಗೆ ಆ ಪುಸ್ತಕವನ್ನು ಒಪ್ಪಿಸಿದರೆ ಅವನು--ನನಗೆ ವಿದ್ಯೆಯಿಲ್ಲ ಅನ್ನುವನು.
13 ಹೀಗಿರುವದರಿಂದ ಕರ್ತನು ಹೇಳುವದೇನಂದರೆ --ಈ ಜನರು ಬಾಯಿಂದ ನನ್ನನ್ನು ಸವಿಾಪಿಸಿ; ಅವರ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ತಮ್ಮ ಹೃದಯವನ್ನು ನನಗೆ ದೂರ ಮಾಡಿಕೊಂಡು ಬಾಯಿ ಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯವನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ.
14 ಹೀಗಿರುವದ ರಿಂದ ಇಗೋ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಮಾಡು ವೆನು; ಅವರ ಜ್ಞಾನಿಗಳ ಜ್ಞಾನವು ಅಳಿಯುವದು (ನಾಶ), ಅವರ ವಿವೇಕಿಗಳ ತಿಳುವಳಿಕೆಯು ಅಡಗಿ ಕೊಳ್ಳುವದು ಅಂದನು.
15 ತಮ್ಮ ಆಲೋಚನೆಯನ್ನು ಕರ್ತನಿಗೆ ಮರೆಮಾಜುವದಕ್ಕೆ ಅಗಾಧದಲ್ಲಿ ಮಾಡಿ--ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ತಿಳಿದಾರು ಅಂದುಕೊಂಡು ಕತ್ತಲೆಯಲ್ಲೇ ತಮ್ಮ ಕೆಲಸವನ್ನು ನಡಿಸು ವವರಿಗೆ ಅಯ್ಯೋ!
16 ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು ಕುಂಬಾರನ ಜೇಡಿ ಮಣ್ಣಿನಂತೆ ಎಣಿಸಲ್ಪಡುವದು; ಮಾಡಿದವನಿಗೆ ಮಾಡ ಲ್ಪಟ್ಟದ್ದು--ಆತನು ನನ್ನನ್ನು ಮಾಡಲಿಲ್ಲ ಎಂದು ಹೇಳು ವದೋ? ಇಲ್ಲವೆ ತನ್ನನ್ನು ನಿರ್ಮಿಸಿದವನಿಗೆ ನಿರ್ಮಿಸ ಲ್ಪಟ್ಟದ್ದು--ಆತನಿಗೆ ವಿವೇಕವಿಲ್ಲವೆಂದು ಹೇಳುವ ದೋ?
17 ಆದಾಗ್ಯೂ ಇನ್ನು ಸ್ವಲ್ಪ ಕಾಲದಲ್ಲಿ ಲೆಬ ನೋನ್‌ ಫಲವುಳ್ಳ ಹೊಲವಾಗಿದ್ದು ಆ ಫಲವುಳ್ಳ ಹೊಲವು ಅಡವಿಯಾಗಿ ಎಣಿಸಲ್ಪಡುವದಿಲ್ಲವೋ?
18 ಆ ದಿನದಲ್ಲಿ ಕಿವುಡರು ಪುಸ್ತಕದ ಮಾತುಗಳನ್ನು ಕೇಳುವರು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ ಅಂಧಕಾರದೊಳಗಿಂದಲೂ ನೋಡುವವು.
19 ದೀನರ ಸಂತೋಷವು ಕರ್ತನಲ್ಲಿ ಹೆಚ್ಚಾಗುವದು, ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸು ವರು.
20 ಭಯಂಕರನು ಇಲ್ಲವಾಗುತ್ತಾನೆ, ಹಾಸ್ಯಗಾ ರನು ದಹಿಸಲ್ಪಡುವನು, ಕೇಡಿಗೆ ಕಾಯುವವರೆಲ್ಲರು ಕಡಿದು ಹಾಕಲ್ಪಡುವರು.
21 ಒಂದು ಮಾತಿನ ನಿಮಿತ್ತ ಮನುಷ್ಯರಿಗೆ ತಪ್ಪು ಹೊರಿಸುವವರೂ ಬಾಗಲಲ್ಲಿ ವಾದಿಸುವವನಿಗೆ ಉರ್ಲು ಒಡ್ಡುವವರೂ ಏನೂ ಇಲ್ಲದೆ ಕಾರ್ಯಕ್ಕೆ ನೀತಿವಂತನನ್ನು ತಿರುಗಿಸುವವರೂ ನಿರ್ನಾಮವಾಗುವರು.
22 ಆದದರಿಂದ ಅಬ್ರಹಾಮನನ್ನು ವಿಮೋಚಿಸಿದ ಕರ್ತನು ಯಾಕೋಬನ ಮನೆತನದ ವಿಷಯವಾಗಿ ಹೇಳುವದೇನಂದರೆ--ಈಗ ಯಾಕೋಬ್ಯರು ನಾಚಿಕೆ ಪಡುವದಿಲ್ಲ ಇಲ್ಲವೆ ಅವನ ಮುಖವು ಕಳೆಗುಂದು ವದಿಲ್ಲ.
23 ಆದರೆ ನನ್ನ ಕೈಕೆಲಸವಾದ ಅವನ ಮಕ್ಕಳನ್ನು ತನ್ನ ಮಧ್ಯದಲ್ಲಿ ನೋಡುವಾಗ ನನ್ನ ನಾಮವನ್ನು ಪರಿಶುದ್ಧವೆಂದೆಣಿಸಿ ಯಾಕೋಬನ ಪರಿ ಶುದ್ಧನನ್ನು ಪ್ರತಿಷ್ಠಿಸುವರು; ಇಸ್ರಾಯೇಲಿನ ದೇವ ರಿಗೆ ಭಯಪಡುವರು.
24 ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು. ಗುಣುಗುಟ್ಟುವವರು ಬೋಧನೆ ಕಲಿಯುವರು.
ಅಧ್ಯಾಯ 30

1 ಕರ್ತನು ಹೀಗೆ ಅನ್ನುತ್ತಾನೆ. ತಿರುಗಿ ಬೀಳುವ ಮಕ್ಕಳಿಗೆ ಅಯ್ಯೋ ಅವರು ಆಲೋಚನೆಯನ್ನು ಮಾಡುತ್ತಾರೆ, ಆದರೆ ನನ್ನಿಂದಲ್ಲ; ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೇಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
2 ಫರೋಹನ ಬಲದಲ್ಲಿ ತಾವು ಬಲಗೊಳ್ಳುವ ಹಾಗೆ ಯೂ ಐಗುಪ್ತದ ನೆರಳಿನಲ್ಲಿ ಭರವಸವಿಟ್ಟು ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿ ದ್ದಾರೆ.
3 ಆದಕಾರಣ ಫರೋಹನ ಬಲವು ನಿಮಗೆ ನಾಚಿಕೆಯೂ ಐಗುಪ್ತದ ನೆರಳಿನ ಭರವಸದಿಂದ ನಿಮ ಗೆ ನಿಂದೆಯೂ ಉಂಟಾಗುವದು.
4 ಅವನ ಪ್ರಧಾ ನರು ಚೋವನಿನಲ್ಲಿ ಇದ್ದರು. ಅವನ ರಾಯಭಾರಿ ಗಳು ಹಾನೇಸಿಗೆ ಬಂದಿದ್ದಾರೆ.
5 ತಮಗೆ ಪ್ರಯೋ ಜನವಾಗದೆ ಸಹಾಯಕ್ಕೂ ಪ್ರಯೋಜನಕ್ಕೂ ಅಲ್ಲ, ನಿಂದೆಗೂ ನಾಚಿಕೆಗೂ ಇರುವ ಜನಕ್ಕೆ ಎಲ್ಲರೂ ನಾಚಿಕೆಪಡುತ್ತಾರೆ.
6 ದಕ್ಷಿಣ ಸೀಮೆಯ ಮೃಗಗಳ ವಿಷಯವಾದ ದೈವೋಕ್ತಿ. ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿ ಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿ ಗಳ ಬೆನ್ನುಗಳ ಮೇಲೆ ತಮ್ಮ ಬದುಕನ್ನೂ ಒಂಟೆಗಳ ಡಬ್ಬಗಳ ಮೇಲೆ ತಮ್ಮ ದ್ರವ್ಯಗಳನ್ನೂ ಪ್ರಯೋಜನ ವಲ್ಲದ ಜನಕ್ಕೆ ತಕ್ಕೊಂಡು ಹೋಗುತ್ತಾರೆ.
7 ಐಗುಪ್ತ್ಯರ ಸಹಾಯವು ವ್ಯರ್ಥವೇ ವ್ಯರ್ಥ. ಆದದರಿಂದ ಇದನ್ನು ಕುರಿತು ಅವರ ಬಲವು ನಿಂತುಹೋಗಿದೆ ಎಂದು ನಾನು ಕೂಗಿದ್ದೇನೆ.
8 ಈಗ ಹೋಗಿ ಇದನ್ನು ಅವರ ಮುಂದೆ ಹಲಗೆ ಯಲ್ಲಿ ಬರೆ. ಮುಂದೆ ಬರುವ ನಿತ್ಯಕಾಲಕ್ಕಾಗಿ ಪುಸ್ತಕ ದಲ್ಲಿ ಇದನ್ನು ರಚಿಸು.
9 ಏನಂದರೆ, ಇವರು ತಿರುಗಿ ಬೀಳುವ ಜನರು. ಸುಳ್ಳಾಡುವ ಮಕ್ಕಳು, ಕರ್ತನ ನ್ಯಾಯಪ್ರಮಾಣವನ್ನು ಕೇಳಲೊಲ್ಲದ ಮಕ್ಕಳು.
10 ಅವರು ನೋಡುವವರಿಗೆ--ನೋಡಬೇಡಿರೆಂದು, ದಿವ್ಯದರ್ಶಿಗಳಿಗೆ ನಿಮಗೆ ದರ್ಶನವಾಗದಿರಲೆನ್ನು ತ್ತಾರೆ. ಪ್ರವಾದಿಗಳಿಗೆ--ನಮಗೆ ನ್ಯಾಯವಾದವು ಗಳನ್ನು ಪ್ರವಾದಿಸಬೇಡಿರಿ ನಯವಾದವುಗಳನ್ನೇ ನುಡಿ ಯಿರಿ, ಮೋಸವಾದವುಗಳನ್ನೆ ಪ್ರವಾದಿಸಿರಿ ಅನ್ನು ತ್ತಾರೆ.
11 ನಿಮ್ಮ ದಾರಿಗೆ ಓರೆಯಾಗಿರಿ, ಮಾರ್ಗ ದಿಂದ ತೊಲಗಿರಿ; ಇಸ್ರಾಯೇಲ್ಯರ ಪರಿಶುದ್ಧನನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ ಎಂದು ಹೇಳುತ್ತಾರೆ.
12 ಆದಕಾರಣ ಇಸ್ರಾಯೇಲ್ಯರ ಪರಿ ಶುದ್ಧನು ಹೇಳುವದೇನಂದರೆ--
13 ನೀವು ಈ ಮಾತನ್ನು ತಿರಸ್ಕಾರ ಮಾಡಿ ಬಲತ್ಕಾರ, ಕುಯುಕ್ತಿಗಳನ್ನು ನಂಬಿ ಅವುಗಳನ್ನೇ ಆಧಾರಮಾಡಿಕೊಂಡದ್ದರಿಂದ ಎತ್ತರ ವಾದ ಗೋಡೆಯ ಒಂದು ಭಾಗವು ಉಬ್ಬಿಕೊಂಡು ತಟ್ಟನೆ ಕ್ಷಣಮಾತ್ರದಲ್ಲಿ ಕಳಚಿಬೀಳುವ ಹಾಗೆ ನಿಮ್ಮ ಅಪರಾಧವು ನಿಮಗೆ ಅಪಾಯಕರವಾಗಿರುವದು.
14 ಉರಿಯಿಂದ ಕೆಂಡವನ್ನು ತೆಗೆಯುವದಕ್ಕಾಗಲಿ ಬಾವಿಯಿಂದ ನೀರನ್ನು ತೆಗೆಯುವದಕ್ಕಾಗಲಿ ಬೋಕಿ ಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.
15 ಇಸ್ರಾಯೇಲಿನ ಪರಿಶುದ್ಧ ಕರ್ತನಾದ ದೇವರು ಹೇಳುವದೇನೆಂದರೆ--ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗು ವದು. ಶಾಂತರಾಗಿ ಭರವಸದಿಂದಿರುವದೇ ನಿಮಗೆ ಬಲ ಎಂದು ಹೇಳಿದ್ದರೂ ನೀವು ಒಪ್ಪಿಕೊಂಡಿಲ್ಲ.
16 ಆದರೆ ನೀವು ಬೇಡವೇ ಬೇಡ, ನಾವು ಕುದುರೆಗಳ ಮೇಲೆ ಓಡುವೆವು ಅಂದುಕೊಂಡಿದ್ದರಿಂದ ನೀವು ಓಡೇ ಹೋಗುವಿರಿ, ಮತ್ತು--ನಾವು ವೇಗವಾಗಿ ಸವಾರಿ ಮಾಡುವೆವು ಅಂದುಕೊಂಡದ್ದರಿಂದ ಆ ವೇಗ ಗಳೇ ನಿಮ್ಮನ್ನು ಅಟ್ಟಿಬಿಡುವವು.
17 ಒಬ್ಬನ ಬೆದರಿ ಕೆಗೆ ಸಾವಿರ ಜನರು ಓಡುವರು; ಐವರು ಹೆದರಿಸು ವದರಿಂದ ನೀವು ಓಡಿಹೋಗುವಿರಿ; ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಣ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.
18 ಹೀಗಿರಲು ಕರ್ತನು ನಿಮಗೆ ಕೃಪೆಯನ್ನು ತೋರಿಸ ಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು. ಕರ್ತನು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
19 ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ, ನೀವು ಇನ್ನು ಅಳು ವದೇ ಇಲ್ಲ. ನೀವು ಕೂಗಿಕೊಂಡ ಶಬ್ದವನ್ನು ಆತನು ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವನು. ಆತನು ಅದನ್ನು ಕೇಳಿದಾಗಲೇ ಸದುತ್ತರವನ್ನು ದಯಪಾಲಿಸು ವನು.
20 ಕರ್ತನು ನಿಮಗೆ ಕಷ್ಟವನ್ನು, ಶ್ರಮೆಯನ್ನು, ಅನ್ನಪಾನಗಳನ್ನಾಗಿ ಕೊಟ್ಟರೂ ಇನ್ನೂ ನಿಮ್ಮ ಬೋಧಕರು ತಮ್ಮನ್ನು ಮರೆಮಾಡಿಕೊಳ್ಳುವದಿಲ್ಲ. ಆದರೆ ನಿಮ್ಮ ಕಣ್ಣುಗಳು ನಿಮ್ಮ ಬೋಧಕನನ್ನು ನೋಡು ತ್ತಿರುವವು.
21 ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿ ಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.
22 ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನು ಎರಕದ ನಿಮ್ಮ ವಿಗ್ರಹಗಳ ಬಂಗಾರದ ಹೊದಿಕೆಯನ್ನು ನೀವು ಹೊಲಸುಮಾಡಿ ಆ ವಿಗ್ರಹಕ್ಕೆ ತೊಲಗಿಹೋಗಿರಿ ಎಂದು ಹೊಲೆಯ ಬಟ್ಟೆಯಂತೆ ಬಿಸಾಡಿಬಿಡುವಿರಿ.
23 ಆಗ ನೀವು ಹೊಲದಲ್ಲಿ ಬೀಜ ಬಿತ್ತುವದಕ್ಕೆ ಬಿತ್ತನೆಯ ಮಳೆಯನ್ನು ದಯಪಾಲಿಸು ವೆನು. ಭೂಮಿಯ ಬೆಳೆಯಿಂದ ಸಾರವಾದ ಆಹಾರ ವನ್ನು ಸಮೃದ್ಧಿಯಾಗಿ ಒದಗಿಸುವೆನು. ಆ ದಿನದಲ್ಲಿ ನಿನ್ನ ದನಗಳು ವಿಸ್ತಾರವಾದ ಸ್ಥಳದಲ್ಲಿ ಮೇಯುವವು.
24 ಹೊಲ ಉಳುವ ಎತ್ತುಗಳು, ಪ್ರಾಯದ ಕತ್ತೆಗಳು, ಮರದಿಂದಲೂ ಕವೇ ಕೋಲಿನಿಂದಲೂ ತೂರಿದ ಮೇವನ್ನು ತಿನ್ನುವವು.
25 ಮಹಾಸಂಹಾರದ ದಿವಸ ದಲ್ಲಿ ಗೋಪುರಗಳು ಬೀಳುವಾಗ ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ ಪ್ರತಿಯೊಂದು ಎತ್ತರವಾದ ಗುಡ್ಡದಲ್ಲಿಯೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುತ್ತಿರುವವು.
26 ಇಷ್ಟೇ ಅಲ್ಲದೆ ಕರ್ತನು ತನ್ನ ಜನರ ವ್ರಣವನ್ನು ಕಟ್ಟಿ ಅವರ ಪೆಟ್ಟಿನಗಾಯವನ್ನು ವಾಸಿಮಾಡುವ ದಿನದಲ್ಲಿ ಚಂದ್ರನ ಬೆಳಕು ಸೂರ್ಯನ ಬೆಳಕಿನ ಹಾಗೆಯೂ ಮತ್ತು ಸೂರ್ಯನ ಬೆಳಕು ಏಳರಷ್ಟು ಹೆಚ್ಚಾಗಿ ಏಳು ದಿನಗಳ ಬೆಳಕಿ ನಂತಾಗುವದು.
27 ಇಗೋ, ಕರ್ತನ ನಾಮವು ದೂರದಿಂದ ಬರು ತ್ತದೆ. ಆತನ ಕೋಪವು ಉರಿಯುತ್ತದೆ. ಅದರಿಂದೇ ಳುವ ಉರಿಯು ದಟ್ಟವಾಗಿದೆ. ಆತನ ತುಟಿಗಳು ರೋಷದಿಂದ ತುಂಬಿವೆ. ನಾಲಿಗೆಯು ದಹಿಸುವ ಅಗ್ನಿ ಯಂತಿದೆ.
28 ಆತನ ಶ್ವಾಸವು ತುಂಬಿ ತುಳುಕಿ ಕಂಠದ ವರೆಗೂ ಏರುವ ತೊರೆಯಂತಿದೆ; ಜನಾಂಗಗಳನ್ನು ಏನೂ ಉಳಿಸದ ಜಲ್ಲಡಿಯಿಂದ ಜಾಲಿಸುವದಕ್ಕೆ ಬರು ತ್ತಾನೆ; ದಾರಿತಪ್ಪಿಸುವ ಕಡಿವಾಣವು ಜನಗಳ ದವಡೆ ಗಳಲ್ಲಿರುವದು.
29 ಪರಿಶುದ್ಧ ಹಬ್ಬವನ್ನು ಆಚರಿಸುವ ರಾತ್ರಿಯಲ್ಲಿ ಹೇಗೋ ಹಾಗೆ ನಿಮಗೆ ಹಾಡುವಿರಿ; ಕರ್ತನ ಪರ್ವತಕ್ಕೆ ಇಸ್ರಾಯೇಲಿನ ಬಂಡೆಯ ಬಳಿಗೆ ಬರುವದಕ್ಕೆ ಕೊಳಲಿನ ಸಂಗಡ ಹೋಗುವ ಪ್ರಕಾರ ಹೃದಯದ ಸಂತೋಷವಿರುವದು.
30 ಆಗ ಕರ್ತನು ತನ್ನ ಗಂಭೀರವಾದ ಸ್ವರವನ್ನು ಕೇಳಮಾಡಿ ತೀವ್ರ ಕೋಪ, ಕಬಳಿಸುವ ಅಗ್ನಿಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿ ಸುವನು.
31 ಕರ್ತನು ದಂಡದಿಂದ ದಂಡಿಸುವಾಗ ಅಶ್ಶೂರ್ಯವು ಆತನ ಸ್ವರದಿಂದಲೇ ಮುರಿದುಹೋಗು ವದು.
32 ಕರ್ತನು ಅದರ ಮೇಲೆ ತರುವದಕ್ಕೆ ನೇಮಿ ಸಿದ ದಂಡವು ಹಾದುಹೋಗುವಲ್ಲೆಲ್ಲಾ ಅದು ದಮ್ಮಡಿ ಕಿನ್ನರಿಗಳ ಸಂಗಡ ಇರುವದು; ಆತನು ಗದ್ದಲವುಳ್ಳ ಯುದ್ಧಗಳಲ್ಲಿ ಅದರ ಸಂಗಡ ಯುದ್ಧಮಾಡುವನು.
33 ಪೂರ್ವದಿಂದ (ಪುರಾತನದಿಂದ) ತೋಫೆತ್‌ ಸಿದ್ಧ ವಾಗಿದೆ; ಹೌದು, ಯಾಕಂದರೆ ಅದು ಆಳವಾಗಿಯೂ ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಅಗ್ನಿಕುಂಡವು ಬೆಂಕಿಯೂ ಬಹಳ ಕಟ್ಟಿಗೆಯೂ ಉಳ್ಳದ್ದು; ಕರ್ತನ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವದು.
ಅಧ್ಯಾಯ 31

1 1 ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವ ಬಲವನ್ನು ರಥವನ್ನು ಆಶ್ರಯಿಸುವವರಿಗೆ ಅಯ್ಯೊ! ರಥಗಳು ಬಹಳವೆಂದೂ ಸವಾರರು ಬಹು ಬಲಿಷ್ಠರೆಂದೂ ಅವರ ಮೇಲೆ ಭರವಸವಿಡುತ್ತಾರೆ. ಆದರೆ ಇಸ್ರಾಯೇಲಿನ ಪರಿಶುದ್ಧನ ಮೇಲೆ ದೃಷ್ಟಿ ಇಡುವದಿಲ್ಲ; ಇಲ್ಲವೆ ಕರ್ತನನ್ನು ಆಶ್ರಯಿಸು (ಹುಡು ಕು)ವದಿಲ್ಲ.
2 ಆದಾಗ್ಯೂ ಆತನು ಜ್ಞಾನಿಯಾಗಿದ್ದಾನೆ ತನ್ನ ಮಾತನ್ನು ಹಿಂತೆಗೆಯದೆ ಕೇಡನ್ನು ಬರಮಾಡು ವನು; ಆದರೆ ಕೆಡುಕರ ಮನೆತನಕ್ಕೂ ಅನ್ಯಾಯಗಾ ರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.
3 ಐಗು ಪ್ತ್ಯರು ಮನುಷ್ಯಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಆತ್ಮವಲ್ಲ, ಮಾಂಸಮಯವೇ; ಹೀಗಿರುವದ ರಿಂದ ಕರ್ತನು ತನ್ನ ಕೈಚಾಚುವಾಗ ಸಹಾಯ ಮಾಡಿ ದವನು ಮತ್ತು ಸಹಾಯಪಡೆದವನೂ ಬಿದ್ದುಹೋಗು ವನು, ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
4 ಕರ್ತನು ನನಗೆ ಹೀಗೆ ಹೇಳಿದ್ದಾನೆ -- ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರು ಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವದೋ ಹಾಗೆಯೇ ಸೈನ್ಯಗಳ ಕರ್ತನು ಚೀಯೋನ್‌ ಪರ್ವತ ಕ್ಕೋಸ್ಕರವೂ ಅದರ ಗುಡ್ಡಕ್ಕೋಸ್ಕರವೂ ಯುದ್ಧ ಮಾಡಲು ಇಳಿದು ಬರುವನು.
5 ಹಾರುವ ಪಕ್ಷಿಗಳಂತೆ ಸೈನ್ಯಗಳ ಕರ್ತನು ಯೆರೂಸಲೇಮನ್ನು ಕಾಪಾಡುವನು; ಅದನ್ನು ರಕ್ಷಿಸಿ ಕಾಯುವನು. ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವನು.
6 ಇಸ್ರಾಯೇಲ್ಯರೇ, ನೀವು ಯಾರಿಗೆ ಅಗಾಧ ದ್ರೋಹವನ್ನು ಮಾಡಿದ್ದೀರೋ ಆತನ ಕಡೆಗೆ ತಿರುಗಿ ಕೊಳ್ಳಿರಿ.
7 ನೀವು ನಿಮ್ಮ ಸ್ವಂತ ಕೈಗಳಿಂದ ಪಾಪಕ್ಕೋ ಸ್ಕರ ಮಾಡಿದ ಬೆಳ್ಳಿಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನು ಬಿಸಾಡಿಬಿಡುವನು.
8 ಆಗ ಅಶ್ಶೂರ್ಯನು ಕತ್ತಿಯಿಂದ ಬೀಳುವನು, ಬಲಿಷ್ಟ ನಿಂದಲ್ಲ; ಅವನು ನುಂಗಲ್ಪಡುವನು, ಹೀನನ ಕತ್ತಿ ಯಿಂದಲ್ಲ; ಅವನು ಕತ್ತಿಯ ಕಡೆಯಿಂದ ಓಡುವನು, ಅವನ ಯೌವನಸ್ಥರು ಸೋಲಿಸಲ್ಪಡುವರು.
9 ಅವನು ಅಂಜಿಕೆಯಿಂದ ತನ್ನ ತ್ರಾಣಸ್ಥಾನಕ್ಕೆ ದಾಟಿಹೋಗು ವನು; ಅವನ ಪ್ರಧಾನರು ಧ್ವಜಕ್ಕೆ ಹೆದರಿಓಡು ವರು; ಚೀಯೋನಿನಲ್ಲಿ ಅಗ್ನಿಯನ್ನೂ ಯೆರೂಸಲೇಮಿ ನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಕರ್ತನ ನುಡಿ ಇದೇ.
ಅಧ್ಯಾಯ 32

1 ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯ ದಿಂದ ದೊರೆತನಮಾಡುವರು.
2 ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ ಬಿರುಗಾಳಿ ಗೋಸ್ಕರ ಮರೆಮಾಡಿಕೊಳ್ಳುವಂತೆಯೂ ಸ್ಥಾನದ ಹಾಗೂ ಒಣಗಿದ ಸ್ಥಳದಲ್ಲಿರುವ ನೀರಿನ ಕಾಲುವೆಗಳ ಹಾಗೂ ಆಯಾಸವುಳ್ಳ ದೇಶದಲ್ಲಿರುವ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು.
3 ಆಗ ನೋಡುವವರ ಕಣ್ಣುಗಳು ಮೊಬ್ಬಾಗವು, ಕೇಳುವವರ ಕಿವಿಗಳು ಮಂದವಾಗವು.
4 ಆತುರಗಾರರ ಹೃದಯವು ತಿಳುವಳಿಕೆಯನ್ನು ಗ್ರಹಿಸುವದು, ತೊದಲು ಮಾತನಾ ಡುವವರ ನಾಲಿಗೆ ಸ್ವಚ್ಛವಾಗಿ ಮಾತಾಡುವದಕ್ಕೆ ಸಿದ್ಧ ವಾಗಿರುವದು.
5 ಇನ್ನು ಮೇಲೆ ನೀಚ ಮನುಷ್ಯನು ಘನವಂತನೆನಿಸಿಕೊಳ್ಳನು. ಇಲ್ಲವೆ ಜಿಪುಣನು ಉದಾರ ನೆಂದು ಹೇಳಲಾಗದು.
6 ನೀಚನು ನೀಚನಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾ ಸಿಸುವಂತೆಯೂ ಕರ್ತನಿಗೆ ವಿರೋಧವಾಗಿ ಸಂಪೂ ರ್ಣವಾಗಿ ತಪ್ಪಿಹೋಗುವವರಂತೆಯೂ ಹಸಿವೆ ಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
7 ಜಿಪುಣನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ ಅವನು ಬಡವ ರನ್ನು ಸುಳ್ಳು ಮಾತುಗಳಿಂದ ಕೆಡಿಸುವದಕ್ಕೆ ಕುಯುಕ್ತಿ (ದೋಷ)ಗಳನ್ನು ಕಲ್ಪಿಸುವನು.
8 ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
9 ನಿಶ್ಚಿಂತೆಯರಾದ ಹೆಂಗಸರೇ, ಏಳಿರಿ, ನನ್ನ ಸ್ವರ ವನ್ನು ಕೇಳಿರಿ, ಭಯವಿಲ್ಲದ ಹೆಣ್ಣುಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.
10 ನಿಶ್ಚಿಂತೆಯ ಸ್ತ್ರಿಯರೇ, ನೀವು ವರುಷದ ಮೇಲೆ ಹೆಚ್ಚಾದ ದಿವಸಗಳಲ್ಲಿ ಕಳವಳ ಪಡುವಿರಿ, ದ್ರಾಕ್ಷೇ ಕೊಯ್ಯುವ ಕಾಲ ಇಲ್ಲದೆ ಹೋಗುವದು; ಹಣ್ಣು ಕೂಡಿಸುವ ಕಾಲ ಬಾರದು.
11 ನಿಶ್ಚಿಂತೆಯುಳ್ಳ ಹೆಂಗಸರೇ, ನೀವು ನಡುಗಿರಿ, ನಿರ್ಭೀತರೇ ಕಳವಳಗೊಳ್ಳಿರಿ; ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣೀತಟ್ಟನ್ನು ಸುತ್ತಿಕೊಳ್ಳಿರಿ.
12 ಇಷ್ಟವಾದ ಹೊಲಗಳ ಮತ್ತು ಫಲ ವತ್ತಾದ ದ್ರಾಕ್ಷಾಲತೆಗಳ ನಿಮಿತ್ತ ಎದೆ ಬಡುಕೊಳ್ಳು ವರು.
13 ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು.
14 ಅರಮನೆಗಳು ಕೈಬಿಡಲ್ಪಡುವವು. (ವಿಸರ್ಜಿಸು ವವು) ಸಮೂಹಗಳಿಂದ ತುಂಬಿದ್ದ ಪಟ್ಟಣವು ನಿರ್ಜನ ವಾಗುವದು. ದುರ್ಗಗಳೂ ಕೋಟೆಗಳೂ ಯಾವಾ ಗಲೂ ಗುಹೆ (ಗವಿ)ಗಳಾಗಿಯೂ ಕಾಡುಕತ್ತೆಗಳಿಗೆ ಸಂತೋಷವಾಗಿಯೂ ಮಂದೆಗಳಿಗೆ ಮೇಯುವ ಸ್ಥಳವಾಗಿಯೂ ಇರುವವು.
15 ಬಳಿಕ ಉನ್ನತದಿಂದ ಆತ್ಮ ನಮ್ಮ ಮೇಲೆ ಸುರಿ ಸಲ್ಪಡುವಾಗ, ಆಗ ಅರಣ್ಯಗಳು ಪೈರಿನ ಹೊಲ ವಾಗುವದು. ಪೈರಿನ ಹೊಲವು ಅರಣ್ಯವೆಂದೆಣಿಸಲ್ಪ ಡುವದು.
16 ನ್ಯಾಯವು ಅರಣ್ಯದಲ್ಲಿಯೂ ನೆಲೆಗೊ ಳ್ಳುವದು. ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವದು.
17 ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು.
18 ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ ಭದ್ರವಾದ ಸ್ಥಾನಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
19 ಆದರೆ ಕಲ್ಮಳೆ ಸುರಿಯುವಾಗ ವನವು ಹಾಳಾಗು ವದು; ಪಟ್ಟಣವು ತಗ್ಗಾದ ಸ್ಥಳಕ್ಕೆ ತಗ್ಗಿಸಲ್ಪಡುವದು.
20 ಎಲ್ಲಾ ನೀರುಗಳ ಬಳಿಯಲ್ಲಿ ಬಿತ್ತುತ್ತಲೂ ಎತ್ತು ಕತ್ತೆಗಳನ್ನು (ಕಾವಲಿಗೆ) ಮೇಯ ಬಿಡುತ್ತಲೂ ಇರುವ ನೀವು ಧನ್ಯರೇ ಸರಿ.
ಅಧ್ಯಾಯ 33

