ಮಿಕ

1 2 3 4 5 6 7


ಅಧ್ಯಾಯ 1

1 ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು.
2 ಎಲ್ಲಾ ಜನಗಳೇ, ಕೇಳಿರಿ, ಭೂಮಿಯೇ, ಅದರ ಪರಿಪೂರ್ಣತೆಯೇ, ಕಿವಿಗೊಡಿರಿ; ಕರ್ತನಾದ ದೇವರು ತನ್ನ ಪರಿಶುದ್ಧ ಮಂದಿರದೊಳಗಿಂದ ಕರ್ತನು ನಿಮಗೆ ವಿರೋಧವಾಗಿ ಸಾಕ್ಷಿಯಾಗಿರಲಿ.
3 ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.
4 ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.
5 ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ?
6 ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು.
7 ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.
8 ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.
9 ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ.
10 ಗತ್‌ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು.
11 ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು.
12 ಮಾರೋತಿನ ನಿವಾಸಿ ಒಳ್ಳೇದಕ್ಕೆ ಜಾಗ್ರತೆಯಾಗಿ ಕಾದುಕೊಳ್ಳುತ್ತಾನೆ; ಆದರೆ ಕೇಡು ಕರ್ತನಿಂದ ಯೆರೂಸಲೇಮಿನ ಬಾಗಲಿಗೆ ಇಳಿದಿದೆ.
13 ಲಾಕೀಷಿನ ನಿವಾಸಿಯೇ, ವೇಗವುಳ್ಳ ಕುದುರೆಗೆ ರಥವನ್ನು ಕಟ್ಟು, ಇದೇ ಚೀಯೋನಿನ ಮಗಳ ಪಾಪದ ಆರಂಭವು; ಇಸ್ರಾಯೇಲಿನ ಅಪರಾಧಗಳು ನಿನ್ನಲ್ಲಿ ಕಂಡುಬಂದವು.
14 ಹೀಗಿರುವದರಿಂದ ಮೋರೆಷತ್‌ ಗತ್‌ ಊರಿಗೆ ದಾನಗಳನ್ನು ಕೊಡುವಿ, ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಸುಳ್ಳಾಗಿರುವವು.
15 ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು.
16 ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
ಅಧ್ಯಾಯ 2

1 ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ.
2 ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ.
3 ಆದದರಿಂದ ಕರ್ತನು ಹೇಳುವದೇನಂದರೆ--ಇಗೋ, ನಾನು ಈ ಕುಟುಂಬಕ್ಕೆ ವಿರೋಧವಾಗಿ ಕೆಟ್ಟದ್ದನ್ನು ಯೋಚಿಸು ತ್ತೇನೆ; ಆದದರಿಂದ ನೀವು ನಿಮ್ಮ ಕುತ್ತಿಗೆಗಳನ್ನು ಹಿಂತೆ ಗೆಯದೆ ಅಹಂಕಾರವಾಗಿ ನಡೆಯದೆ ಇರುವಿರಿ; ಇದು ಕೆಟ್ಟಕಾಲವೇ.
4 ಆ ದಿನದಲ್ಲಿ ನಿಮ್ಮ ವಿಷಯವಾಗಿ ಸಾಮ್ಯವನ್ನೆತ್ತಿ ದುಃಖವುಳ್ಳ ಗೋಳಾಟವನ್ನು ಮಾಡಿ ಹೇಳುವದೇನಂದರೆ--ನಾವು ಪೂರ್ಣವಾಗಿ ಹಾಳಾ ದೆವು; ಅವನು ನನ್ನ ಜನರ ಪಾಲನ್ನು ಬದಲಾಯಿಸಿ ದ್ದಾನೆ; ಅವನು ಅದನ್ನು ನನ್ನಿಂದ ಹಿಂತೆಗೆದದ್ದು ಹೇಗೆ? ಹಿಂತಿರುಗಿ ಅವನು ನಮ್ಮ ಹೊಲಗಳನ್ನು ಹಂಚಿಕೊಟ್ಟಿ ದ್ದಾನೆ.