1 ನಿನಗೆ ಅಯ್ಯೊ ಸೂರೆಯಾಗದಿದ್ದರೂ ನೀನು ಸೂರೆಮಾಡಿದಿ, ನಿನಗೆ ದ್ರೋಹ ಮಾಡದಿದ್ದರೂ ನೀನು ದ್ರೋಹ ಮಾಡಿದಿ, ನೀನು ಸೂರೆ ಮಾಡುವದನ್ನು ಮುಗಿಸಿದಾಗ ನೀನು ಸೂರೆ ಯಾಗುವಿ, ದ್ರೋಹ ಮಾಡುವುದನ್ನು ಬಿಟ್ಟ ಮೇಲೆ ನಿನಗೂ ದ್ರೋಹ ಮಾಡುವರು.
2 ಓ ಕರ್ತನೇ, ನಮ್ಮ ಕಡೆಗೆ ಕೃಪೆತೋರಿಸು, ನಿನಗೋಸ್ಕರ ನಾವು ಕಾದಿದ್ದೇವೆ. ಪ್ರತಿ ಮುಂಜಾನೆ ನಮಗೆ ಭುಜಬಲವಾಗಿ ಇಕ್ಕಟ್ಟಿನ ಕಾಲದಲ್ಲಿ ನಮ್ಮ ರಕ್ಷಣೆಯಾಗಿಯೂ ಇರು.
3 ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀನು ಏಳುವಾಗ ರಾಜ್ಯಗಳು ಚದರಿಹೋಗುತ್ತವೆ.
4 ನಿಮ್ಮ ಕೊಳ್ಳೆಯು ಕಂಬಳಿ ಹುಳವನ್ನು ಕೂಡಿಸುವ ಹಾಗೆ ಕೂಡಿಸಲ್ಪಡುವದು. ಮಿಡತೆಗಳು ಓಡಾಡುವ ಹಾಗೆ ಅದರ ಮೇಲೆ ಓಡಾಡುವರು.
5 ಕರ್ತನು ಉನ್ನತೋನ್ನತನಾಗಿದ್ದಾನೆ. ಆತನು ಮೇಲಿನ ಲೋಕ ದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿನ್ಯಾಯಗ ಳಿಂದ ತುಂಬಿಸಿದ್ದಾನೆ.
6 ನಿನ್ನ ಕಾಲದಲ್ಲಿ ಸ್ಥಿರತೆಯಾ ಗಿಯೂ ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾ ಗಿಯೂ ಇರುವನು; ಕರ್ತನ ಭಯವೇ ಅವನ ಬೊಕ್ಕಸವಾಗಿರುವದು.
7 ಇಗೋ, ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; ಸಮಾಧಾನದ ರಾಯಭಾರಿಗಳು ಘೋರ ವಾಗಿ ಅಳುತ್ತಿದ್ದಾರೆ.
8 ರಾಜಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ನಿಂತುಹೋದರು. ಅವನು ಒಪ್ಪಂದವನ್ನು ವಿಾರಿದ್ದಾನೆ. ಪಟ್ಟಣಗಳನ್ನು ತಿರಸ್ಕಾರಮಾಡಿ ಯಾವ ಮನುಷ್ಯನನ್ನು ಗಣನೆಗೆತಾ ರನು.
9 ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನ್‌ ನಾಚಿಕೆಪಟ್ಟು ಕಡಿದು ಬೀಳುವದು. ಶಾರೋನ್‌ ಬೆಂಗಾ ಡಾಗಿದೆ. ಬಾಷಾನ್‌ ಮತ್ತು ಕರ್ಮೆಲ್‌ ಹಣ್ಣುಗಳನ್ನು ಉದುರಿಸಿಬಿಟ್ಟಿವೆ.
10 ಕರ್ತನು ಹೀಗನ್ನುತ್ತಾನೆ--ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿ ಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು.
11 ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರು ವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗು ವದು.
12 ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳು ಕೊಂಪೆಗೆ ಬೆಂಕಿಹಚ್ಚಿದಂತಾಗು ವದು.
13 ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸವಿಾಪದಲ್ಲಿರುವವರೇ, ನನ್ನ ಪರಾಕ್ರಮ ವನ್ನು ತಿಳಿದುಕೊಳ್ಳಿರಿ.
14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯವು ಕಪಟಿಗಳನ್ನು ಆಶ್ಚರ್ಯಕ್ಕೊಳಗಾಗಿ--ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುವರು.
15 ನೀತಿಯಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈ ಒದರಿ ರಕ್ತಕ್ಕೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತ ಸ್ಥಳದಲ್ಲಿ ವಾಸಿಸುವನು.
16 ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿ ರುವವು. ರೊಟ್ಟಿಯು ಅವನಿಗೆ ಕೊಡಲ್ಪಡುವದು, ನೀರು ತಪ್ಪುವದಿಲ್ಲ.
17 ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವವು. ಅತಿವಿಸ್ತಾರವಾದ (ದೂರವಾಗಿರುವ) ದೇಶವನ್ನು ಕಣ್ಣು ತುಂಬಾ ನೋಡುವಿರಿ;
18 ಆಗ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ ಬರೆಯು ವವನು ಎಲ್ಲಿ? ಅಂಗೀಕರಿಸುವವನು ಎಲ್ಲಿ? ಬುರುಜು ಗಳನ್ನು (ಗೋಪುರಗಳನ್ನು) ಲೆಕ್ಕಮಾಡಿದವನು ಎಲ್ಲಿ ಎಂದು ಅಂದುಕೊಳ್ಳುವಿರಿ.
19 ನೀನು ಕೇಳಕೂಡದ ಹಾಗೆ ಕಠಿಣವಾದ ಭಾಷೆಯೂ ತಿಳಿಯಕೂಡದ ಹಾಗೆ ಅಪರೂಪವಾದ ಮಾತೂ ಆಡಿದ ಜನರನ್ನು ನೀನು ನೋಡದೆ ಇರುವಿ.
20 ನಮ್ಮ ಹಬ್ಬಗಳು ನಡೆಯುವ ಚೀಯೋನ್‌ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್‌ ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗ ಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ.
21 ಆದರೆ ಅಲ್ಲಿ ವಿಸ್ತಾರವಾದ ನದಿಗಳಂತೆ ಮತ್ತು ಪ್ರವಾಹಗ ಳಂತೆ ಮಹಿಮೆಯುಳ್ಳ ಕರ್ತನು ನಮಗೆ ಇರುವನು. ಅಲ್ಲಿ ಹುಟ್ಟುಗೋಲಿನ ದೋಣಿ ಹೋಗದು, ಘನ ನಾವೆಯು ಸಂಚರಿಸದು.
22 ಕರ್ತನು ನಮ್ಮ ನ್ಯಾಯಾ ಧಿಪತಿಯಾಗಿದ್ದಾನೆ, ಕರ್ತನು ನಮಗೆ ಆಜ್ಞೆ ಕೊಡು ವಾತನು, ಕರ್ತನೇ ನಮ್ಮ ರಾಜನು; ಆತನೇ ನಮ್ಮನ್ನು ರಕ್ಷಿಸುವನು.
23 ನಿನ್ನ ಹಗ್ಗಗಳು ಸಡಲಿ ಸ್ತಂಭದ ಪಾದ ವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು; ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವದಕ್ಕೆ ಆಸ್ಪದವಾ ಯಿತು. ಕುಂಟರೂ ಸುಲಿಗೆ ಮಾಡಿದರು.
24 ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು. ಅದರಲ್ಲಿ ವಾಸವಾಗಿರುವ ಜನರ ಅಕ್ರಮವು ಕ್ಷಮಿಸಲ್ಪಡುವದು.
ಅಧ್ಯಾಯ 34

1 ಜನಾಂಗಗಳೇ, ಕೇಳುವದಕ್ಕೆ ಹತ್ತಿರ ಬನ್ನಿರಿ; ಜನಗಳೇ ಕಿವಿಗೊಡಿರಿ, ಭೂಮಿ ಯೂ ಅದರಲ್ಲಿನ ಸಮಸ್ತವೂ ಲೋಕವೂ ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ.
2 ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ.
3 ಅವರಲ್ಲಿ ಕೊಂದುಹಾಕಲ್ಪಟ್ಟವರು ಬಿಸಾಡಲ್ಪಡು ವರು. ಅವರ ಹೆಣಗಳ ದುರ್ವಾಸನೆಯು ಮೇಲಕ್ಕೆ ಏರುವದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗಿಹೋಗುವವು.
4 ಆಕಾಶದ ಸೈನ್ಯವೆಲ್ಲಾ ಗತಿಸಿ ಹೋಗುವದು. ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವದು, ದ್ರಾಕ್ಷೆಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ ಅಂಜೂರ ಮರದಿಂದ ತರಗು ಉದುರುವ ಹಾಗೂ ಅವುಗಳ ಸೈನ್ಯವೆಲ್ಲಾ ಬಾಡಿ ಕೆಳಗೆ ಬೀಳುವದು.
5 ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು.
6 ಕರ್ತನ ಖಡ್ಗವು ರಕ್ತದಿಂದ ತುಂಬಿದೆ; ಅದು ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡದ ಕೊಬ್ಬಿ ನಿಂದಲೂ ಪುಷ್ಟಿಯಾಯಿತು; ಯಾಕಂದರೆ ಕರ್ತನು ಬೊಚ್ರದಲ್ಲಿ ಬಲಿಯನ್ನೂ ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯನ್ನೂ ಉಂಟು ಮಾಡಿದ್ದಾನೆ.
7 ಕಾಡು ಕೋಣಗಳು ಅವುಗಳ ಸಂಗಡಲೂ ಎತ್ತುಗಳು ಹೋರಿ ಗಳ ಸಂಗಡಲೂ ಬೀಳುವವು; ಅವರ ದೇಶವು ರಕ್ತ ದಿಂದ ನೆನೆಯುವದು, ಅವರ ಧೂಳು ಕೊಬ್ಬಿನಿಂದ ಪುಷ್ಟಿಯಾಗುವದು--
8 ಏಕಂದರೆ ಅದು ಕರ್ತನು ಮುಯ್ಯಿ ತೀರಿಸುವ ದಿನವಾಗಿದೆ; ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ.
9 ಪ್ರವಾಹಗಳು ಇಳಿಜಾರಾಗಿ ಮಾರ್ಪಡುವದೂ; ಅದರ ದೂಳು ಗಂಧಕವಾಗುವದು; ದೇಶವು ಉರಿ ಯುವ ಇಳಿಜಾರು ಪ್ರದೇಶವಾಗುವದು.
10 ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರು ವದಿಲ್ಲ; ಅದರ ಹೊಗೆಯು ನಿರಂತರವಾಗಿ ಏಳುತ್ತಿರು ವದು; ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರು ವದು; ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು.
11 ಆದರೆ ಬಕ ಪಕ್ಷಿಯು ಮತ್ತು ಮುಳ್ಳು ಹಂದಿಯು ಅದನ್ನು ಆವರಿಸಿಕೊಳ್ಳುವವು; ಗೂಬೆ ಮತ್ತು ಕಾಗೆಗಳು ಸಹ ಅಲ್ಲಿ ವಾಸಿಸುವವು; ಗಲಿಬಿಲಿ ಯೆಂಬ ನೂಲನ್ನು ಶೂನ್ಯವೆಂಬ ಗಟ್ಟಿ ತೂಕವನ್ನು ಆತನು ಅದರ ಮೇಲೆ ಎಳೆಯುವನು.
12 ಅವರ ರಾಜ್ಯಕ್ಕೆ ಪ್ರಮುಖರನ್ನು ಕರೆಯುವರು; ಆದರೆ ಅಲ್ಲಿ ಯಾರೂ ಇರುವದಿಲ್ಲ; (ಅದರ) ಅವಳ ಪ್ರಭುಗಳು ಇಲ್ಲದಂತಾಗುವರು.
13 ಅವಳ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವವು; ಅವಳ ಕೋಟೆಗಳಲ್ಲಿ ತುರುಚಿಯೂ ದತ್ತೂರಿಯೂ ಇರುವವು; ಅದು (ಉಷ್ಟ್ರ ಪಕ್ಷಿಗಳ) ಸರ್ಪಗಳ ನಿವಾಸವೂ ಗೂಬೆಗಳಿಗೆ ಸ್ಥಾನವೂ ಆಗುವದು.
14 ಮರುಭೂಮಿಯ ಕಾಡು ಮೃಗಗಳು ಸಹ ದ್ವೀಪದ ಕಾಡುಮೃಗಗಳೊಂದಿಗೆ ಸಂಧಿಸುವವು; ದೆವ್ವವು ತನ್ನ ಜೊತೆಯನ್ನು ಕೂಗು ವದು; ಅಲ್ಲಿ ಚೀರುಗೂಬೆಯು ಸಹ ವಿಶ್ರಮಿಸಿಕೊಂಡು ಉಪಶಮನ ಸ್ಥಳವನ್ನು ಕಂಡುಕೊಳ್ಳುವದು.
15 ದೊಡ್ಡ ಗೂಬೆಯು ಅಲ್ಲಿ ಗೂಡನ್ನು ಮಾಡಿಕೊಂಡು ಮೊಟ್ಟೆ ಯಿಟ್ಟು ಮರಿ ಮಾಡಿ ಅವುಗಳನ್ನು ತನ್ನ ನೆರಳಿನಲ್ಲಿ ಕೂಡಿಸುವದು; ಅಲ್ಲಿ ಹದ್ದುಗಳಲ್ಲಿ ಪ್ರತಿಯೊಂದು ತಮ್ಮ ಜೊತೆಜೊತೆಯಾಗಿ ಕೂಡಿಕೊಳ್ಳುವವು.
16 ಕರ್ತನ ಪುಸ್ತಕದಲ್ಲಿ ನೀವು ಹುಡುಕಿ ಓದಿರಿ; ಇವು ಗಳಲ್ಲಿ ಒಂದಾದರೂ ತಪ್ಪದು, ಜೊತೆಯಿಲ್ಲದೆ ಒಂದೂ ಇಲ್ಲ; ನನ್ನ ಬಾಯಿಯೇ ಅದನ್ನು ಆಜ್ಞಾಪಿ ಸಿತು; ಆತನ ಆತ್ಮವೇ ಅವುಗಳನ್ನು ಒಟ್ಟುಗೂಡಿಸಿತು
17 ಆತನೇ ಅವುಗಳಿಗೋಸ್ಕರ ಚೀಟು ಹಾಕಿದ್ದಾನೆ, ಆತನ ಕೈಯೇ ಅದನ್ನು ಗೆರೆ ಎಳೆದು ಅವರಿಗೆ ಹಂಚಿ ಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿ ಕೊಳ್ಳುವವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು.
ಅಧ್ಯಾಯ 35

1 ಅರಣ್ಯವು ನಿರ್ಜನ ಪ್ರದೇಶವು ಆನಂದವಾಗಿರುವವು ಮರುಭೂಮಿಯು ಹರ್ಷಿಸಿ ಗುಲಾಬಿಯಂತೆ ಅರಳುವದು.
2 ಅದು ಸಮೃದ್ಧಿಯಾಗಿ ಅರಳಿ ಆನಂದ ಸ್ವರವನ್ನೆತ್ತಿ ಉಲ್ಲಾಸಿಸುವದು. ಲೆಬ ನೋನಿನ ಘನತೆಯು ಕರ್ಮೆಲ್‌ ಮತ್ತು ಶಾರೋ ನಿನ ಗೌರವವು ಅದಕ್ಕೆ ಕೊಡಲ್ಪಡುವದು, ಅವರು ಕರ್ತನ ಮಹಿಮೆಯನ್ನೂ ನಮ್ಮ ದೇವರ ಘನತೆ ಯನ್ನೂ ನೋಡುವರು.
3 ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ ನಿತ್ರಾಣವಾದ ಮೊಣಕಾಲುಗಳನ್ನು ದೃಢಪಡಿಸಿರಿ.
4 ಭಯಭ್ರಾಂತ ಹೃದಯವುಳ್ಳವರಿಗೆ--ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವದಕ್ಕೂ ಪ್ರತಿಫಲವನ್ನು ಕೊಡುವದಕ್ಕೂ ಆತನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಅವರಿಗೆ ಹೇಳಿರಿ.
5 ಆಗ ಕುರುಡರ ಕಣ್ಣುಗಳು ತೆರೆಯಲ್ಪಡು ವವು, ಕಿವುಡರ ಕಿವಿಗಳು ಕೇಳುವವು.
6 ಕುಂಟನು ಜಿಂಕೆಯಂತೆ ಹಾರುವನು ಮೂಕನ ನಾಲಿಗೆ ಹಾಡು ವದು; ಅರಣ್ಯದಲ್ಲಿ ನೀರೂ ಮರುಭೂಮಿಯಲ್ಲಿ ಒರ ತೆಗಳೂ ಒಡೆಯುವವು.
7 ಒಣನೆಲವು ಕೊಳವಾಗು ವದು; ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗು ವದು. ಸರ್ಪಗಳು ವಾಸಿಸುವ ಮಲಗುವ ಪ್ರತಿ ಯೊಂದು ಸ್ಥಳವು ಹುಲ್ಲು, ಜೊಂಡುಗಳಿಂದ ತುಂಬಿ ರುವದು.
8 ಅಲ್ಲಿ ರಾಜ ಮಾರ್ಗವಿರುವದು, ಅದು ಪರಿಶುದ್ಧ ಮಾರ್ಗವೆನಿಸಿಕೊಳ್ಳುವದು; ಯಾವ ಅಶು ದ್ಧನು ಅದರ ಮೇಲೆ ಹಾದುಹೋಗನು; ಅವರಿಗೋ ಸ್ಕರವೇ ಇರುವದು; ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.
9 ಸಿಂಹವು ಅಲ್ಲಿ ಇರದು ಇಲ್ಲವೆ ಕ್ರೂರ ವಾದ ಮೃಗಗಳು ಅದರ ಮೇಲೆ ಹೋಗವು, ಅವು ಅಲ್ಲಿ ಕಾಣುವದೇ ಇಲ್ಲ; ಬಿಡುಗಡೆಯಾದವರೇ ಅಲ್ಲಿ ನಡೆಯುವರು.
10 ಕರ್ತನಿಂದ ವಿಮೋಚಿಸಲ್ಪಟ್ಟವರು ಹಿಂತಿರುಗಿಕೊಂಡು ತಮ್ಮ ತಲೆಗಳ ಮೇಲೆ ಉತ್ಸಾಹಧ್ವನಿ ನಿತ್ಯವಾದ ಸಂತೋಷಗಳೊಂದಿಗೆ ಚೀಯೋನಿಗೆ ಬರು ವರು; ಅವರು ಹರ್ಷಾನಂದಗಳನ್ನು ಅನುಭವಿಸು ವರು. ದುಃಖವೂ, ನಿಟ್ಟುಸಿರೂ ಓಡಿಹೋಗುವವು.
ಅಧ್ಯಾಯ 36

1 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರದ ಅರಸ ನಾದ ಸನ್ಹೇರೀಬನು ಬಂದು ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
2 ಆಗ ಅಶ್ಶೂರದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದ ಸಂಗಡ ರಬ್ಷಾಕನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಮೇಲಿನ ಕೆರೆಯ ಕಾಲುವೆಯ ಸವಿಾಪದಲ್ಲಿ ಅಗಸರ ಹೊಲದ ರಾಜಮಾರ್ಗದಲ್ಲಿ ನಿಂತುಕೊಂಡನು.
3 ಆಗ ಮನೆಯ ವಿಚಾರಕನಾದ ಹಿಲ್ಕೀಯನ ಮಗನಾದ ಎಲ್ಯಾಕೀ ಮನು, ಲೇಖಕನಾದ ಶೆಬ್ನ, ದಾಖಲೆಗಾರನಾದ ಆಸಾ ಫನ ಮಗನಾಗಿದ್ದ ಯೋವ ಎಂಬವರು ಬಂದರು.
4 ರಬ್ಷಾಕನು ಅವರಿಗೆ--ನೀವು ಅಶ್ಶೂರಿನ ಅರಸನಾದ ಮಹಾರಾಜನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿ ಸಿರಿ--ಈ ನಿನ್ನ ಭರವಸಕ್ಕೆ ಯಾವ ಆಧಾರವುಂಟು?
5 ಯುದ್ಧಕ್ಕೆ ಬೇಕಾದ ಆಲೋಚನೆಯೂ ಪರಾಕ್ರಮವೂ ನನಗೆ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿ ಕೊಂಡು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಿ?
6 ಜಜ್ಜಿದ ದಂಡಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತಿಯಷ್ಟೆ; ಒಬ್ಬನು ಅಂತ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯೊಳಕ್ಕೆ ಹೋಗಿ ತಿವಿಯುತ್ತದೆ. ಐಗುಪ್ತದ ಅರಸ ನಾದ ಫರೋಹನು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳುವ ವರೆಲ್ಲರಿಗೆ ಹೀಗೆ ಇದ್ದಾನೆ.
7 ಆದರೆ ನೀನು ನಮ್ಮ ದೇವರಾದ ಕರ್ತನಲ್ಲಿ ನಂಬಿಕೆಯಿಟ್ಟಿದ್ದೇವೆಂದು ನನಗೆ ಹೇಳಿದರೆ ಹಿಜ್ಕೀಯನು ಇದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಬೇಕೆಂಬದಾಗಿ ಯೆಹೂ ದಕ್ಕೂ ಯೆರೂಸಲೇಮಿಗೂ ಆಜ್ಞಾಪಿಸಿ, ಹಿಜ್ಕೀಯನು ಯಾವನ ಪೂಜಾ ಸ್ಥಳಗಳನ್ನೂ ಯಜ್ಞವೇದಿಗಳನ್ನೂ ತೆಗೆದುಹಾಕಿದ್ದಾನೋ ಅವನೇ ಅಲ್ಲವೋ?
8 ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು.
9 ಇದಾಗದಿದ್ದರೆ ನನ್ನ ಯಜಮಾನನ ಸೇವಕ ರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯ ಮುಖವನ್ನು ಹೇಗೆ ತಿರುಗಿಸಿ ಬಿಡುವಿ? ಹೀಗಿರಲಾಗಿ ಕುದುರೆಗಳಿ ಗೋಸ್ಕರವೂ ರಾಹುತರಿಗೋಸ್ಕರವೂ ಐಗುಪ್ತದಲ್ಲಿ ನಂಬಿಕೊಳ್ಳುತ್ತೀ.
10 ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು.
11 ಆಗ ಎಲ್ಯಾಕೀಮ್‌, ಶೆಬ್ನ, ಯೋವ ಎಂಬವರು ರಬ್ಷಾಕೆಗೆ--ನೀನು ಮಾತನಾಡುವದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದದರಿಂದ ದಯ ವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಸಿರಿಯಾ ಭಾಷೆ ಯಲ್ಲಿ ಮಾತನಾಡು ಅದು ನಮಗೆ ತಿಳಿಯುತ್ತದೆ; ಯೆಹೂದ್ಯರ ಭಾಷೆಯಲ್ಲಿ ಮಾತನಾಡಬೇಡ ಎಂದು ಹೇಳಿದರು.
12 ಆದರೆ ರಬ್ಷಾಕೆಯು--ನನ್ನ ಯಜ ಮಾನನು ನಿಮ್ಮ ಸಂಗಡವಾಗಲಿ ನಿಮ್ಮ ಯಜಮಾ ನನ ಸಂಗಡವಾಗಲಿ ಈ ಮಾತುಗಳನ್ನು ಹೇಳುವ ದಕ್ಕೆ ಕಳುಹಿಸಿದನೋ? ತಮ್ಮ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕೆಂದು ಈ ಗೋಡೆಯ ಮೇಲೆ ಕೂತಿರುವ ಮನುಷ್ಯರ ಸಂಗಡ ಮಾತನಾಡಲು ಅವನು ನನ್ನನ್ನು ಕಳುಹಿಸಲಿಲ್ಲವೋ ಅಂದನು.
13 ಆಗ ರಬ್ಷಾಕನು ನಿಂತುಕೊಂಡು ಯೆಹೂ ದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನಂದರೆ--ಅಶ್ಶೂರಿನ ಅರಸನಾದ ಮಹಾ ರಾಜನ ಮಾತುಗಳನ್ನು ಕೇಳಿರಿ.
14 ಇವನು ನಿಮಗೆ--ಹಿಜ್ಕೀಯನು ನಿಮಗೆ ಮೋಸಮಾಡದಿರಲಿ, ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ.
15 ಇಲ್ಲವೇ ಕರ್ತನು ನಿಶ್ಚಯವಾಗಿ ನಮ್ಮನ್ನು ತಪ್ಪಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವದಿಲ್ಲ ಎಂದು ಹೇಳಿ ನೀವು ಕರ್ತನಲ್ಲಿ ಭರವಸೆ ಇಡುವಂತೆ ಮಾಡಿದರೂ;
16 ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ; ಅಶ್ಶೂರದ ಅರಸನು ಹೇಳುವದೇನಂದರೆ, ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಹೊರಗೆ ಬನ್ನಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಫಲಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವಿರಿ.
17 ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿ ಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು.
18 ಕರ್ತನು ನಮ್ಮನ್ನು ತಪ್ಪಿಸುವನು ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆ ಯಾಗಿರ್ರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಶ್ಶೂರದ ಅರಸನ ಕೈಯಿಂದ ಬಿಡಿಸಿದವೋ?
19 ಹಮಾತ್‌, ಅರ್ಪಾದ್‌, ಸೆಫರ್ವ ಯಿಮ್‌ನ ದೇವರುಗಳು ಎಲ್ಲಿ? ಅವು ಸಮಾರ್ಯವ ನ್ನಾದರೂ ನನ್ನ ಕೈಯಿಂದ ತಪ್ಪಿಸಿದವೋ?
20 ಈ ದೇಶಗಳ ಎಲ್ಲಾ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ ಕರ್ತನು ಯೆರೂಸಲೇಮನ್ನು ನನ್ನ ಕೈಯಿಂದ ಬಿಡಿಸು ವನೋ ಅನ್ನುತ್ತಾನೆ ಎಂದು ಹೇಳಿದನು.
21 ಅದರೆ ಅವರು ಅವನಿಗೆ ಒಂದು ಮಾತನ್ನಾದರೂ ಉತ್ತರ ಕೊಡದೆ ಸುಮ್ಮನಿದ್ದರು. ಯಾಕಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.
22 ಆಗ ಹಿಲ್ಕೀಯನ ಮಗನೂ ಮನೆಯ ಮೇಲ್ವಿಚಾರಕನೂ ಆಗಿದ್ದ ಎಲ್ಯಾಕೀಮನು ಮತ್ತು ಲೇಖಕನಾದ ಶೆಬ್ನ, ಆಸಾಫನ ಮಗನೂ ಬರೆಯುವವನೂ ಆದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದು ಕೊಂಡು ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.
ಅಧ್ಯಾಯ 37

1 ಇದಾದ ಮೇಲೆ ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ಅವನು ತನ್ನ ಬಟ್ಟೆಗ ಳನ್ನು ಹರಿದುಕೊಂಡು ಗೋಣೀತಟ್ಟಿನಿಂದ ಮುಚ್ಚಿ ಕೊಂಡು ಕರ್ತನ ಆಲಯಕ್ಕೆ ಹೋದನು.
2 ಇದಲ್ಲದೇ ಅವನು ಮನೆಯ ಮೇಲ್ವಿಚಾರಕನಾಗಿದ್ದ ಎಲ್ಯಾಕೀಮ್‌, ಲೇಖಕನಾದ ಶೆಬ್ನ, ಹಿರಿಯರಾದ ಯಾಜಕರು ಇವ ರನ್ನು ಕರೆಸಿ--ನೀವು ಗೋಣೀತಟ್ಟನ್ನು ಮುಚ್ಚಿಕೊಂಡು, ಆಮೋಚನ ಮಗನೂ ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿರಿ ಎಂದು ಹೇಳಿಕಳುಹಿ ಸಿದನು.
3 ಆಗ ಅವರು ಅವನಿಗೆ--ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ದೂಷಣೆಯಾಗಿಯೂ ಇದೆ. ಪ್ರಸವವೇದನೆಯ ಕಾಲವು ಬಂದದೆ, ಆದರೆ ಹೆರುವದಕ್ಕೆ ಬಲ ಸಾಲದು.
4 ನಿನ್ನ ದೇವರಾಗಿರುವ ಕರ್ತನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ಮಾತುಗಳನ್ನು ಕೇಳಿರುವನು; ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂ ಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿ ತೀರಿಸಾನು; ಆದದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಆತನನ್ನು ಪ್ರಾರ್ಥಿಸು ಎಂಬದಾಗಿ ಹಿಜ್ಕೀಯನು ಅನ್ನುತ್ತಾನೆ ಎಂದು ಹೇಳಿದರು.
5 ಅರಸ ನಾದ ಹಿಜ್ಕೀಯನ ಕಡೆಯಿಂದ ತನ್ನ ಬಳಿಗೆ ಬಂದ ಸೇವಕರಿಗೆ ಯೆಶಾಯನು--
6 ಅಶ್ಶೂರದ ಅರಸನ ಸೇವಕರು ನನ್ನನ್ನು ದೂಷಿಸಿದ ಮಾತುಗಳನ್ನು ನೀನು ಕೇಳಿದ್ದೀ; ಆದರೆ ನೀನು ಅವುಗಳಿಗೆ ಹೆದರಬೇಡ.
7 ಇಗೋ, ನಾನು ಅವನ ಮೇಲೆ ಒಂದು ವಿಪತ್ತನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು ಎಂಬ ಈ ಮಾತುಗಳನ್ನು ನಿಮ್ಮ ಯಜಮಾನರಿಗೆ ತಿಳಿಸಿರಿ ಎಂದು ಹೇಳಿದನು.
8 ಹೀಗೆ ರಬ್ಷಾಕನು ಹಿಂತಿರುಗಿ ಹೋಗುವಾಗ ದಾರಿ ಯಲ್ಲಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಹೋದನೆಂಬ ವರ್ತಮಾನ ಕೇಳಿ ಲಿಬ್ನಕ್ಕೆ ಹೋಗಿ ಅಲ್ಲಿ ಅವನನ್ನು ಕಂಡನು. ಆಗ ಅವನು ಆ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುತ್ತಾ ಇದ್ದನು.
9 ಅಷ್ಟ ರಲ್ಲಿ ಇಥಿಯೋಪ್ಯದ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೊರಟಿದ್ದಾ ನೆಂಬ ಸುದ್ದಿಯನ್ನು ಅಶ್ಶೂರದ ಅರಸನು ಕೇಳಿ--
10 ನೀನು ನಂಬುವ ದೇವರು, ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು;
11 ಇಗೋ, ಅಶ್ಶೂರದ ಅರಸರು ಎಲ್ಲಾ ದೇಶಗಳನ್ನು ಪೂರ್ಣವಾಗಿ ನಾಶ ಮಾಡಿದರೆಂದು ನೀನು ಕೇಳಿದಿಯಲ್ಲಾ; ಹೀಗಿದ್ದ ಮೇಲೆ ನೀನು ಬಿಡುಗಡೆಯಾಗುವಿಯೋ?
12 ನನ್ನ ಪಿತೃಗಳು ಗೋಜಾನ್‌, ಖಾರಾನ್‌, ರೆಚೆಫ್‌ ಎಂಬ ಪಟ್ಟಣ ಗಳನ್ನು ತೆಲಸ್ಸಾರ್‌ ಪ್ರಾಂತ್ಯದಲ್ಲಿರುವ ಏದೆನಿನ ಜನ ರನ್ನು ನಾಶಮಾಡುವದಕ್ಕೆ ಹೋದಾಗ ಜನಾಂಗಗಳ ದೇವರುಗಳು ಅವರನ್ನು ಬಿಡುಗಡೆ ಮಾಡಿದವೋ?
13 ಹಮಾತ್‌, ಅರ್ಪಾದ್‌, ಸೆಫರ್ವಯಿಮ್‌, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರೂ ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ ಎಂಬದಾಗಿ ಸೇವಕರನ್ನು ಹಿಜ್ಕೀಯನ ಬಳಿಗೆ ಕಳುಹಿಸಿದನು.
14 ಹಿಜ್ಕೀಯನು ಆ ಸೇವಕರ ಕೈಯಿಂದ ಪತ್ರವನ್ನು ತೆಗೆದುಕೊಂಡು ಅದನ್ನು ಓದಿದನು; ಹಿಜ್ಕೀಯನು ಕರ್ತನ ಆಲಯಕ್ಕೆ ಹೋಗಿ ಅದನ್ನು ಕರ್ತನ ಮುಂದೆ ತೆರೆದಿಟ್ಟು,
15 ಸೈನ್ಯಗಳ ಕರ್ತನೇ, ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾ ಯೇಲ್‌ ದೇವರೇ, ನೀನೇ, ನೀನೊಬ್ಬನೇ, ಎಲ್ಲಾ ಭೂರಾಜ್ಯಗಳ ದೇವರು.
16 ನೀನೇ ಭೂಮ್ಯಾಕಾಶಗಳನ್ನು ಉಂಟು ಮಾಡಿದವನು.
17 ಓ ಕರ್ತನೇ, ಕಿವಿಗೊಟ್ಟು ಕೇಳು; ಓ ಕರ್ತನೇ, ನಿನ್ನ ಕಣ್ಣುಗಳನ್ನು ತೆರೆದು ನೋಡು; ಸನ್ಹೇರೀಬನು ಜೀವವುಳ್ಳ ದೇವರನ್ನು ದೂಷಿಸಿ ಕಳುಹಿಸಿದ ಮಾತುಗಳನ್ನೆಲ್ಲಾ ಕೇಳು.
18 ಕರ್ತನೇ, ಅಶ್ಶೂರದ ಅರಸರು ಸಕಲ ಜನಾಂಗ ಗಳನ್ನೂ ದೇಶಗಳನ್ನೂ ಹಾಳುಮಾಡಿ, ಅವರ ದೇವತೆ ಗಳನ್ನು ಸಹ ಬೆಂಕಿಯಲ್ಲಿ ಹಾಕಿದ್ದು ನಿಜ.
19 ಅವು ದೇವರುಗಳಲ್ಲ, ಮರ, ಕಲ್ಲು, ಮನುಷ್ಯರ ಕೈ ಕೆಲಸ ಗಳೇ ಆದದರಿಂದಲೇ ಅವರು ಅವುಗಳನ್ನು ಹಾಳು ಮಾಡಿದರು.
20 ಹೀಗಿರುವದರಿಂದ ಓ ಕರ್ತನಾದ ನಮ್ಮ ದೇವರೇ, ನೀನೇ, ನೀನೊಬ್ಬನೇ ಕರ್ತನೆಂದು ಭೂಮಿಯ ಎಲ್ಲಾ ರಾಜ್ಯಗಳು ತಿಳಿದುಕೊಳ್ಳುವಂತೆ ಅವನ ಕೈಯಿಂದ ನಮ್ಮನ್ನು ರಕ್ಷಿಸು ಎಂದು ಹಿಜ್ಕೀಯನು ಕರ್ತನಿಗೆ ಪ್ರಾರ್ಥಿಸಿದನು.
21 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹವನ್ನು ಕೇಳಿ ಅವನನ್ನು ಕುರಿತು
22 ಇಸ್ರಾಯೇಲ್‌ ದೇವರಾದ ಕರ್ತನು ಹೇಳುವದೇ ನಂದರೆ--ಕನ್ನಿಕೆಯಾದ ಚೀಯೋನ್‌ ಕುಮಾರ್ತೆಯು ನಿನ್ನನ್ನು ತಿರಸ್ಕರಿಸಿ, ಪರಿಹಾಸ್ಯ ಮಾಡುತ್ತಾಳೆ; ಯೆರೂಸ ಲೇಮಿನ ಕುಮಾರ್ತೆಯು ನಿನ್ನ ಹಿಂದೆ ತಲೆಯನ್ನು ಅಲ್ಲಾಡಿಸುತ್ತಾಳೆ.
23 ನೀನು ಯಾರನ್ನು ನಿಂದಿಸಿ ದೂಷಿಸಿದ್ದೀ? ಯಾರಿಗೆ ವಿರೋಧವಾಗಿ ನಿನ್ನ ಸ್ವರವೆತ್ತಿ ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾ ಯೇಲಿನ ಪರಿಶುದ್ಧನಿಗಲ್ಲವೋ?
24 ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ--ನನ್ನ ರಥಸಮೂಹದೊಡನೆ ಪರ್ವತ ಶಿಖರಗಳನ್ನು ಹತ್ತಿದ್ದೇನೆ; ಲೆಬನೋನಿನ ಭಾಗಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು, ಶ್ರೇಷ್ಠವಾದ ತುರಾಯಿ ಮರಗಳನ್ನು ಕಡಿದುಬಿಟ್ಟಿದ್ದೇನೆ; ಅಂಚಿನ ಉನ್ನತವಾದ ಸ್ಥಳವನ್ನೂ ಮತ್ತು ಅದರ ಕರ್ಮೇಲಿನ ಅಡವಿಯನ್ನೂ ಪ್ರವೇಶಿಸಿದ್ದೇನೆ;
25 ನಾನೇ ಅಗೆದು ನೀರನ್ನು ಕುಡಿದಿದ್ದೇನೆ; ನನ್ನ ಅಂಗಾಲಿನಿಂದ ಐಗು ಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ ಎಂಬದಾಗಿ ನೀನು ಹೇಳಿದ್ದೀ.
26 ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದ್ದನ್ನು ನೀನು ಕೇಳಿಲ್ಲವೋ? ಈಗ ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ನೆರವೇರಿ ಸಿದ್ದೇನೆ. ಆದದರಿಂದಲೇ ಕೋಟೆಗಳುಳ್ಳ ಪಟ್ಟಣ ಗಳನ್ನು ಹಾಳು ದಿಬ್ಬಗಳನ್ನಾಗಿ ಮಾಡುವದು ನಿನಗೆ ಸಾಧ್ಯವಾಯಿತು;
27 ಆದದರಿಂದ ಅವುಗಳ ನಿವಾಸಿ ಗಳು ಬಲವಿಲ್ಲದವರಾಗಿ ಆಶಾಭಂಗ ಪಟ್ಟು ಕಳವಳ ಗೊಂಡರು; ಅವರು ಹೊಲದ ಹುಲ್ಲಿನಂತೆಯೂ ಹಸಿರು ಎಲೆಯಂತೆಯೂ ಮಾಳಿಗೆಯ ಮೇಲಿನ ಹುಲ್ಲಿನಂತೆಯೂ ಹೊಡೆಯುವದಕ್ಕಿಂತ ಮೊದಲೇ ಬಾಡಿಹೋಗುವ ಪೈರಿನಂತೆಯೂ ಇದ್ದರು.
28 ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು.
29 ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ.
30 ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನು ಎರಡನೇ ವರ್ಷದಲ್ಲಿ ಆದರಿಂದ ಮೊಳೆತದ್ದನ್ನು ತಿನ್ನುವಿರಿ. ಮೂರನೇ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ; ದ್ರಾಕ್ಷೇ ತೋಟವನ್ನು ನೆಟ್ಟು ಅವುಗಳ ಫಲವನ್ನು ತಿನ್ನುವದೇ ನಿಮಗೆ ಗುರುತಾಗಿ ರುವದು.
31 ಯೆಹೂದನ ಮನೆತನದಿಂದ ತಪ್ಪಿಸಿ ಕೊಂಡು ಉಳಿದವರು ತಿರುಗಿ ಕೆಳಗೆ ಬೇರೂರಿ ಮೇಲಕ್ಕೆ ಫಲಫಲಿಸುವರು.
32 ಯೆರೂಸಲೇಮಿನಿಂದ ಉಳಿದ ವರು ಮತ್ತು ಚೀಯೋನ್‌ ಪರ್ವತದಿಂದ ತಪ್ಪಿಸಿ ಕೊಂಡವರು; ಹೊರಡುವರು ಇದನ್ನು ಸೈನ್ಯಗಳ ಕರ್ತನ ಆಸಕ್ತಿಯು ಮಾಡುವದು.
33 ಆದದರಿಂದ ಕರ್ತನು ಅಶ್ಶೂರದ ಅರಸನ ವಿಷಯವಾಗಿ ಹೇಳುವ ದೇನಂದರೆ ಅವನು ಈ ಪಟ್ಟಣಕ್ಕೆ ಬರಲಾರನು ಬಾಣವನ್ನು ಎಸೆಯನು, ಇಲ್ಲವೇ ಅದರ ಮುಂದೆ ಗುರಾಣಿಯೊಂದಿಗೆ ಬರಲಾರನು ಇಲ್ಲವೆ ಅದಕ್ಕೆ ವಿರೋಧವಾಗಿ ಮಣ್ಣಿನ ದಿಬ್ಬವನ್ನು ಹಾಕುವದಿಲ್ಲ.
34 ಅವನು ಬಂದ ದಾರಿಯಿಂದಲೇ ಹಿಂತಿರುಗಿ ಹೋಗುವನು ಈ ಪಟ್ಟಣಕ್ಕೆ ಬರುವದೇ ಇಲ್ಲ.
35 ಈ ಪಟ್ಟಣವನ್ನು ನನಗಾಗಿಯೂ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಕಾಪಾಡು ವೆನು ಎಂದು ಕರ್ತನು ಹೇಳುತ್ತಾನೆ.
36 ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.
37 ಆಗ ಅಶ್ಶೂರದ ಅರಸನಾದ ಸನ್ಹೇರೀಬನು ಹಿಂತಿರುಗಿ ನಿನವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿ ದನು.
38 ತರುವಾಯ ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಪೂಜಿಸುತ್ತಿದ್ದಾಗ ಅದ್ರಮ್ಮೆ ಲೆಕ್‌, ಸರೆಚೆರ್‌ ಎಂಬ ಅವನ ಮಕ್ಕಳು ಅವ ನನ್ನು ಕತ್ತಿಯಿಂದ ಹೊಡೆದು ಅರರಾಟ್‌ ದೇಶಕ್ಕೆ ತಪ್ಪಿಸಿ ಕೊಂಡು ಹೋದರು; ಅವನಿಗೆ ಬದಲಾಗಿ ಅವನ ಮಗನಾದ ಏಸರ್‌ಹದ್ದೋನನು ಆಳಿದನು.
ಅಧ್ಯಾಯ 38

1 ಆ ಕಾಲದಲ್ಲಿ ಹಿಜ್ಕೀಯನು ರೋಗಿಯಾಗಿ ಸಾಯುವದಕ್ಕಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ--ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆ ಮಾಡಿಕೋ; ಯಾಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಹೇಳಿದನು.
2 ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ--
3 ಓ ಕರ್ತನೇ, ನಾನು ನಿನ್ನ ಮುಂದೆ ಸತ್ಯವಾಗಿಯೂ ಯಥಾರ್ಥ ಹೃದಯದಿಂದಲೂ ನಡೆದು ನಿನ್ನ ದೃಷ್ಟಿ ಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂದು ನೆನಪು ಮಾಡಿಕೋ ಎಂದು ಬೇಡಿಕೊಂಡು ವ್ಯಥೆಪಟ್ಟು ಅತ್ತನು.
4 ಆಗ ಕರ್ತನ ವಾಕ್ಯವು ಯೆಶಾ ಯನ ಬಳಿಗೆ ಬಂದು ಹೇಳಿದ್ದೇನಂದರೆ--
5 ನೀನು ಹೋಗಿ ಹಿಜ್ಕೀ ಯನಿಗೆ ಹೇಳತಕ್ಕದ್ದೇನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನೂ ಕೂಡಿಸುತ್ತೇನೆ.
6 ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಯಿಂದ ಬಿಡಿಸುವೆನು; ಈ ಪಟ್ಟಣವನ್ನು ಕಾಪಾಡುವೆನು.
7 ಕರ್ತನು ತಾನು ನುಡಿದದ್ದನ್ನು ನೆರವೇರಿಸುವನು ಎಂಬದಕ್ಕೆ ಒಂದು ಗುರುತನ್ನು ಕಾಣುವಿ.
8 ಆಗ ಇಗೋ, ಸೂರ್ಯನ ಇಳಿತರದಿಂದ ಆಹಾಜನ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಲು ಹಿಂದಕ್ಕೆ ಬರಮಾಡುವೆನು ಅಂದನು. ಅದರಂತೆ ಸೋಫಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಲು ಹಿಂದಕ್ಕೆ ಬಂತು.
9 ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಗುಣ ಹೊಂದಿದನಂತರ ಬರೆದದ್ದು--
10 ನನ್ನ ದಿವಸಗಳು ಕಡಿಮೆ ಮಾಡಲ್ಪಟ್ಟದ್ದರಿಂದ ನಾನು ಪಾತಾಳದ ದ್ವಾರ ಗಳೊಳಗೆ ಹೋಗಬೇಕು ನನ್ನ ಆಯುಷ್ಯದಲ್ಲಿ ಮಿಕ್ಕಾ ದದ್ದು ನನಗೆ ತಪ್ಪಿಹೋಯಿತು ಎಂದು ಅಂದು ಕೊಂಡನು.
11 ಕರ್ತನನ್ನು, ಜೀವಿತರ ದೇಶದಲ್ಲಿಯೂ ಸಹ ಕರ್ತನನ್ನು ನೋಡೆನೆಂದೂ ಇನ್ನೂ ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ನೋಡಲಾರೆ ನಲ್ಲಾ ಎಂದು ಅಂದುಕೊಂಡೆನು.
12 ನನ್ನ ಆಯುಷ್ಯ ಮುಗಿಯಿತು ಮತ್ತು ಕುರುಬನ ಗುಡಾರದಂತೆ ನನ್ನಿಂದ ತೆಗೆದುಹಾಕಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೇಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
13 ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ.
14 ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು.
15 ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು.
16 ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ.
17 ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
18 ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು.
19 ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು.
20 ಕರ್ತನು ನನ್ನನ್ನು ರಕ್ಷಿಸಲು ಸಿದ್ಧನಾಗಿ ದ್ದನು; ಆದದರಿಂದ ಕರ್ತನ ಆಲಯದಲ್ಲಿ ನಮ್ಮ ಜೀವ ಮಾನದ ದಿವಸಗಳಲ್ಲೆಲ್ಲಾ ತಂತಿವಾದ್ಯಗಳಿಂದ ಹಾಡು ಗಳನ್ನು ನಾವು ಹಾಡುವೆವು.
21 ಯೆಶಾಯನು--ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ ಹುಣ್ಣಿನ ಮೇಲೆ ಇಟ್ಟರೆ ಅವನು ಬದುಕುವನೆಂದು ಹೇಳಿದ್ದನು.
22 ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು.
ಅಧ್ಯಾಯ 39

1 ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕ ಬಲದಾನನೆಂಬವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರಗ ಳನ್ನೂ ಬಹುಮಾನವನ್ನೂ ಕಳುಹಿಸಿದನು.
2 ಹಿಜ್ಕೀ ಯನು ಅದಕ್ಕೆ ಸಂತೋಷಪಟ್ಟು ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದ ಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ ಆಯುಧಶಾಲೆಯನ್ನೂ ತನ್ನ ಭಂಡಾರದಲ್ಲಿದ್ದದ್ದೆಲ್ಲ ವನ್ನೂ ತೋರಿಸಿದನು; ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
3 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀ ಯನ ಬಳಿಗೆ ಬಂದು ಅವನಿಗೆ--ಈ ಮನುಷ್ಯರು ಎಲ್ಲಿಂದ ನಿನ್ನ ಬಳಿಗೆ ಬಂದರು, ಅವರು ನಿನಗೆ ಏನು ಹೇಳಿದರು ಎಂದು ಕೇಳಲು, ಹಿಜ್ಕೀಯನು--ಅವರು ಬಹುದೂರ ದೇಶವಾದ ಬಾಬೆಲಿನಿಂದ ಬಂದರು ಎಂದು ಹೇಳಿದನು.
4 ಅದಕ್ಕೆ ಅವನು ಅವನನ್ನು--ಅವರು ನಿನ್ನ ಮನೆಯಲ್ಲಿ ಏನನ್ನು ನೋಡಿದರು ಎಂದು ಕೇಳಲು, ಹಿಜ್ಕೀಯನು--ನನ್ನ ಮನೆಯಲ್ಲಿರುವದೆಲ್ಲ ವನ್ನು ಅವರು ನೋಡಿದರು; ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇರು ವದಿಲ್ಲ ಎಂದು ಉತ್ತರಕೊಟ್ಟನು.
5 ತರುವಾಯ ಯೆಶಾಯನು ಹಿಜ್ಕೀಯನಿಗೆ--ಸೈನ್ಯಗಳ ಕರ್ತನ ವಾಕ್ಯ ವನ್ನು ಕೇಳು--
6 ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನ ವರೆಗೆ ನಿನ್ನ ಮನೆಯಲ್ಲಿ ಸಂಗ್ರಹವಾದ ದ್ದೆಲ್ಲವೂ ಬಾಬೆಲಿಗೆ ಒಯ್ಯಲ್ಪಡುವ ದಿವಸವು ಬರು ವದು. ಇಲ್ಲೇನೂ ಉಳಿಯುವದಿಲ್ಲ.
7 ನಿನ್ನಿಂದ ಹುಟ್ಟುವಂಥ ನೀನು ಪಡೆದ ನಿನ್ನ ಮಕ್ಕಳನ್ನು ತೆಗೆದು ಕೊಂಡು ಹೋಗುವರು; ಬಾಬೆಲಿನ ಅರಸನ ಅರಮನೆ ಯಲ್ಲಿ ಅವರು ಕಂಚುಕಿಗಳಾಗಿರುವರು ಎಂದು ಕರ್ತನು ಹೇಳುತ್ತಾನೆ ಅಂದನು.
8 ಆಗ ಹಿಜ್ಕೀಯನು--ಹೇಗೂ ನನ್ನ (ದಿನಗಳಲ್ಲಿ) ಜೀವಮಾನ ದಲ್ಲಿ ಸಮಾಧಾನವು ಸತ್ಯವು ಇರುವವು ಎಂದು ಅಂದುಕೊಂಡು ಯೆಶಾಯ ನಿಗೆ--ನೀನು ಹೇಳಿದ ಕರ್ತನ ವಾಕ್ಯವು ಒಳ್ಳೇದೆ ಅಂದನು.
ಅಧ್ಯಾಯ 40

1 ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾನೆ.
2 ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.
3 ಇಗೋ, ಒಂದು ವಾಣಿ, ಅರಣ್ಯದಲ್ಲಿ ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ; ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆ ಮಾಡಿರಿ.
4 ಎಲ್ಲಾ ತಗ್ಗುಗಳು ಮುಚ್ಚಲ್ಪಡಲಿ, ಎಲ್ಲಾ ಬೆಟ್ಟ ಗುಡ್ಡ ಗಳು ತಗ್ಗಿಸಲ್ಪಡಲಿ, ಕೊರಕಲ ನೆಲವು ಸಮವಾಗು ವದು; ಕರ್ತನ ಮಹಿಮೆಯು ಗೋಚರವಾಗುವದು.
5 ಎಲ್ಲಾ ಮನುಷ್ಯರು ಒಟ್ಟಿಗೆ ಅದನ್ನು ಕಾಣುವರು ಕರ್ತನ ಬಾಯಿಯೇ ಇದನ್ನು ನುಡಿದದೆ ಎಂದು ಒಬ್ಬನು ಕೂಗುತ್ತಾನೆ.
6 ವಾಣಿಯು ಕೂಗು ಅನ್ನುತ್ತದೆ. ಅವನು--ನಾನು ಏನು ಕೂಗಲಿ ಅನ್ನಲು ಎಲ್ಲಾ ನರಮನುಷ್ಯರು ಹುಲ್ಲಿನ ಹಾಗಿದ್ದಾರೆ. ಕರ್ತನ ಶ್ವಾಸವು ಅವರ ಮೇಲೆ ಬೀಸುವದರಿಂದ ಅವರ ಲಾವಣ್ಯವೆಲ್ಲಾ ಹೊಲದ ಹೂವಿನಂತಿದೆ.
7 ಹುಲ್ಲು ಒಣಗಿ ಹೋಗು ವದು ಹೂವು ಬಾಡಿಹೋಗುವದು. ಕರ್ತನ ಆತ್ಮ ಅವುಗಳ ಮೇಲೆ ಊದುವನು; ನಿಶ್ಚಯವಾಗಿ ಜನರು ಹುಲ್ಲೇ.
8 ಹುಲ್ಲು ಒಣಗಿಹೋಗುವದು ಹೂವು ಬಾಡಿಹೋಗುವದು. ಆದರೆ ನಮ್ಮ ದೇವರ ವಾಕ್ಯವು ಸದಾಕಾಲ ನಿಲ್ಲುವದು ಎಂದು ಉತ್ತರವಾಯಿತು.
9 ಶುಭಸಮಾಚಾರವನ್ನು ತಿಳಿಸುವ ಓ ಚೀಯೋನೇ, ನೀನು ಉನ್ನತಪರ್ವತವನ್ನು ಏರು; ಶುಭಸಮಾ ಚಾರವನ್ನು ತಿಳಿಸುವ ಓ ಯೆರೂಸಲೇಮೇ, ಬಲವಾಗಿ ನಿನ್ನ ಸ್ವರವನ್ನು ಎತ್ತು, ಭಯಪಡದೆ ಎತ್ತು; ಯೆಹೂದದ ಪಟ್ಟಣಗಳಿಗೆ ಇಗೋ, ನಿನ್ನ ದೇವರು ಎಂದು ಹೇಳು.
10 ಇಗೋ, ಕರ್ತನಾದ ದೇವರು ಬಲವುಳ್ಳ ಕೈಯಿಂದ ಬರುತ್ತಾನೆ, ಆತನ ತೋಳು ತನಗೋಸ್ಕರ ಆಳುವದು. ಇಗೋ, ಆತನ ಬಹುಮಾನವು ಆತನ ಸಂಗಡಲೂ ಆತನ ಪ್ರತಿಫಲವು ಆತನ ಮುಂದೆಯೂ ಇದೆ.
11 ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
12 ಸಮುದ್ರ ಸಾಗರವನ್ನು ಬರಿದಾದ ತನ್ನ ಕೈಯಿಂದ ಅಳತೆ ಮಾಡಿದವನೂ ಆಕಾಶಗಳ ಮೇರೆಯನ್ನು ಗೇಣಿನಿಂದ ಅಳೆದವನೂ ಭೂಮಿಯ ದೂಳನ್ನು ಅಳತೆ ಮಾಡಿ ತಿಳುಕೊಂಡವನೂ ಬೆಟ್ಟಗಳ ಮಟ್ಟ ವನ್ನೂ ಗುಡ್ಡಗಳನ್ನೂ ತಕ್ಕಡಿಯಿಂದ ತೂಗಿದವನು ಯಾರು?
13 ಕರ್ತನ ಆತ್ಮವನ್ನು ನಡಿಸಿದವನೂ ಇಲ್ಲವೇ ಆತನಿಗೆ ಆಲೋಚನಾಕರ್ತನಾಗಿ ಕಲಿಸಿದವನು ಯಾರು?
14 ಆತನು ಯಾವನ ಆಲೋಚನೆಯನ್ನು ಪಡೆದನು. ಆತನಿಗೆ ಉಪದೇಶಿಸಿದವನೂ ನ್ಯಾಯದ ಹಾದಿ ಯನ್ನು ಕಲಿಸಿ, ತಿಳುವಳಿಕೆಯನ್ನು ಆತನಿಗೆ ಬೋಧಿಸಿ, ವಿವೇಕದ ಮಾರ್ಗವನ್ನು ತಿಳಿಸಿದವನು ಯಾರು?
15 ಇಗೋ, ಆತನ ಎಣಿಕೆಯಲ್ಲಿ ಜನಾಂಗಗಳು ಕಪಿಲೆ ಯಿಂದುದುರುವ ಹನಿಯಂತೆಯೂ ತಕ್ಕಡಿಯಲ್ಲಿನ ದೂಳಿನ ಹಾಗೂ ಇರುತ್ತವೆ. ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಆತನು ಎತ್ತುತ್ತಾನೆ.
16 ಲೆಬ ನೋನು ಸುಡುವದಕ್ಕೆ ಸಾಲವು ಅದರ ಮೃಗಗಳು ಬಲಿಗೆ (ಯಜ್ಞಕ್ಕೆ, ಹೋಮಕ್ಕೆ) ಸಾಲವು.
17 ಸಕಲ ಜನಾಂಗಗಳು ಆತನ ಮುಂದೆ ಏನೂ ಇಲ್ಲದಂತಿವೆ; ಅವು ಆತನ ಎಣಿಕೆಯಲ್ಲಿ ಶೂನ್ಯವಾಗಿಯೂ ವ್ಯರ್ಥ ವಾಗಿಯೂ ಇವೆ.
18 ಹೀಗಿರಲು ದೇವರನ್ನು ಯಾರಿಗೆ ಹೋಲಿಸು ವಿರಿ? ಅಥವಾ ಯಾವ ಹೋಲಿಕೆಯನ್ನು ಆತನಿಗೆ ಸಮಾನ ಮಾಡುವಿರಿ?
19 ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ; ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ; ಬೆಳ್ಳಿಯ ಸರಪಣಿಗಳನ್ನು ಹಾಕುವನು.
20 ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳ ಲಾರದ ಬಡವನು ಹುಳುತು ಹೋಗದ ಮರವನ್ನು ಹುಡುಕಿ ಚಲಿಸದ ವಿಗ್ರಹವನ್ನು ತಯಾರಿಸುವದಕ್ಕೆ ಕುಯುಕ್ತಿಯ ಕೆಲಸಗಾರರನ್ನು ವಿಚಾರಿಸಿಕೊಳ್ಳುವನು.
21 ನಿಮಗೆ ತಿಳಿದಿಲ್ಲವೋ? ನೀವು ಕೇಳಿಲ್ಲವೋ? ಆದಿಯಿಂದಲೇ ನಿಮಗೆ ತಿಳಿಸಲ್ಪಟ್ಟಿಲ್ಲವೋ? ಭೂಮಿ ಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗ ಲಿಲ್ಲವೋ?
22 ಆಕಾಶ ಮಂಡಲವನ್ನು ತೆರೆಯಂತೆ ವಿಸ್ತರಿಸಿ ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ.
23 ಅದು ಪ್ರಭುಗಳನ್ನು ನಿರ್ನಾಮ ಮಾಡುತ್ತದೆ ಭೂಮಿಯ ನ್ಯಾಯಾಧಿಪತಿಗಳನ್ನು ಶೂನ್ಯವಾಗುವಂತೆ ಮಾಡು ತ್ತದೆ.
2
24 ಹೌದು, ಅವರು ನೆಡಲ್ಪಡುವದಿಲ್ಲ ಬಿತ್ತ ಲ್ಪಡುವದಿಲ್ಲ. ಹೌದು ಅವರ ಬುಡವು ಭೂಮಿ ಯಲ್ಲಿ ಬೇರೂರುವದಿಲ್ಲ. ಆತನು ಶ್ವಾಸವನ್ನು ಅವರ ಮೇಲೆ ಊದಲು ಒಣಗಿಹೋಗುವರು. ಬಿರು ಗಾಳಿಯು ಅವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವದು.
25 ಹೀಗಿರಲು ನನ್ನನ್ನು ಯಾರಿಗೆ ಹೋಲಿಸಿ ಸರಿ ಸಮಾನ ಮಾಡುತ್ತೀರಿ ಎಂದು ಪರಿಶುದ್ಧನಾದವನು ಹೇಳುತ್ತಾನೆ.
26 ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ; ಇಗೋ, ಇವುಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ ಅವುಗಳ ಸೈನ್ಯವನ್ನೆಲ್ಲಾ ಲೆಕ್ಕಮಾಡಿ ಹೊರಗೆ ತರು ವನು. ಆತನು ಅತಿ ಬಲಾಢ್ಯನಾಗಿರುವದರಿಂದ ಅವುಗಳೊಳಗೆ ಒಂದೂ ತಪ್ಪದು.
27 ನನ್ನ ಮಾರ್ಗವು ಕರ್ತನಿಗೆ ಮರೆಯಾಗಿದೆ ಮತ್ತು ನನ್ನ ನ್ಯಾಯವು ನನ್ನ ದೇವರಿಂದ ದಾಟಿ ಹೋಯಿ ತಲ್ಲಾ! ಎಂದು ಯಾಕೋಬೇ ಯಾಕೆ ಹೇಳುತ್ತಿ? ಇಸ್ರಾಯೇಲೇ ಯಾಕೆ ಮಾತಾಡುತ್ತಿ?
28 ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಕರ್ತನು ನಿರಂತರವಾದ ದೇವರೂ ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವದಿಲ್ಲ ಇಲ್ಲವೆ ಬಳಲುವ ದಿಲ್ಲ; ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
29 ಆತನು ದಣಿದವನಿಗೆ ಶಕ್ತಿಯನ್ನೂ ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ.
30 ಯೌವನಸ್ಥರೋ ದಣಿದು ಬಳಲುವರು ತರುಣರು ಸಂಪೂರ್ಣವಾಗಿ ಬೀಳುವರು.
31 ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.
ಅಧ್ಯಾಯ 41