5 ಆದದರಿಂದ ಕರ್ತನ ಸಭೆಯಲ್ಲಿ ಪಾಲಿಗಾಗಿ ನೂಲು ಹಾಕುವವನು ನಿನಗೆ ಒಬ್ಬನೂ ಇರುವದಿಲ್ಲ.
6 ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ.
7 ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?
8 ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ; ಯುದ್ಧದಿಂದ ತಿರುಗಿಕೊಂಡು ಭದ್ರವಾಗಿ ಹಾದುಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊ ಳ್ಳುತ್ತೀರಿ.
9 ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.
10 ನೀವು ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿ ಅಲ್ಲ; ಇದು ಅಶುದ್ಧವಾಗಿದ್ದ ಕಾರಣ, ನಿಮ್ಮನ್ನು ಕಠಿಣವಾದ ನಾಶನದಿಂದ ನಾಶಮಾಡು ವದು.
11 ಒಬ್ಬನು ಆತ್ಮದಲ್ಲಿಯೂ ವಂಚನೆಯಲ್ಲಿಯೂ ನಡೆದು ಸುಳ್ಳು ಹೇಳಿ--ನಿನಗೆ ದ್ರಾಕ್ಷಾರಸವನ್ನೂ ಮತ್ತಾಗುವದನ್ನೂ ಕುರಿತು ಪ್ರವಾದಿಸುವೆನೆಂದು ಹೇಳಿ ದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.
12 ಯಾಕೋಬೇ ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು; ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು, ಬೊಚ್ರದ ಕುರಿಗ ಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆ ಯಂತೆಯೂ ಅವರನ್ನು ಒಟ್ಟಾಗಿ ಕೂಡಿಡುವೆನು; ಬಹುಮಂದಿಯಾಗಿರುವ ಕಾರಣ ಅವರು ಮಹಾ ಶಬ್ದ ಮಾಡುವರು.
13 ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು.
ಅಧ್ಯಾಯ 3

1 ಆಗ ನಾನು ಹೇಳಿದ್ದೇನಂದರೆ--ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇ ಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ; ನ್ಯಾಯ ವನ್ನು ತಿಳಿಯುವದು ನಿಮ್ಮದಲ್ಲವೋ?
2 ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ,
3 ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ.
4 ಆಗ ಅವರು ಕರ್ತನಿಗೆ ಮೊರೆಯಿಡುವರು; ಆದರೆ ಆತನು ಅವರಿಗೆ ಉತ್ತರ ಕೊಡುವದಿಲ್ಲ. ಅವರು ಕೆಟ್ಟ ಕ್ರಿಯೆಗಳನ್ನು ಮಾಡಿದ ಪ್ರಕಾರವೇ, ಆ ಕಾಲದಲ್ಲಿ ಅವರಿಗೆ ತನ್ನ ಮುಖವನ್ನು ಮರೆಮಾಡುವನು.
5 ತನ್ನ ಜನರು ತಪ್ಪುವಂತೆ ಮಾಡುವ ಪ್ರವಾದಿಗಳ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಅವರಿಗೆ ತಿನ್ನುವದಕ್ಕೆ ಕೊಡುವಂತವರಿಗೆ--ನಿಮಗೆ ಸಮಾಧಾನವಾಗಲಿ ಎಂದು ಹೇಳುತ್ತಾರೆ; ಆದರೆ ತಮ್ಮ ಬಾಯಿಗೆ ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು.
6 ದರ್ಶನವಿಲ್ಲದ ನಿಮಗೆ ರಾತ್ರಿ ಯಾಗುವದು; ಶಕುನವಿಲ್ಲದೆ ನಿಮಗೆ ಕತ್ತಲಾಗುವದು; ಹೌದು, ಪ್ರವಾದಿಗಳ ಮೇಲೆ ಸೂರ್ಯ ಮುಣುಗು ವದು, ಅವರ ಮೇಲೆ ಹಗಲು ಕತ್ತಲಾಗುವದು.