1 ಓ ದ್ವೀಪನಿವಾಸಿಗಳೇ, ನನ್ನ ಮುಂದೆ ಮೌನದಿಂದಿರ್ರಿ; ಜನಗಳು ಹೊಸ ಬಲ ವನ್ನು ಹೊಂದಿಕೊಳ್ಳಲಿ; ಅವರು ನನ್ನ ಸವಿಾಪಕ್ಕೆ ಬಂದು ಮಾತಾಡಲಿ; ನ್ಯಾಯತೀರ್ಪಿಗಾಗಿ ಸವಿಾಪಕ್ಕೆ ಒಟ್ಟಾಗಿ ಬರೋಣ.
2 ಮೂಡಣದಿಂದ ನೀತಿವಂತ ನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು ಜನಾಂಗಗಳನ್ನು ಅವನ ಮುಂದೆ ಕೊಟ್ಟುಬಿಟ್ಟು ಅವ ನನ್ನು ರಾಜರ ಮೇಲೆ ಆಳುವದಕ್ಕೆ ಮಾಡಿದವನು ಯಾರು? ಅವನ ಕತ್ತಿಗೆ ದೂಳನ್ನಾಗಿಯೂ ಅವನ ಬಿಲ್ಲಿಗೆ ಹಾರಿ ಹೋಗುವ ಹೊಟ್ಟಿನಂತೆಯೂ ಅವ ರನ್ನು ಕೊಟ್ಟನು.
3 ತಾನು ಎಂದೂ ಹೆಜ್ಜೆಯಿಡದ ಮಾರ್ಗದಲ್ಲಿ ಸುರಕ್ಷಿತವಾಗಿ ಆತನು ಅವರನ್ನು ಹಿಂದ ಟ್ಟುತ್ತಾ ಹೋದನು.
4 ಇದನ್ನೆಲ್ಲಾ ನಡೆಯಿಸಿ ನೆರವೇರಿ ಸಿದವನು ಆದಿಯಿಂದ ತಲತಲಾಂತರಗಳನ್ನು ಬರ ಮಾಡಿದವನು ಯಾರು? ಕರ್ತನಾಗಿರುವ ನಾನೇ ಮೊದಲನೆಯವನು ಅಂತ್ಯಕಾಲದಲ್ಲಿ ಸಂಗಡಿಗನು ಆಗಿರುವಾತನೇ ನಾನು.
5 ದ್ವೀಪ ನಿವಾಸಿಗಳೆಲ್ಲರೂ ನೋಡಿ ಬೆರಗಾದರು; ಭೂಮಿಯ ಕಟ್ಟಕಡೆಯವರು ನಡುಗಿದರು. ಅವರ ಸವಿಾಪಕ್ಕೆ ಬಂದರು.
6 ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯಮಾಡಿ ಮತ್ತು ಪ್ರತಿಯೊಬ್ಬನು ತನ್ನ ಸಹೋದರನಿಗೆ--ಧೈರ್ಯ ವಾಗಿರ್ರಿ ಎಂದು ಹೇಳಲಿ.
7 ಹಾಗೆಯೇ ಮರಗೆಲಸ ದವನು ಅಕ್ಕಸಾಲಿಗನನ್ನು ಪ್ರೋತ್ಸಾಹಗೊಳಿಸಿದನು, ಸುತ್ತಿಗೆಯಿಂದ ಸಮಮಾಡುವವನು ಬಡಿಗಲ್ಲಿನ ಮೇಲೆ ಹೊಡೆಯುವವನನ್ನು ಧೈರ್ಯಪಡಿಸಿದನು; ಬೇಸಿಗೆ ಚೆನ್ನಾಗಿದೆ ಎಂದು ಹೇಳಿ ಅದು ಕದಲದ ಹಾಗೆ ಮೊಳೆಗಳಿಂದ ಜಡಿದರು.
8 ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ;
9 ನಿನ್ನನ್ನು ಕಟ್ಟಕಡೆಗಳಿಂದ ಆರಿಸಿಕೊಂಡು, ಅದರ ಕೊನೆಯಿಂದ ಕರೆದು--ನೀನು ನನ್ನ ಸೇವಕನು, ನಿನ್ನನ್ನು ನಾನು ಆದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವದಿಲ್ಲ.
10 ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
11 ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು;
12 ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.
13 ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.
14 ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್‌ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
15 ಇಗೋ, ನಿನ್ನನ್ನು ಹದವಾದ, ಹೊಸ, ಮೊನೆಹಲ್ಲಿನ ಹಂತಿಕುಂಟೆಯನ್ನಾಗಿ (ಹೊಕ್ಕುವ ಯಂತ್ರ) ಮಾಡು ವೆನು, ನೀನು ಬೆಟ್ಟಗಳನ್ನು ಹೊಕ್ಕು ಪುಡಿಪುಡಿ ಮಾಡಿ ಗುಡ್ಡಗಳನ್ನು ಹೊಟ್ಟಿನಂತೆ ಮಾಡುವಿ.
16 ನೀನು ಅವುಗಳನ್ನು ತೂರಲು ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವದು; ನೀನಂತೂ ಕರ್ತನಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧನಲ್ಲಿ ಮಹಿಮೆಹೊಂದುವಿ.
17 ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್‌ ದೇವ ರಾಗಿರುವ ನಾನು ಅವರನ್ನು ಕೈಬಿಡೆನು.
18 ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು, ತಗ್ಗುಗಳ ಮಧ್ಯದಲ್ಲಿ ಬುಗ್ಗೆ ಗಳನ್ನು ಹೊರಡಿಸಿ ಅರಣ್ಯವನ್ನು ನೀರಿನ ಕೆರೆಯ ನ್ನಾಗಿಯೂ ಒಣನೆಲವನ್ನು ನೀರಿನ ಒರತೆಗಳನ್ನಾ ಗಿಯೂ ಮಾಡುವೆನು.
19 ಅರಣ್ಯದಲ್ಲಿ ದೇವದಾರು, ಜಾಲಿಮರ, ಸುಗಂಧ, ಒಲೀವ ಮರಗಳನ್ನು ನಾನು ನೆಡುವೆನು, ಮರುಭೂಮಿಯಲ್ಲಿ ತುರಾಯಿ, ತಪಸಿಟ್ಟಿ, ತಿಲಕವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.
20 ಆಗ ಕರ್ತನ ಹಸ್ತವು ಇದನ್ನು ಮಾಡಿದೆ ಎಂದೂ ಇಸ್ರಾ ಯೇಲಿನ ಪರಿಶುದ್ಧನು ಇದನ್ನು ಸೃಷ್ಟಿಸಿದನು ಎಂದೂ ಅವರು ನೋಡಿ, ತಿಳಿದು ಮನಸ್ಸಿಗೆ ತಂದು ಗ್ರಹಿಸಿ ಕೊಳ್ಳುವರು.
21 ನಿಮ್ಮ ವ್ಯಾಜ್ಯವನ್ನು ತನ್ನಿರಿ ಎಂದು ಕರ್ತನು ಅನ್ನುತ್ತಾನೆ; ನಿಮ್ಮ ಬಲವಾದ ಕಾರಣಗಳನ್ನು ತನ್ನಿರಿ ಎಂದು ಯಾಕೋಬ್ಯರ ಅರಸನು ಹೇಳುತ್ತಾನೆ.
22 ಅವರು ಅವುಗಳನ್ನು ತಂದು ಮುಂದೆ ಏನಾಗುವದು ಎಂದು ನಮಗೆ ತೋರಿಸಲಿ; ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು ಅವುಗಳ ಪರಿಣಾಮವನ್ನು ಇಲ್ಲವೇ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು.
23 ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ; ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದ ನ್ನಾಗಲಿ ಕೆಟ್ಟದ್ದನ್ನಾಗಲಿಮಾಡಿರಿ.
24 ಇಗೋ, ನೀವು ಶೂನ್ಯವೇ ಮತ್ತು ನಿಮ್ಮ ಕಾರ್ಯವು ಮಟ್ಟಮಾಯವೇ ನಿಮ್ಮನ್ನು ಆರಿಸಿಕೊಂಡವನು ಅಸಹ್ಯನೇ.
25 ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇನೆ, ಸೂರ್ಯೋ ದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸು ವನು; ಅವನು ಜೇಡಿಮಣ್ಣಿನಂತೆಯೂ ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಬರುವನು.
26 ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಹೌದು, ಯಾರೂ ತೋರಿಸು ವವನಿಲ್ಲ, ತಿಳಿಸುವವನು ಒಬ್ಬನೂ ಇಲ್ಲ. ನಿನ್ನ ಮಾತನ್ನೂ ಕೇಳುವವನು ಒಬ್ಬನೂ ಇಲ್ಲ.
27 ನಾನು ಮೊದಲನೆಯವನಾಗಿ ಚೀಯೋನಿಗೆ ಇಗೋ, ಅವ ರನ್ನು ನೋಡು ಎಂದು ಹೇಳಿ, ಶುಭ ಸಮಾಚಾರ ತರತಕ್ಕವನನ್ನು ಯೆರೂಸಲೇಮಿಗೆ ಅನುಗ್ರಹಿಸುವೆನು.
28 ನಾನು ನೋಡಿದಾಗ ಅಲ್ಲಿ ಯಾರೂ ಇಲ್ಲ; ನಾನು ಅವರನ್ನು ಕೇಳುವ ಪ್ರಶ್ನೆಗೆ ಅವರಲ್ಲಿ ಒಂದು ಮಾತನ್ನು ಉತ್ತರಿಸುವ ಸಲಹೆಗಾರನು ಇಲ್ಲವೇ ಇಲ್ಲ.
29 ಇಗೋ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ಶೂನ್ಯವೇ. ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.
ಅಧ್ಯಾಯ 42

1 ಇಗೋ, ನಾನು ಆಧಾರವಾಗಿರುವ ನನ್ನ ಸೇವಕನು; ನಾನು ಆದುಕೊಂಡವನಲ್ಲಿ ನನ್ನ ಆತ್ಮ ಆನಂದಿಸುವದು. ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಅನ್ಯಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.
2 ಅವನು ಕೂಗು ವದಿಲ್ಲ, ಶಬ್ದವನ್ನು ಎತ್ತುವದಿಲ್ಲ ಇಲ್ಲವೆ ಬೀದಿಗಳಲ್ಲಿ ತನ್ನ ಸ್ವರವನ್ನು ಕೇಳಗೊಡಿಸುವದಿಲ್ಲ.
3 ಜಜ್ಜಿದ ದಂಟನ್ನು ಮುರಿದುಹಾಕದೆ, ಕಳೆಗುಂದಿದ ದೀಪ ವನ್ನು ನಂದಿಸದೆ, ಸತ್ಯದಿಂದ ನ್ಯಾಯವನ್ನು ಹೊರ ತರುತ್ತಾನೆ.
4 ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.
5 ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನು ಅದರಿಂದ ಉತ್ಪತ್ತಿ ಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ ಸಂಚರಿಸುವವರಿಗೆ ಆತ್ಮವನ್ನು ಕೊಡು ತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ--
6 ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಬಂದಿ ಗಳನ್ನು ಸೆರೆಯಿಂದಲೂ ಕತ್ತಲೆಯಲ್ಲಿ ವಾಸಿಸುವವ ರನ್ನು ಕಾರಾಗೃಹದಿಂದಲೂ ಹೊರಗೆ ತರಬೇಕು ಎಂದು --
7 ಕರ್ತನಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
8 ನಾನೇ ಕರ್ತನು, ಅದೇ ನನ್ನ ಹೆಸರು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತೋತ್ರ ವನ್ನು ಎರಕದ ವಿಗ್ರಹಗಳಿಗೂ ಕೊಡೆನು.
9 ಇಗೋ, ಹಿಂದಿನವುಗಳು ನೆರವೇರಿವೆ. ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ಹುಟ್ಟುವದಕ್ಕಿಂತ ಮುಂಚೆಯೇ ನಾನು ಅವುಗಳನ್ನು ನಿಮಗೆ ತಿಳಿಸುತ್ತೇನೆ.
10 ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.
11 ಅರಣ್ಯವು ಅದರ ಪಟ್ಟಣಗಳು ಸ್ವರವೆತ್ತಲಿ; ಕೇದಾರ್‌ ಊರಿನ ನಿವಾಸಿಗಳು, ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ; ಅವರು ಪರ್ವತದ ತುದಿಯಲ್ಲಿ ಕೂಗಲಿ,
12 ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
13 ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು.
14 ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನುಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು ನಾನು ನಾಶಮಾಡಿ ಒಂದೇ ಸಾರಿ ನುಂಗಿಬಿಡುವೆನು.
15 ನಾನು ಬೆಟ್ಟ ಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ, ನದಿ ಗಳನ್ನು ದ್ವೀಪಗಳನ್ನಾಗಿಯೂ ಕೆರೆಗಳನ್ನು ಬತ್ತಿ ಹೋಗುವಂತೆಯೂ ಮಾಡುವೆನು.
16 ಕುರುಡರನ್ನು ಅವರು ತಿಳಿಯದ ಮಾರ್ಗದಲ್ಲಿ ಬರಮಾಡುವೆನು. ಅವರನ್ನು ತಿಳಿಯದ ಹಾದಿಗಳಲ್ಲಿ ನಡಿಸುವೆನು; ಕತ್ತಲೆಯನ್ನು ಅವರ ಮುಂದೆ ಬೆಳಕಾಗಿಯೂ ಸೊಟ್ಟಾದವುಗಳನ್ನು ನೆಟ್ಟಗಾಗಿಯೂ ಮಾಡುವೆನು. ಇವುಗಳನ್ನು ನಾನು ಅವರಿಗೋಸ್ಕರ ಮಾಡುವೆನು. ನಾನು ಅವರನ್ನು ಕೈಬಿಡುವದಿಲ್ಲ.
17 ಕೆತ್ತಿದ ವಿಗ್ರಹಗಳಲ್ಲಿ ನಂಬಿಕೆಯಿಡುವವರು ಎರಕಹೊಯ್ದ ವಿಗ್ರಹಗಳಿಗೆ ನೀವೇ ನಮ್ಮ ದೇವರುಗಳೆಂದು ಹೇಳುವ ವರು ಹಿಂದೆ ಬಿದ್ದು ನಾಚಿಕೆಗೆ ಈಡಾಗುವರು.
18 ಕಿವುಡರೇ, ಕೇಳಿರಿ; ಕುರುಡರೇ ನೀವು ದೃಷ್ಟಿಸಿ ನೋಡಿರಿ.
19 ನನ್ನ ಸೇವಕನಲ್ಲದೆ ಕುರುಡನು ಯಾರು? ಇಲ್ಲವೆ ನಾನು ಕಳುಹಿಸಿದ ಸೇವಕನಲ್ಲದೇ ಕಿವುಡನು ಯಾರು? ಸಂಪೂರ್ಣನಂತೆ ಕುರುಡನು ಯಾರು? ಕರ್ತನ ಸೇವಕನಂತೆ ಕುರುಡನು ಯಾರು?
20 ನೀನು ಅನೇಕ ಸಂಗತಿಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ; ಅವನ ಕಿವಿಗಳು ತೆರೆದಿದ್ದರೂ ಕೇಳನು.
21 ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.
22 ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಅವರೆಲ್ಲರೂ ಹಳ್ಳ ಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ; ಸೆರೆಮನೆಗಳಲ್ಲಿ ಮುಚ್ಚಲ್ಪ ಟ್ಟಿದ್ದಾರೆ; ಅವರು ಸೂರೆಯಾದರೂ ತಪ್ಪಿಸುವವನು ಒಬ್ಬನೂ ಇಲ್ಲ, ಕೊಳ್ಳೆಯಾದದ್ದನ್ನು ತಿರಿಗಿ ಹಿಂದಕ್ಕೆ ಕೊಡು ಎಂದು ಹೇಳುವ ಒಬ್ಬನೂ ಇಲ್ಲ.
23 ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಕೊಡುವರು, ಯಾರು ಇನ್ನು ಮುಂದೆ ಆಲಿಸಿ ಕೇಳುವರು?
24 ಯಾಕೋಬನ್ನು ಸುಲಿಗೆಗೂ ಇಸ್ರಾಯೇಲನ್ನು ಕೊಳ್ಳೆಗೂ ಗುರಿಮಾಡಿ ದವನು ಯಾರು? ನಾವು ಯಾರಿಗೆ ವಿರೋಧವಾಗಿ ಪಾಪವನ್ನು ಮಾಡಿದೆವು, ಅದು ಕರ್ತನಿಗಲ್ಲವೇ? ಅವರು ಆತನ ಮಾರ್ಗದಲ್ಲಿ ನಡೆಯದೆ ಇಲ್ಲವೆ ಆತನ ನ್ಯಾಯಪ್ರಮಾಣಕ್ಕೆ ಅವಿಧೇಯರಾದರಲ್ಲಾ.
25 ಆದದರಿಂದ ಆತನು ತನ್ನ ಯುದ್ದದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ ಅವನಿಗೆ ತಿಳಿಯಲಿಲ್ಲ; ಅದು ಅವನನ್ನು ಸುಟ್ಟರೂ ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ.
ಅಧ್ಯಾಯ 43

1 ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ.
2 ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
3 ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ.
4 ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
5 ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು.
6 ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
7 ನನ್ನ ಹೆಸರಿ ನಿಂದ ಕರೆಯಲ್ಪಟ್ಟ ಪ್ರತಿಯೊಬ್ಬನನ್ನೂ ಬರಮಾಡು ವೆನು; ಅವನನ್ನು ನನ್ನ ಮಹಿಮೆಗಾಗಿ ಸೃಷ್ಟಿಸಿದ್ದೇನೆ, ನಾನು ಅವನನ್ನು ನಿರ್ಮಿಸಿದ್ದೇನೆ: ಹೌದು, ನಾನು ಅವನನ್ನು ಉಂಟುಮಾಡಿದ್ದೇನೆ.
8 ಕಣ್ಣಿದ್ದರೂ ಕುರುಡರಾದ, ಕಿವಿಯಿದ್ದರೂ ಕಿವುಡ ರಾದ ಜನರನ್ನು ಕರೆ.
9 ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ, ಎಲ್ಲಾ ಜನರೂ ಸೇರಿಕೊಳ್ಳಲಿ. ಅವರಲ್ಲಿ ಇದನ್ನು ಪ್ರಕಟಿಸುವವರೂ ಹಿಂದಿನವು ಗಳನ್ನು ನಮಗೆ ತೋರಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸಿಕೊಳ್ಳುವದಕ್ಕೆ ಸಾಕ್ಷಿಗಳನ್ನು ಕರತರಲಿ; ಆ ಸಾಕ್ಷಿಗಳು ಇದನ್ನು ಕೇಳಿ ನಿಜವೆಂದು ಹೇಳಲಿ.
10 ಕರ್ತನು ಹೇಳುವದೇನಂದರೆ--ನೀವು ನನ್ನ ಸಾಕ್ಷಿಗಳಾಗಿದ್ದೀರಿ; ನಾನೇ ಆತನೆಂದು ನೀವು ತಿಳಿದು ನಂಬಿ ಗ್ರಹಿಸುವ ಹಾಗೆಯೇ ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆ ಯೂ ನನ್ನ ನಂತರದಲ್ಲಿಯೂ ಯಾವ ದೇವರೂ ಇರಲಿಲ್ಲ.
11 ನಾನೇ, ನಾನೇ, ಕರ್ತನಾಗಿದ್ದೇನೆ, ನನ್ನ ಹೊರತು ಯಾವ ರಕ್ಷಕನೂ ಇಲ್ಲ.
12 ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ ನಾನೇ ರಕ್ಷಣೆ ಯನ್ನು ಪ್ರಕಟಿಸಿ ತೋರಿಸಿದ್ದೇನೆ; ಆದದರಿಂದ ನೀವು ನನ್ನ ಸಾಕ್ಷಿಗಳು; ನಾನೇ ದೇವರೆಂದು ಕರ್ತನು ನುಡಿಯು ತ್ತಾನೆ.
13 ಹೌದು, ಅಂದಿನಿಂದಲೇ ನಾನಿದ್ದೇನೆ; ನನ್ನ ಕೈಯಿಂದ ಬಿಡಿಸುವವರು ಯಾರೂ ಇಲ್ಲ; ನನ್ನ ಕೆಲಸಕ್ಕೆ ಅಡ್ಡಿ ಬರುವವನಾರು?
14 ನಿಮ್ಮ ವಿಮೋಚಕನೂ ಇಸ್ರಾಯೇಲಿನ ಪರಿ ಶುದ್ಧನೂ ಆಗಿರುವ ಕರ್ತನು ಇಂತೆನ್ನುತ್ತಾನೆ--ನಾನು ನಿಮಗೋಸ್ಕರ ಬಾಬೆಲಿಗೆ ಕಳುಹಿಸಿ ಅವರ ಘನ ವಂತರನ್ನೆಲ್ಲಾ ಮತ್ತು ಹಡಗುಗಳಲ್ಲಿ ಆರ್ಭಟಿಸುವ ಕಸ್ದೀಯರನ್ನು ತಗ್ಗಿಸಿದೆನು.
15 ನಾನು ಕರ್ತನಾದ ನಿಮ್ಮ ಪರಿಶುದ್ದನೂ ಇಸ್ರಾಯೇಲನ್ನು ಸೃಷ್ಟಿಸಿದವನೂ ನಿಮ್ಮ ಅರಸನೂ ಆಗಿದ್ದೇನೆ.
16 ಯಾವಾತನು ಸಮುದ್ರ ದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ ಮಾರ್ಗವನ್ನು ಏರ್ಪಡಿಸಿದನೋ.
17 ಯಾವಾತನು ರಥ ಕುದುರೆ ಗಳ ದಂಡನ್ನು ಪರಾಕ್ರಮರಾದವರನ್ನು ಹೊರಡಿಸಿ ಅವು ಒಟ್ಟಿಗೆ ಬಿದ್ದು ಏಳಲಾರದಂತೆಯೂ ದೀಪದೋ ಪಾದಿಯಲ್ಲಿ ನಂದಿ ಆರಿಹೋಗುವಂತೆಯೂ ಮಾಡಿ ದನೋ ಆ ಕರ್ತನು ಇಂತೆನ್ನುತ್ತಾನೆ--
18 ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ; ಇಲ್ಲವೆ ಹಳೇ ಸಂಗತಿಗಳನ್ನು ಯೋಚಿಸಬೇಡಿರಿ.
19 ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು, ಅದು ಈಗಲೇ ಮೊಳೆತು ಬರುವದು; ನಿಮಗೆ ಅದು ತಿಳಿದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಮರುಭೂಮಿಯಲ್ಲಿ ನದಿಗಳನ್ನು ಸಹ ಉಂಟುಮಾಡು ವೆನು.
20 ಅಡವಿಯ ಮೃಗಗಳು, ಘಟಸರ್ಪಗಳು ಮತ್ತು ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯ ನೀರನ್ನು ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿ ಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವದಕ್ಕೆ ಕೊಟ್ಟೆನು.
21 ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.
22 ಆದರೂ ಓ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ; ಓ ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ!
23 ನಿನ್ನ ದಹನಬಲಿಯ ಎಳೇ ಕರುಗಳನ್ನು ನನಗೆ ತರಲಿಲ್ಲ ಇಲ್ಲವೆ ನಿನ್ನ ಯಜ್ಞ ಗಳಿಂದ ನನ್ನನ್ನು ಸನ್ಮಾನಿಸಲಿಲ್ಲ; ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಾನು ಕಾರಣವಲ್ಲ, ಇಲ್ಲವೆ ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
24 ನೀನು ನನಗೋಸ್ಕರ ಹಣದಿಂದ ಗಂಧಕಾಷ್ಟವನ್ನು ಕೊಂಡು ಕೊಳ್ಳಲಿಲ್ಲ ಇಲ್ಲವೆ ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ತೊಂದರೆಗೊಳಿಸಿದ್ದೀ, ಅಕ್ರಮಗಳಿಂದ ನನ್ನನು ಬೇಸರಗೊಳಿಸಿದ್ದೀ.
25 ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
26 ನನಗೆ ಜ್ಞಾಪಕ ಪಡಿಸು, ನಾವಿಬ್ಬರೂ ವಾದಿಸುವಾ, ನೀನು ನೀತಿವಂತ ನೆಂದು ಪ್ರಚುರಪಡಿಸು.
27 ನಿನ್ನ ಮೂಲಪಿತೃ ಪಾಪ ಮಾಡಿದ್ದಾನೆ, ಬೋಧಕರು ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ.
28 ಆದಕಾರಣ ಪರಿಶುದ್ಧ ಸ್ಥಾನದ ಪ್ರಧಾನರನ್ನು ಅಪವಿತ್ರಮಾಡಿ, ಯಾಕೋ ಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.
ಅಧ್ಯಾಯ 44

1 ಈಗಲಾದರೋ ನನ್ನ ಸೇವಕನಾದ ಓ ಯಾಕೋಬೇ, ನಾನು ಆರಿಸಿಕೊಂಡ ಇಸ್ರಾಯೇಲೇ, ಕೇಳು.
2 ನಿನ್ನನ್ನು ನಿರ್ಮಾಣ ಮಾಡಿ ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯ ಮಾಡುವವನಾದ ಕರ್ತನು ಹೀಗೆನ್ನುತ್ತಾನೆ--ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ.
3 ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
4 ನೀರಿನ ಕಾಲುವೆಗಳ ಬಳಿಯಲ್ಲಿ ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿ ಯಾಗುವರು.
5 ಒಬ್ಬನು--ನಾನು ಕರ್ತನವನು, ಇನ್ನೊಬ್ಬನು ಯಾಕೋಬನ ಹೆಸರಿನವನು ಎಂದು ಹೇಳಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಕರ್ತನಿಗೆಂದು ಬರೆಯಿಸಿಕೊಂಡು ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡ ಹೆಸರನ್ನು ಇಟ್ಟುಕೊಳ್ಳುವನು.
6 ಇಸ್ರಾಯೇಲಿನ ಅರಸನೂ ವಿಮೋಚಕನೂ ಸೈನ್ಯ ಗಳ ಕರ್ತನೂ ಇಂತೆನ್ನುತ್ತಾನೆ--ನಾನೇ ಮೊದಲನೆಯ ವನು, ನಾನೇ ಕಡೆಯವನು, ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.
7 ನಾನು ಪುರಾತನ ಕಾಲ ದವರನ್ನು ಇಟ್ಟಂದಿನಿಂದ ನನ್ನ ಹಾಗೆ ಕರೆದು, ತಿಳಿಸಿ ಅದನ್ನು ಸರಿಯಾಗಿ ನನಗೋಸ್ಕರ ಸಿದ್ಧಮಾಡಿದವನು ಯಾರು? ಮುಂದೆ ಬರುವವುಗಳನ್ನು ಬರಬೇಕಾದದ್ದನ್ನು ಅವರು ಅವರಿಗೆ ತಿಳಿಸಲಿ.
8 ಹೆದರಬೇಡಿರಿ ಇಲ್ಲವೆ ಭಯಪಡಬೇಡಿರಿ ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ? ಅದನ್ನು ಪ್ರಕಟಿಸಲಿ ಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಹೌದು, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.
9 ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು.
10 ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು?
11 ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು.
12 ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ.
13 ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು.
14 ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್‌, ಮತ್ತು ಓಕ್‌ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು.
15 ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು;
16 ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು;
17 ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು.
18 ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ.
19 ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು.
20 ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
21 ಓ ಯಾಕೋಬೇ, ಇಸ್ರಾಯೇಲೇ, ಈ ವಿಷಯ ಗಳನ್ನು ಜ್ಞಾಪಕದಲ್ಲಿಟ್ಟುಕೋ. ನೀನು ನನ್ನ ಸೇವಕ ನಾಗಿದ್ದೀ; ನಾನು ನಿನ್ನನ್ನು ನಿರ್ಮಿಸಿದೆನು. ನೀನು ನನ್ನ ಸೇವಕನು; ಓ ಇಸ್ರಾಯೇಲೇ, ನಾನು ನಿನ್ನನ್ನು ಮರೆತುಬಿಡೆನು.
22 ನಾನು ನಿನ್ನ ದ್ರೋಹಗಳನ್ನು ಗಾಢವಾದ ಮೇಘದಂತೆ ಅಳಿಸಿಬಿಟ್ಟಿದ್ದೇನೆ; ನಿನ್ನ ಪಾಪಗಳನ್ನು ಮೋಡದಂತೆ ಹಾರಿಸಿದ್ದೇನೆ; ನನ್ನ ಕಡೆಗೆ ತಿರಿಗಿಕೋ, ನಾನು ನಿನ್ನನ್ನು ವಿಮೋಚಿಸಿದ್ದೇನೆ.
23 ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
24 ನಿನ್ನನ್ನು ಗರ್ಭದಿಂದ ರೂಪಿಸಿದವನೂ ನಿನ್ನ ವಿಮೋಚಕನೂ ಆದ ಕರ್ತನು ಹೀಗನ್ನುತ್ತಾನೆ--ಎಲವನ್ನೂ ಉಂಟುಮಾಡಿದ ಕರ್ತನು ನಾನೇ. ನಾನೊ ಬ್ಬನೇ ಆಕಾಶವನ್ನು ವಿಸ್ತರಿಸಿ ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ.
25 ಸುಳ್ಳುಗಾರರ ಗುರುತುಗಳನ್ನು ನಿರರ್ಥಕಮಾಡುವವನೂ ಕಣಿ ಹೇಳು ವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಬುದ್ದಿಹೀನ ವಾಗ ಮಾಡುವವನೂ
26 ತನ್ನ ಸೇವಕನ ಮಾತು ಗಳನ್ನು ಸ್ಥಾಪಿಸುವವನೂ ತನ್ನ ದೂತರ ಆಲೋ ಚನೆಯನ್ನು ಪೂರೈಸುವವನೂ ಯೆರೂಸಲೇಮಿಗೆ--ನೀನು ನಿವಾಸವಾಗುವಿ; ಯೆಹೂದಪಟ್ಟಣಗಳಿಗೆ--ಕಟ್ಟಲ್ಪಡುವಿ; ಅದರ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು ಎಂದು ಅನ್ನುವವನೂ
27 ಅಗಾಧಕ್ಕೆ-- ಒಣಗಿಹೋಗು; ನಿನ್ನ ನದಿಗಳನ್ನು ಒಣಗಿಸಿಬಿಡುವೆನು ಎಂದು ಅನ್ನುವವನೂ
28 ಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ.
ಅಧ್ಯಾಯ 45

1 ಕರ್ತನು ತನ್ನ ಅಭಿಷಿಕ್ತನಾದ ಕೋರೆಷನಿಗೆ, ಯಾವನ ಕೈಯನ್ನು ಹಿಡಿದು, ಯಾವನ ಮುಂದೆ ಜನಾಂಗಗಳನ್ನು ಕೆಡವಿಬಿಟ್ಟು, ಅರಸುಗಳ ನಡುವುಗಳನ್ನು ಬಿಚ್ಚಿ ಯಾವನ ಮುಂದೆ ಎರಡು ಕದಗಳುಳ್ಳ ಬಾಗಿಲುಗಳನ್ನು ತೆರೆಯುತ್ತೇನೋ, ಯಾವನ ಮುಂದೆ ದ್ವಾರಗಳು ಮುಚ್ಚಲ್ಪಡುವವೋ ಅವನಿಗೆ ಹೇಳುವದೇನಂದರೆ--
2 ನಾನು ನಿನ್ನ ಮುಂದೆ ಹೋಗಿ ಡೊಂಕಾದ ಸ್ಥಳಗಳನ್ನು ಸಮಮಾಡಿ, ಹಿತ್ತಾ ಳೆಯ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು.
3 ನಿನ್ನನ್ನು ಹೆಸರು ಹಿಡಿದು ಕರೆಯುವ ಕರ್ತನು ನಾನೇ, ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ ಗುಪ್ತ ಸ್ಥಳಗಳಲ್ಲಿ ಮರೆ ಮಾಡಿದ ನಿಧಿ ನಿಕ್ಷೇಪಗಳನ್ನೂ ನಿನಗೆ ಕೊಡುವೆನು.
4 ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದು ಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಅಡ್ಡ ಹೆಸರನ್ನು ಇಟ್ಟಿದ್ದೇನೆ.
5 ನಾನೇ ಕರ್ತನು, ಮತ್ತೊಬ್ಬನಿಲ್ಲ; ನನ್ನ ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದನಾಗಿದ್ದರೂ ನಿನಗೆ ನಡುಕಟ್ಟುವೆನು.
6 ಮೂಡಣದಿಂದ ಪಡುವಣದ ವರೆಗೆ ಇರುವವರೆಲ್ಲರೂ ತಿಳಿದುಕೊಳ್ಳುವಂತೆ ನನ್ನ ಹೊರತು ಯಾರೂ ಇಲ್ಲ, ನಾನೇ ಕರ್ತನು ಮತ್ತೊ ಬ್ಬನು ಇಲ್ಲ.
7 ನಾನು ಬೆಳಕನ್ನು ರೂಪಿಸುವವನೂ ಕತ್ತಲನ್ನು ನಿರ್ಮಿಸುವವನೂ ಸಮಾಧಾನವನ್ನು ಮಾಡು ವವನೂ ಕೆಟ್ಟದ್ದನ್ನು ನಿರ್ಮಿಸುವವನೂ ನಾನೇ; ಕರ್ತ ನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
8 ಆಕಾಶ ಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ; ಗಗನಗಳು ನೀತಿಯನ್ನು ಸುರಿಸಲಿ; ಭೂಮಿಯು ತೆರೆದು ರಕ್ಷಣೆ ಯನ್ನು ತರಲಿ, ನೀತಿಯು ಅದರೊಂದಿಗೆ ಮೊಳೆ ಯಲಿ. ಇದನ್ನು ಸೃಷ್ಟಿಸಿದ ಕರ್ತನು ನಾನೇ.
9 ತನ್ನನ್ನು ರೂಪಿಸಿದವನ ಸಂಗಡ ವಾದ ಮಾಡುವವ ನಿಗೆ ಅಯ್ಯೋ! ಬೋಕಿಯು ಭೂಮಿಯ ಬೋಕಿಯ ಸಂಗಡವಾದ ಮಾಡಲಿ; ಮಣ್ಣು ರೂಪಿಸುವವನಿಗೆ --ನೀನು ಏನು ಮಾಡುತ್ತೀ ಎಂದೂ ನಿನ್ನ ಕೆಲಸವು --ಅವನಿಗೆ ಕೈಯಿಲ್ಲ ಅಂದೀತೇ?
10 ನೀನು ಹುಟ್ಟಿಸು ವದೇನು ಎಂದು ತನ್ನ ತಂದೆಯನ್ನು ಕೇಳುವವನಿಗೆ ಇಲ್ಲವೇ ನೀನು ಹೆರುವದೇನು ಎಂದು ಹೆಂಗಸನ್ನು ಕೇಳುವವನಿಗೆ ಅಯ್ಯೋ.
11 ಇಸ್ರಾಯೇಲಿನ ಪರಿ ಶುದ್ಧನೂ ಅದನ್ನು ರೂಪಿಸಿದವನೂ ಆಗಿರುವ ಕರ್ತನು--ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ ನನ್ನ ಕೈಕೆಲಸದ ವಿಷಯವಾ ಗಿಯೂ ನೀವು ನನಗೆ ಆಜ್ಞೆ ಮಾಡುವಿರಾ?
12 ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನು ಷ್ಯನನ್ನು ಸೃಷ್ಟಿಸಿದೆನು; ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು ಮತ್ತು ನಾನು ಅದರ ಸೈನ್ಯಕ್ಕೆಲ್ಲಾ ಅಪ್ಪಣೆ ಕೊಟ್ಟೆನು.
13 ನಾನೇ ಅವನನ್ನು ನೀತಿಯಲ್ಲಿ ಎಬ್ಬಿಸಿ ದ್ದೇನೆ; ಅವನ ಎಲ್ಲಾ ಮಾರ್ಗಗಳನ್ನು ಸರಾಗ ಮಾಡು ತ್ತೇನೆ; ಅವನು ನನ್ನ ಪಟ್ಟಣವನ್ನು ಕಟ್ಟಿ ಕ್ರಯವ ನ್ನಾಗಲೀ ಬಹುಮಾನವನ್ನಾಗಲೀ ಕೇಳಿಕೊಳ್ಳದೆ ನನ್ನ ಸೆರೆಯವರನ್ನು ಕಳುಹಿಸಿಬಿಡುವನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
14 ಕರ್ತನು ಹೇಳುವದೇನಂದರೆ--ಐಗುಪ್ತದ ಆದಾ ಯವೂ ಇಥಿಯೋಪ್ಯದ ವ್ಯಾಪಾರವೂ ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವ ರಾಗಿ ನಿಮ್ಮನ್ನು ಅನುಸರಿಸುವರು; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊ ಬ್ಬನು ಇಲ್ಲ, ಬೇರೆ ದೇವರು ಇಲ್ಲವೇ ಇಲ್ಲ.
15 ಓ ಇಸ್ರಾಯೇಲ್ಯರ ದೇವರೇ, ರಕ್ಷಕನೇ, ನಿಶ್ಚಯವಾ ಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.
16 ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
17 ಆದರೆ ಇಸ್ರಾಯೇಲ್ಯರಾದರೋ ಶಾಶ್ವತವಾದ ರಕ್ಷಣೆಯೊಂದಿಗೆ ಕರ್ತನಲ್ಲಿ ರಕ್ಷಿಸಲ್ಪ ಡುವರು; ನೀವು ಯುಗಯುಗಾಂತರಕ್ಕೂ ನಾಚಿಕೆ ಪಡುವದಿಲ್ಲ ಇಲ್ಲವೆ ಮಾನಭಂಗಪಡುವದಿಲ್ಲ.
18 ಆಕಾಶಗಳನ್ನು ನಿರ್ಮಿಸಿದ ಕರ್ತನು ಇಂತೆನ್ನು ತ್ತಾನೆ--ದೇವರು ತಾನೇ ಭೂಮಿಯನ್ನು ನಿರ್ಮಿಸಿ ಅದನ್ನು ಉಂಟು ಮಾಡಿದನು. ಆತನೇ ಅದನ್ನು ಸ್ಥಾಪಿಸಿದನು; ಅದನ್ನು ವ್ಯರ್ಥವಾಗಿ ಸೃಷ್ಟಿಸದೇ ಜನ ನಿವಾಸಕ್ಕಾಗಿಯೇ ರೂಪಿಸಿದನು; ನಾನೇ ಕರ್ತನು, ಮತ್ತೊಬ್ಬನಿಲ್ಲ.
19 ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ; ವ್ಯರ್ಥವಾಗಿ ನನ್ನನ್ನು ಹುಡುಕಿರಿ ಎಂದು ಯಾಕೋಬನ ವಂಶ ದವರಿಗೆ ನಾನು ಹೇಳಲಿಲ್ಲ, ಕರ್ತನಾದ ನಾನೇ ನೀತಿ ಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.
20 ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸವಿಾಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತು ಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನಹಿಸುವವರು ಏನೂ ತಿಳಿಯದವರಾಗಿದ್ದಾರೆ.
21 ನೀವು ಹೇಳಿರಿ ಮತ್ತು ಅವರನ್ನು ಸವಿಾಪಕ್ಕೆ ತನ್ನಿರಿ; ಹೌದು, ಒಟ್ಟಿಗೆ ಅವರು ಆಲೋಚಿಸಲಿ; ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಆ ಕಾಲ ದಿಂದ ತಿಳಿಸಿದವನು ಯಾರು? ಕರ್ತನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ನೀತಿಯುಳ್ಳ ದೇವರೂ ರಕ್ಷಕನೂ ಇಲ್ಲವೇ ಇಲ್ಲ.
22 ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿ ರಕ್ಷಣೆಯನ್ನು ಹೊಂದಿರಿ; ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.
23 ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು: ಎಲ್ಲರೂ ನನಗೆ ಅಡ್ಡಬೀಳುವರು, ಪ್ರತಿ ನಾಲಿಗೆಯು ಪ್ರತಿಜ್ಞೆ ಮಾಡು ವದು.
24 ಕರ್ತನಲ್ಲಿ ಮಾತ್ರ ನನಗೆ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಆತನ ಬಳಿಗೆ ಬರುವರು; ಆತನ ಮೇಲೆ ಉರಿಗೊಂಡವ ರೆಲ್ಲರೂ ನಾಚಿಕೆಗೆ ಈಡಾಗುವರು ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.
25 ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
ಅಧ್ಯಾಯ 46

1 1 ಬೇಲ್‌(ದೇವತೆಯು)ಬೊಗ್ಗಿದೆ, ನೆಬೋ (ದೇವತೆಯು) ಕುಗ್ಗಿದೆ; ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು, ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು.
2 ಒಟ್ಟಿಗೆ ಕುಗ್ಗಿ, ಬೊಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ ತಾವೇ ಸೆರೆಗೆ ಹೋದವು.
3 ಓ ಯಾಕೋಬನ ಮನೆತನದವರೇ, ಇಸ್ರಾ ಯೇಲ್‌ ಮನೆತನದಲ್ಲಿ ಉಳಿದಿರುವವರೆಲ್ಲರೇ, ನಿಮ್ಮನ್ನು ಗರ್ಭದಲ್ಲಿ ಹೊತ್ತು, ಹುಟ್ಟಿದಂದಿನಿಂದ ವಹಿಸುತ್ತಿದ್ದಾತನ ಮಾತನ್ನು ಕೇಳಿರಿ--
4 ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು.
5 ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸೀರಿ, (ಇಬ್ಬರು) ನನ್ನ ಸಮಾನರೆಂದು ನನ್ನನ್ನು ಯಾರೊಡನೆ ಸಮ ಮಾಡೀರಿ?
6 ಚೀಲದಿಂದ ಚಿನ್ನವನ್ನು ಸುರಿದು ತ್ರಾಸಿ ನಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೂಲಿ ಕೊಟ್ಟಾಗ, ಅವನು ಅದನ್ನು ದೇವರನ್ನಾಗಿ ಮಾಡಲು ಅವರು ಅದಕ್ಕೆ ಎರಗಿ ಪೂಜೆ ಮಾಡುವರು.
7 ಅವರು ಅದನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಅದರ ಸ್ಥಳದಲ್ಲಿ ಇಳಿಸಿ ನಿಲ್ಲಿಸುವರು. ಅದು ಅದರ ಸ್ಥಳದಿಂದ ಜರುಗದು. ಹೌದು, ಒಬ್ಬನು ಕೂಗಿ ಕೊಂಡರೂ ಅದು ಅವನಿಗೆ ಉತ್ತರಕೊಡಲಾರದು ಇಲ್ಲವೆ ಅವನನ್ನು ಕಷ್ಟದಿಂದ ರಕ್ಷಿಸಲಾರದು.
8 ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು, ನಿಮ್ಮನ್ನು ಮನುಷ್ಯರೆಂದು ತೋರಿಸಿರಿ, ಅದನ್ನು ತಿರುಗಿ ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ;
9 ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಮತ್ತೊಬ್ಬನಿಲ್ಲ; ನಾನೇ ದೇವರು, ನನಗೆ ಸರಿಸಮಾ ನನು ಇಲ್ಲ.
10 ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ.
11 ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.
12 ಕಠಿಣ ಹೃದಯವುಳ್ಳವರೇ, ನೀತಿಗೆ ದೂರವಾದವರೇ, ನನಗೆ ಕಿವಿಗೊಡಿರಿ;
13 ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು, ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾ ಗದು; ನನ್ನ ಮಹಿಮೆಯಾಗಿರುವ ಇಸ್ರಾಯೇಲಿ ಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟು ಮಾಡುವೆನು.
ಅಧ್ಯಾಯ 47

1 ಬಾಬೆಲಿನ ಕುಮಾರ್ತೆಯಾದ ಓ ಕನ್ಯಾ ಸ್ತ್ರೀಯೇ, ಕೆಳಕ್ಕೆ ಇಳಿದು ಬಂದು ದೂಳಿ ನಲ್ಲಿ ಕುಳಿತುಕೋ, ಓ ಕಸ್ದೀಯರ ಕುಮಾರಿಯೇ ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಯಾಕಂದರೆ ಇನ್ನು ಮೇಲೆ ನೀನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯಲ್ಪಡುವದಿಲ್ಲ.
2 ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ ನದಿಗಳನ್ನು ಹಾದುಹೋಗು.
3 ನಿನ್ನ ಬೆತ್ತಲೆತನವು ಮುಚ್ಚಲ್ಪಡದೇ ಇದ್ದದರಿಂದ ನೀನು ನಾಚಿಕೆಗೆ ಈಡಾಗುವಿ, ನಾನು ನಿನ್ನನ್ನು ಮನುಷ್ಯನಂತೆ ಸಂದಿಸದೆ ನಿನಗೆ ಮುಯ್ಯಿ ತೀರಿಸುವೆನು.
4 ನಮ್ಮ ವಿಮೋಚಕನಿಗಾದರೋ, ಸೈನ್ಯಗಳ ಕರ್ತನು ಎಂಬದೇ ಆತನ ಹೆಸರು, ಆತನೇ ಇಸ್ರಾಯೇಲಿನ ಪರಿಶುದ್ಧನು.
5 ಓ ಕಸ್ದೀಯರ ಕುಮಾರಿಯೇ, ಮೌನ ವಾಗಿ ಕುಳಿತುಕೋ, ಕತ್ತಲೊಳಗೆ ಹೋಗು; ಯಾಕಂ ದರೆ ಇನ್ನು ಮೇಲೆ ನೀನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವದಿಲ್ಲ.
6 ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವಾಸ್ಥ್ಯವನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು; ನೀನು ಅವರಿಗೆ ಕರುಣೆಯನ್ನು ತೋರಿಸದೆ ಮುದುಕರ ಮೇಲೆಯೂ ಬಹು ಭಾರವಾದ ನೊಗವನ್ನು ಹೊರಿ ಸಿದಿ.
7 ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ.
8 ನಾನೇ ಇರುವವಳು ನನ್ನ ಹೊರತು ಇನ್ನು ಯಾರೂ ಇಲ್ಲ. ನಾನು ವಿಧವೆಯಾಗಿ ಕೂತುಕೊಳ್ಳು ವದಿಲ್ಲ; ಪುತ್ರಶೋಕವನ್ನು ಅನುಭವಿಸುವದಿಲ್ಲ ಎಂದು ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿ ಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.
9 ಒಂದೇ ದಿನದೊಳಗೆ ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವಾ ಸ್ಥಿತಿಯು ಇವೆರಡೂ ನಿನಗೆ ಬರುವವು; ನಿನ್ನ ಮಂತ್ರಗಳು ಬಹಳವಾಗಿರುವದ ರಿಂದಲೂ ನಿನ್ನ ಮಾಟಗಳು ಹೆಚ್ಚಾಗಿರುವದರಿಂದಲೂ ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವವು.
10 ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆಯಿಟ್ಟು ನನ್ನನ್ನು ಯಾರೂ ನೋಡುವದಿಲ್ಲವೆಂದು ಹೇಳಿದಿ. ನಿನ್ನ ಜ್ಞಾನವು, ನಿನ್ನ ತಿಳುವಳಿಕೆಯು ನಿನ್ನನ್ನು ದಾರಿತಪ್ಪಿಸಿದ್ದ ರಿಂದ ನಿನ್ನ ಹೃದಯದಲ್ಲಿ--ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ ಎಂದು ಅಂದು ಕೊಂಡಿ.
11 ಆದದರಿಂದ ನೀನು ಮಂತ್ರಿಸಿ ನಿವಾರಿಸ ಲಾರದ ಕೇಡು ನಿನ್ನ ಮೇಲೆ ಬರುವದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನಿನಗೆ ತಿಳಿಯದ ನಾಶನವು ಪಕ್ಕನೆ ನಿನ್ನ ಮೇಲೆ ಬರುವದು.
12 ನಿನ್ನ ಮಾಟಗಳ ಸಂಗಡ ನಿಂತುಕೋ ನಿನ್ನ ಯೌವನದಾರಭ್ಯ ಬೇಸತ್ತು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ನೀನು ಎದು ರಾಗಿ ನಿಲ್ಲಬಹುದು.
13 ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
14 ಇಗೋ, ಅವರೆಲ್ಲಾ ಕೂಳೆ ಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡು ವದು, ಜ್ವಾಲೆಯ ಶಕ್ತಿಯಿಂದ ತಮ್ಮನ್ನು ರಕ್ಷಿಸಿಕೊಳ್ಳ ಲಾರರು; ಇಲ್ಲವೆ ಕಾಯಿಸಿಕೊಳ್ಳುವದಕ್ಕೆ ಕೆಂಡವಿರು ವದಿಲ್ಲ, ಹತ್ತಿರ ಕೂತುಕೊಳ್ಳಲು ಬೆಂಕಿ ಇಲ್ಲ.
15 ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
ಅಧ್ಯಾಯ 48

1 ಇಸ್ರಾಯೇಲೆಂಬ ಹೆಸರಿನವರೂ ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ; ಕರ್ತನ ಹೆಸರಿನ ಮೇಲೆ ಆಣೆಯಿಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.
2 ಅವರು ತಾವು ಪರಿಶುದ್ಧ ಪಟ್ಟಣದವರು ಎಂದು ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ. ಸೈನ್ಯಗಳ ಕರ್ತನು ಎಂಬದು ಆತನ ಹೆಸರು.
3 ಆರಂಭದಲ್ಲೇ ಹಳೇ ಸಂಗತಿಗಳನ್ನು ನಾನು ಪ್ರಕಟಿಸಿದ್ದೇನೆ. ಅವು ನನ್ನ ಬಾಯಿಂದ ಹೊರಟವು ಮತ್ತು ನಾನು ಅವುಗಳನ್ನು ತೋರಿಸಿದ್ದೇನೆ. ನಾನು ತಟ್ಟನೆ ನಡೆಸಲು ಅವು ನೆರವೇರಿದವು.
4 ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ಹಿತ್ತಾಳೆ ಎಂದು ನಾನು ತಿಳಿದುಕೊಂಡಿದ್ದೇನೆ.
5 ಆದದರಿಂದಲೇ ಈ ಕಾರ್ಯ ಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ತಿಳಿಸಿದೆನು.
6 ನೀನು ಕೇಳಿದ್ದೀ; ಇವೆಲ್ಲ ವುಗಳನ್ನು ದೃಷ್ಟಿಸು; ನೀವು ಅದನ್ನು ತಿಳಿಸದೇ ಇದ್ದಿರೋ? ಇಂದಿನಿಂದ ಹೊಸ ಸಂಗತಿಗಳನ್ನು ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನು ನಿನಗೆ ಅರು ಹುತ್ತೇನೆ.
7 ಆರಂಭದಲ್ಲಿ ಆಗದಿದ್ದವುಗಳು ಈಗ ಉಂಟಾಗಿವೆ; ಇಗೋ, ಅವು ನನಗೆ ತಿಳಿದಿದ್ದವೆಂದು ನೀನು ಹೇಳದಂತೆ ಈ ದಿನಕ್ಕೆ ಮುಂಚೆಯೇ ಅವು ಗಳನ್ನು ಕುರಿತು ನಿನಗೆ ಕೇಳಗೊಡಿಸಲಿಲ್ಲ.
8 ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.
9 ನನ್ನ ಹೆಸರು ಕೆಡದಂತೆ ನನ್ನ ಕೋಪವನ್ನು ತಡೆ ಮಾಡಿದೆ. ನನ್ನ ಸ್ತುತಿಗೆ ಕಳಂಕಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.
10 ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ.
11 ನನಗಾಗಿಯೇ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಯಾಕೆ ಅಪವಿತ್ರ ವಾಗುವದು? ನನ್ನ ಮಹಿಮೆಯನ್ನು ನಾನು ಮತ್ತೊ ಬ್ಬನಿಗೆ ಸಲ್ಲಗೊಡಿಸೆನು.
12 ಓ ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು; ಆತನು--ನಾನೇ; ನಾನೇ ಮೊದಲನೆಯವನು, ನಾನೇ ಕಡೆಯವನು.
13 ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು; ನನ್ನ ಬಲಗೈ ಆಕಾಶವನ್ನು ಹರಡಿತು; ನಾನು ಅವುಗಳನ್ನು ಕರೆಯಲು ಅವು ಒಟ್ಟಾಗಿ ನಿಂತುಕೊಂಡವು.
14 ನೀವೆಲ್ಲರೂ ಕೂಡಿಕೊಂಡು ಕೇಳಿರಿ. ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವರು ಯಾರು? ಕರ್ತನು ಅವನನ್ನು ಪ್ರೀತಿಮಾಡಿದ್ದಾನೆ. ಆತನು ಬಾಬೆಲಿನಲ್ಲಿ ಅವನ ಇಷ್ಟವನ್ನು ನೆರವೇರಿಸುವನು; ಆತನ ಹಸ್ತವು ಕಸ್ದೀಯರ ಮೇಲಿರುವದು.
15 ನಾನೇ ನಾನಾಗಿಯೇ ಮಾತಾಡಿದ್ದೇನೆ; ಹೌದು, ನಾನು ಅವನನ್ನು ಕರೆದು ಬರಮಾಡಿದ್ದೇನೆ; ಅವನು ಅವನ ಮಾರ್ಗವನ್ನು ಏಳಿಗೆ ಪಡಿಸುವನು.
16 ನನ್ನ ಸವಿಾಪಕ್ಕೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಅಂದಿನಿಂದಲೂ ಅಲ್ಲಿ ನಾನು ಇದ್ದೇನೆ; ಈಗ ದೇವರಾದ ಕರ್ತನು ಆತನ ಆತ್ಮ ದೊಡನೆ ನನ್ನನ್ನು ಕಳುಹಿಸಿದ್ದಾನೆ.
17 ನಿನ್ನ ವಿಮೋಚ ಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಕರ್ತನು ಹೀಗೆನ್ನುತ್ತಾನೆ--ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡಿಸುವವನೂ ಆದ ನಾನೇ ನಿನ್ನ ಕರ್ತನೂ ನಿನ್ನ ದೇವರೂ ಆಗಿದ್ದೇನೆ.
18 ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು;
19 ನಿನ್ನ ಸಂತಾನವು ಸಹ ಹರಳಿನಂತೆಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟುವವರು ದಪ್ಪ ಮರಳಿನಂತೆಯೂ ಇರುವರು; ಅವರ ಹೆಸರು ತೆಗೆದುಹಾಕಲ್ಪಡದೆ ನನ್ನ ಸಮ್ಮುಖದಿಂದ ನಾಶವಾಗದೆ ಇರುತ್ತಿತ್ತು.
20 ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
21 ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ನೀರು ರಭಸದಿಂದ ಹೊರಗೆ ಬಂತು;
22 ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಕರ್ತನು ನುಡಿಯುತ್ತಾನೆ.
ಅಧ್ಯಾಯ 49

1 1 ಓ ದ್ವೀಪ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ದೂರದ ಜನಗಳೇ, ಕಿವಿಗೊಡಿರಿ! ನಾನು ಗರ್ಭದಲ್ಲಿದ್ದಾಗಲೇ ಕರ್ತನು ನನ್ನನ್ನು ಕರೆ ದನು. ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.
2 ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ; ಆತನು ನುಣುಪಾದ ಬಾಣವನ್ನಾಗಿ ನನ್ನನ್ನು ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
3 ಆತನು ನನಗೆ--ನೀನು ನನ್ನ ಸೇವಕನು, ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ ಎಂದು ಹೇಳಿದನು.
4 ಅದಕ್ಕೆ ನಾನು--ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ನಿಷ್ಪ್ರಯೋಜನವಾಗಿಯೂ ವ್ಯರ್ಥವಾ ಗಿಯೂ ಕಳಕೊಂಡೆನೆಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಕರ್ತನ ಬಳಿಯಲ್ಲಿಯೂ ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.
5 ಯಾಕೋಬನ್ನು ತನ್ನ ಕಡೆಗೆ ತಿರಿಗಿ ಸೇರಿಸಿಕೊಳ್ಳ ಬೇಕೆಂತಲೂ ಇಸ್ರಾಯೇಲು ತನ್ನ ಕಡೆಗೆ ಕೂಡಿಕೊಳ್ಳು ವಂತೆಯೂ ಆತನು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನು. ಆದರೂ ನಾನು ಕರ್ತನ ದೃಷ್ಟಿಯಲ್ಲಿ ಗೌರವವುಳ್ಳವನಾಗಿರುವೆನು; ನನ್ನ ದೇವರೇ ನನಗೆ ಬಲವಾಗಿರುವನು.
6 ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು.
7 ಮನುಷ್ಯನಿಂದ ತಿರಸ್ಕರಿಸಲ್ಪಟ್ಟವನು ಜನಾಂಗಕ್ಕೆ ಅಸ ಹ್ಯನೂ ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಕರ್ತನೂ ಹೀಗೆ ಹೇಳುತ್ತಾನೆ, ಕರ್ತನ ನಂಬಿಗಸ್ತಿ ಕೆಯನ್ನೂ ನಿನ್ನನ್ನು ಆದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ನೋಡಿ ಅರಸರು ಏಳುತ್ತಾರೆ; ಅಧಿ ಪತಿಗಳು ಸಹ ಆರಾಧಿಸುವರು.
8 ಕರ್ತನು ಹೀಗ ನ್ನುತ್ತಾನೆ--ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರ ವನ್ನು ದಯಪಾಲಿಸಿದ್ದೇನೆ; ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ, ನಾನು ನಿನ್ನನ್ನು ಕಾಪಾಡಿ ಭೂಮಿಯನ್ನು ಸ್ಥಾಪಿಸುವದಕ್ಕೂ ಹಾಳಾಗಿರುವ ಸ್ವಾಸ್ತ್ಯ ಗಳನ್ನು ಬಾಧ್ಯವಾಗಿ ಹೊಂದುವಂತೆಯೂ ಜನರ ಒಡಂಬಡಿಕೆಗಾಗಿ ನಿನಗೆ ಕೊಡುವೆನು.
9 ನೀನು ಬಂದಿ ಸಲ್ಪಟ್ಟವರಿಗೆ--ಹೊರಗೆ ಹೋಗಿರಿ, ಕತ್ತಲೆಯಲ್ಲಿರು ವವರಿಗೆ--ನಿಮ್ಮನ್ನು ತೋರ್ಪಡಿಸಿಕೊಳ್ಳಿರಿ ಎಂದು ಹೇಳಬಹುದು. ಅವರು ದಾರಿಗಳಲ್ಲಿ ಮೇಯಿಸುವರು, ಅವರ ಎಲ್ಲಾ ಎತ್ತರವಾದ ಪ್ರದೇಶಗಳು ಕೂಡ ಅವ ರಿಗೆ ಹುಲ್ಲುಗಾವಲಾಗಿರುವವು.
10 ಅವರಿಗೆ ಹಸಿವೆ ಯಾಗಲಿ ಬಾಯಾರಿಕೆಯಾಗಲಿ ಇರವು. ಇಲ್ಲವೆ ಝಳವೂ ಬಿಸಿಲೂ ಬಡಿಯವು; ಯಾಕಂದರೆ ಅವ ರನ್ನು ಕರುಣಿಸುವಾತನು ಅವರನ್ನು ನಡೆಸುತ್ತಾ ನೀರು ಕ್ಕುವ ಒರತೆಗಳ ಬಳಿಗೆ ತರುವನು.
11 ನನ್ನ ಬೆಟ್ಟ ಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜ ಮಾರ್ಗಗಳನ್ನು ಉನ್ನತಪಡಿಸುವೆನು.
12 ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್‌ ದೇಶದಿಂದ ಬರುತ್ತಿದ್ದಾರೆ.
13 ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
14 ಆದರೆ ಚೀಯೋನು--ಕರ್ತನು ನನ್ನನ್ನು ತಳ್ಳಿ ಬಿಟ್ಟಿದ್ದಾನೆ ಮತ್ತು ನನ್ನ ಕರ್ತನು ನನ್ನನ್ನು ಮರೆತು ಬಿಟ್ಟಿದ್ದಾನಲ್ಲಾ ಎಂದು ಅಂದುಕೊಂಡಳು.
15 ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಹೆಂಗಸು ತನ್ನ ಮೊಲೇ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆ ಯುವದಿಲ್ಲ.
16 ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಕೆತ್ತಿಕೊಂಡಿದ್ದೇನೆ; ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
17 ನಿನ್ನ ಮಕ್ಕಳು ತ್ವರೆಪಡುವರು; ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟುಹೋಗುವರು.
18 ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇಗೋ, ಇವರೆಲ್ಲರೂ ಕೂಡಿ ಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವಿ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿ ಕೊಳ್ಳುವಿ.
19 ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಲ್ಪಟ್ಟ ನಿನ್ನ ದೇಶವೂ ಈಗ ನಿವಾಸಿ ಗಳಿಗೆ ಇಕ್ಕಟ್ಟಾಗುವವು; ನಿನ್ನನ್ನು ನುಂಗಿದವರು ದೂರ ವಾಗುವರು.
20 ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು.
21 ಆಗ ನೀನು ನನ ಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನೋ, ಮಕ್ಕಳನ್ನು ಕಳೆದುಕೊಂಡವಳು, ಏಕಾಂತ ವಾಗಿ ಸೆರೆಯಲ್ಲಿದ್ದು ಹೊರಗೆ ಹಾಕಲ್ಪಟ್ಟವಳ ಹಾಗೆ ಇದ್ದೆನು. ಇವರನ್ನು ಸಾಕಿದವರು ಯಾರು? ಅವರೆ ಲ್ಲಿದ್ದರು ಎಂದು ಅಂದುಕೊಳ್ಳುವಿ.
22 ಕರ್ತನಾದ ದೇವರು ಇಂತೆನ್ನುತ್ತಾನೆ--ಇಗೋ, ನಾನು ಅನ್ಯಜನಗಳ ಕಡೆಗೆ ಕೈ ಎತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಕೈಹಿಡಿದು ತರುವರು; ನಿನ್ನ ಕುಮಾರ್ತೆಯರನ್ನು ತಮ್ಮ ಹೆಗಲಮೇಲೆ ತರುವರು.
23 ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.
24 ಶೂರನ ಕೈಯೊಳಗಿಂದ ಕೊಳ್ಳೆಯನ್ನು ತೆಗೆದು ಕೊಳ್ಳಬಹುದೋ? ಇಲ್ಲವೆ ನ್ಯಾಯವಾಗಿ ಸೆರೆಯವ ರನ್ನು ಬಿಡಿಸಬಹುದೋ?
25 ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.
25 ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.
26 ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.
ಅಧ್ಯಾಯ 50