7 ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ವಿಸ್ಮಯಗೊಳ್ಳುವರು; ಹೌದು, ದೇವರಿಂದ ಉತ್ತರ ವಿಲ್ಲದ ಕಾರಣ ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿ ಕೊಳ್ಳುವರು.
8 ಆದರೆ ನಿಶ್ಚಯವಾಗಿ ನಾನು ಯಾಕೋ ಬ್ಯರಿಗೆ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವದಕ್ಕೆ ದೇವರ ಆತ್ಮನ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ.
9 ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ,
10 ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ.
11 ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.
12 ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
ಅಧ್ಯಾಯ 4

1 1 ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು.
2 ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು.
3 ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗ ಗಳಿಗೆ ತೀರ್ಪುಕೊಡುವನು; ಅವರು ತಮ್ಮ ಕತ್ತಿಗಳನ್ನು ನೇಗಲಿನ ಗುಳಗಳಾಗಿಯೂ ತಮ್ಮ ಈಟಿಗಳನ್ನು ಕುಡು ಗೋಲುಗಳಾಗಿಯೂ ಮಾಡುವರು; ಜನಾಂಗವು ಜನಾಂಗದ ಮೇಲೆ ಕತ್ತಿಯನ್ನು ಎತ್ತದು; ಯುದ್ಧಾಭ್ಯಾಸ ಇನ್ನು ಮೇಲೆ ಇರದು.
4 ಆದರೆ ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷೇ ಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕೂತುಕೊಳ್ಳುವನು. ಭಯಪಡಿಸುವವನು ಯಾರೂ ಇರುವದಿಲ್ಲ. ಯಾಕಂದರೆ ಸೈನ್ಯಗಳ ಕರ್ತನ ಬಾಯಿ ಅದನ್ನು ನುಡಿದಿದೆ.
5 ಎಲ್ಲಾ ಜನಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ದೇವರ ಹೆಸರಿನಲ್ಲಿ ನಡೆ ಯುವನು; ಆದರೆ ನಾವು ನಮ್ಮ ದೇವರಾದ ಕರ್ತನ ಹೆಸರಿನಲ್ಲಿ ಎಂದೆಂದಿಗೂ ನಡೆಯುವೆವು.
6 ಕರ್ತನು ಹೀಗೆ ಅನ್ನುತ್ತಾನೆ--ಆ ದಿನದಲ್ಲಿ ಕುಂಟಾದದ್ದನ್ನು ಕೂಡಿಸಿ ತಳ್ಳಿಬಿಟ್ಟದ್ದನ್ನೂ ನಾನು ಕಷ್ಟಪಡಿಸಿದವರನ್ನೂ ಒಟ್ಟುಗೂಡಿಸುವೆನು.
7 ಕುಂಟಾದದ್ದನ್ನು ಉಳಿದದ್ದ ನ್ನಾಗಿಯೂ ತಳ್ಳಿಬಿಟ್ಟಿದ್ದನ್ನು ಬಲವಾದ ಜನಾಂಗವಾ ಗಿಯೂ ಮಾಡುವೆನು; ಕರ್ತನು ಇಂದಿನಿಂದ ಸದಾ ಕಾಲವೂ ಚೀಯೋನ್‌ ಪರ್ವತದಲ್ಲಿ ಅವರ ಮೇಲೆ ಆಳುವನು,
8 ಇದಲ್ಲದೆ ನೀನು ಮಂದೆಯ ಬುರುಜೇ ಚೀಯೋನಿನ ಕುಮಾರ್ತೆಯ ದುರ್ಗವೇ, ನಿನಗೆ ಬರು ವದು, ಹೌದು, ಮೊದಲನೇ ದೊರೆತನವೂ ಯೆರೂ ಸಲೇಮಿನ ಕುಮಾರ್ತೆಗೆ ರಾಜ್ಯವೂ ಬರುವದು.
9 ಈಗ ಯಾಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶ ವಾದನೋ? ಹೆರುವವಳಂತೆ ನಿನಗೆ ವೇದನೆ ಬಂತು.