1 ಕರ್ತನು ಹೀಗನ್ನುತ್ತಾನೆ--ನಾನು ಬಿಟ್ಟು ಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ಇಲ್ಲವೆ ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೇನು? ಇಗೋ, ನಿಮ್ಮ ಅಕ್ರಮ ಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ; ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ.
2 ನಾನು ಬಂದಾಗ ಯಾಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಯಾಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಹಸ್ತವು ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೇ ಬಿಡಿಸುವದಕ್ಕೆ ನನ್ನಲ್ಲಿ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಅರಣ್ಯವನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ವಿಾನುಗಳು ಬಾಯಾರಿ ಸತ್ತುನಾರುವವು.
3 ನಾನು ಆಕಾಶಗಳಿಗೆ ಅಂಧಕಾರವನ್ನು ಹೊದಿಸಿ ಗೋಣೀತಟ್ಟನ್ನು ಅದರ ಹೊದಿಕೆಯನ್ನಾಗಿ ಮಾಡುವೆನು.
4 ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವಿ ಎಂಬದನ್ನು ನಾನು ತಿಳಿಯುವ ಹಾಗೆ ಕರ್ತನಾದ ದೇವರು ಶಿಕ್ಷಿತ ನಾಲಿಗೆಯನ್ನು ನನಗೆ ಕೊಟ್ಟಿದ್ದಾನೆ. ಆತನು ಹೊತ್ತಾರೆಯಿಂದ ಹೊತ್ತಾರೆಗೆ ನನ್ನನ್ನು ಎಚ್ಚರಿಸಿ ಸುಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಜಾಗರೂಕಗೊಳಿಸುತ್ತಾನೆ.
5 ಕರ್ತನಾದ ದೇವರು ನನ್ನ ಕಿವಿಯನ್ನು ತೆರೆದಿದ್ದಾನೆ. ನಾನು ಎದುರುಬೀಳಲಿಲ್ಲ ಇಲ್ಲವೆ ವಿಮುಖನಾಗಲೂ ಇಲ್ಲ.
6 ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.
7 ಕರ್ತನಾದ ದೇವರು ನನಗೆ ಸಹಾಯ ಮಾಡುವನು; ಆದಕಾರಣ ನಾನು ಆಶಾಭಂಗಪಡುವ ದಿಲ್ಲ; ಆದದರಿಂದ ನನ್ನ ಮುಖವನ್ನು ಬೆಣಚುಕಲ್ಲಿನಂತೆ ಮಾಡಿಕೊಂಡಿದ್ದೇನೆ; ನಾನು ನಾಚಿಕೆಪಡಲಾರೆನೆಂದು ನನಗೆ ಗೊತ್ತು.
8 ನನಗೆ ನೀತಿ ನಿರ್ಣಯಿಸುವಾತನು ಸವಿಾಪದಲ್ಲಿಯೇ ಇದ್ದಾನೆ; ನನ್ನೊಂದಿಗೆ ಹೋರಾಡು ವವನು ಯಾರು? ನಾವು ಒಟ್ಟಿಗೆ ನಿಂತುಕೊಳ್ಳೋಣ, ನನ್ನ ಎದುರಾಳಿ ಯಾರು? ಅವನು ನನ್ನ ಸವಿಾಪಕ್ಕೆ ಬರಲಿ.
9 ಇಗೋ, ಕರ್ತನಾದ ದೇವರು ನನಗೆ ಸಹಾಯ ಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು; ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದುಬಿಡುವದು.
10 ನಿಮ್ಮೊಳಗೆ ಕರ್ತನಿಗೆ ಭಯಪಟ್ಟು ಆತನ ಸೇವ ಕನ ಸ್ವರವನ್ನು ಕೇಳಿ ಬೆಳಕಿಲ್ಲದೆ ಕತ್ತಲೆಯಲ್ಲಿ ನಡೆ ಯುವವನು ಯಾರು? ಅವನು ಕರ್ತನ ಹೆಸರಿನಲ್ಲಿ ನಂಬಿಕೆಯಿಟ್ಟು ತನ್ನ ದೇವರ ಮೇಲೆ ಆತುಕೊಳ್ಳಲಿ.
11 ಇಗೋ, ಕಿಡಿಗಳಿಂದ ಆವರಿಸಿಕೊಳ್ಳುವಂತೆ ಬೆಂಕಿ ಯನ್ನು ಹತ್ತಿಸಿಕೊಳ್ಳುವವರೆಲ್ಲರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಹಸ್ತದಿಂದ ನಿಮಗಾಗುವದು ಇದೇ; ನೀವು ದುಃಖದಲ್ಲಿ ಬಿದ್ದುಕೊಂಡಿರುವಿರಿ.
ಅಧ್ಯಾಯ 51

1 ನೀತಿಯನ್ನು ಹಿಂಬಾಲಿಸುವವರೇ, ಕರ್ತನನ್ನು ಹುಡುಕುವವರೇ, ನನ್ನ ಕಡೆಗೆ ಕಿವಿ ಗೊಡಿರಿ; ನೀವು ಯಾವ ಬಂಡೆಯೊಳಗಿಂದ ಕಡಿಯ ಲ್ಪಟ್ಟಿರೋ ಮತ್ತು ಯಾವ ಗುಂಡಿಯೊಳಗಿಂದ ಅಗೆಯ ಲ್ಪಟ್ಟಿರೋ ಆ ಕಡೆಗೆ ನೋಡಿರಿ.
2 ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನು ದೃಷ್ಟಿಸಿರಿ; ನಾನು ಅವನೊಬ್ಬನನ್ನೇ ಕರೆದು ಆಶೀರ್ವ ದಿಸಿ ವೃದ್ಧಿಗೊಳಿಸಿದೆನು.
3 ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್‌ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
4 ನನ್ನ ಜನರೇ, ಕೇಳಿರಿ; ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ; ನ್ಯಾಯಪ್ರಮಾಣವು ನನ್ನಿಂದ ಹೊರಡುವದು ಮತ್ತು ನನ್ನ ನ್ಯಾಯವನ್ನು ಜನರಿಗೆ ಬೆಳಕನ್ನಾಗಿ ಮಾಡುವೆನು.
5 ನನ್ನ ನೀತಿಯು ಸವಿಾಪಿ ಸಿತು; ನನ್ನ ರಕ್ಷಣೆಯು ಹೊರಟಿತು ಮತ್ತು ನನ್ನ ತೋಳುಗಳು ಜನರಿಗೆ ನ್ಯಾಯವನ್ನು ತೀರಿಸುವವು; ದ್ವೀಪಗಳವರು ನನ್ನ ತೋಳಿನ ಮೇಲೆ ಭರವಸವಿಟ್ಟು ನನಗೋಸ್ಕರ ಕಾದುಕೊಂಡಿರುತ್ತಾರೆ.
6 ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಯಾಕಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವವು, ಭೂಮಿಯು ಹಳೆಯ ಬಟ್ಟೆಯಂತಾಗುವದು. ಅದರಲ್ಲಿ ವಾಸಿಸುವ ವರು ಅದೇ ರೀತಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವದು ಮತ್ತು ನನ್ನ ನೀತಿಯು ಎಂದಿಗೂ ರದ್ದಾಗದು.
7 ನೀತಿಯನ್ನು ಅರಿತು ನನ್ನ ನ್ಯಾಯಪ್ರಮಾಣವನ್ನು ಹೃದಯದಲ್ಲಿಟ್ಟು ಕೊಂಡಿರುವ ಜನರೇ, ನನಗೆ ಕಿವಿಗೊಡಿರಿ, ಮನುಷ್ಯರ ನಿಂದೆಗೆ ಭಯಪಡಬೇಡಿರಿ; ಇಲ್ಲವೆ ಅವರ ದೂಷಣೆಗೆ ಹೆದರ ಬೇಡಿರಿ.
8 ನುಸಿಯು ಬಟ್ಟೆಯನ್ನು ತಿನ್ನುವಂತೆ ಅವರನ್ನು ತಿಂದುಬಿಡುವದು ಮತ್ತು ಹುಳವು ಅವರನ್ನು ಉಣ್ಣೆ ಯಂತೆ ತಿನ್ನುವದು; ಆದರೆ ನನ್ನ ನೀತಿಯು ಶಾಶ್ವತವಾಗಿ ರುವದು ಮತ್ತು ನನ್ನ ರಕ್ಷಣೆಯು ತಲತಲಾಂತರ ಗಳಿಗೂ ಇರುವದು.
9 ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
10 ಸಮುದ್ರವನ್ನೂ ದೊಡ್ಡ ಅಗಾಧದ ನೀರನ್ನು ಬತ್ತಿಸಿ, ವಿಮುಕ್ತರಾದವರು ಹಾದು ಹೋಗುವದಕ್ಕೆ ಸಮು ದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದಂಥವನು ನೀನಲ್ಲವೋ?
11 ಆದಕಾರಣ ಕರ್ತನಿಂದ ವಿಮೋಚಿ ಸಲ್ಪಟ್ಟವರು ತಿರುಗಿಕೊಂಡು ಹಾಡುತ್ತಾ ಚೀಯೋನಿಗೆ ಬರುವರು; ಶಾಶ್ವತವಾದ ಆನಂದವು ಅವರ ತಲೆಯ ಮೇಲಿರುವದು, ಅವರು ಹರ್ಷಾನಂದಗಳನ್ನು ಹೊಂದಿಕೊಳ್ಳುವರು; ದುಃಖವು, ವ್ಯಥೆಯು ಓಡಿ ಹೋಗುವವು.
12 ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು?
13 ಆಕಾಶವನ್ನು ಹಾಸಿ, ಭೂಮಿಗೆ ಅಸ್ತಿವಾರವನ್ನು ಹಾಕಿ, ನಿನ್ನನ್ನು ಉಂಟು ಮಾಡಿದ ಕರ್ತನನ್ನು ನೀನು ಮರೆತುಬಿಟ್ಟು ಹಿಂಸಕನ ಉಗ್ರಕ್ಕೆ ಎಡೆಬಿಡದೆ ಪ್ರತಿದಿನವೂ ಅವನು ನಾಶ ಪಡಿಸುವನೋ ಎಂಬಂತೆ ಅಂಜಿಕೊಂಡಿದ್ದಿಯಲ್ಲಾ? ಮತ್ತು ಆ ಹಿಂಸಕನ ಉಗ್ರವು ಎಲ್ಲಿ?
14 ಸೆರೆಯವನು ತಾನು ಕುಣಿಯಲ್ಲಿ ಸಾಯದಂತೆಯೂ ಇಲ್ಲವೆ ತನಗೆ ಆಹಾರದ ಕೊರತೆ ಇರದಂತೆಯೂ ತಾನು ಬಿಡುಗಡೆ ಹೊಂದುವಂತೆಯೂ ಆತುರಪಡುತ್ತಾನೆ.
15 ಆದರೆ ತೆರೆಗಳು ಭೋರ್ಗರೆಯುವಾಗ ಸಮುದ್ರವನ್ನು ವಿಭಾಗಿ ಸಿದ ನಿನ್ನ ದೇವರಾಗಿರುವ ಕರ್ತನು ನಾನೇ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು.
16 ಆಕಾಶಗಳನ್ನು ನಿಲ್ಲಿಸುವದಕ್ಕೂ ಭೂಮಿಗೆ ಅಸ್ತಿವಾರವನ್ನು ಹಾಕುವ ದಕ್ಕೂ ಚೀಯೋನಿಗೆ ನೀನು ನನ್ನ ಜನರೆಂದು ಹೇಳುವ ದಕ್ಕೂ ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.
17 ಕರ್ತನ ಕೈಯಿಂದ ಆತನ ಉಗ್ರದ ಪಾತ್ರೆಯನ್ನು ಕುಡಿದ ಓ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು; ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ.
18 ಅವಳು ಹೆತ್ತ ಎಲ್ಲಾ ಕುಮಾರರಲ್ಲಿ ಅವಳನ್ನು ನಡಿಸುವದಕ್ಕೆ ಒಬ್ಬನೂ ಇಲ್ಲ; ಇಲ್ಲವೆ ಅವಳು ಬೆಳೆ ಸಿದ ಎಲ್ಲಾ ಕುಮಾರರಲ್ಲಿ ಅವಳ ಕೈಯನ್ನು ಹಿಡಿ ಯುವವನು ಒಬ್ಬನೂ ಇಲ್ಲ.
19 ಈ ಎರಡು ಸಂಗತಿ ಗಳು ನಿನಗೆ ಸಂಭವಿಸಿವೆ; ನಿನಗೋಸ್ಕರ ಚಿಂತಿಸು ವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಕತ್ತಿಯೋ ನಾನು ಯಾರಿಂದ ನಿನ್ನನ್ನು ಆಧರಿಸಲಿ?
20 ನಿನ್ನ ಕುಮಾರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ ಎಲ್ಲಾ ಬೀದಿಗಳು ಕೂಡುವ ಚೌಕದಲ್ಲಿ ಅವರು ಬಿದ್ದಿದ್ದಾರೆ; ಅವರು ಕರ್ತನ ಉಗ್ರದಿಂದಲೂ ನಿನ್ನ ದೇವರ ಗದರಿಕೆ ಯಿಂದಲೂ ತುಂಬಿದ್ದಾರೆ.
21 ನೀನು ಹಿಂಸೆಗೊಳ ಗಾಗಿದ್ದೀ ಮತ್ತು ಕುಡಿದು ಅಮಲೇರಿದ್ದೀ. ಆದರೆ ದ್ರಾಕ್ಷಾರಸದಿಂದಲ್ಲ, ಆದದರಿಂದ ಈಗ ಇದನ್ನು ಕೇಳು,
22 ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.
23 ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
ಅಧ್ಯಾಯ 52

1 ಓ ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಹೊಂದಿಕೋ, ಓ ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ಸೌಂದರ್ಯವಾದ ಉಡುಪುಗಳನ್ನು ಧರಿಸಿಕೋ; ಯಾಕಂದರೆ ಇಂದಿನಿಂದ ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನೊಳಗೆ ಬರುವದಿಲ್ಲ.
2 ಓ ಯೆರೂಸ ಲೇಮೇ, ಧೂಳನ್ನು ಝಾಡಿಸಿಕೋ; ಎದ್ದು ಕೂತು ಕೋ, ಓ ಸೆರೆಯಾದ ಚೀಯೋನ್‌ ಕುಮಾರಿಯೇ, ನಿನ್ನ ಕುತ್ತಿಗೆಯ ಪಾಶಗಳನ್ನು ಬಿಚ್ಚಿಕೋ.
3 ಕರ್ತನು ಹೀಗನ್ನುತ್ತಾನೆ--ನಿಮ್ಮನ್ನು ನೀವೇ ನಿಷ್ಫಲವಾಗಿ ಮಾಡಿಕೊಂಡಿರಿ; ಹಣವಿಲ್ಲದೇ ನೀವು ವಿಮೋಚಿಸಲ್ಪಡುವಿರಿ.
4 ಕರ್ತನಾದ ದೇವರು ಹೀಗ ನ್ನುತ್ತಾನೆ, ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವ ದಕ್ಕೆ ಐಗುಪ್ತಕ್ಕೆ ಹೋದರು; ಅಶ್ಶೂರಿನವರು ಕಾರಣ ವಿಲ್ಲದೆ ಅವರನ್ನು ಹಿಂಸಿಸಿದರು.
5 ಹಾಗಾದರೆ ಈಗ ಕರ್ತನು ಹೇಳುವದೇನಂದರೆ ನನಗೆ ಇಲ್ಲಿ ಏನಿದೆ? ನನ್ನ ಜನರು ಏನೂ ಇಲ್ಲದೆ ಒಯ್ಯಲ್ಪಟ್ಟಿದ್ದಾರಲ್ಲಾ; ಆಳುವವರು ಅವರನ್ನು ಗೋಳಾಡಿಸುತ್ತಾರಲ್ಲಾ ಮತ್ತು ನನ್ನ ಹೆಸರು ಪ್ರತಿದಿನವೂ ಎಡೆಬಿಡದೇ ದೂಷಣೆಗೆ ಗುರಿಯಾಗಿದೆ ಎಂದು ಕರ್ತನು ಹೇಳುತ್ತಾನೆ.
6 ಆದದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು; ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಇಗೋ, ಅದು ನಾನೇ ಎಂದು ಅವರು ಗ್ರಹಿಸುವರು.
7 ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ, ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವಾತನ ಪಾದಗಳು ಪರ್ವತಗಳ ಮೇಲೆ ಎಷ್ಟೋ ಅಂದವಾಗಿವೆ!
8 ನಿನ್ನ ಕಾವಲುಗಾರರು ಸ್ವರವನ್ನೆತ್ತುವರು; ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು; ಕರ್ತನು ಚೀಯೋನನ್ನು ತಿರಿಗಿ ತರು ವಾಗ ಅವರು ಕಣ್ಣಲ್ಲಿ ಕಣ್ಣು ಇಟ್ಟು ನೋಡುವರು.
9 ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ.
10 ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
11 ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದದ್ದನ್ನು ಮುಟ್ಟಬೇಡಿರಿ; ಅವಳ ಮಧ್ಯದಿಂದ ಹೊರಗೆ ಹೋಗಿರಿ; ಕರ್ತನ ಪಾತ್ರೆಗ ಳನ್ನು ಹೊರುವವರೇ, ನೀವು ಶುದ್ಧರಾಗಿರ್ರಿ.
12 ನೀವು ತ್ವರೆಯಾಗಿ ಹೋಗುವದಿಲ್ಲ; ಇಲ್ಲವೆ ಹಾರುವದ ರಿಂದಲೂ ಹೋಗುವದಿಲ್ಲ; ಯಾಕಂದರೆ ಕರ್ತನೇ ನಿಮ್ಮ ಮುಂದೆ ಹೋಗುವನು; ಇಸ್ರಾಯೇಲಿನ ದೇವರು ನಿಮ್ಮ ಬಹುಮಾನವಾಗಿರುವನು.
13 ಇಗೋ, ನನ್ನ ಸೇವಕನು ವಿವೇಕಿಯಾಗಿಕಾರ್ಯ ವನ್ನು ಸಾಧಿಸಿ ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತನಾಗಿರುವನು.
14 ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ
15 ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
ಅಧ್ಯಾಯ 53

1 ನಮ್ಮ ಸುದ್ಧಿಯನ್ನು ಯಾರು ನಂಬಿದ್ದಾರೆ? ಕರ್ತನ ತೋಳು ಯಾರಿಗೆ ಪ್ರಕಟವಾ ಯಿತು?
2 ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ.
3 ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
4 ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು.
5 ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು.
6 ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
7 ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
8 ಆತನು ಸೆರೆಯಿಂದಲೂ ನ್ಯಾಯತೀರ್ಪಿ ನಿಂದಲೂ ತೆಗೆಯಲ್ಪಟ್ಟನು; ಆತನ ಸಂತತಿಯನ್ನು ತಿಳಿಯಪಡಿಸಿದವರು ಯಾರು? ಆತನು ಜೀವಿತರ ದೇಶದಿಂದ ಕಡಿಯಲ್ಪಟ್ಟವನು (ತೆಗೆಯಲ್ಪಟ್ಟನು); ತನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಪೆಟ್ಟು ತಿಂದನು.
9 ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ.
10 ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು.
11 ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.
12 ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
ಅಧ್ಯಾಯ 54

1 ಓ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆಯನ್ನನುಭವಿಸದವಳೇ, ಆನಂದ ಸ್ವರವನ್ನೆತ್ತಿ ಗಟ್ಟಿಯಾಗಿ ಕೂಗು! ಮದುವೆ ಯಾದವಳಿಗಿಂತ ಆಗದವಳಿಗೆ ಮಕ್ಕಳು ಹೆಚ್ಚು ಎಂದು ಕರ್ತನು ಹೇಳುತ್ತಾನೆ.
2 ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ನಿನ್ನ ನಿವಾಸದ ಪರದೆಗಳು ಹರಡಲಿ; ಹಿಂತೆ ಗೆಯಬೇಡ; ನಿನ್ನ ಹಗ್ಗಗಳನ್ನು ಉದ್ದ ಮಾಡಿ ಗೂಟ ಗಳನ್ನು ಬಲಪಡಿಸು.
3 ನೀನು ಬಲಗಡೆಗೂ ಎಡ ಗಡೆಗೂ ಹಬ್ಬಿಕೊಳ್ಳುವಿ; ನಿನ್ನ ಸಂತಾನವು ಅನ್ಯ ಜನಾಂಗಗಳನ್ನು ವಶಪಡಿಸಿಕೊಂಡು ಹಾಳಾದ ಪಟ್ಟಣ ಗಳನ್ನು ನಿವಾಸವಾಗಮಾಡುವದು.
4 ಹೆದರಬೇಡ, ನಿನಗೆ ನಾಚಿಕೆಯಾಗುವದಿಲ್ಲ. ಇಲ್ಲವೆ ಗಾಬರಿ ಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತು ಬಿಡುವಿ ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವದಿಲ್ಲ.
5 ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.
6 ನೀನು ಬಿಡಲ್ಪಟ್ಟು ಆತ್ಮದಲ್ಲಿ ವ್ಯಥೆಪಟ್ಟ ಹೆಂಗಸು, ತ್ಯಜಿಸಲ್ಪಟ್ಟವಳಾದ ಯೌವನದ ಪತ್ನಿಯ ಹಾಗೆ ಇದ್ದಾಗ ಕರ್ತನು ನಿನ್ನನ್ನು ಕರೆದಿದ್ದಾನೆ ಎಂದು ನಿನ್ನ ದೇವರು ಹೇಳುತ್ತಾನೆ.
7 ಕ್ಷಣ ಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ; ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
8 ರೌದ್ರವೇರಿದಾಗ ನನ್ನ ಮುಖವನ್ನು ನಿನಗೆ ಕ್ಷಣ ಮಾತ್ರವೇ ಮರೆಮಾಡಿಕೊಂಡೆನು; ಆದರೆ ನಿರಂತರ ವಾದ ದಯದಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿ ದ್ದೇನೆ ಎಂದು ನಿನ್ನ ವಿಮೋಚಕನಾದ ಕರ್ತನು ಹೇಳು ತ್ತಾನೆ.
9 ಇದು ನನಗೆ ನೋಹನ ಕಾಲದ ಪ್ರಳಯ ದಂತಿದೆ; ನೋಹನ ಕಾಲದ ಪ್ರಳಯವು ಇನ್ನು ಭೂಮಿಯ ಮೇಲೆ ಹರಿಯಗೊಡಿಸುವದಿಲ್ಲವೆಂದು ನಾನು ಪ್ರಮಾಣಮಾಡಿದ ಹಾಗೆಯೇ ಇನ್ನು ನಿನ್ನ ಮೇಲೆ ಕೋಪಗೊಳ್ಳುವದಿಲ್ಲ ಇಲ್ಲವೇ ನಿನ್ನನ್ನು ಗದರಿಸುವದಿಲ್ಲ ಎಂದು ಪ್ರಮಾಣಮಾಡಿದ್ದೇನೆ.
10 ಪರ್ವತಗಳು ಹೊರಟುಹೋಗುವವು, ಮತ್ತು ಗುಡ್ಡಗಳು ತೆಗೆದುಹಾಕಲ್ಪಡುವವು; ಆದರೆ ನನ್ನ ದಯೆಯು ನಿನ್ನನ್ನು ಬಿಟ್ಟುಹೋಗದು ಇಲ್ಲವೆ ನನ್ನ ಸಮಾಧಾನದ ಒಡಂಬಡಿಕೆಯು ತೆಗೆಯಲ್ಪಡುವದಿಲ್ಲ ಎಂದು ನಿನ್ನ ಮೇಲೆ ಕರುಣೆಯನ್ನು ಇಟ್ಟಿರುವ ಕರ್ತನು ಹೇಳುತ್ತಾನೆ.
11 ಸಂಕಟಕ್ಕೊಳಗಾದವಳೇ, ಬಿರುಗಾಳಿಯಿಂದ ಬಡಿ ಯಲ್ಪಟ್ಟು ಆದರಣೆ ಹೊಂದದವಳೇ, ಇಗೋ, ನಾನು ನಿನ್ನ ಕಲ್ಲುಗಳನ್ನು ಸುಂದರವಾದ ಬಣ್ಣಗಳೊಂದಿಗೆ ಇಟ್ಟು ನಿನ್ನ ಅಸ್ತಿವಾರವನ್ನು ನೀಲಮಣಿಗಳೊಂದಿಗೆ ಹಾಕುವೆನು.
12 ನಿನ್ನ ಕಿಟಕಿಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ ನಿನ್ನ ಮೇರೆ ಗಳನ್ನು ಮನೋಹರವಾದ ರತ್ನಗಳಿಂದ ನಾನು ಮಾಡು ವೆನು.
13 ನಿನ್ನ ಮಕ್ಕಳೆಲ್ಲಾ ಕರ್ತನಿಂದ ಬೋಧಿಸಲ್ಪಡು ವರು; ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರು ವದು.
14 ನೀನು ನೀತಿಯಲ್ಲಿ ನೆಲೆಗೊಂಡಿರುವಿ; ಹಿಂಸೆ ಯಿಂದ ದೂರವಾಗಿರುವಿ; ನೀನು ಭೀತಿಯಿಂದ ಭಯ ಪಡುವದಿಲ್ಲ; ಅದು ನಿನ್ನ ಸವಿಾಪಕ್ಕೆ ಬಾರದು.
15 ಇಗೋ, ನಿಶ್ಚಯವಾಗಿ ಅವರು ಒಟ್ಟಾಗಿ ಕೂಡಿ ಕೊಳ್ಳುವರು, ಆದರೆ ನನ್ನಿಂದಲ್ಲ; ನಿನಗೆ ವಿರೋಧವಾಗಿ ಯಾರ್ಯಾರು ಒಟ್ಟಾಗಿ ಕೂಡಿಕೊಳ್ಳುವರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು.
16 ಇಗೋ, ಬೆಂಕಿಯಲ್ಲಿ ಕೆಂಡವನ್ನು ಊದುತ್ತಾ ತನ್ನ ಕೆಲಸಕ್ಕೆ ಆಯುಧಗ ಳನ್ನು ತರುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ; ನಾಶಮಾಡುವದಕ್ಕೆ ಕೆಡಿಸುವವನನ್ನು ಸೃಷ್ಟಿಸಿದವನು ನಾನೇ.
17 ನಿನಗೆ ವಿರೋಧವಾಗಿ ರೂಪಿಸಲ್ಪಟ್ಟ ಆಯು ಧಗಳು ಸಫಲವಾಗುವದಿಲ್ಲ; ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯ ತೀರ್ಪಿನಲ್ಲಿ ನೀನು ಖಂಡಿಸುವಿ. ಇದೇ ಕರ್ತನ ಸೇವ ಕರ ಬಾಧ್ಯತೆಯೂ ಮತ್ತು ಅವರ ನೀತಿಯೂ ನನ್ನದೇ ಎಂದು ಕರ್ತನು ಹೇಳುತ್ತಾನೆ.
ಅಧ್ಯಾಯ 55

1 ಹಾ, ಬಾಯಾರಿದ ಸಕಲಜನರೇ, ನೀವು ನೀರಿನ ಬಳಿಗೆ ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ; ಹೌದು, ಬನ್ನಿರಿ; ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡು ಕೊಳ್ಳಿರಿ.
2 ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ!
3 ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
4 ಇಗೋ ನಾನು ಅವನನ್ನು ಜನಗಳಿಗೆ ಸಾಕ್ಷಿಯನ್ನಾಗಿಯೂ ಅವರಿಗೆ ನಾಯಕನನ್ನಾಗಿಯೂ ಅಧಿಪತಿಯನ್ನಾ ಗಿಯೂ ಕೊಟ್ಟೆನು.
5 ಇಗೋ, ನಿನ್ನ ದೇವರಾದ ಕರ್ತನ ನಿಮಿತ್ತವೂ ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ ನೀನು ತಿಳಿಯದ ಜನಾಂಗಗಳನ್ನು ಕರೆ ಯುವಿ; ಆತನು ನಿನ್ನನ್ನು ಮಹಿಮೆ ಪಡಿಸಿದ್ದರಿಂದ ನಿನ್ನನ್ನು ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವವು.
6 ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ.
7 ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
8 ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ; ಇಲ್ಲವೆ ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ ಎಂದು ಕರ್ತನು ಹೇಳುತ್ತಾನೆ.
9 ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
10 ಮಳೆಯೂ ಹಿಮವೂ ಆಕಾಶದಿಂದ ಇಳಿದು ಬಂದು ಅಲ್ಲಿಗೆ ಹಿಂತಿರುಗಿ ಹೋಗದೆ ಭೂಮಿಯನ್ನು ತೋಯಿಸಿ ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ರೊಟ್ಟಿಯನ್ನೂ ಕೊಡು ವಂತೆಯೂ ಫಲವನ್ನು ಹುಟ್ಟಿಸಿ ಚಿಗುರುಗೊಳಿಸುವ ಹಾಗೆಯೂ,
11 ನನ್ನ ಬಾಯಿಂದ ಹೊರಡುವ ನನ್ನ ವಾಕ್ಯವು ಹಾಗೆಯೂ ಇರುವದು; ಅದು ಸುಮ್ಮನೆ ನನ್ನ ಬಳಿಗೆ ಹಿಂತಿರುಗದೆ ನಾನು ಯಾವದನ್ನು ಮೆಚ್ಚು ತ್ತೇನೋ ಅದನ್ನು ಅದು ಮಾಡುವದು; ನಾನು ಅದನ್ನು ಯಾವದರ ನಿಮಿತ್ತ ಕಳುಹಿಸಿದೆನೋ ಅದರಲ್ಲಿ ಅದು ಸಫಲವಾಗುವದು.
12 ನೀವು ಆನಂದದೊಡನೆ ಹೋಗುವಿರಿ ಸಮಾಧಾನದಿಂದ ನಡಿಸಲ್ಪಡುವಿರಿ; ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು.
13 ಮುಳ್ಳಿಗೆ ಬದಲಾಗಿ ಫರ್‌ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.
ಅಧ್ಯಾಯ 56

1 ಕರ್ತನು ಹೀಗನ್ನುತ್ತಾನೆ--ನ್ಯಾಯವನ್ನು ಕೈಕೊಳ್ಳಿರಿ, ನೀತಿಯಲ್ಲಿ ನಡೆಯಿರಿ; ಯಾಕಂದರೆ ನನ್ನ ರಕ್ಷಣೆಯು ಬರುವದಕ್ಕೂ ನನ್ನ ನೀತಿಯು ಪ್ರಕಟವಾಗುವದಕ್ಕೂ ಸವಿಾಪವಾಗಿದೆ.
2 ಇದನ್ನು ಮಾಡುವ ಮನುಷ್ಯನೂ ಇದನ್ನು ಹಿಡಿದು ಕೊಳ್ಳುವವರ ಪುತ್ರನೂ ಅಂದರೆ ಸಬ್ಬತ್‌ ದಿನವನ್ನು ಅಪವಿತ್ರಮಾಡದೆ ಕೈಕೊಳ್ಳುವನೋ ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.
3 ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.
4 ಕರ್ತನು ತನ್ನ ಸಬ್ಬತ್ತನ್ನು ಕೈಕೊಂಡು ತನಗೆ ಮೆಚ್ಚಿಕೆಯಾದದ್ದನ್ನು ಆದುಕೊಂಡು ತನ್ನ ಒಡಂಬಡಿಕೆಯನ್ನು ಹಿಡಿದು ಕೊಂಡಿರುವ ನಪುಂಸಕರಿಗೆ--
5 ನನ್ನ ಆಲಯದ ಲ್ಲಿಯೂ ಗೋಡೆಗಳ ಬಳಿಗೂ ಕುಮಾರ ಕುಮಾರ್ತೆ ಯರಿಗಿಂತ ಉತ್ತಮವಾದ ಸ್ಥಳವನ್ನೂ ಹೆಸರನ್ನೂ ನಾನು ಕೊಡುತ್ತೇನೆ. ಎಂದಿಗೂ ಅಳಿಯದ ಶಾಶ್ವತ ವಾದ ಹೆಸರನ್ನು ಅವರಿಗೆ ನಾನು ಕೊಡುವೆನು ಎಂದು ಹೇಳುತ್ತಾನೆ.
6 ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್‌ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ
7 ನನ್ನ ಪರಿಶುದ್ಧ ಪರ್ವತಕ್ಕೆ ತರುತ್ತೇನೆ; ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವ ನ್ನುಂಟು ಮಾಡುವೆನು; ನನ್ನ ಯಜ್ಞವೇದಿಯ ಮೇಲೆ ಅವರು ಅರ್ಪಿಸುವ ದಹನಬಲಿಗಳೂ, ಯಜ್ಞಗಳೂ ನನಗೆ ಒಪ್ಪಿಗೆಯಾಗುವವು; ಯಾಕಂದರೆ ನನ್ನ ಆಲ ಯವು ಸಮಸ್ತ ಜನಗಳಿಗೆ ಪ್ರಾರ್ಥನಾಲಯವು ಎಂದು ಕರೆಯಲ್ಪಡುವದು.
8 ಇಸ್ರಾಯೇಲಿನ ತಳ್ಳಲ್ಪ ಟ್ಟವರನ್ನು ಕೂಡಿಸುವಂಥ ಕರ್ತನಾದ ದೇವರು ಹೇಳುವದೇನಂದರೆ--ನಾನು ಕೂಡಿಸಿದ ಇಸ್ರಾ ಯೇಲ್ಯರೊಂದಿಗೆ ಇನ್ನು ಹಲವರನ್ನು ಕೂಡಿಸುವೆನು ಎಂದು ಹೇಳುತ್ತಾನೆ.
9 ಅರಣ್ಯದ ಸಕಲ ಮೃಗಗಳೇ, ಹೌದು, ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವದಕ್ಕೆ ಬನ್ನಿರಿ.
10 ಅವನ ಕಾವಲುಗಾರರು ಕುರುಡರು, ಅವರೆಲ್ಲರೂ ತಿಳುವಳಿಕೆ ಯಿಲ್ಲದವರು; ಅವರೆಲ್ಲರೂ ಮೂಕ ನಾಯಿಗಳು; ಅವು ಬೊಗಳಲಾರವು, ನಿದ್ರಿಸುತ್ತವೆ, ಬಿದ್ದುಕೊಂಡಿ ರುತ್ತವೆ. ತೂಕಡಿಕೆಯನ್ನು ಪ್ರೀತಿಸುತ್ತವೆ.
11 ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.
12 ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.
ಅಧ್ಯಾಯ 57