10 ಚೀಯೋನಿನ ಕುಮಾರ್ತೆಯೇ, ಹೆರುವವಳಂತೆ ವೇದನೆಪಡು. ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬೆಲಿಗೆ ಹೋಗುವಿ; ಅಲ್ಲಿ ನಿನಗೆ ಬಿಡುಗಡೆಯಾಗುವದು; ಅಲ್ಲಿ ಕರ್ತನು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿ ಸುವನು.
11 ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ; ಅವರು--ಅವಳು ಕೆಡಿಸಲ್ಪಡಲಿ, ಚೀಯೋನಿನ ಮೇಲೆ ನಮ್ಮ ಕಣ್ಣುಗಳು ದೃಷ್ಟಿಸಲಿ ಎಂದು ಹೇಳುತ್ತಾರೆ.
12 ಆದರೆ ಕರ್ತನ ಯೋಚನೆಗಳು ಅವರಿಗೆ ತಿಳಿಯವು, ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ; ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವನು.
13 ಚೀಯೋನಿನ ಕುಮಾರ್ತೆಯೇ; ಎದ್ದು ತುಳಿ. ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸೆಗಳನ್ನು ತಾಮ್ರವಾಗಿಯೂ ಮಾಡುವೆನು. ನೀನು ಅನೇಕ ಜನಗಳನ್ನು ಪುಡಿಪುಡಿಮಾಡುವಿ; ಮತ್ತು ಅವರ ಲಾಭವನ್ನು ಕರ್ತನಿಗೂ ಅವರ ಸಂಪತ್ತನ್ನು ಸಮಸ್ತ ಭೂಮಿಯ ಕರ್ತನಿಗೂ ಪ್ರತಿಷ್ಠೆ ಮಾಡುವೆನು.
ಅಧ್ಯಾಯ 5

1 ಈಗ ಓ ಸೈನ್ಯಗಳ ಕುಮಾರ್ತೆಯೇ, ಗುಂಪುಗಳಾಗಿ ಕೂಡಿಕೊಳ್ಳಿರಿ; ಅವನು ನಮಗೆ ಮುತ್ತಿಗೆ ಹಾಕಿದ್ದಾನೆ. ಇಸ್ರಾಯೇಲಿನ ನ್ಯಾಯಾಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.
2 ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ.
3 ಆದದರಿಂದ ಹೆರುವವಳು ಹೆರುವ ಕಾಲದ ವರೆಗೂ ಅವನು ಅವರನ್ನು ಒಪ್ಪಿಸಿಬಿಡುವನು; ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲಿನ ಮಕ್ಕಳ ಬಳಿಗೆ ಹಿಂದಿರುಗುವರು.
4 ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು.
5 ಇದಲ್ಲದೆ ಅಶ್ಶೂರ್ಯನು ನಮ್ಮ ದೇಶದಲ್ಲಿ ಬಂದಾಗ ಈತನೇ ಸಮಾಧಾನವಾಗಿರುವನು; ನಮ್ಮ ಅರಮನೆಗಳಲ್ಲಿ ಅವನು ತುಳಿಯುವಾಗ ನಾವು ಆತನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಮುಖ್ಯ ಮನುಷ್ಯರನ್ನೂ ಎಬ್ಬಿಸುವೆವು.
6 ಅವರು ಅಶ್ಶೂರಿನ ದೇಶವನ್ನು ಕತ್ತಿಯಿಂದಲೂ ನಿಮ್ರೋದನ ದೇಶವನ್ನು ಅದರ ಪ್ರವೇಶಗಳಲ್ಲಿಯೂ ಹಾಳುಮಾಡುವರು; ಅಶ್ಶೂರ್ಯನು ನಮ್ಮ ದೇಶದಲ್ಲಿ ಬಂದು ನಮ್ಮ ಪ್ರಾಂತ್ಯಗಳಲ್ಲಿ ತುಳಿಯುವಾಗ ಆತನು ನಮ್ಮನ್ನು ತಪ್ಪಿಸುವನು.
7 ಇದಲ್ಲದೆ ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ ಕರ್ತನಿಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವದು; ಅದು ಮನುಷ್ಯರಿಗೊಸ್ಕರ ತಡೆಮಾಡುವ ದಿಲ್ಲ; ಮನುಷ್ಯನ ಮಕ್ಕಳಿಗೋಸ್ಕರ ಕಾದುಕೊಳ್ಳುವದಿಲ್ಲ.
8 ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ, ಜನಾಂಗಗಳೊಳಗೆ ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವದು; ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸ ಲಾರರು.
9 ನಿನ್ನ ಕೈ ನಿನ್ನ ವೈರಿಗಳೆಲ್ಲರ ಮೇಲೆ ಉನ್ನತ ವಾಗಿರುವದು; ನಿನ್ನ ಶತ್ರುಗಳೆಲ್ಲರು ಕಡಿದು ಬಿಡಲ್ಪಡುವರು.
10 ಕರ್ತನು ಹೀಗೆ ಅನ್ನುತ್ತಾನೆ--ಆ ದಿನದಲ್ಲಿ ಆಗುವದೇನಂದರೆ--ನಾನು ನಿನ್ನ ಮಧ್ಯದೊಳಗಿಂದ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು.
11 ನಿನ್ನ ದೇಶದ ಪಟ್ಟಣಗಳನ್ನು ಕಡಿದುಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.
12 ನಿನ್ನ ಕೈಯೊಳಗಿಂದ ಮಂತ್ರತಂತ್ರವನ್ನು ಕಡಿದು ಬಿಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರು ವದಿಲ್ಲ.
13 ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ನಿನ್ನ ಮಧ್ಯದೊಳಗಿಂದ ಕಡಿದು ಬಿಡುವೆನು; ನೀನು ಇನ್ನು ಸ್ವಂತ ಕೈಕೆಲಸಗಳನ್ನು ಆರಾಧಿಸುವದಿಲ್ಲ.
14 ನಿನ್ನ ತೋಪುಗಳನ್ನು ನಿನ್ನ ಮಧ್ಯ ದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶ ಮಾಡುವೆನು.
15 ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು.
ಅಧ್ಯಾಯ 6

1 ಕರ್ತನು ಹೇಳುವದನ್ನು ಈಗ ಕೇಳಿರಿ--ಎದ್ದೇಳು,ಬೆಟ್ಟಗಳ ಮುಂದೆ ವ್ಯಾಜ್ಯವಾಡು; ಗುಡ್ಡಗಳು ನಿನ್ನ ಶಬ್ದವನ್ನು ಕೇಳಲಿ.
2 ಓ ಬೆಟ್ಟಗಳೇ, ಭೂಮಿಯ ಬಲವಾದ ಅಸ್ತಿವಾರಗಳಾದ ಬಂಡೆಗಳೇ, ಕರ್ತನ ವ್ಯಾಜ್ಯವನ್ನು ಕೇಳಿರಿ; ಕರ್ತನಿಗೆ ತನ್ನ ಜನರ ಸಂಗಡ ವ್ಯಾಜ್ಯ ಉಂಟು, ಇಸ್ರಾಯೇಲಿನ ಸಂಗಡ ಆತನು ತರ್ಕಿಸುತ್ತಾನೆ.
3 ನನ್ನ ಜನರೇ, ನಾನು ನಿನಗೆ ಏನು ಮಾಡಿದ್ದೇನೆ? ಯಾವದರಿಂದ ನಿನಗೆ ಬೇಸರ ಮಾಡಿದ್ದೇನೆ? ನನಗೆ ವಿರೋಧವಾಗಿ ಸಾಕ್ಷಿಕೊಡು.