1 ನೀತಿವಂತನು ನಾಶವಾಗುವನು, ಅದನ್ನು ಯಾವ ಮನುಷ್ಯನು ಮನಸ್ಸಿಗೆ ತಾರನು. ಕರುಣೆಯುಳ್ಳ ಮನುಷ್ಯರು ತೆಗೆದುಹಾಕಲ್ಪಡುವರು, ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾಗು ತ್ತಾನೆಂಬದನ್ನು ಯಾರೂ ಯೋಚಿಸರು.
2 ಅವನು ಸಮಾಧಾನಕ್ಕೆ ಪ್ರವೇಶಿಸುತ್ತಾನೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬನು ತನ್ನ ಹಾಸಿಗೆಯಲ್ಲಿ ವಿಶ್ರಮಿಸಿಕೊಳ್ಳುತ್ತಾನೆ.
3 ಆದರೆ ನೀವು ಮಾಟಗಾರತಿಯ ಮಕ್ಕಳೇ, ಸೂಳೆಯ ಮತ್ತು ಜಾರನ ಸಂತಾನದವರೇ, ಇಲ್ಲಿಗೆ ಬನ್ನಿರಿ.
4 ಯಾರ ವಿಷಯದಲ್ಲಿ ಕುಚೋದ್ಯ ಮಾಡುತ್ತೀರಿ? ಯಾರ ವಿಷಯವಾಗಿ ನೀವು ಬಾಯಿ ಅಗಲ ಮಾಡಿ ನಾಲಿಗೆಯನ್ನು ಚಾಚುತ್ತೀರಿ?
5 ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?
6 ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?
7 ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀ. ಬಲಿ ಅರ್ಪಿಸುವ ದಕ್ಕೂ ಅಲ್ಲಿಗೆ ಏರಿದ್ದೀ.
8 ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕ ಚಿಹ್ನೆಯನ್ನು ಇಟ್ಟಿದ್ದೀ. ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿ ಕೊಂಡಿದ್ದೀ; ಏರಿಹೋಗಿ ನಿನ್ನ ಮಂಚವನ್ನು ಅಗಲ ಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ; ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿಮಾಡಿದ್ದೀ.
9 ಬಹು ಸುಗಂಧ ದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ, ದೂರಕ್ಕೆ ನಿನ್ನ ಸೇವಕರನ್ನು ಕಳುಹಿಸಿದ್ದೀ, ಪಾತಾಳ ದಷ್ಟು ನೀಚಸ್ಥಿತಿಗೆ ಇಳಿದಿದ್ದೀ.
10 ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
11 ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?
12 ನಾನೇ ನಿನ್ನ ನೀತಿಯನ್ನೂ ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಅವು ನಿನಗೆ ಪ್ರಯೋಜನವಾಗು ವದಿಲ್ಲ.
13 ನೀನು ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ತಪ್ಪಿಸಲಿ; ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವದು; ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವದು; ಆದರೆ ನನ್ನಲ್ಲಿ ನಂಬಿಕೆ ಇಡುವವನು ದೇಶವನ್ನು ವಶಮಾಡಿ ಕೊಂಡು ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.
14 ನೀವು ಎತ್ತರ ಮಾಡಿರಿ, ಎತ್ತರ ಮಾಡಿರಿ ಮಾರ್ಗ ವನ್ನು ಸಿದ್ಧಮಾಡಿರಿ, ನನ್ನ ಜನರ ಮಾರ್ಗದಿಂದ ಎಡ ವುದನ್ನು ಎತ್ತಿಹಾಕಿರಿ ಎಂದು ಹೇಳುವನು.
15 ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
16 ನಾನು ಎಂದೆಂದಿಗೂ ವ್ಯಾಜ್ಯ ವಾಡುವದಿಲ್ಲ, ಇಲ್ಲವೆ ಯಾವಾಗಲೂ ಕೋಪಿಸಿ ಕೊಳ್ಳೆನು. ಯಾಕಂದರೆ ಆತ್ಮವೂ ನಾನು ಉಂಟು ಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.
17 ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪ ಗೊಂಡು ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತ ನಾದೆನು; ಅವನು ಮೊಂಡತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
18 ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ ಅವನನ್ನು ನಡಿಸುತ್ತೇನೆ ಮತ್ತು ಅವನಿಗೂ ಅವನ ದುಃಖಿತರಿಗೂ ಆದರಣೆಗಳನ್ನು ಪುನಃ ಸ್ಥಾಪಿಸುವೆನು.
19 ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ.
20 ಆದರೆ ದುಷ್ಟರು ಸುಮ್ಮನಿರಲಾರದಂಥ, ಅದರ ನೀರುಗಳು ಕೆಸರನ್ನೂ ಮೈಲಿಗೆಯನ್ನೂ ಕಾರು ವಂಥ, ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿ ದ್ದಾರೆ.
21 ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ಹೇಳುತ್ತಾನೆ.
ಅಧ್ಯಾಯ 58

1 ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು, ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನೂ ತೋರಿಸು.
2 ಆದಾಗ್ಯೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕು ತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ನ್ಯಾಯವನ್ನು ಬಿಡದೆ ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸವಿಾಪಿಸುವದರಲ್ಲಿ ಸಂತೋಷಿಸುತ್ತಾರೆ.
3 ನಾವು ಉಪವಾಸ ಮಾಡಿದ್ದೇವೆ, ನೀನು ಯಾಕೆ ನೋಡುವದಿಲ್ಲ? ನಮ್ಮ ಪ್ರಾಣವನ್ನು ಕುಂದಿಸಲು ನೀನು ಗಮನಿಸದಿರುವದೇಕೆ ಎಂದು ಅವರು ಅಂದು ಕೊಳ್ಳುತ್ತಾರೆ; ಇಗೋ, ನಿಮ್ಮ ಉಪವಾಸದ ದಿನದಲ್ಲಿ ನಿಮ್ಮ ಇಷ್ಟವನ್ನು ತೀರಿಸುತ್ತೀರಿ ಮತ್ತು ನಿಮ್ಮ ಎಲ್ಲಾ ದುಡಿತವನ್ನು ನಿರ್ಬಂಧಿಸುತ್ತೀರಿ.
4 ಇಗೋ, ವ್ಯಾಜ್ಯ ಕ್ಕೂ ಹೋರಾಟಕ್ಕೂ ದುಷ್ಟತ್ವದ ಮುಷ್ಟಿಯಿಂದ ಹೊಡೆಯುವದಕ್ಕೂ ನೀವು ಉಪವಾಸಮಾಡುತ್ತೀರಿ. ನಿಮ್ಮ ಸ್ವರವು ಮೇಲಕ್ಕೆ ಕೇಳಿಸುವಂತೆ ಈ ದಿವಸ ಉಪವಾಸ ಮಾಡಿದ ಹಾಗೆ ನೀವು ಮಾಡಬೇಡಿರಿ.
5 ನಾನು ಆರಿಸಿಕೊಂಡದ್ದು ಇಂಥಾ ಉಪವಾಸವೋ? ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀ ತಟ್ಟನ್ನೂ ಬೂದಿಯನ್ನೂ ಆಸನ ಮಾಡಿಕೊಂಡು ಕೂತುಕೊಳ್ಳುವದೋ? ಇದನ್ನು ಉಪವಾಸವೆಂದು ನೀವು ಕರೆದು ಆ ದಿನದಲ್ಲಿ ಮನುಷ್ಯನು ತನ್ನ ಆತ್ಮವನ್ನು ಕುಂದಿಸುವದು ಕರ್ತನು ಮೆಚ್ಚುವ ದಿನವೆಂದು ಅನ್ನು ತ್ತೀರೋ?
6 ನಾನು ಆದುಕೊಳ್ಳುವ ಉಪವಾಸವು ಕೇಡಿನ ಬಂಧನಗಳನ್ನು ಬಿಚ್ಚುವದೂ ಭಾರವಾದ ಹೊರೆಯನ್ನು ಬಿಚ್ಚುವದೂ ಹಿಂಸಿಸಲ್ಪಟ್ಟವರು ಬಿಡಿಸ ಲ್ಪಟ್ಟವರಾಗಿ ಹಾಕುವದೂ ಆಗಿದೆಯಲ್ಲವೋ?
7 ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ?
8 ಹೀಗಾದರೆ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವದು. ನಿನ್ನ ಕ್ಷೇಮವು ಬೇಗನೆ ಚಿಗುರು ವದು. ನಿನ್ನ ನೀತಿಯು ನಿನಗೆ ಮುಂಬಲವಾಗಿ ಮುಂದ ರಿಯುವದು. ಕರ್ತನ ಮಹಿಮೆಯು ನಿನಗೆ ಹಿಂಬಲ ವಾಗಿರುವದು.
9 ಆಗ ನೀನು ಕರೆದರೆ ಕರ್ತನು ಉತ್ತರ ಕೊಡುವನು; ನೀನು ಕೂಗುವಿ ಆಗ ಆತನು--ನಾನು ಇಲ್ಲಿ ಇದ್ದೇನೆ ಅನ್ನುವನು. ನೀನು ನಿನ್ನ ಮಧ್ಯದೊಳ ಗಿಂದ ನೊಗವನ್ನೂ ಬೆರಳ ಸನ್ನೆಯನ್ನೂ ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ,
10 ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು.
11 ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.
12 ಆಗ ನಿನ್ನವರು ಪುರಾತನ ಕಾಲದ ಹಾಳಾದ ಸ್ಥಳಗಳನ್ನು ಕಟ್ಟುವರು, ತಲತಲಾ ಂತರಕ್ಕಿದ್ದ ಅಸ್ತಿವಾರಗಳನ್ನು ನೀನು ಎಬ್ಬಿಸುವಿ; ಸೀಳಿ ದ್ದನ್ನು ಸರಿ ಮಾಡುವವನೆಂದೂ ನಿವಾಸಿಗಳಿಗಾಗಿ ಹಾದಿಗಳನ್ನು ತಿರಿಗಿ ಸರಿಮಾಡುವವನೆಂದೂ ನೀನು ಕರೆಯಲ್ಪಡುವಿ.
13 ನೀನು ಸಬ್ಬತ್ತಿನಲ್ಲಿ ನಿನ್ನ ಕಾಲನ್ನು ಹಿಂದೆಗೆದು, ನನ್ನ ಪರಿಶುದ್ಧ ದಿವಸದಲ್ಲಿ ನಿನ್ನ ಇಷ್ಟ ವನ್ನು ಮಾಡದೇ ಹೋದರೆ ಸಬ್ಬತ್ತನ್ನು ಆನಂದಕರ ವಾದದ್ದೆಂದೂ ಕರ್ತನ ಪರಿಶುದ್ಧ ದಿವಸವನ್ನು ಘನವುಳ್ಳದ್ದೆಂದೂ ಕರೆದರೆ, ಸ್ವಂತ ಕೆಲಸಗಳನ್ನು ಮಾಡದೆ ಸ್ವಂತ ಇಷ್ಟವನ್ನು ಕಂಡುಕೊಳ್ಳದೆ, ಸ್ವಂತ ಮಾತುಗಳನ್ನು ಆಡದೆ, ಅದನ್ನು ಘನಪಡಿಸಿದರೆ,
14 ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ.
ಅಧ್ಯಾಯ 59

1 ಇಗೋ, ಕರ್ತನ ಕೈ ರಕ್ಷಿಸಲಾರದ ಹಾಗೆ ಮೋಟುಗೈಯಲ್ಲ. ಆತನ ಕಿವಿ ಕೇಳ ಲಾರದ ಹಾಗೆ ಕಿವುಡಲ್ಲ.
2 ನಿಮ್ಮ ಅಕ್ರಮಗಳೇ ನಿಮ್ಮನ್ನು ನಿಮ್ಮ ದೇವರಿಂದ ಅಗಲಿಸಿಯವೆ; ನಿಮ್ಮ ಪಾಪಗಳೇ ಆತನು ಕೇಳದ ಹಾಗೆ ಆತನ ಮುಖವನ್ನು ನಿಮಗೆ ಮರೆಮಾಡಿಯವೆ.
3 ನಿಮ್ಮ ಕೈಗಳು ರಕ್ತದಿಂದಲೂ ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ; ನಿಮ್ಮ ತುಟಿಗಳು ಸುಳ್ಳನ್ನು ಮಾತಾಡುತ್ತವೆ; ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ.
4 ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
5 ಹಾವಿನಂತೆ ಮೊಟ್ಟೆಗಳನ್ನು ಮರಿ ಮಾಡುತ್ತಾರೆ, ಜೇಡಹುಳದ ನೂಲನ್ನು ನೇಯುತ್ತಾರೆ; ಅದರ ಮೊಟ್ಟೆಗಳನ್ನು ತಿನ್ನುವವನು ಸಾಯುವನು; ಒಡೆಯುವಂಥಾದ್ದರಿಂದ ವಿಷದ ಮರಿಯು ಹೊರಡುವದು.
6 ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ.
7 ಅವರ ಕಾಲುಗಳು ಕೇಡಿಗೆ ಓಡುತ್ತವೆ; ಅಪರಾಧವಿಲ್ಲದ ರಕ್ತ ವನ್ನು ಚೆಲ್ಲುವದಕ್ಕೆ ತ್ವರೆಪಡುತ್ತವೆ. ಅವರ ಆಲೋ ಚನೆ ಗಳು ದುಷ್ಟತನದ ಆಲೋಚನೆಗಳೇ; ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿ ಅವೆ.
8 ಸಮಾ ಧಾನದ ಮಾರ್ಗವನ್ನರಿಯರು; ಅವರ ದಾರಿಗಳಲ್ಲಿ ನ್ಯಾಯವಿಲ್ಲ; ತಮ್ಮ ಹಾದಿಗಳನ್ನು ಡೊಂಕು ಮಾಡಿ ಕೊಂಡಿದ್ದಾರೆ; ಅವುಗಳಲ್ಲಿ ನಡೆಯುವವರೆಲ್ಲರು ಸಮಾ ಧಾನವನ್ನರಿಯರು.
9 ಆದದರಿಂದ ನ್ಯಾಯವು ನಮಗೆ ದೂರವಾಯಿತು; ನೀತಿಯು ನಮ್ಮನ್ನು ಸೇರದು; ಬೆಳಕಿ ಗೋಸ್ಕರ ಕಾದುಕೊಳ್ಳುತ್ತೇವೆ, ಆದರೆ ಇಗೋ ಕತ್ತಲೆ, ಪ್ರಕಾಶವನ್ನು ಹಾರೈಸಿ ಅಂಧಕಾರದಲ್ಲಿ ನಡೆದುಕೊಳ್ಳು ತ್ತೇವೆ.
10 ಕುರುಡರ ಹಾಗೆ ಗೋಡೆಯನ್ನು ತಡವರಿ ಸುತ್ತೇವೆ; ಕಣ್ಣಿಲ್ಲದವರ ಹಾಗೆ ತಡವಾಡುತ್ತೇವೆ; ಮಧ್ಯಾಹ್ನದಲ್ಲಿ, ರಾತ್ರಿಯ ಹಾಗೆ ಎಡವುತ್ತೇವೆ, ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ.
11 ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
12 ಯಾಕಂದರೆ, ನಮ್ಮ ದ್ರೋಹಗಳು ನಿನ್ನ ಮುಂದೆ ಬಹಳವಾಗಿವೆ; ನಮ್ಮ ಪಾಪಗಳು ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ದ್ರೋಹಗಳು ನಮ್ಮ ಸಂಗಡ ಅವೆ; ನಮ್ಮ ಅಕ್ರಮಗಳ ನ್ನಾದರೋ, ನಾವು ಬಲ್ಲೆವು.
13 ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ.
14 ನ್ಯಾಯವು ಸಹ ಹಿಂದಕ್ಕೆ ತಿರುಗಿ ಸಲ್ಪಟ್ಟಿದೆ. ನೀತಿಯು ದೂರದಲ್ಲಿ ನಿಲ್ಲುತ್ತದೆ; ಸತ್ಯವು ಬೀದಿಯಲ್ಲಿ ಬಿದ್ದುಹೋಯಿತು. ಯಥಾರ್ಥತೆಯು ಪ್ರವೇಶಿಸುವದೇ ಇಲ್ಲ.
15 ಹೌದು, ಸತ್ಯವು ಇಲ್ಲದೇ ಹೋಯಿತು; ಕೆಟ್ಟದ್ದನ್ನು ಬಿಟ್ಟುಬಿಡುವವನು ಸುಲಿಗೆ ಯಾಗುತ್ತಾನೆ; ಕರ್ತನು ಅದನ್ನು ನೋಡಿದನು, ಅದ ರಲ್ಲಿ ನ್ಯಾಯವಿಲ್ಲದ್ದರಿಂದ ಆತನಿಗೆ ಮೆಚ್ಚಿಕೆಯಾಗಲಿಲ್ಲ.
16 ಯಾವ ಮನುಷ್ಯನೂ ಇಲ್ಲದೆ ಇರುವದನ್ನು ಆತನು ನೋಡಿ, ಮಧ್ಯಸ್ಥಗಾರನು ಇಲ್ಲವೆಂದು ಆಶ್ಚರ್ಯಪಟ್ಟನು; ಆಗ ಆತನ ಬಾಹು ತನಗೋಸ್ಕರ ರಕ್ಷಣೆಯನ್ನೂ ನೀತಿಯನ್ನೂ ತಂದಿತು. ಅದೇ ಆತನನ್ನು ಉದ್ಧಾರಮಾಡಿತು.
17 ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.
18 ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು; ತನ್ನ ವೈರಿ ಗಳಿಗೆ ಕ್ರೋಧವನ್ನೂ ತನ್ನ ಶತ್ರುಗಳಿಗೂ ದ್ವೀಪಗ ಳಿಗೂ ಪ್ರತಿಫಲವನ್ನು ಸಲ್ಲಿಸುವನು.
19 ಆಗ ಪಶ್ಚಿ ಮದ ಕಡೆಯವರು ಕರ್ತನ ಹೆಸರಿಗೂ ಸೂರ್ಯೋ ದಯದ ಕಡೆಯವರು ಆತನ ಘನಕ್ಕೂ ಭಯಪಡು ವರು. ವೈರಿಯು ಪ್ರಳಯದಂತೆ ಬರುವಾಗ ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವನು.
20 ವಿಮೋಚಕನು ಚೀಯೋನಿಗೂ ಯಾಕೋಬ್ಯರಲ್ಲಿ ತಮ್ಮ ದ್ರೋಹದಿಂದ ತಿರುಗುವವರಿಗೂ ಬರುವೆ ನೆಂದು ಕರ್ತನು ಅನ್ನುತ್ತಾನೆ.
21 ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
ಅಧ್ಯಾಯ 60

1 ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು.
2 ಇಗೋ, ಕತ್ತಲೆ ಭೂಮಿಯನ್ನೂ ಗಾಢಾಂಧಕಾರವು ಜನಗಳನ್ನೂ ಮುಚ್ಚುವದು; ಆದರೆ ನಿನ್ನ ಮೇಲೆ ಕರ್ತನು ಉದಯಿ ಸುವನು; ಆತನ ಮಹಿಮೆಯು ನಿನ್ನ ಮೇಲೆ ಕಾಣ ಬರುವದು.
3 ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು.
4 ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು, ಅವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ; ನಿನ್ನ ಕುಮಾ ರರು ದೂರದಿಂದ ಬರುವರು ನಿನ್ನ ಕುಮಾರ್ತೆಯರು ನಿನ್ನ ಪಕ್ಕೆಯಲ್ಲಿ ಪೋಷಣೆ ಹೊಂದುವರು.
5 ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು.
6 ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು.
7 ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು.
8 ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು?
9 ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ.
10 ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು.
11 ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ.
12 ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು.
13 ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು.
14 ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು.
15 ಹಾದುಹೋಗುವವರಿಲ್ಲದೆ ನೀನು ಬಿಡಲ್ಪಟ್ಟವಳೂ ಹಗೆ ಮಾಡಲ್ಪಟ್ಟವಳೂ ಆಗಿ ದ್ದಕ್ಕೆ ಬದಲಾಗಿ ನಿನ್ನನ್ನು ನಿತ್ಯವಾದ ಘನತೆಯೂ ಅನೇಕ ಸಂತತಿಗಳಲ್ಲಿ ಉಲ್ಲಾಸವಾಗಿಯೂ ಮಾಡು ತ್ತೇನೆ.
16 ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ.
17 ಹಿತ್ತಾಳೆಗೆ ಬದಲಾಗಿ ಬಂಗಾರವನ್ನು ತರುವೆನು; ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ ಮರಕ್ಕೆ ಬದಲಾಗಿ ಹಿತ್ತಾಳೆಯನ್ನೂ ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು, ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿಯೂ ನೀತಿಯನ್ನು ನಿನಗೆ ಅಧಿಕಾರಿ ಯನ್ನಾಗಿಯೂ ಮಾಡುವೆನು.
18 ಬಲಾತ್ಕಾರವೂ ನಿನ್ನ ದೇಶದೊಳಗೆ ಹಾಳಾದದ್ದೂ ನಾಶವೂ ನಿನ್ನ ಮೇರೆ ಗಳಲ್ಲಿ ಕೇಳಲ್ಪಡುವದಿಲ್ಲ; ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿ ಡುವಿ.
19 ಇನ್ನು ಮೇಲೆ ಸೂರ್ಯನು ನಿನಗೆ ಹಗಲಿ ನಲ್ಲಿ ಬೆಳಕಾಗಿರುವದಿಲ್ಲ, ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವದಿಲ್ಲ; ಆದರೆ ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು. ನಿನ್ನ ದೇವರು ನಿನ್ನ ಪ್ರಭೆಯಾಗಿರುವನು.
20 ನಿನ್ನ ಸೂರ್ಯನು ಅಸ್ತಮಿಸು ವದಿಲ್ಲ, ನಿನ್ನ ಚಂದ್ರನು ಕಾಣದೆ ಹೋಗುವದಿಲ್ಲ; ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು ನಿನ್ನ ದುಃಖದ ದಿನಗಳು ಮುಗಿದುಹೋಗಿರುವವು.
21 ನಿನ್ನ ಜನರೆಲ್ಲರು ನೀತಿವಂತರಾಗಿರುವರು, ದೇಶವನ್ನು ಸದಾ ಕಾಲಕ್ಕೆ ಸ್ವಾಧೀನ ಮಾಡಿಕೊಳ್ಳುವರು; ನಾನು ಮಹಿಮೆ ಹೊಂದುವದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ ನನ್ನ ಕೈ ಸೃಷ್ಟಿಯೂ ದೇಶವನ್ನು ಸದಾ ಅನುಭವಿಸುವರು.
22 ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು.
ಅಧ್ಯಾಯ 61

1 ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ
2 ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ
3 ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
4 ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ ಮುಂಚೆ ಕೆಡವಲ್ಪಟ್ಟವುಗಳನ್ನು ಎಬ್ಬಿಸುವರು; ಹಾಳಾದ ಪಟ್ಟಣಗಳನ್ನೂ ಅನೇಕ ಸಂತತಿಗಳಿಂದ ಕೆಡವಲ್ಪಟ್ಟವುಗಳನ್ನೂ ಜೀರ್ಣೋದ್ಧಾರ ಮಾಡುವರು.
5 ಇದಲ್ಲದೆ ಅನ್ಯರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು; ಪರರ ಪುತ್ರರು ನಿಮಗೆ ನೇಗಿಲು ಹೂಡುವವರೂ ದ್ರಾಕ್ಷೇತೋಟ ಕಾಯುವವರೂ ಆಗಿರುವರು.
6 ಆದರೆ ನಿಮಗೆ ಕರ್ತನ ಯಾಜಕರೆಂದು ಹೆಸರಿಡುವರು ನೀವು ನಮ್ಮ ದೇವರ ಸೇವಕರೆಂದು ಜನರು ಕರೆಯುವರು. ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ; ಅವರ ಮಹಿಮೆಯಲ್ಲಿ ನೀವು ಹೆಚ್ಚಳಪಡುವಿರಿ.
7 ನಿಮ್ಮ ಅವಮಾನಕ್ಕೆ ಬದಲಾಗಿ ಮಾನವು ಎರಡರಷ್ಟಾಗು ವದು. ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು; ಆದದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನ ಮಾಡಿಕೊಳ್ಳುವರು, ನಿತ್ಯವಾದ ಸಂತೋಷವು ಅವರಿಗೆ ಆಗುವದು.
8 ಕರ್ತನಾದ ನಾನು ನ್ಯಾಯವನ್ನು ಪ್ರೀತಿಮಾಡು ತ್ತೇನೆ, ಸುಲಿಗೆಯಿಂದಾದ ದಹನಬಲಿಯನ್ನು ಹಗೆ ಮಾಡುತ್ತೇನೆ. ಅವರ ಕೆಲಸವನ್ನು ಸತ್ಯದಲ್ಲಿ ನಡಿಸು ತ್ತೇನೆ; ಅವರ ಸಂಗಡ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
9 ಆಗ ಅವರ ಸಂತಾನವು ಅನ್ಯ ಜನಾಂಗಗಳಲ್ಲಿಯೂ ಅವರಿಂದಾದ ಸಂತತಿಯು ಜನ ಗಳ ಮಧ್ಯದಲ್ಲಿಯೂ ತಿಳಿಸಲ್ಪಡುವದು; ಅವರನ್ನು ನೋಡುವವರೆಲ್ಲರೂ--ಅವರೇ ಕರ್ತನು ಆಶೀರ್ವದಿ ಸಿದ ಸಂತಾನವೆಂದು ಒಪ್ಪಿಕೊಳ್ಳುವರು.
10 ನಾನು ಕರ್ತನಲ್ಲಿ ಬಹಳವಾಗಿ ಸಂತೋಷಿ ಸುವೆನು; ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸ ಪಡುವದು; ಯಾಕಂದರೆ ಮದಲಿಂಗನು ಸೌಂದರ್ಯ ವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ ಮದಲ ಗಿತ್ತಿಯು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ ಆತನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ, ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.
11 ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವದೋ ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳಿಸುವದೋ ಹಾಗೆಯೇ ದೇವರಾದ ಕರ್ತನ ನೀತಿಯನ್ನೂ ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವನು.
ಅಧ್ಯಾಯ 62

1 ಚೀಯೋನಿಗೋಸ್ಕರ ನಾನು ಮೌನವಾಗಿರುವದಿಲ್ಲ; ಯೆರೂಸಲೇಮಿಗೋಸ್ಕರ ಅದರ ನೀತಿ ಪ್ರಕಾಶದಂತೆಯೂ ಅದರ ರಕ್ಷಣೆಯು ಉರಿಯುವ ದೀವಿಗೆಯಂತೆಯೂ ಹೊರಡುವ ವರೆಗೆ ನಾನು ವಿಶ್ರಾಂತಿಯಿಂದ ಇರುವದಿಲ್ಲ.
2 ಆಗ ಅನ್ಯ ಜನಾಂಗಗಳು ನಿನ್ನ ನೀತಿಯನ್ನು ಅರಸರೆಲ್ಲರು ನಿನ್ನ ಮಹಿಮೆಯನ್ನು ನೋಡುವರು; ಕರ್ತನ ಬಾಯಿ ಉಚ್ಚರಿಸುವ ಹೊಸ ಹೆಸರಿನಿಂದ ನೀನು ಕರೆಯ ಲ್ಪಡುವಿ.
3 ಕರ್ತನ ಕೈಯಲ್ಲಿ ಮಹಿಮೆಯ ಕಿರೀಟ ವಾಗಿಯೂ ನಿನ್ನ ದೇವರ ಅಂಗೈಯಲ್ಲಿ ರಾಜತ್ವದ ಕಿರೀಟವಾಗಿಯೂ ಇರುವಿ.
4 ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.
5 ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
6 ಓ ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲಿ ನಲ್ಲೂ ರಾತ್ರಿಯಲ್ಲೂ ಮೌನವಾಗಿರುವದೇ ಇಲ್ಲ. ಕರ್ತನನ್ನು ಜ್ಞಾಪಕಪಡಿಸುವವರೇ, ಸುಮ್ಮನಿರಬೇಡಿರಿ.
7 ಆತನು ಯೆರೂಸಲೇಮನ್ನು ಸ್ಥಾಪಿಸಿ ಅದು ಭೂಮಿಯಲ್ಲಿ ಸ್ತುತಿಸಲ್ಪಡುವಂತೆ ಮಾಡುವವರೆಗೂ ಆತನಿಗೆ ವಿಶ್ರಾಂತಿ ಕೊಡಬೇಡಿರಿ.
8 ಕರ್ತನು ತನ್ನ ಬಲಗೈ ಯಿಂದಲೂ ತನ್ನ ತ್ರಾಣವುಳ್ಳ ತೋಳಿನಿಂದಲೂ ಆಣೆ ಯಿಟ್ಟುಕೊಂಡದ್ದೇನಂದರೆ--ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವದಿಲ್ಲ, ಮತ್ತು ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ಅನ್ಯರ ಪುತ್ರರು ಕುಡಿಯುವದಿಲ್ಲ;
9 ಆದರೆ ಅದನ್ನು ಕೂಡಿಸಿದವರು ಅದನ್ನು ತಿಂದು ಕರ್ತನನ್ನು ಸ್ತುತಿಸುವರು; ಅದನ್ನು ಸೇರಿಸಿ ತಂದವರು ನನ್ನ ಪರಿಶುದ್ಧ ಅಂಗಳಗಳಲ್ಲಿ ಅದನ್ನು ಕುಡಿಯುವರು.
10 ಹಾದುಹೋಗಿರಿ, ಬಾಗಿಲುಗಳನ್ನು ಹಾದು ಹೋಗಿರಿ. ಜನರಿಗೆ ದಾರಿಯನ್ನು ಸಿದ್ಧಮಾಡಿರಿ; ಎತ್ತರ ಮಾಡಿರಿ, ರಾಜ ಮಾರ್ಗವನ್ನು ಎತ್ತರಮಾಡಿರಿ; ಕಲ್ಲುಗಳನ್ನು ಆಯ್ದು ಕೂಡಿಸಿರಿ; ಜನಗಳಿಗೋಸ್ಕರ ಧ್ವಜವನ್ನು ಎತ್ತಿರಿ.
11 ಇಗೋ, ಕರ್ತನು ಭೂಮಿಯ ಅಂತ್ಯದ ವರೆಗೆ ಪ್ರಕಟಿಸಿದ್ದಾನೆ. ಚೀಯೋನಿನ ಕುಮಾ ರಿಯೇ--ಇಗೋ, ನಿನ್ನ ರಕ್ಷಣೆಯು ಬರುತ್ತದೆ; ಆತನ ಬಹುಮಾನವು ಆತನ ಸಂಗಡವೂ ಆತನ ಕೆಲಸವು ಆತನ ಮುಂದೆಯೂ ಅದೆ ಎಂದು ಹೇಳಿರಿ.
12 ಆಗ ಅವರು--ಪರಿಶುದ್ಧ ಜನರೂ ಕರ್ತನು ವಿಮೋಚಿಸಿದ ವರೂ ಎಂದು ಕರೆಯಲ್ಪಡುವರು; ನೀನು ಕಂಡು ಕೊಳ್ಳಲ್ಪಟ್ಟವಳೂ ತೊರೆಯಲ್ಪಡದ ಪಟ್ಟಣವೂ ಎಂದು ಕರೆಯಲ್ಪಡುವಿ.
ಅಧ್ಯಾಯ 63