4 ನಾನು ಐಗುಪ್ತದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸರ ಮನೆಯೊಳಗಿಂದ ನಿನ್ನನ್ನು ವಿಮೋ ಚಿಸಿ, ಮೋಶೆಯನ್ನೂ ಆರೋನನನ್ನೂ ಮಿರಿಯಾಮ ಳನ್ನೂ ನಿನ್ನ ಮುಂದೆ ಕಳುಹಿಸಿದೆನು.
5 ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿ ದ್ದನ್ನೂ ಬೆಯೋರನ ಮಗನಾದ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲು ಗೊಂಡು ಗಿಲ್ಗಾಲಿನ ವರೆಗೂ ಆದದ್ದನ್ನೂ ಈಗ ಜ್ಞಾಪಕ ಮಾಡಿಕೊಳ್ಳಿರಿ. ಆಗ ಕರ್ತನ ನೀತಿಯನ್ನು ತಿಳುಕೊಳ್ಳು ವಿರಿ.
6 ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ?
7 ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಕರ್ತನು ಮೆಚ್ಚು ವನೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗ ನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲ ವನ್ನೂ ಕೊಡಲೋ?
8 ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ.
9 ಕರ್ತನ ಸ್ವರವು ಪಟ್ಟಣಕ್ಕೆ ಕೂಗುತ್ತದೆ, ಮತ್ತು ಬುದ್ಧಿವಂತನು ನಿನ್ನ ಹೆಸರನ್ನು ನೋಡುವನು; ಬೆತ್ತ ವನ್ನೂ ಅದನ್ನು ನೇಮಿಸಿದವನನ್ನೂ ಕೇಳಿರಿ.
10 ದುಷ್ಟರ ಮನೆಯಲ್ಲಿ ದುಷ್ಟತ್ವದ ಬೊಕ್ಕಸಗಳೂ ಅಸಹ್ಯವಾದಂಥ ಕಡಿಮೆಯಾದ ಅಳತೆಯೂ ಉಂಟೋ?
11 ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
12 ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
13 ಆದದರಿಂದ ನಾನು ಸಹ ನಿನ್ನನ್ನು ಹೊಡೆದು ನಿನಗೆ ರೋಗವನ್ನು ಬರಮಾಡುವೆನು; ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
14 ನೀನು ಉಂಡು ತೃಪ್ತಿಯಾಗದೆ ಇರುವಿ; ನಿನ್ನೊಳಗೆ ನಿನ್ನ ಬೀಳ್ವಿಕೆಯು ಇರುವದು; ನೀನು ಹಿಡಿದು ತಪ್ಪಿಸದೆ ಇರುವಿ; ನೀನು ತಪ್ಪಿಸುವಂಥದ್ದನ್ನು ನಾನು ಕತ್ತಿಗೆ ಒಪ್ಪಿಸುವೆನು.
15 ನೀನು ಬೀಜ ಬಿತ್ತಿ ಕೊಯ್ಯದೆ ಇರುವಿ; ಇಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವಿ; ದ್ರಾಕ್ಷಾರಸ ಮಾಡಿ ಕುಡಿಯದೆ ಇರುವಿ.
16 ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
ಅಧ್ಯಾಯ 7

1 ನನಗೆ ಅಯ್ಯೋ, ಯಾಕಂದರೆ ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವ ವರ ಹಾಗೆಯೂ ದ್ರಾಕ್ಷೇ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ; ತಿನ್ನುವದಕ್ಕೆ ಗೊನೆ ಇಲ್ಲ. ನನ್ನ ಪ್ರಾಣವು ಮೊದಲು ಹಣ್ಣಾದ ಅಂಜೂರ ವನ್ನು ಅಪೇಕ್ಷಿಸಿಯದೆ.
2 ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.
3 ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವ ಹಾಗೆ ಪ್ರಧಾನನೂ ನ್ಯಾಯಾಧಿಪತಿಯೂ ಬಹುಮಾನವನ್ನು ಕೇಳುತ್ತಾರೆ; ದೊಡ್ಡ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರು ಒಂದೇ ಕಟ್ಟಾಗಿದ್ದಾರೆ.