1 ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ.
2 ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ?
3 ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು.
4 ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು.
5 ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು.
6 ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
7 ಕರ್ತನು ನಮಗೆ ಮಾಡಿದ್ದೆಲ್ಲಾದರ ಪ್ರಕಾರ, ಕರ್ತನ ಪ್ರೀತಿ ಕೃಪೆಗಳನ್ನೂ ಕರ್ತನ ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು; ಆತನು ತನ್ನ ಅಂತಃಕರುಣೆಯ ಪ್ರಕಾರವೂ ತನ್ನ ಕೃಪೆಯ ಮಹಾ ಒಳ್ಳೇತನದ ಪ್ರಕಾರವೂ ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.
8 ಆತನು--ನಿಶ್ಚಯವಾಗಿ ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ ಎಂದು ಹೇಳಿದನು; ಆದದರಿಂದ ಅವರಿಗೆ ರಕ್ಷಕನಾಗಿದ್ದನು.
9 ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
10 ಆದರೆ ಅವರು ತಿರುಗಿ ಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು; ಆದ ದರಿಂದ ಆತನು ತಿರುಗಿಕೊಂಡು, ಅವರಿಗೆ ಶತ್ರು ವಾದನು; ಆತನೇ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನು.
11 ಆಗ ಆತನು ಪೂರ್ವಕಾಲದ ದಿನ ಗಳನ್ನು ಮೋಶೆಯನ್ನೂ ತನ್ನ ಜನರನ್ನೂ ಜ್ಞಾಪಕ ಮಾಡಿಕೊಂಡು--ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಏರ ಮಾಡಿದವನು ಎಲ್ಲಿ? ಅವನ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?
12 ಮೋಶೆಯ ಬಲಗೈಯ ಮುಖಾಂ ತರ, ತನ್ನ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡಿಸಿದವನೂ ತನಗೆ ನಿತ್ಯವಾದ ಹೆಸರನ್ನುಂಟು ಮಾಡುವ ಹಾಗೆ ಅವರ ಮುಂದೆ ನೀರುಗಳನ್ನು ಭೇದಿಸಿದವನು ಎಲ್ಲಿ?
13 ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡಿಸಿ ದವನು ಎಲ್ಲಿ ಅಂದನು.
14 ಪಶುವು ತಗ್ಗಿಗೆ ಇಳಿ ಯುವ ಪ್ರಕಾರ, ಕರ್ತನ ಆತ್ಮನು ಅವರಿಗೆ ವಿಶ್ರಾಂತಿ ಕೊಟ್ಟನು; ಈ ಪ್ರಕಾರ ನೀನು ನಿನಗೆ ಮಹಿಮೆ ಯುಳ್ಳ ಹೆಸರನ್ನು ಉಂಟು ಮಾಡುವ ಹಾಗೆ, ನಿನ್ನ ಜನರನ್ನು ನಡಿಸಿದಿ.
15 ಆಕಾಶದಿಂದ, ನಿನ್ನ ಪರಿ ಶುದ್ಧ ಮಹಿಮೆಯ ನಿವಾಸದಿಂದ ದೃಷ್ಟಿಸಿನೋಡು; ನಿನ್ನ ಆಸಕ್ತಿಯೂ ನಿನ್ನ ಪರಾಕ್ರಮವೂ ನಿನ್ನ ಕರುಳುಗಳ ಘೋಷವೂ ನನ್ನ ವಿಷಯವಾದ ನಿನ್ನ ಕರುಣೆಗಳೂ ಎಲ್ಲಿ? ಬಿಗಿ ಹಿಡುಕೊಂಡಿದ್ದೀಯೋ?
16 ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ನಿಸ್ಸಂದೇಹವಾಗಿ ನೀನೇ ನಮ್ಮ ತಂದೆಯಾಗಿದ್ದೀ; ಕರ್ತನಾದ ನೀನೇ ನಮ್ಮ ತಂದೆಯು, ನಮ್ಮ ವಿಮೋಚಕನು; ನಿನ್ನ ಹೆಸರು ಸದಾಕಾಲವೂ ಇದೆ.
17 ಓ ಕರ್ತನೇ, ಏಕೆ ನಮ್ಮನ್ನು ನಿನ್ನ ಮಾರ್ಗಗ ಳಿಂದ ತಪ್ಪಿಹೋಗುವಂತೆ ಮಾಡಿದ್ದೀ. ಏಕೆ ನಮ್ಮ ಹೃದಯವನ್ನು ನಿನಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀ. ನಿನ್ನ ಸೇವಕರಿಗೋಸ್ಕರವೂ ನಿನ್ನ ಬಾಧ್ಯತೆಯ ಗೋತ್ರಗಳಿಗೋಸ್ಕರವೂ ಹಿಂತಿರುಗು.
18 ಸ್ವಲ್ಪ ಕಾಲ ಮಾತ್ರ ನಿನ್ನ ಪರಿಶುದ್ಧ ಜನರು ಅದನ್ನು ಸ್ವಾಧೀನ ಮಾಡಿಕೊಂಡರು; ನಮ್ಮ ಶತ್ರು ಗಳು ನಿನ್ನ ಪರಿಶುದ್ಧ ಸ್ಥಳವನ್ನು ತುಳಿದುಬಿಟ್ಟಿದ್ದಾರೆ.
19 ನಾವು ನಿನ್ನವರಾಗಿದ್ದೇವೆ; ಅವರ ಮೇಲೆ ನೀನು ದೊರೆತನ ಮಾಡಲಿಲ್ಲ; ಅವರು ನಿನ್ನ ಹೆಸರಿನಿಂದ ಕರೆಯಲ್ಪಡಲಿಲ್ಲ.
ಅಧ್ಯಾಯ 64

1 ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ,
2 ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು!
3 ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದಿ; ಬೆಟ್ಟಗಳು ನಿನ್ನ ಪ್ರಸನ್ನತೆಯಿಂದ ಕರಗಿಹೋದವು.
4 ದೇವರೇ, ನಿನಗೋಸ್ಕರ ಕಾದುಕೊಳ್ಳುವವನಿಗೆ ನೀನು ಮಾಡು ವದನ್ನು, ಲೋಕದ ಉತ್ಪತ್ತಿಗೆ ಮುಂಚೆ ನಿನ್ನ ಹೊರ ತಾಗಿ ಯಾರೂ ಕೇಳಲಿಲ್ಲ ಇಲ್ಲವೆ ಯಾರ ಕಿವಿ ಯಲ್ಲಿಯೂ ಬೀಳಲಿಲ್ಲ, ಯಾರ ಕಣ್ಣು ನೋಡಲಿಲ್ಲ.
5 ಸಂತೋಷಪಟ್ಟು ನೀತಿಯನ್ನು ಕೈಕೊಳ್ಳುವವನನ್ನೂ ನಿನ್ನ ಮಾರ್ಗಗಳಲ್ಲಿ ನಿನ್ನನ್ನು ಜ್ಞಾಪಕಮಾಡುವವ ನನ್ನೂ ನೀನು ಎದುರುಗೊಳ್ಳುತ್ತೀ; ಇಗೋ, ನೀನು ರೌದ್ರನಾಗಿರುವಿ, ಯಾಕಂದರೆ ನಾವು ರಕ್ಷಿಸಲ್ಪಡದ ಹಾಗೆ ಪಾಪದಲ್ಲಿ ಮುಂದುವರಿದೆವು.
6 ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.
7 ನಿನ್ನ ಹೆಸರನ್ನು ಕರೆಯುವವನೂ ನಿನ್ನನ್ನು ಹಿಡು ಕೊಳ್ಳುವದಕ್ಕೆ ತನ್ನನ್ನು ಪ್ರೇರಿಸಿಕೊಳ್ಳುವವನು ಒಬ್ಬನೂ ಇಲ್ಲ; ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ; ನಮ್ಮ ಅಕ್ರಮಗಳಿಗಾಗಿ ನಮ್ಮನ್ನು ದಹಿಸಿಬಿಟ್ಟಿದ್ದೀ.
8 ಆದರೆ ಈಗ ಓ ಕರ್ತನೇ, ನಮ್ಮ ತಂದೆಯು ನೀನೇ; ನಾವು ಮಣ್ಣು, ನೀನು ನಮ್ಮ ಕುಂಬಾರನು; ನಾವೆ ಲ್ಲರೂ ನಿನ್ನ ಕೈಕೆಲಸವೇ.
9 ಓ ಕರ್ತನೇ, ಅತ್ಯಧಿಕ ವಾಗಿ ರೌದ್ರನಾಗಬೇಡ; ಎಂದೆಂದಿಗೂ ಅಕ್ರಮ ವನ್ನು ಜ್ಞಾಪಕಮಾಡಬೇಡ; ಇಗೋ, ನೋಡು, ನಾವು ಬೇಡುತ್ತೇವೆ ದೃಷ್ಟಿಯಿಡು; ನಾವೆಲ್ಲರೂ ನಿನ್ನ ಜನರೇ.
10 ನಿನ್ನ ಪರಿಶುದ್ಧ ಪಟ್ಟಣಗಳು ಅಡವಿ ಯಾದವು; ಚೀಯೋನು ಅಡವಿಯಾಯಿತು; ಯೆರೂ ಸಲೇಮು ಹಾಳಾಯಿತು.
11 ನಮ್ಮ ತಂದೆಗಳು ನಿನ್ನನ್ನು ಕೊಂಡಾಡಿದ ನಮ್ಮ ಪರಿಶುದ್ಧ ಮತ್ತು ಸುಂದರ ವಾದ ಮನೆ ಬೆಂಕಿಯಿಂದ ಸುಟ್ಟುಹೋಯಿತು; ನಮ್ಮ ಸೊಗಸಾದವುಗಳೆಲ್ಲಾ ನಾಶವಾದವು.
12 ಇವು ಹೀಗಿರಲಾಗಿ ಕರ್ತನೇ, ನಿನ್ನನ್ನು ಬಿಗಿಹಿಡುಕೊಳ್ಳು ತ್ತೀಯೋ? ಮೌನವಾಗಿದ್ದು ನಮ್ಮನ್ನು ಅತ್ಯಧಿಕವಾಗಿ ಕುಗ್ಗಿಸುವಿಯೋ?
ಅಧ್ಯಾಯ 65

1 ಕೇಳದವರಿಂದ ನಾನು ವಿಚಾರಿಸಲ್ಪಟ್ಟಿದ್ದೇನೆ, ನನ್ನನ್ನು ಹುಡುಕದವರಿಗೂ ಕಂಡು ಕೊಳ್ಳಲ್ಪಟ್ಟಿದ್ದೇನೆ; ನನ್ನ ಹೆಸರಿನಿಂದ ಕರೆಯಲ್ಪಡದ ಜನಾಂಗಕ್ಕೆ--ಇಗೋ, ಇದ್ದೇನೆ; ಇಗೋ, ಇದ್ದೇನೆ ಎಂದು ಹೇಳಿದೆನು.
2 ಒಳ್ಳೇದಲ್ಲದ ಮಾರ್ಗದಲ್ಲಿ ತಮ್ಮ ಆಲೋಚನೆಗಳ ಪ್ರಕಾರ ನಡೆದುಕೊಂಡು ತಿರುಗಿ ಬೀಳುವ ಜನರಿಗೆ ಹಗಲೆಲ್ಲಾ ನನ್ನ ಕೈಗಳನ್ನು ಚಾಚಿದ್ದೇನೆ.
3 ಇವರು ಯಾವಾಗಲೂ ನನ್ನ ಮುಖದೆ ದುರಿಗೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು; ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪ ಸುಡುವರು;
4 ಸಮಾ ಧಿಗಳಲ್ಲಿ ಉಳಿದು ಗವಿಗಳಲ್ಲಿ ತಂಗುವವರು; ಹಂದಿ ಯ ಮಾಂಸವನ್ನು ತಿನ್ನುವವರು ತಮ್ಮ ಪಾತ್ರೆಗಳಲ್ಲಿ ಅಸಹ್ಯವಾದವುಗಳ ಸಾರುಳ್ಳವರು; ಅವರು--
5 ನಿನ್ನ ಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ, ಯಾಕಂದರೆ ನಿನಗಿಂತ ನಾನು ಪರಿಶುದ್ಧನಾಗಿದ್ದೇ ನೆಂದು ಹೇಳುವವರು; ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ ಹಗಲೆಲ್ಲಾ ಉರಿಯುವ ಬೆಂಕಿ ಯಾಗಿಯೂ ಇದ್ದಾರೆ.
6 ಇಗೋ, ನನ್ನ ಮುಂದೆ ಅದು ಬರೆಯಲ್ಪಟ್ಟಿದೆ; ನಾನು ಸುಮ್ಮನಿರದೆ ಪ್ರತಿಫಲ ಕೊಡುತ್ತೇನೆ; ಅವರ ಉಡಿಯಲ್ಲಿ ಪ್ರತಿಫಲ ಕೊಡು ತ್ತೇನೆ.
7 ನಿಮ್ಮ ಅಕ್ರಮಗಳಿಗೂ ನಿಮ್ಮ ತಂದೆಗಳ ಅಕ್ರ ಮಗಳಿಗೂ ಪ್ರತಿಫಲ ಕೊಡುತ್ತೇನೆಂದು ಕರ್ತನು ಹೇಳುತ್ತಾನೆ; ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು ಗುಡ್ಡಗಳ ಮೇಲೆ ನನ್ನನ್ನು ದೂಷಿಸಿದರಲ್ಲಾ. ಹೀಗಿರು ವದರಿಂದ ಅವರ ಹಿಂದಿನ ಕೆಲಸಗಳನ್ನು ಅವರ ಉಡಿ ಯಲ್ಲಿ ಅಳೆದುಬಿಡುವೆನು.
8 ಕರ್ತನು ಹೇಳುವದೇನಂದರೆ--ದ್ರಾಕ್ಷೇಗೊನೆ ಯಲ್ಲಿ ಹೊಸದ್ರಾಕ್ಷಾರಸ ಕಂಡುಕೊಳ್ಳುವದನ್ನು ಒಬ್ಬನು ನೋಡಿ--ಕೆಡಿಸಬೇಡ, ಅದರಲ್ಲಿ ಆಶೀರ್ವಾದ ಉಂಟೆಂದು ಹೇಳುವದು ಹೇಗೋ ಹಾಗೆಯೇ ನನ್ನ ಸೇವಕರಿಗೋಸ್ಕರ ಅವರನ್ನೆಲ್ಲಾ ನಾನು ಕೆಡಿಸಿ ಬಿಡದ ಹಾಗೆ ಮಾಡುವೆನು.
9 ಯಾಕೋಬಿನೊಳಗಿಂದ ಒಂದು ಸಂತಾನವನ್ನೂ ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನೂ ಹೊರಗೆ ಬರಮಾಡುವೆನು; ನಾನು ಆದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು; ನನ್ನ ಸೇವಕರು ಅದರಲಿವಾಸವಾಗುವರು.
10 ನನ್ನನ್ನು ಹುಡುಕುವ ನನ್ನ ಜನರಿ ಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾ ಗಿಯೂ ಇರುವದು.
11 ಆದರೆ ಕರ್ತನನ್ನು ಬಿಟ್ಟವರೇ, ನೀವು ನನ್ನ ಪರಿ ಶುದ್ಧ ಪರ್ವತವನ್ನು ಮರೆತವರೇ, ಸೈನ್ಯಕ್ಕೆ ಮೇಜನ್ನು ಸಿದ್ಧಮಾಡಿ ಅವರಿಗೆ ಪಾನದರ್ಪಣೆ ಮಾಡುವವರೇ ಆಗಿದ್ದೀರಿ.
12 ಆದದರಿಂದ ನಿಮ್ಮನ್ನು ಕತ್ತಿಗೆ ನೇಮಿಸು ವೆನು ನೀವೆಲ್ಲರೂ ಕೊಲೆಗೆ ಬೊಗ್ಗಿಕೊಳ್ಳುವಿರಿ. ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ; ನಾನು ಮಾತನಾಡಲು ನೀವು ಕೇಳಿಸಿಕೊಳ್ಳಲಿಲ್ಲ; ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ, ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.
13 ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ;
14 ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.
15 ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು.
16 ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳು ವವನು ಸತ್ಯ ದೇವರಲ್ಲಿ ಆಶೀರ್ವದಿಸಿಕೊಳ್ಳುವನು. ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು; ಸತ್ಯದೇವರ ಮೇಲೆ ಆಣೆ ಇಟ್ಟುಕೊಳ್ಳುವನು; ಮುಂಚಿನ ಕಷ್ಟಗಳು ಮರೆತುಹೋಗಿವೆ ಮತ್ತು ಅವು ನನ್ನ ಕಣ್ಣುಗಳಿಗೆ ಮರೆಯಾಗಿವೆ.
17 ಇಗೋ, ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ. ಮುಂಚಿನವುಗಳು ಜ್ಞಾಪಕದಲ್ಲಿರುವದಿಲ್ಲ ಇಲ್ಲವೆ ಅದರ ಸ್ಮರಣೆಗೆ ಬರುವ ದಿಲ್ಲ.
18 ಆದರೆ ನಾನು ಸೃಷ್ಟಿಸಿದವುಗಳಲ್ಲಿ ನೀವು ಸಂತೋಷಿಸಿ ಎಂದೆಂದಿಗೂ ಉಲ್ಲಾಸಪಡಿರಿ; ಯಾಕಂ ದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸ ವನ್ನೂ ಅವಳ ಜನರಲ್ಲಿ ಸಂತೋಷವನ್ನೂ ಸೃಷ್ಟಿಸು ತ್ತೇನೆ.
19 ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷಪಡುವೆನು; ಅದರಲ್ಲಿ ಅಳುವ ಸ್ವರವೂ ಕೂಗುವ ಸ್ವರವೂ ಇನ್ನು ಕೇಳಲ್ಪಡುವದಿಲ್ಲ.
20 ಅಲ್ಲಿ ಕೆಲವು ದಿವಸಗಳ ಕೂಸೂ ತನ್ನ ದಿನ ತುಂಬದ ಮುದುಕನೂ ಇನ್ನು ಇರುವದಿಲ್ಲ; ಯಾಕಂದರೆ ಮಗುವು ನೂರು ವರುಷದ್ದಾಗಿ ಸಾಯುವದು, ಆದರೆ ಪಾಪಿಷ್ಠನು ನೂರು ವರುಷದವನಾಗಿ ಶಾಪ ಹೊಂದು ವನು.
21 ಇದಲ್ಲದೆ, ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷೇ ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.
22 ಅವರು ಕಟ್ಟಿದ್ದ ರಲ್ಲಿ ಇನ್ನೊಬ್ಬರು ವಾಸಮಾಡುವದಿಲ್ಲ. ಅವರು ನೆಟ್ಟ ದ್ದನ್ನು ಇನ್ನೊಬ್ಬರು ತಿನ್ನುವದಿಲ್ಲ; ಮರದ ದಿನಗಳ ಹಾಗೆ ನನ್ನ ಜನರ ದಿನಗಳು ಇರುವವು; ನಾನು ಆದುಕೊಂಡವರು ತಮ್ಮ ಕೈಕೆಲಸವನ್ನು ಅನು ಭವಿಸುವರು.
23 ಅವರು ವ್ಯರ್ಥವಾಗಿ ದುಡಿಯರು ಕಷ್ಟವನ್ನು ಎದುರುಗೊಳ್ಳುವದಿಲ್ಲ; ಯಾಕಂದರೆ ಅವರು ಕರ್ತನು ಆಶೀರ್ವದಿಸಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವದಿಸ ಲ್ಪಡುವದು.
24 ಅವರು ಕರೆಯುವದಕ್ಕಿಂತ ಮುಂಚೆ ನಾನು ಉತ್ತರ ಕೊಡುವೆನು ಅವರು ಇನ್ನೂ ಮಾತಾಡು ತ್ತಿರುವಾಗಲೇ ನಾನು ಕೇಳಿಸಿಕೊಳ್ಳುವೆನು.
25 ತೋಳ ವೂ ಕುರಿಮರಿಯೂ ಒಂದಾಗಿ ಮೇಯುವವು; ಸಿಂಹವು ಎತ್ತಿನ ಹಾಗೆ ಹುಲ್ಲು ತಿನ್ನುವದು; ಹಾವಿಗೋ ಅದರ ಆಹಾರವು ಮಣ್ಣೇ; ಅವು ನನ್ನ ಪರಿಶುದ್ಧ ಪರ್ವತದಲ್ಲಿ ಕೇಡುಮಾಡುವದಿಲ್ಲ ಮತ್ತು ನಾಶ ಮಾಡುವದಿಲ್ಲ ಎಂದು ಕರ್ತನು ಹೇಳುತ್ತಾನೆ.
ಅಧ್ಯಾಯ 66

1 ಕರ್ತನು ಹೇಳುವದೇನಂದರೆ--ಆಕಾಶವು ನನ್ನ ಸಿಂಹಾಸನವು; ಭೂಮಿಯು ನನ್ನ ಪಾದ ಪೀಠವು: ನೀವು ನನಗೋಸ್ಕರ ಕಟ್ಟುವ ಮನೆ ಎಲ್ಲಿ? ನನ್ನ ವಿಶ್ರಾಂತಿಯ ಸ್ಥಳವು ಎಲ್ಲಿ?
2 ಇವುಗಳ ನ್ನೆಲ್ಲಾ ನನ್ನ ಕೈ ಉಂಟುಮಾಡಿತು; ಇವುಗಳೆಲ್ಲಾ ಇದ್ದವೆಂದು ಕರ್ತನು ಅನ್ನುತ್ತಾನೆ. ಆದರೆ ಇವನ ಮೇಲೆ ದೃಷ್ಟಿ ಇಡುವೆನು ದೀನನೂ ಜಜ್ಜಿದ ಆತ್ಮವುಳ್ಳ ವನೂ ನನ್ನ ವಾಕ್ಯಕ್ಕೆ ನಡುಗುವವನೂ ಯಾವನೋ ಅವನ ಮೇಲೆಯೂ ದೃಷ್ಟಿ ಇಡುವೆನು.
3 ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡು ವವನ ಹಾಗಿದ್ದಾನೆ; ಕುರಿಮರಿಯನ್ನು ಬಲಿಯಾಗಿ ಕೊಡುವವನು ನಾಯಿಯ ಕುತ್ತಿಗೆಯನ್ನು ಕಡಿಯು ವವನ ಹಾಗಿದ್ದಾನೆ; ಕಾಣಿಕೆಯನ್ನು ಅರ್ಪಿಸುವವನು ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಸುಡುವವನು ವಿಗ್ರಹವನ್ನು ಆಶೀರ್ವದಿ ಸುವವನ ಹಾಗಿದ್ದಾನೆ. ಹೌದು, ಅವರು ಸ್ವಂತ ಮಾರ್ಗಗಳನ್ನು ಆದುಕೊಂಡಿದ್ದಾರೆ; ಅವರ ಪ್ರಾಣವು ಅವರ ಅಸಹ್ಯವಾದವುಗಳಲ್ಲಿ ಹರ್ಷಿಸುತ್ತವೆ.
4 ನಾನು ಸಹ ಅವರ ಮೋಸಗಳನ್ನು ಆದುಕೊಂಡು ಅವರ ಭಯಗಳನ್ನು ಅವರ ಮೇಲೆ ಬರಮಾಡುವೆನು; ಯಾಕಂದರೆ ನಾನು ಕರೆಯಲು ಯಾರೂ ಉತ್ತರ ಕೊಡಲಿಲ್ಲ. ನಾನು ಮಾತನಾಡಲು ಅವರು ಕೇಳಲಿಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ನಾನು ಮೆಚ್ಚದ್ದನ್ನು ಆದುಕೊಂಡರು.
5 ಕರ್ತನ ವಾಕ್ಯವನ್ನು ಕೇಳಿರಿ, ಆತನ ವಾಕ್ಯಕ್ಕೆ ನಡಗುವವರೇ, ನಿಮ್ಮ ಸಹೋದರರು ನಿಮ್ಮನ್ನು ಹಗೆಮಾಡಿ ನನ್ನ ಹೆಸರಿಗೋಸ್ಕರ ನಿಮ್ಮನ್ನು ಹೊರಗೆ ಹಾಕಿ--ಕರ್ತನು ಮಹಿಮೆ ಹೊಂದಲೆಂದು ಹೇಳಿ ದ್ದಾರೆ; ಆದರೆ ಆತನು ನಿಮ್ಮ ಸಂತೋಷಕ್ಕಾಗಿ ಕಾಣಿಸಿ ಕೊಳ್ಳುವನು; ಅವರು ನಾಚಿಕೆಪಡುವರು.
6 ಪಟ್ಟಣ ದೊಳಗಿನ ಗದ್ದಲದ ಶಬ್ದವೂ ದೇವಾಲಯದೊಳಗಿಂದ ಸ್ವರವೂ ತನ್ನ ಶತ್ರುಗಳಿಗೆ ಮುಯ್ಯಿಗೆಮುಯ್ಯಿ ತೀರಿ ಸುವ ಕರ್ತನ ಸ್ವರವಾಗಿದೆ.
7 ಅವಳಿಗೆ ಪ್ರಸವವೇದನೆ ಆಗುವದಕ್ಕಿಂತ ಮುಂಚೆ ಹೆತ್ತಳು, ಅವಳಿಗೆ ನೋವು ಬರುವದಕ್ಕಿಂತ ಮುಂಚೆ ಗಂಡು ಮಗುವನ್ನು ಹೆತ್ತಳು.
8 ಇಂಥಾದ್ದನ್ನು ಯಾರು ಕೇಳಿದ್ದಾರೆ? ಇಂಥವುಗಳನ್ನು ಯಾರು ನೋಡಿದ್ದಾರೆ? ಭೂಮಿ ಒಂದೇ ದಿವಸದಲ್ಲಿ ಹೆರುವಂತೆ ಮಾಡಿತೇ? ಅಥವಾ ಜನಾಂಗವು ಕ್ಷಣ ಮಾತ್ರದಲ್ಲಿ ಹುಟ್ಟೀತೇ? ಚೀಯೋನು ಪ್ರಸವವೇದನೆ ಪಟ್ಟಾಗಲೇ ತನ್ನ ಮಕ್ಕಳನ್ನು ಹೆತ್ತಳು.
9 ನಾನು ಪ್ರಸವಕ್ಕೆ ತಂದ ಮೇಲೆ ಹೆರದಂತೆ ಮಾಡೆನೋ ಎಂದು ಕರ್ತನು ಹೇಳುತ್ತಾನೆ; ಇಲ್ಲವೆ ಹೆರುವಂತೆ ಮಾಡುವವನಾದ ನಾನು ಗರ್ಭವನ್ನು ಮುಚ್ಚುವೆನೇ ಎಂದು ನಿನ್ನ ದೇವರು ಹೇಳುತ್ತಾನೆ.
10 ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ.
11 ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ.
12 ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ,
13 ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ.
14 ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
15 ಇಗೋ, ಕರ್ತನು ಬೆಂಕಿಯೊಡನೆ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವವು; ಉಗ್ರದಿಂದ ತನ್ನ ಕೋಪವನ್ನೂ ಅಗ್ನಿಜ್ವಾಲೆಗಳಿಂದ ತನ್ನ ಗದರಿಕೆ ಯನ್ನೂ ಸಲ್ಲಿಸುವದಕ್ಕಾಗಿಯೇ ಬರುವನು.
16 ಬೆಂಕಿ ಯಿಂದಲೂ ತನ್ನ ಕತ್ತಿಯಿಂದಲೂ ಕರ್ತನು ಮನುಷ್ಯ ರಿಗೆಲ್ಲಾ ನ್ಯಾಯತೀರಿಸುವನು; ಕರ್ತನಿಂದ ಕೊಲ್ಲಲ್ಪಟ್ಟ ವರು ಅನೇಕರಾಗಿರುವರು.
17 ತೋಟಗಳ ಮಧ್ಯದಲ್ಲಿ ಒಂದು ಮರದ ಹಿಂದೆ ತಮ್ಮನ್ನು ಪರಿಶುದ್ಧ ಮಾಡಿ ಕೊಂಡು ಪವಿತ್ರಮಾಡಿಕೊಳ್ಳುವವರೂ ಹಂದಿ ಮಾಂಸವನ್ನೂ ಅಸಹ್ಯವಾದದ್ದನ್ನೂ ಇಲಿಯನ್ನೂ ತಿನ್ನು ವವರೂ ಒಟ್ಟಾಗಿ ದಹಿಸಲ್ಪಡುವರು ಎಂದು ಕರ್ತನು ಹೇಳುತ್ತಾನೆ.
18 ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗ ಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು; ಆಗ ಅವರು ಬಂದು ನನ್ನ ಮಹಿ ಮೆಯನ್ನು ನೋಡುವರು.
19 ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು.
20 ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ.
21 ಅವರಲ್ಲಿ ಯಾಜಕರಿಗಾಗಿಯೂ ಲೇವಿಯರಿಗಾ ಗಿಯೂ ಅವರಿಂದ ತಕ್ಕೊಳ್ಳುವೆನೆಂದು ಕರ್ತನು ಹೇಳುತ್ತಾನೆ.
22 ನಾನು ಉಂಟು ಮಾಡುವ ಹೊಸ ಆಕಾಶವೂ ಹೊಸ ಭೂಮಿಯೂ ನನ್ನ ಮುಂದೆ ನೆಲೆಯಾಗಿರುವ ಪ್ರಕಾರವೇ ನಿಮ್ಮ ಸಂತಾನವೂ ನಿಮ್ಮ ಹೆಸರೂ ನೆಲೆಯಾಗಿರುವದೆಂದು ಕರ್ತನು ಅನ್ನುತ್ತಾನೆ.
23 ಇದಾದ ಮೇಲೆ ಒಂದು ಅಮಾವಾಸ್ಯೆಯಿಂದ ಇನ್ನೊಂದಕ್ಕೂ ಒಂದು ಸಬ್ಬತ್ತಿನಿಂದ ಇನ್ನೊಂದಕ್ಕೂ ಮನುಷ್ಯರೆಲ್ಲಾ ನನ್ನ ಮುಂದೆ ಆರಾಧಿಸುವದಕ್ಕೆ ಬರುವರೆಂದು ಕರ್ತನು ಹೇಳುತ್ತಾನೆ.
24 ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹ ಮಾಡಿದ ಮನುಷ್ಯರ ಹೆಣಗಳನ್ನು ನೋಡುವರು; ಯಾಕಂದರೆ ಅವರ ಹುಳ ಸಾಯುವದಿಲ್ಲ; ಅವರ ಬೆಂಕಿ ಆರುವದಿಲ್ಲ; ಅವರು ಎಲ್ಲಾ ಮನುಷ್ಯರಿಗೆ ಹೇಸಿಕೆಯಾಗುವರು.