4 ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ; ನಿನ್ನ ಕಾವಲುಗಾರರ ದಿವಸವೂ ನಿನ್ನ ವಿಚಾರಣೆಯೂ ಬರುತ್ತದೆ, ಈಗಲೇ ಅವರಿಗೆ ಗಾಬರಿಯಾಗುವದು.
5 ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ.
6 ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ; ಮಗಳು ತನ್ನ ತಾಯಿಗೂ ಸೊಸೆಯು ತನ್ನ ಅತ್ತೆಗೂ ವಿರೋಧವಾಗಿ ಏಳುತ್ತಾರೆ; ಒಬ್ಬ ಮನುಷ್ಯನಿಗೆ ಸ್ವಂತ ಮನೆಯವರೇ ಶತ್ರುಗಳು.
7 ಆದರೆ ನಾನು ಕರ್ತನನ್ನು ಎದುರು ನೋಡುವೆನು; ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು; ನನ್ನ ದೇವರು ನನ್ನನ್ನು ಕೇಳುವನು.
8 ನನ್ನ ಶತ್ರುವೇ, ನನ್ನ ಮೇಲೆ ಸಂತೋಷಪಡಬೇಡ; ನಾನು ಬಿದ್ದಿದ್ದರೂ ತಿರುಗಿ ಏಳುವೆನು; ಕತ್ತಲೆಯಲ್ಲಿ ಕೂತುಕೊಂಡರೂ ನನಗೆ ಬೆಳಕು ಕರ್ತನೇ.
9 ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು.
10 ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು.
11 ನಿನ್ನ ಗೋಡೆಗಳು ತಿರುಗಿ ಕಟ್ಟಲ್ಪಡುವ ಆ ದಿನದಲ್ಲಿ ನಿರ್ಣಯವು ದೂರವಾಗಿ ಹೋಗುವದು.
12 ಆ ದಿನದಲ್ಲಿ ಅಶ್ಶೂರಿನಿಂದಲೂ ಕೋಟೆಯುಳ್ಳ ಪಟ್ಟಣಗಳಿಂದಲೂ ಕೋಟೆಯಿಂದ ನದಿಯವರೆಗೂ ಸಮುದ್ರದಿಂದ ಸಮುದ್ರದ ವರೆಗೂ ಬೆಟ್ಟದಿಂದ ಬೆಟ್ಟದ ವರೆಗೂ ನಿನ್ನ ಬಳಿಗೆ ಬರುವರು.
13 ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವದು.
14 ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆ ಯನ್ನೂ ನಿನ್ನ ಕೋಲಿನಿಂದ ಮೇಯಿಸು; ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.
15 ನೀನು ಐಗುಪ್ತ ದೇಶದೊಳಗಿಂದ ಹೊರಡುವ ದಿವಸಗಳ ಹಾಗೆ ಅವನಿಗೆ ಆಶ್ಚರ್ಯವಾದವುಗಳನ್ನು ತೋರಿಸುವೆನು.
16 ಜನಾಂಗಗಳು ನೋಡಿ ತಮ್ಮ ತ್ರಾಣಕ್ಕೆಲ್ಲಾ ನಾಚಿಕೆ ಪಡುವರು; ತಮ್ಮ ಕೈಗಳನ್ನು ಬಾಯಿಯ ಮೇಲೆ ಇಡುವರು; ಅವರ ಕಿವಿಗಳು ಕಿವುಡಾಗಿ ಹೋಗುವವು.
17 ಅವರು ಸರ್ಪದಂತೆ ಧೂಳನ್ನು ನೆಕ್ಕುವರು; ಭೂಮಿಯ ಕ್ರಿಮಿಗಳಂತೆ ತಾವು ರಂಧ್ರಗಳಿಂದ ಹೊರಗೆ ಬರುವರು; ನಮ್ಮ ದೇವರಾದ ಕರ್ತನಿಗೆ ಅವರು ಹೆದರುವರು; ನಿನಗೆ ಭಯಪಡುವರು.
18 ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ.
19 ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.
20 ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.